ದೇಶ್ನೋಕ್ - ಹಳ್ಳಿಯ ವಿಶೀಷ್ಟ ಪೂಜೆ!

ದೇಶ್ನೋಕ್, 'ಕ್ಯಾಮೇಲ್ ಕಂಟ್ರಿ' ಎಂದು ಕರೆಯಲಾಗುವ ರಾಜಸ್ಥಾನದ ಬಿಕಾನೇರ್ ಜಿಲ್ಲೆಯಲ್ಲಿದೆ. ಸುತ್ತಮುತ್ತಲಿನ ಹತ್ತು ಹಳ್ಳಿಗಳ ಹತ್ತು ಮೂಲೆಗಳಿಂದ ನಿರ್ಮಿತವಾದ ಈ ಹಳ್ಳಿಯನ್ನು ಮೊದಲಿಗೆ 'ದಸ್ - ನೋಕ್' ಅಂದರೆ ಹತ್ತು ಮೂಲೆ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಪಾಕಿಸ್ತಾನದ ಸರಹದ್ದಿಗೆ ಹತ್ತಿರವಾಗಿರುವ ಈ ಹಳ್ಳಿಯು ಬಿಕಾನೇರ್ ನಗರದಿಂದ 30 ಕಿ.ಮೀ ದೂರದಲ್ಲಿದೆ. ದೇಶ್ನೋಕ್ ಹಳ್ಳಿಯು ಕರ್ನಿ ಮಾತಾ ದೇವಸ್ಥಾನ ಮತ್ತು ಹಲವು ಉತ್ಸವಗಳಿಂದ ಹೆಸರುವಾಸಿಯಾಗಿದೆ.

ಧಾರ್ಮಿಕತೆಯಲ್ಲಿ ಇಲಿಗಳ ಉಪಸ್ಥಿತಿ!

ಇಲ್ಲಿಯ ಕರ್ನಿ ಮಾತಾ ದೇವಸ್ಥಾನವು ಅಪುರೂಪದ ಪ್ರವಾಸಿ ಆಕರ್ಷಣೆ. ಭಾರತದಲ್ಲೇ, ಇಲಿಗಳನ್ನು ಪೂಜಿಸಲ್ಪಡುವ ವಿಶೀಷ್ಟವಾದ ದೇವಸ್ಥಾನವಿದು. ಇದು ಮೂಷಕ ದೇವಸ್ಥಾನವೆಂದೂ ಪ್ರಖ್ಯಾತಿಯಾಗಿದೆ. ದುರ್ಗಾ ದೇವಿಯ ಅವತಾರಗಳಲ್ಲಿ, ಒಂದಾದ ಕರ್ನಿ ಮಾತಾಳನ್ನು ಇಲ್ಲಿ ಪೂಜಿಸಲಾಗುತ್ತದೆ. ಈಕೆಯು ಬಿಕಾನೇರ್ ರಾಜವಂಶಸ್ಥರ ದೇವತೆಯು ಆಗಿದ್ದಾಳೆ. ಗಂಗಾ ಸಿಂಗ್ ರಾಜನು 20 ನೇ ಶತಮಾನದಲ್ಲಿ ಈ ದೇವಾಲಯವನ್ನು ಕಟ್ಟಿದನು. ಇದು ಸುಮಾರು 20,000 ಇಲಿಗಳಿಗೆ ಮನೆಯಾಗಿದ್ದು ಅವುಗಳನ್ನು 'ಕಬಸ್' ಎಂದು ಕರೆಯಲಾಗುತ್ತದೆ. ಸ್ಥಳೀಯರ ನಂಬಿಕೆ ಪ್ರಕಾರ ಈ ಇಲಿಗಳು, ದೇವಿಯ ಭವಿಷ್ಯದ ಮಕ್ಕಳ ಆತ್ಮಗಳನ್ನು ತಮ್ಮಲ್ಲಿ ಹೊಂದಿವೆ. ಈ ಇಲಿಗಳ ಬಗ್ಗೆ ಪವಿತ್ರ ಭಾವನೆಯನ್ನು ಹೊಂದಿರುವ ಇಲ್ಲಿಯ ಜನರು ಅವುಗಳನ್ನು ಭಯಭಕ್ತಿಗಳಿಂದ ಕಾಣುತ್ತಾರೆ.

