ನಾಥದ್ವಾರಾ - ಬಾಲ ಕೃಷ್ಣನ ಭೂಮಿ

'ಅಪೋಲೊ ಆಫ್ ಮೇವಾರ್' ಎಂದು ಹೆಸರುವಾಸಿಯಾಗಿರುವ ನಾಥದ್ವಾರಾವು ರಾಜಸ್ಥಾನದ ಉದೈಪುರ್ ಜಿಲ್ಲೆಯ ಬನಸ್ ನದಿಯ ದಡದಲ್ಲಿ ನೆಲೆಸಿದೆ.

ಕಲೆ ಮತ್ತು ಕಲಾಕೃತಿಗಳ ಲೋಕ

ಈ ಪಟ್ಟಣವು ಪಿಚ್ಛ್ವಾಯಿ ವರ್ಣಚಿತ್ರಗಳು ಹಾಗು ಬಣ್ಣಬಣ್ಣದ ಟೆರ್ರಾಕೊಟ್ಟಾ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಕಲೆ ಉದ್ಯಮವು 2000 ವರ್ಷಗಳ ಇತಿಹಾಸವನ್ನು ಹೊಂದಿದೆ. ಇಲ್ಲಿರುವ ವಿವಿಧ ಪ್ರಕಾರದ ಕಲೆಗಳಲ್ಲಿ 'ಮೀನಾ ವರ್ಕ್' ಕಲೆಯು ಬಹಳೇ ಜನಪ್ರಿಯವಾಗಿದೆ. ಪ್ರವಾಸಿಗರು ಇಲ್ಲಿ ಶ್ರೀಮಂತಿಕೆಯ ಸಂಪ್ರದಾಯದ ಕರಕುಶಲ ವಸ್ತುಗಳನ್ನು ಖರಿದಿಸಬಹುದಾಗಿದೆ.

ಪ್ರಾಚೀನ ದೇವಾಲಯಗಳು

ಕಲೆಯ ಸ್ವರ್ಗವಾಗಿರುವ ನಾಥದ್ವಾರಾವು ಹಿಂದು ದೇವತೆಯಾದ ಕೃಷ್ಣ ಅಥವಾ ವಿಷ್ಣು ಮತ್ತು ಅವನ ಹಲವು ಅವತಾರಗಳಿಗೆ ಸಮರ್ಪಿತವಾದ ಪವಿತ್ರ ಸ್ಥಳವಾಗಿದೆ. ಪ್ರವಾಸಿಗರು ಇಲ್ಲಿರುವ ಭಗವಾನ್ ವಿಷ್ಣುವಿನ ದ್ವಾರಕಾಧೀಶ ದೇವಸ್ಥಾನಕ್ಕೆ ಭೇಟಿ ನೀಡಬಹುದಾಗಿದೆ. ಈ ದೇವಸ್ಥಾನದ ಮೂಲ ವಿಗ್ರಹವು ಕೆಂಪು ಕಲ್ಲಿನಿಂದ ಮಾಡಲಾಗಿದ್ದು ಹೆಚ್ಚು ಜನಪ್ರಿಯವಾಗಿದೆ. ಈ ಪ್ರದೇಶದಲ್ಲಿರುವ ಮತ್ತೊಂದು ಧಾರ್ಮಿಕ ಸ್ಥಳವೆಂದರೆ ಸ್ರಿನಾಥ್ ಜಿ ದೇವಸ್ಥಾನ. ಈ ದೇವಸ್ಥಾನದ ಮೂಲ ವಿಗ್ರಹವನ್ನು ಒಂದೆ ಮಾರ್ಬಲ್ ಕಲ್ಲಿನಲ್ಲಿ ಕೆತ್ತಲಾಗಿದೆ.

ಈ ಪ್ರದೇಶದ ಅತಿಯಾಗಿ ಭೇಟಿ ನೀಡಲ್ಪಡುವ ದೇವಸ್ಥಾನವೆಂದರೆ, ಭಗವಾನ್ ಶಿವನಿಗೆ ಅರ್ಪಿತವಾದ ಏಕಲಿಂಗಜಿ ದೇವಸ್ಥಾನ. ಈ ದೇವಸ್ಥಾನದ ಮೂಲ ವಿಗ್ರಹವು 15ನೇ ಶತಮಾನದ್ದಾಗಿದೆ. ಪ್ರತಿ ಸೋಮವಾರದಂದು ವಿಶೇಷ ಪೂಜೆ ನಡೆಯುವ ಈ ದೇವಸ್ಥಾನಕ್ಕೆ, ಸಾವಿರಾರು ಭಕ್ತರು ದರುಶನ ಕೋರಿ ಬರುತ್ತಾರೆ. ಈ ಪ್ರದೇಶದಲ್ಲಿರುವ ಇತರೆ ಆಕರ್ಷಣೆಗಳೆಂದರೆ ರಾಜ್ಸಾಮಂದ್, ಸಾಹಿತ್ಯ ಮಂಡಲ್ ಗ್ರಂಥಾಲಯ ಮತ್ತು ಸಾವರಿಯಾ ಸೇಠ್.

ನಾಥದ್ವಾರಾ ತಲುಪುವ ಬಗೆ

ನಾಥದ್ವಾರಾವನ್ನು ವಿಮಾನ್, ರೈಲು ಮತ್ತು ರಸ್ತೆಯ ಮೂಲಕ ತಲುಪಬಹುದಾಗಿದೆ. ಉದೈಪುರ್ ನ ಮಹಾರಾಣಾ ಪ್ರತಾಪ್ ಏರ್ ಪೊರ್ಟ್ ಅಥವಾ ದಬೋಕ್ ಏರ್ ಪೊರ್ಟ್ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಅಂತಾರಾಷ್ಟ್ರೀಯ ಪ್ರವಾಸಿಗರು ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣದ ಮೂಲಕ ಇಲ್ಲಿಗೆ ಸುಲಭವಾಗಿ ತಲುಪಬಹುದಾಗಿದೆ. ಉದೈಪುರ್ ರೈಲು ನಿಲ್ದಾಣವು ಮತ್ತೊಂದು ಆಯ್ಕೆಯಾಗಿದೆ. ಟ್ಯಾಕ್ಸಿ ಹಾಗು ಕ್ಯಾಬ್ ನಿಲ್ದಾಣಗಳಿಂದ ನಾಥದ್ವಾರಾಗೆ ತಲುಪಲು ಲಭ್ಯವಿರುತ್ತದೆ. ಅಹ್ಮದಾಬಾದ್, ಉದೈಪುರ್, ಪುಷ್ಕರ್, ದೆಹಲಿ, ಅಜ್ಮೇರ್ ಮತ್ತು ಜೈಪುರ್ ಗಳಿಂದ ನಾಥದ್ವಾರಾಗೆ ಬಸ್ಸುಗಳು ದೊರೆಯುತ್ತವೆ.

Please Wait while comments are loading...