Search
  • Follow NativePlanet
Share
ಮುಖಪುಟ » ಸ್ಥಳಗಳು» ಕುಂಭಲ್ಗಡ್

ಕುಂಭಲ್ಗಡ್ - ಕೋಟೆಗಳ ವಿಸ್ಮಯಲೋಕ

23

ರಾಜಸ್ಥಾನಿನ ರಾಜ್ಸಾಮಂದ್ ಜಿಲ್ಲೆಯಲ್ಲಿರುವ ಕುಂಭಲ್ಗಡ್, ಒಂದು ಪ್ರಖ್ಯಾತ ಪ್ರವಾಸಿ ತಾಣವಾಗಿದೆ. ಈ ಸ್ಥಳವು ರಾಜ್ಯದ ದಕ್ಷಿಣ ಭಾಗದಲ್ಲಿದ್ದು, ಇದನ್ನು ಕುಂಭಲ್ಮೇರ್ ಎಂದೂ ಕರೆಯಲಾಗುತ್ತದೆ. ಇಲ್ಲಿರುವ ಕುಂಭಲ್ಗಡ್ ಕೋಟೆಯು ರಾಜಸ್ಥಾನ ರಾಜ್ಯದ ಎರಡನೇ ಮಹತ್ವದ ಕೋಟೆಯಾಗಿದೆ. 15 ನೇ ಶತಮಾನದಲ್ಲಿ ರಾಣಾ ಕುಂಭನಿಂದ ಇದು ನಿರ್ಮಿತವಾಗಿದೆ. ಪ್ರವಾಸಿಗರು ಈ ಕೋಟೆಯ ಮೇಲಿಂದ ಸುತ್ತ ಮುತ್ತ ಪ್ರದೇಶಗಳ ವಿಹಂಗಮ ದೃಶ್ಯಗಳನ್ನು ಮನಸಾರೆ ವಿಕ್ಷೀಸಬಹುದು. ಇಲ್ಲಿ, ಶತ್ರುಗಳಿಂದ ರಕ್ಷಣೆಗಾಗಿ, ವಕ್ರಾಕಾರದಲ್ಲಿ ಎತ್ತರವಾದ ಗೋಡೆಯನ್ನು ಕಟ್ಟಲಾಗಿದೆ. ಚೀನಾ ಗೋಡೆಯ ನಂತರ, ಈ ಗೋಡೆಯನ್ನು ಪ್ರಪಂಚದ ಎರಡನೇ ಉದ್ದವಾದ ಗೋಡೆ ಎಂದು ಹೇಳಲಾಗುತ್ತದೆ.

ಮೋಡಗಳ ಅರಮನೆ

ಸಾಮಾನ್ಯವಾಗಿ ರಾಜಸ್ಥಾನಿನಲ್ಲಿ ಕಾಣಸಿಗುವ ಹಾಗೆ, ಕುಂಭಲ್ಗಡ್ ವು ಕೂಡ ಬಾದಲ್ ಮಹಲ್ ನಂತಹ ಹಲವಾರು ಅದ್ಭುತ ಅರಮನೆಗಳಿಂದಾಗಿ ಹೆಸರುವಾಸಿಯಾಗಿದೆ. ಈ ಅರಮನೆಯನ್ನು ಮೋಡಗಳ ಅರಮನೆ ಎಂದು ಕರೆಯಲಾಗುತ್ತದೆ. ಮರ್ದಾನಾ ಮಹಲ್ ಮತ್ತು ಜನಾನಾ ಮಹಲ್ ಈ ಅರಮನೆಗೆ ಕೂಡಿಕೊಂಡ ಎರಡು ಒಳಭಾಗಗಳು. ಇಲ್ಲಿನ ಭವ್ಯವಾದ ಕೊಠಡಿಗಳು ನೀಲಿ ಬಣ್ಣದ ಭಿತ್ತಿಚಿತ್ರಗಳಿಂದ ಅಲಂಕರಿಸಲ್ಪಟ್ಟಿವೆ. ಕೋಣೆಗಳು ತಮ್ಮ ಅನನ್ಯವಾದ ಹವಾನಿಯಂತ್ರಣ ವ್ಯವಸ್ಥೆಯಿಂದಾಗಿ ಹೆಸರುವಾಸಿಯಾಗಿವೆ.

ಕುಂಭಲ್ಗಡ್ ಸುತ್ತಮುತ್ತಲು...