ಈ ದೇವಸ್ಥಾನದ ಕೆತ್ತನೆ ಕೆಲಸವು ನೋಡುಗರನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತದೆ. ವರ್ಷದಲ್ಲಿ ಎರಡು ಬಾರಿ ನಡೆಯುವ ಕರ್ನಿ ಮಾತಾ ಉತ್ಸವಕ್ಕೆ ಬಹು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಈ ಉತ್ಸವವು ಮಾರ್ಚ್-ಎಪ್ರಿಲ್ ಮತ್ತು ಸೆಪ್ಟಂಬರ್-ಅಕ್ಟೋಬರ್ ಸಮಯದಲ್ಲಿ ಜರುಗುತ್ತದೆ. ದೇಶ್ನೋಕ್ ನಲ್ಲಿ ನಡೆಯುವ ಗಂಗೌರ್ ಉತ್ಸವವು ಕೂಡ ಜನಪ್ರಿಯವಾಗಿದೆ. ಮಾರ್ಚ್ ನಲ್ಲಿ ಜರುಗುವ ಈ ಉತ್ಸವವನ್ನು ಮಹಿಳೆಯರು ಗೌರಿ ಮಾತಾ ದೇವಿಯ ಗೌರವಾರ್ಥವಾಗಿ ಆಚರಿಸುತ್ತಾರೆ.

ದೇಶ್ನೋಕ್ ತಲುಪುವ ಬಗೆ

ವಾಯು, ರೈಲು, ರಸ್ತೆ ಮೂಲಕ ದೇಶ್ನೋಕ್ ಅನ್ನು ಸುಲಭವಾಗಿ ತಲುಪಬಹುದು. ಜೋಧಪುರ್ ವಿಮಾನ ನಿಲ್ದಾಣ ಹತ್ತಿರದ ನಿಲ್ದಾಣ. ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣವು ಹತ್ತಿರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಇಲ್ಲಿಂದ ಪ್ರಮುಖ ನಗರಗಳಾದ ಬೆಂಗಳೂರು, ಚೆನ್ನೈ, ಮುಂಬೈ ಮತ್ತು ಕೊಲ್ಕತ್ತಾಗಳಿಗೆ ನಿರಂತರವಾದ ಫ್ಲೈಟ್ ಗಳಿವೆ. ಪ್ರವಾಸಿಗರು ಜೋಧಪುರ್ ರೈಲು ನಿಲ್ದಾಣದಿಂದಲೂ ಕೂಡ ಇಲ್ಲಿಗೆ ತಲುಪಬಹುದಾಗಿದೆ. ಬಸ್ಸಿನಿಂದಲು ತಲುಪಬಹುದಾಗಿದ್ದು, ಜೋಧಪುರ್, ಅಹ್ಮದಾಬಾದ್, ದೆಹಲಿ, ಅಜ್ಮೇರ್, ಜೈಪುರ್, ಜೈಸಲ್ಮೇರ್, ಝುನ್ ಜುನು, ಉದೈಪುರ್, ಬಾಡಮೇರ್ ಮತ್ತು ಕೋಟಾದಿಂದ ಬಿಕಾನೇರ್ ಗೆ ಬಸ್ಸುಗಳು ಲಭ್ಯವಿದೆ. ಬಿಕಾನೇರ್ ನಿಂದ ಟ್ಯಾಕ್ಸಿ ಅಥವಾ ಕ್ಯಾಬ್ ಗಳಿಂದ ದೇಶ್ನೋಕ್ ತಲುಪಬಹುದು.

ಹವಾಮಾನ

ವರ್ಷಪೂರ್ತಿ ಅತಿರೇಕವಾದ ಹವಾಗುಣವನ್ನು ದೇಶ್ನೋಕ್ ಹೊಂದಿದೆ. ನವಂಬರ್ ಮತ್ತು ಫೆಬ್ರುವರಿ ಮಧ್ಯದ ಅವಧಿಯು ದೇಶ್ನೋಕ್ ಗೆ ಭೇಟಿ ನೀಡಲು ಉತ್ತಮವಾಗಿದೆ.

Please Wait while comments are loading...