Search
 • Follow NativePlanet
Share
ಮುಖಪುಟ » ಸ್ಥಳಗಳು» ಬನ್ಸ್‌ವಾರಾ

ಬನ್ಸ್‌ವಾರಾ – ನೂರು ದ್ವೀಪಗಳ ನಗರ

24

ಬನ್ಸ್‌ವಾರಾ ನಗರವು ರಾಜಸ್ಥಾನದ ದಕ್ಷಿಣ ಭಾಗದಲ್ಲಿದೆ. ಇದು ಬನ್ಸ್‌ವಾರ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದ್ದು, ಸುಮಾರು 5307 ಚದರ ಕಿ.ಮೀ ವಿಸ್ತಾರವನ್ನು ಹೊಂದಿದೆ. ಬನ್ಸ್‌ವಾರಾವು 302 ಮೀಟರುಗಳಷ್ಟು ಎಲೆವೇಷನ್‌ನ್ನು ಹೊಂದಿದೆ. ಇದನ್ನು ಸ್ಥಾಪಿಸಿದ್ದು ಮಹಾರಾವಲ್‌ ಜಗ್ಮಲ್‌ ಸಿಂಗ್‌. ಈ ಪ್ರದೇಶವು ಬಿದಿರು ಕಾಡು ಎಂಬರ್ಥದ ಬನ್ಸ್‌ ಎಂಬುದರಿಂದ ಉದ್ಭವವಾಗಿದೆ. ಈ ನಗರವನ್ನು ನೂರು ದ್ವೀಪಗಳ ನಗರ ಎಂದೂ ಕರೆಯಲಾಗುತ್ತದೆ. ಬನ್ಸ್‌ವಾರಾ ಮೂಲಕ ಹರಿಯುವ ಮಾಹಿ ನದಿಯಲ್ಲಿ ಹಲವಾರು ದ್ವೀಪಗಳಿವೆ.

ಬನ್ಸ್‌ವಾರಾ ಜಿಲ್ಲೆಯು ಹಿಂದೆ ಮಹ್ರವಾಲ್‌ರ ಆಳ್ವಿಕೆಗೆ ಒಳಪಟ್ಟಿತ್ತು. ಪೂರ್ವ ಭಾಗದ ಪ್ರದೇಶವನ್ನು ವಾಗಡ್‌ ಅಥವಾ ವಾಗ್ವಾರ‍್ ಎಂದು ಕರೆಯಲಾಗುತ್ತದೆ. ಐತಿಹ್ಯಗಳ ಪ್ರಕಾರ ಈ ಪ್ರದೇಶವು, ಭಿಲ್ಲರ ರಾಜನಾದ ಬನ್ಸಿಯಾನಿಂದ ಆಳ್ವಿಕೆಗೆ ಒಳಪಟ್ಟಿದ್ದರಿಂದ ಬನ್ಸ್‌ವಾರಾ ಎಂದು ಹೆಸರನ್ನು ಪಡೆಯಿತು. ನಂತರದಲ್ಲಿ ಈ ರಾಜನನ್ನು ಜಗ್ಮಲ್‌ ಸಿಂಗ್‌ ಸೋಲಿಸಿ ರಾಜ್ಯದ ಮೊದಲ ಮಹ್ರವಾಲ್‌ ರಾಜನಾದ.

ಮಿನಿ ಜಲಿಯನ್‌ವಾಲಾಬಾಘ್‌

1913ರಲ್ಲಿ ಕೆಲವ ಭಿಲ್ಲರು ಸಾಮಾಜಿಕ ಚಳುವಳಿಗಾರರಾದ ಗೋವಿಂದಗಿರಿ ಮತ್ತು ಪುಂಜರಿಂದ ಪ್ರಭಾವಿತಗೊಂಡು ಸರ್ಕಾರದ ವಿರುದ್ಧ ದನಿಯೆತ್ತಿದರು.  ಆದರೆ ಸಮಸ್ಯೆಯನ್ನು ಬಗೆಹರಿಸಲು ಮಂಗ್ರಾಹ್‌ ಗುಡ್ಡದಲ್ಲಿ ನೂರಾರು ಭಿಲ್ಲರು ಸಭೆ ಸೇರಿದ್ದರು. ಈ ಸಂದರ್ಭದಲ್ಲಿ ಗುಂಡಿನ ದಾಳಿ ನಡೆಸಿ ಅವರನ್ನು ಕೊಲೆಗೈಯಲಾಯಿತು. ಈ ಘಟನೆಯನ್ನು ಮಿನಿ ಜಲಿಯನ್‌ವಾಲಾಬಾಗ್‌ ಎಂದು ಕರೆಯಲಾಗಿದೆ. ಮಂಗಾರ್‌ ಗುಡ್ಡವನ್ನು ಈಗ ಮಂಗ್ರಾಹ್ ಧಾಮ ಎಂದು ಪರಿಗಣಿಸಲಾಗಿದೆ.

ಸ್ಥಳೀಯರು ಮತ್ತು ಭಾಷೆಗಳು

ಭಾರತ ಸ್ವತಂತ್ರವಾದ ನಂತರದಲ್ಲಿ ಬನ್ಸ್‌ವಾರಾ ರಾಜ್ಯ ಮತ್ತು ಕುಶಾಲ್‌ಗಢವನ್ನು 1949ರಲ್ಲಿ ರಾಜಸ್ತಾನ ರಾಜ್ಯಕ್ಕೆ ಸೇರಿಸಲಾಯಿತು. ಬನ್ಸ್‌ವಾರಾವನ್ನು ಪ್ರತ್ಯೇಕ ಜಿಲ್ಲೆ ಎಂದು ಗುರುತಿಸಲಾಯಿತು. ಭಿಲ್ಲರು, ಭಿಲ್ಲ ಮೀನಾಗಳು, ಡಾಮರುಗಳು, ಚರ್ಪೋತಾ ಮತ್ತು ನಿನಾಮಸ್‌ ಹಾಗೂ ಇತರ ಪ್ರಮುಖ ಜಾತಿಗಳಾದ ಪಟೇಲರು, ರಜಪೂತರು, ಬ್ರಾಹ್ಮಣರು ಮತ್ತು ಮಹಾಜನರು ಈ ಪ್ರದೇಶದಲ್ಲಿ ವಾಸಿಸುತ್ತಾರೆ. ಗುಜರಾತಿ ಮತ್ತು ಮೆವಾರಿ ಭಾಷೆಯ ಸಮ್ಮಿಶ್ರಣವಾದ ವಾಗ್ರಿಯು ಇಲ್ಲಿ ಸಾಮಾನ್ಯವಾಗಿ ಮಾತನಾಡಲ್ಪಡುವ ಭಾಷೆ.

ಬನ್ಸ್‌ವಾರಾದಲ್ಲಿ ಆಕರ್ಷಣೆಗಳು

ತ್ರಿಪುರ ಸುಂದರಿ, ಮಾಹಿ ಡ್ಯಾಮ್‌, ಕಾಗ್ದಿ ಪಿಕ್‌ ಅಪ್‌ ವೇರ‍್ ಮತ್ತು ಮಾದಾರೇಶ್ವರ ಶಿವ ದೇವಸ್ಥಾನಗಳು ಇಲ್ಲಿನ ಜನಪ್ರಿಯ ಪ್ರವಾಸಿ ತಾಣಗಳು. ಇತರ ಪ್ರಮುಖ ಪ್ರವಾಸಿ ತಾಣಗಳೆಂದರೆ ಅಬ್ದುಲ್ಲಾ ಪೀರ‍್, ಆನಂದ ಸಾಗರ ಕರೆ, ಭೀಮ ಕುಂಡ, ಅಂಡೇಶ್ವರ (ಜೈನ ದೇವಸ್ಥಾನ) ಮತ್ತು ಚೀಂಚ್‌ ಬ್ರಹ್ಮ ದೇವಸ್ಥಾನ.

ಬನ್ಸ್‌ವಾರಾಕ್ಕೆ ತಲುಪುವುದು

ಉದಯಪುರ ವಿಮಾನ ನಿಲ್ದಾಣವು 157 ಕಿ.ಮೀ ದೂರದಲ್ಲಿದ್ದು, ಬನ್ಸ್‌ವಾರಾಗೆ ಸಮೀಪದ ವಿಮಾನ ನಿಲ್ದಾಣವಾಗಿದೆ. ನಿರಂತರ ವಿಮಾನಗಳು ಜೋಧ್‌ಪುರ, ಜೈಪುರ, ಮುಂಬೈ ಮತ್ತು ದೆಹಲಿಯಿಂದ ಇಲ್ಲಿಗೆ ಲಭ್ಯವಿದೆ. ಬಸ್‌ ಸೇವೆಗಳು ರಾಟ್ಲಾಮ್‌, ಡುಂಗರಪುರ, ದೋಹಾ ಮತ್ತು ಜೈಪುರದಿಂದ ಬನ್ಸ್‌ವಾರಾಗೆ ಇವೆ. ಅಗಸ್ಟ್‌ನಿಂದ ಮಾರ್ಚ್‌‌ನ ಅವಧಿಯು ಬನ್ಸ್‌ವಾರಾಗೆ ಪ್ರವಾಸ ಕೈಗೊಳ್ಳುವುದಕ್ಕೆ ಸೂಕ್ತವಾದ ಕಾಲವಾಗಿದೆ.

ಬನ್ಸ್‌ವಾರಾ ಪ್ರಸಿದ್ಧವಾಗಿದೆ

ಬನ್ಸ್‌ವಾರಾ ಹವಾಮಾನ

ಉತ್ತಮ ಸಮಯ ಬನ್ಸ್‌ವಾರಾ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಬನ್ಸ್‌ವಾರಾ

 • ರಸ್ತೆಯ ಮೂಲಕ
  ರಾಜಸ್ತಾನ ಮತ್ತು ಮಧ್ಯಪ್ರದೇಶ ರಾಜ್ಯ ಸರ್ಕಾರದ ಬಸ್‌ಗಳು ಬನ್ಸ್‌ವಾರಾಗೆ ಸಂಪರ್ಕವನ್ನು ಹೊಂದಿದೆ. ಈ ಎರಡೂ ರಾಜ್ಯಗಳ ವಿವಿಧ ನಗರಗಳಿಂದ ಬನ್ಸ್‌ವಾರಾಗೆ ಬಸ್‌ ಸೌಲಭ್ಯವಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಬನ್ಸ್‌ವಾರಾದಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ರಾಟ್ಲಮ್ ರೈಲ್ವೇ ನಿಲ್ದಾಣವೇ ಇಲ್ಲಿಗೆ ಸಮೀಪದ್ದು. ಭಾರತದ ಬಹುತೇಕ ಎಲ್ಲಾ ನಗರಗಳಿಂದಲೂ ಇಲ್ಲಿಗೆ ರೈಲುಗಳ ಸಂಪರ್ಕವಿದೆ. ಇಲ್ಲಿಂದ ಬನ್ಸ್‌ವಾರಾಗೆ ಹೊಗಲು ಟ್ಯಾಕ್ಸಿಗಳು ಬಾಡಿಗೆಗೆ ಲಭ್ಯವಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಉದಯಪುರದಲ್ಲಿರುವ ಮಹಾರಾಣ ಪ್ರತಾಪ ವಿಮಾನ ನಿಲ್ದಾಣವು ಬನ್ಸ್‌ವಾರಾಗೆ ಸಮೀಪದ ವಿಮಾನ ನಿಲ್ದಾಣ. ಟ್ಯಾಕ್ಸಿಗಳನ್ನು ಬಾಡಿಗೆಗೆ ಪಡೆದು ಇಲ್ಲಿಂದ ಬನ್ಸ್‌ವಾರಾಗೆ ತಲುಪಬಹುದು. ಇದು ಸುಮಾರು 157 ಕಿ.ಮೀ ದೂರದಲ್ಲಿದೆ. ಈ ವಿಮಾನ ನಿಲ್ದಾಣವು ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮತ್ತು ಸಂಗಾನೇರ್ ವಿಮಾನ ನಿಲ್ದಾಣಕ್ಕೆ ನಿರಂತರ ವಿಮಾನಗಳಿಂದ ಸಂಪರ್ಕವನ್ನು ಹೊಂದಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Jan,Sat
Return On
30 Jan,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
29 Jan,Sat
Check Out
30 Jan,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
29 Jan,Sat
Return On
30 Jan,Sun