ನೀಲಕಂಠ ಮಹಾದೇವ್ ದೇವಸ್ಥಾನವು ಕುಂಭಲ್ಗಡ್ ಕೋಟೆಯ ಹತ್ತಿರದಲ್ಲಿದೆ. ಕಲ್ಲಿನಿಂದ ಮಾಡಲಾದ ಆರು ಅಡಿ ಉದ್ದದ ಶಿವಲಿಂಗವನ್ನು ಈ ದೇವಸ್ಥಾನದಲ್ಲಿ ಕಾಣಬಹುದಾಗಿದೆ. ಈ ದೇವಸ್ಥಾನವು ಭಗವಾನ್ ಶಿವನಿಗೆ ಸಮರ್ಪಿತವಾಗಿದೆ. ಇತಿಹಾಸದ ಪ್ರಕಾರ, ರಾಣಾ ಕುಂಭ ರಾಜನು ಶಿವನ ಆರಾಧಕನಾಗಿದ್ದನು, ಒಂದೊಮ್ಮೆ ಶಿವನನ್ನು ಪೂಜಿಸುತ್ತಿರುವಾಗ ತನ್ನ ಮಗನಿಂದಲೆ ಶಿರಚ್ಛೆದನಕ್ಕೊಳಗಾದನು.