ಸುಂದರ ಅರಮನೆಗಳಿಂದಾಗಿ ಮಾತ್ರವಲ್ಲದೆ, ಕುಂಭಲ್ಗಡ್ ತನ್ನಲ್ಲಿಯ ಅನೇಕ ಪುರಾತನ ದೇವಸ್ಥಾನಗಳಿಂದಾಗಿಯು ಹೆಸರುವಾಸಿಯಾಗಿದೆ. ಅವುಗಳಲ್ಲಿ ವೇದಿ ದೇವಸ್ಥಾನ, ನೀಲಕಂಠ ಮಹಾದೇವ್ ದೇವಸ್ಥಾನ, ಮುಚ್ಚಲ್ ಮಹಾವೀರ್ ದೇವಸ್ಥಾನ, ಪರಶುರಾಮ ದೇವಸ್ಥಾನ, ಮಮ್ಮದೇವ ದೇವಸ್ಥಾನ ಮತ್ತು ರನಕಪುರ್ ಜೈನ ದೇವಾಲಯ ಪ್ರಮುಖವಾದವುಗಳು.

ಇಲ್ಲಿಯ ಕುಂಭಲ್ಗಡ್ ವನ್ಯಜೀವಿ ಧಾಮವು, ಚೌಸಿಂಗಗಳು, ಚಿರತೆಗಳು, ಕಾಡು ಹಂದಿಗಳು, ತೋಳಗಳು, ಕರಡಿಗಳು, ಜಾಕಾಲ್ ಗಳು, ಸಾಂಬಾರಗಳು, ಚಿಂಕಾರಾ, ಲಿಯೋಪಾರ್ಡ್, ಹೈನಾ, ಕಾಡು ಬೆಕ್ಕು, ನೀಲ್ಗಾಯ್ ಮತ್ತು ಮೊಲಗಳನ್ನು ನೋಡಲು ಒಂದು ಸೂಕ್ತ ಸ್ಥಳವಾಗಿದೆ. ರಾಜ್ಯದ ಇದೊಂದು ವನ್ಯಜೀವಿ ಧಾಮದಲ್ಲಿ ಮಾತ್ರ ತೋಳಗಳನ್ನು ಕಾಣಬಹುದಾಗಿದೆ. ಹಲ್ದಿಘಾಟಿ ಮತ್ತು ಘನೆರಾವ್, ಕುಂಭಲ್ಗಡ್ ನಲ್ಲಿರುವ ಇತರೆ ಆಕರ್ಷಣೆಗಳು.

ಕುಂಭಲ್ಗಡ್ ಗೆ ತಲುಪಲು

ವಿಮಾನ, ರೈಲು ಮತ್ತು ರಸ್ತೆ ಮೂಲಕ ಈ ಪ್ರದೇಶವನ್ನು ಸುಲಭವಾಗಿ ತಲುಪಬಹುದಾಗಿದೆ. ಉದೈಪುರ್ ನ ಮಹಾರಾಣಾ ಪ್ರತಾಪ್ ಏರ್ ಪೊರ್ಟ್ ಅಥವಾ ದಾಬೋಕ್ ಏರ್ ಪೊರ್ಟ್ ಇದಕ್ಕೆ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಅಂತಾರಾಷ್ಟ್ರೀಯ ಪ್ರವಾಸಿಗರು ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣದಿಂದ ಇಲ್ಲಿಗೆ ಬರಬಹುದಾಗಿದೆ. ಫಾಲ್ನಾ ಜಂಕ್ಷನ್, ಕುಂಭಲ್ಗಡ್ ಗೆ ಹತ್ತಿರದ ರೈಲು ನಿಲ್ದಾಣವಾಗಿದೆ. ಭಾರತದ ಪ್ರಮುಖ ನಗರಗಳಾದ ಮುಂಬೈ, ಅಜ್ಮೇರ್, ದೆಹಲಿ, ಅಹ್ಮದಾಬಾದ್, ಜೈಪುರ್ ಮತ್ತು ಜೋಧಪುರ್ ಗಳಿಂದ ಇಲ್ಲಿಗೆ ರೈಲುಗಳು ಲಭ್ಯವಿದೆ. ವಿಮಾನ ಹಾಗು ರೈಲು ನಿಲ್ದಾಣಗಳಿಂದ ಪ್ರವಾಸಿಗರು ಕುಂಭಲ್ಗಡ್ ಗೆ ತಲುಪಲು ಟ್ಯಾಕ್ಸಿ ಅಥವಾ ಕ್ಯಾಬ್ ಗಳನ್ನು ಬಾಡಿಗೆಗೆ ಪಡೆಯಬಹುದಾಗಿದೆ. ಉದೈಪುರ್, ಅಜ್ಮೇರ್, ಜೋಧಪುರ್ ಮತ್ತು ಪುಷ್ಕರ್ ಗಳಿಂದ ಕುಂಭಲ್ಗಡ್ ಗೆ ಬಸ್ಸುಗಳು ದೊರೆಯುತ್ತವೆ.

