Search
  • Follow NativePlanet
Share
ಮುಖಪುಟ » ಸ್ಥಳಗಳು » ಖೀಚನ್ » ಹವಾಮಾನ

ಖೀಚನ್ ಹವಾಮಾನ

ಅಕ್ಟೋಬರ್ ಮಧ್ಯದಿಂದ ಮಾರ್ಚ್ ವರೆಗಿನ ಅವಧಿಯು ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ. ಏಕೆಂದರೆ ಈ ಸಮಯದಲ್ಲಿ ಪಕ್ಷಿಗಳು ಬಹು ಸಂಖ್ಯೆಯಲ್ಲಿ ಆಗಮಿಸುವುದರಿಂದ, ನೋಡಲು ಆಕರ್ಷಕವಾಗಿರುತ್ತದೆ.

ಬೇಸಿಗೆಗಾಲ

(ಎಪ್ರಿಲ್ ನಿಂದ ಜೂನ್): ಖೀಚನ್ ಪ್ರದೇಶವು ಅತಿ ಉಷ್ಣಮಯ ವಾತಾವರಣವನ್ನು ಈ ಸಮಯದಲ್ಲಿ ಹೊಂದಿರುತ್ತದೆ. ತಾಪಮಾನವು 30° C ನಿಂದ 45° C ಮಧ್ಯೆ ಹೊಯ್ದಾಡುತ್ತಿರುತ್ತದೆ. ಈ ಸಮಯದಲ್ಲಿ ಪಕ್ಷಿಗಳ ಅನುಪಸ್ಥಿತಿಯುವಿರುವುದರಿಂದ ಭೇಟಿ ಮಾಡಲು ಸೂಕ್ತವಲ್ಲ.

ಮಳೆಗಾಲ

(ಜುಲೈ ನಿಂದ ಸೆಪ್ಟಂಬರ್): ಕನಿಷ್ಟದಿಂದ ಮಧ್ಯಮ ಪ್ರಮಾಣದ ಮಳೆಯನ್ನು ಪಡೆಯುವ ಈ ಪ್ರದೇಶವು ಮಳೆಗಾಲದಲ್ಲಿಯೂ ಉಷ್ಣಮಯ ವಾತಾವರಣವನ್ನು ಹೊಂದಿರುತ್ತದೆ.

ಚಳಿಗಾಲ

(ನವಂಬರ್ ನಿಂದ ಫೆಬ್ರುವರಿ): ಚಳಿಗಾಲದಲ್ಲಿ ಕನಿಷ್ಟ 10°C ತಾಪಮಾನವು ಆಗಿದ್ದು ಗರಿಷ್ಟ 25°C ಇರುತ್ತದೆ. ಈ ಸಮಯದಲ್ಲಿ ವಾತಾವರಣವು ಹಿತಕರವಾಗಿದ್ದು, ಪಕ್ಷಿಗಳ ಆಗಮನವೂ ಇರುವುದರಿಂದ ಭೇಟಿ ನೀಡಲು ಪ್ರಶಸ್ತವಾಗಿರುತ್ತದೆ.