ರಾಮದೇವರ ಮೇಳವು ಸಂಭ್ರಮದ ಹಬ್ಬ. ಪ್ರತಿವರ್ಷ ಅಗಸ್ಟ್-ಸಪ್ಟೆಂಬರಿನಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಮೇಳಕ್ಕೆ ದೂರದ ಊರುಗಳಿಂದ ಅಪಾರ ಪ್ರಮಾಣದಲ್ಲಿ ಭಕ್ತರು ಆಗಮಿಸುತ್ತಾರೆ. ಎಲ್ಲಾ ಧರ್ಮದ ಮತ್ತು ಸಂಪ್ರದಾಯದ ಜನರೂ ಬಾಬಾ ರಾಮದೇವರ ದೇವಸ್ಥಾನಕ್ಕೆ ಈ ಸಮಯದಲ್ಲಿ ಹೋಗಬಹುದು. ಭಜನೆ ಮತ್ತು ಕೀರ್ತನೆಗಳನ್ನು ಭಕ್ತರು ಇಡೀ ದಿನ, ರಾತ್ರಿ ಹಮ್ಮಿಕೊಳ್ಳುತ್ತಾರೆ.