ಹವಾಮಾನ

ಕುಂಭಲ್ಗಡ್ ವು ವರ್ಷಪೂರ್ತಿ ಮಧ್ಯಮಗತಿಯ ಹವಾಮಾನ ಗುಣಲಕ್ಷಣಗಳನ್ನು ಹೊಂದಿರುತ್ತದೆ. ಆದರೂ ಅಕ್ಟೋಬರ್ ಮತ್ತು ಮಾರ್ಚ್ ಮಧ್ಯದ ಅವಧಿಯು ಇಲ್ಲಿಗೆ ಭೇಟಿ ನೀಡಲು ಉತ್ತಮವಾದ ಕಾಲವಾಗಿರುತ್ತದೆ.

ಕುಂಭಲ್ಗಡ್ ಪ್ರಸಿದ್ಧವಾಗಿದೆ

ಕುಂಭಲ್ಗಡ್ ಹವಾಮಾನ

ಉತ್ತಮ ಸಮಯ ಕುಂಭಲ್ಗಡ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಕುಂಭಲ್ಗಡ್

  • ರಸ್ತೆಯ ಮೂಲಕ
    ಬಸ್ಸುಗಳ ಮುಖಾಂತರವೂ ಕುಂಭಲ್ಗಡ್ ಅನ್ನು ತಲುಪಬಹುದಾಗಿದೆ. ಉದೈಪುರ್, ಜೋಧಪುರ್, ಅಜ್ಮೇರ್ ಮತ್ತು ಪುಷ್ಕರ್ ಗಳಿಂದ ಇಲ್ಲಿಗೆ ಬರಲು ಬಸ್ಸುಗಳು ದೊರೆಯುತ್ತವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಫಾಲ್ನಾ ಕುಂಭಲ್ಗಡ್ ಗೆ ಹತ್ತಿರವಿರುವ ರೈಲು ನಿಲ್ದಾಣವಾಗಿದೆ. ಈ ರೈಲು ನಿಲ್ದಾಣವು ಪ್ರಮುಖ ನಗರಗಳಾದ ಮುಂಬೈ, ಅಜ್ಮೇರ್, ಅಹ್ಮದಾಬಾದ್, ಜೈಪುರ್, ಜೋಧಪುರ್ ಮತ್ತು ದೆಹಲಿಗಳೊಂದಿಗೆ ರೈಲುಗಳ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ. ಇಲ್ಲಿಂದ ಕುಂಭಲ್ಗಡ್ ಗೆ ತಲುಪಲು ಮಿತವ್ಯಯದ ಬೆಲೆಗಳಲ್ಲಿ ಟ್ಯಾಕ್ಸಿಗಳು ದೊರೆಯುತ್ತವೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಮಹಾರಾಣಾ ಪ್ರತಾಪ್ ಅಥವಾ ದಾಬೋಕ್ ಏರ್ ಪೊರ್ಟ್ ಕುಂಭಲ್ಗಡ್ ಗೆ ಹತ್ತಿರದ ವಿಮಾನ ನಿಲ್ದಾಣವಾಗಿದ್ದು, ಉದೈಪುರ್ ನಿಂದ 84 ಕಿ.ಮೀ ದೂರದಲ್ಲಿದೆ. ಈ ವಿಮಾನ ನಿಲ್ದಾಣವು ದೆಹಲಿ, ಜೈಪುರ್ ಹಾಗು ಜೋಧಪುರ್ ನೊಂದಿಗೆ ಉತ್ತಮ ವಾಯುಮಾರ್ಗ ಸಂಪರ್ಕವನ್ನು ಹೊಂದಿದೆ. ಇಲ್ಲಿಂದ ಕುಂಭಲ್ಗಡ್ ಗೆ ತಲುಪಲು ಮಿತವ್ಯಯದ ಬೆಲೆಗಳಲ್ಲಿ ಟ್ಯಾಕ್ಸಿಗಳು ದೊರೆಯುತ್ತವೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat