ನಾಥದ್ವಾರಾದಲ್ಲಿಯ ಶಾಪಿಂಗ್ ಒಂದು ಉತ್ಸಾಹಕರ ಅನುಭವವನ್ನು ನೀಡುತ್ತದೆ. ಇಲ್ಲಿನ ಮಳಿಗೆಗಳಲ್ಲಿ ಉತ್ತಮ ಗುಣಮಟ್ಟದ ಸಾಂಪ್ರದಾಯಿಕ ಕರಕುಶಲ ವಸ್ತುಗಳನ್ನು ಕಡಿಮೆ ದರಗಳಲ್ಲಿ ಖರಿದಿಸಬಹುದಾಗಿದೆ. ಪ್ರವಾಸಿಗರು ತಾವು ಇಷ್ಟಪಡುವವರಿಗೆ ಕಾಣಿಕೆಯಾಗಿ ನೀಡಲು, ಪಿಚ್ಛ್ವಾಯಿ ವರ್ಣಚಿತ್ರಗಳನ್ನು ಕೊಳ್ಳಬಹುದು. ಟೆರ್ರಾಕೊಟ್ಟಾ ಕಲಾಕೃತಿಗಳು ಆಕರ್ಷಣೀಯವಾಗಿರುತ್ತವೆ. 2000 ವರ್ಷ ಇತಿಹಾಸವಿರುವ ಈ ಕಲಾಕೃತಿಗಳು ವಿವಿಧ ದೇವ, ದೇವತೆಯರ ಚಿತ್ರಗಳನ್ನು ಹೊಂದಿರುತ್ತವೆ. 'ಮೀನಾ ವರ್ಕ್' ಇವುಗಳಲ್ಲಿ ಪ್ರಸಿದ್ಧವಾದುದಾಗಿದೆ.ಪ್ರವಾಸಿಗರು ಇಲ್ಲಿ ವಿವಿಧ ಬೆಳ್ಳಿಯ ಆಭರಣಗಳನ್ನು ಉತ್ತಮ ಬೆಲೆಗಳಲ್ಲಿ ಕೊಳ್ಳಬಹುದಾಗಿದೆ. ಇವುಗಳಲ್ಲದೆ, ಸಿಹಿಗಳಿಗೂ ಪ್ರಸಿದ್ಧವಾಗಿರುವ ಈ ಪ್ರದೇಶದಲ್ಲಿ ಹಲವು ಬಗೆಯ ಬಾಯಲ್ಲಿ ನೀರೂರಿಸುವ ತಿಂಡಿಗಳು ಲಭ್ಯವಿದೆ.