Search
  • Follow NativePlanet
Share
ಮುಖಪುಟ » ಸ್ಥಳಗಳು » ಸವಾಯಿ ಮಾಧೋಪುರ್ » ಆಕರ್ಷಣೆಗಳು » ಕೈಲಾ ದೇವಿ ದೇವಾಲಯ

ಕೈಲಾ ದೇವಿ ದೇವಾಲಯ, ಸವಾಯಿ ಮಾಧೋಪುರ್

2

ಕೈಲಾ ದೇವಿ ದೇವಾಲಯವು ರಾಜಸ್ಥಾನದ ಕರೌಲಿ ಜಿಲ್ಲೆಯಲ್ಲಿದ್ದು ಸವಾಯಿ ಮಾಧೊಪುರಕ್ಕೆ ಹತ್ತಿರದಲ್ಲಿದೆ. ಸವಾಯಿ ಮಾಧೊಪುರಕ್ಕೆ ಆಗಮಿಸುವ ಹಲವಾರು ಪ್ರವಾಸಿಗರು ಹಾಗು ಭಕ್ತಾಧಿಗಳು ಧಾರ್ಮಿಕವಾಗಿ ಮತ್ತು ಐತಿಹಾಸಿಕವಾಗಿ ಪ್ರಾಮುಖ್ಯತೆ ಪಡೆದಿರುವ ಈ ದೇವಾಲಯಕ್ಕೆ ಭೇಟಿಕೊಡುತ್ತಿರುತ್ತಾರೆ. ಕರೌಲಿ ಮತ್ತು ಸವಾಯಿ ಮಾಧೊಪುರದ ನಡುವೆ ಪ್ರಯಾಣಿಸುವ ಬಸ್ಸು ಮತ್ತು ಟ್ಯಾಕ್ಸಿಗಳ ಮೂಲಕ ನೀವು ಸುಲಭವಾಗಿ ಈ ದೇವಾಲಯಕ್ಕೆ ತಲುಪಬಹುದು.

ಈ ದೇವಾಲಯವನ್ನು ಕರೌಲಿಯನ್ನು ಆಳಿದ ಜಡೌನ್ ರಜಪೂತರ ಕುಲದೇವತೆಯಾದ ಕೈಲಾ ದೇವಿಗಾಗಿ ನಿರ್ಮಿಸಲಾಗಿದೆ. ಈ ದೇವಾಲಯದ ನಿರ್ಮಾಣಕ್ಕಾಗಿ ಸುಂದರವಾದ ಬಿಳಿಯ ಅಮೃತಶಿಲೆಯ ಕಲ್ಲುಗಳನ್ನು ಬಳಸಿಕೊಳ್ಳಲಾಗಿದೆ. ದೇವಾಲಯದ ಪ್ರಮುಖ ಸಭಾಂಗಣಕ್ಕಾಗಿ ಚೌಕುಳಿಯಾಕಾರದ ವಿಶಿಷ್ಟವಾದ ನೆಲಹಾಸನ್ನು ನಿರ್ಮಿಸಲಾಗಿದೆ. ಈ ದೇವಾಲಯದ ಮತ್ತೊಂದು ಪ್ರತ್ಯೇಕವಾದ ಅಂಶವೆಂದರೆ ಭಕ್ತಾಧಿಗಳು ಈ ದೇವಾಲಯದ ಒಂದು ಮೂಲೆಯಲ್ಲಿ ಬೃಹತ್ ಸಂಖ್ಯೆಯಲ್ಲಿ ಕೆಂಪು ಬಾವುಟಗಳನ್ನು ನೆಟ್ಟಿದ್ದಾರೆ. ಒಂದಾನೊಂದು ಕಾಲದಲ್ಲಿ ಭಕ್ತಾಧಿಗಳು ಮತ್ತು ಯಾತ್ರಾರ್ಥಿಗಳು ದೇವಿಯ ದರ್ಶನ ಪಡೆಯಲು ಇಲ್ಲಿಗೆ ಬರಿಗಾಲಿನಲ್ಲಿ ಬರುತ್ತಿದ್ದರಂತೆ. ಪ್ರಸ್ತುತ ಈ ದೇವಾಲಯದಲ್ಲಿ ಪ್ರತಿದಿನ ಸಂಜೆ ಜಾಗರಣೆಗಳನ್ನು ಏರ್ಪಡಿಸುತ್ತಾರೆ. ಇದು ಇಲ್ಲಿನ ಪ್ರಧಾನ ಆಕರ್ಷಣೆಯಾಗಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat