Search
  • Follow NativePlanet
Share
ಮುಖಪುಟ » ಸ್ಥಳಗಳು » ಬನ್ಸ್‌ವಾರಾ » ಹವಾಮಾನ

ಬನ್ಸ್‌ವಾರಾ ಹವಾಮಾನ

ಬನ್ಸ್‌ವಾರಾಗೆ ಭೇಟಿ ನೀಡುವ ಸೂಕ್ತ ತಿಂಗಳುಗಳೆಂದರೆ ಅಗಸ್ಟ್‌ ಮತ್ತು ಮಾರ್ಚ್‌. ಈ ಅವಧಿಯಲ್ಲಿ ಇಲ್ಲಿನ ವಾತಾವರಣವು ತಂಪಾಗಿರುತ್ತದೆ.

ಬೇಸಿಗೆಗಾಲ

(ಮಾರ್ಚ್‌ನಿಂದ ಮೇ): ಬನ್ಸ್‌ವಾರಾವು ಬೇಸಿಗೆಯಲ್ಲಿ ಅತ್ಯಂತ ಹೆಚ್ಚು ಉಷ್ಣತೆಯನ್ನು ಹೊಂದಿರುತ್ತದೆ. 27 ಡಿಗ್ರಿಯಿಂದ 43 ಡಿಗ್ರಿಯ ತನಕ ಉಷ್ಣಾಂಶವು ದಾಖಲಾಗುತ್ತದೆ. ಇಡೀ ವರ್ಷದಲ್ಲೇ ಮೇ ತಿಂಗಳು ಅತ್ಯಂತ ಬಿಸಿಯಾಗಿರುತ್ತದೆ. ಹೀಗಾಗಿ ಬನ್ಸ್‌ವಾರಾಗೆ ಮೇ ತಿಂಗಳಲ್ಲಿ ಪ್ರವಾಸಿಗರು ಭೇಟಿ ನೀಡುವುದನ್ನು ಶಿಫಾರಸು ಮಾಡಲಾಗುವುದಿಲ್ಲ.

ಮಳೆಗಾಲ

(ಜೂನ್‌ನಿಂದ ಸಪ್ಟೆಂಬರ್): ರಾಜಸ್ತಾನದ ಇತರ ಪ್ರದೇಶಗಳಂತಲ್ಲದೇ ಬನ್ಸ್‌ವಾರಾದಲ್ಲಿ ಉತ್ತಮ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯ ಉಷ್ಣ ವಾತಾವರಣದಿಂದ ಮಳೆಗಾಲವು ಉತ್ತಮ ಸನ್ನಿವೇಶವನ್ನು ನಿರ್ಮಾಣಮಾಡುತ್ತದೆ. ಜುಲೈ ಅತ್ಯಂತ ಹೆಚ್ಚು ಮಳೆಬೀಳುವ ತಿಂಗಳು. ಮಳೆಗಾಲದಲ್ಲಿ ಇಲ್ಲಿನ ವಾತಾವರಣ ಆರ್ದ್ರವಾಗಿರುವುದರಿಂದ ಪ್ರವಾಸಿಗರು ಬನ್ಸ್‌ವಾರಾವನ್ನು ಭೇಟಿ ಮಾಡಬಹುದು.

ಚಳಿಗಾಲ

(ನವೆಂಬರಿನಿಂದ ಫೆಬ್ರುವರಿ): ಬನ್ಸ್‌ವಾರಾದ ಚಳಿಗಾಲದಲ್ಲಿ ಉತ್ತಮವಾದ ವಾತಾವರಣ ಇರುತ್ತದೆ. 26 ಡಿಗ್ರಿಯಿಂದ 10 ಡಿಗ್ರಿ ತನಕ ತಾಪಮಾನವು ಇರುತ್ತದೆ. ಈ ಅವಧಿಯಲ್ಲಿ ಬನ್ಸ್‌ವಾರಾಗೆ ಭೇಟಿ ನೀಡುವುದು ಸೂಕ್ತ. ಡಿಸೆಂಬರ್ ಮತ್ತು ಜನವರಿ ತಿಂಗಳು ವರ್ಷದಲ್ಲೇ ಅತ್ಯಂತ ಹೆಚ್ಚು ಶೀತದ ವಾತಾವರಣ.