ಸಮೆಟೊನ್ ಕಿ ಹವೇಲಿಯು ಸವಾಯಿ ಮಾಧೊಪುರಕ್ಕೆ ಸಮೀಪದಲ್ಲಿರುವ ನೋಡಲೆ ಬೇಕಾದ ಸ್ಥಳಗಳಲ್ಲಿ ಒಂದಾಗಿದೆ. ಇದು ರಾಜಸ್ಥಾನದ ಪಾರಂಪರಿಕ ವಾಸ್ತುಶಿಲ್ಪಕ್ಕೆ ನಿದರ್ಶನವಾಗಿ ನಿಂತಿದೆ. ಈ ಹವೇಲಿಯು ರಣಥಾಂಬೊರ್ ಕೋಟೆಯ ಒಳಗಡೆ ನೆಲೆಗೊಂಡಿದೆ. ಈ ಸ್ಥಳವು ತನ್ನ ಐತಿಹಾಸಿಕ ಮತ್ತು ವಾಸ್ತುಶಿಲ್ಪದ ಮಹತ್ವದಿಂದಾಗಿ ಹಲವಾರು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ.