Search
  • Follow NativePlanet
Share
ಮುಖಪುಟ » ಸ್ಥಳಗಳು » ರಣಕ್‍ಪುರ್ » ಆಕರ್ಷಣೆಗಳು » ರಣಕ್‍ಪುರ್ ಜೈನ ಮಂದಿರ

ರಣಕ್‍ಪುರ್ ಜೈನ ಮಂದಿರ, ರಣಕ್‍ಪುರ್

10

ಜೈನರ ಐದು ಪ್ರಮುಖ ಯಾತ್ರಾಸ್ಥಳಗಳಲ್ಲಿ ರಣಕ್‍ಪುರ್ ಜೈನ ಮಂದಿರವು ಸಹ ಒಂದೆಂದು ಪರಿಗಣಿಸಲ್ಪಟ್ಟಿದೆ. ಪಶ್ಚಿಮಕ್ಕೆ ಅರಾವಳಿ ಪರ್ವತ ಶ್ರೇಣಿಗಳನ್ನು ಹೊಂದಿರುವ ಈ ದೇವಾಲಯವು ಆದಿನಾಥ ದೇವನಿಗಾಗಿ ನಿರ್ಮಿಸಲ್ಪಟ್ಟಿದೆ. ತೆಳು ಬಣ್ಣದ ಅಮೃತಶಿಲೆಯಿಂದ ನಿರ್ಮಾಣವಾಗಿರುವ ಈ ದೇವಾಲಯವು ನೋಡಲು ಅತ್ಯಂತ ಸುಂದರವಾಗಿದೆ. ದಂತಕಥೆಗಳ ಪ್ರಕಾರ ಈ ದೇವಾಲಯವನ್ನು ಸೇಠ್ ಧರ್ನ ಸಹ್ ಮತ್ತು ಮೇವಾರ್‍‍ನ ರಾಜ ರಾಣ ಖುಂಬರು ನಿರ್ಮಿಸಿದರಂತೆ. ಇಲ್ಲಿನ ಮುಖ್ಯ ದೇವಾಲಯದ ಸಂಕೀರ್ಣವಾದ ಚಮುಖವು ಇನ್ನಿತರ ಜೈನ ದೇವಾಲಯಗಳನ್ನು ಸಹ ಹೊಂದಿದೆ.ಈ ದೇವಾಲಯದ ಅಡಿಪಾಯವು 48,000 ಚದರ ಅಡಿಗಳಷ್ಟು ವಿಸ್ತೀರ್ಣವನ್ನು ಹೊಂದಿದೆ. 80 ಗುಮ್ಮಟಗಳನ್ನು, 29 ಹಜಾರಗಳನ್ನು ಮತ್ತು 1,444 ಸ್ತಂಭಗಳನ್ನು ಹೊಂದಿರುವ ಈ ದೇವಾಲಯವು ಇದನ್ನು ಕಟ್ಟಿದ ಕಲಾವಿದರ ಕಲಾನೈಪುಣ್ಯತೆಯನ್ನು ಪ್ರವಾಸಿಗರಿಗೆ ಸಾರಿ ಸಾರಿ ಹೇಳುವಂತೆ ಹೆಮ್ಮೆಯಿಂದ ನಿಂತಿದೆ. ಇಲ್ಲಿನ ಸ್ತಂಭಗಳ ಮತ್ತೊಂದು ವಿಶೇಷತೆಯೆಂದರೆ, ಪ್ರತಿ ಕಂಬಗಳ ಕೆತ್ತನೆಯು ಒಂದರಂತೆ ಇನ್ನೊಂದಿಲ್ಲ.ಎಲ್ಲವು ಭಿನ್ನ ಭಿನ್ನವಾಗಿ ಪ್ರತ್ಯೇಕತೆಯಿಂದ ಕಾಣುವಂತೆ, ಸರಿಸಾಟಿಯಿಲ್ಲದ ಸೌಂದರ್ಯದಿಂದ ನಿರ್ಮಾಣಗೊಂಡಿವೆ. ಪಾರ್ಶ್ವನಾಥ ಮತ್ತು ನೇಮಿನಾಥ ದೇವಾಲಯಗಳು ಮುಖ್ಯ ದೇವಾಲಯದತ್ತ ಮುಖ ಮಾಡಿ ನಿಂತಿವೆ. ಪ್ರವಾಸಿಗರು ಈ ದೇವಾಲಯಗಳಲ್ಲಿರುವ ಸುಂದರವಾದ ಕೆತ್ತನೆಗಳನ್ನು ನೋಡಬಹುದು. ಈ ಕೆತ್ತನೆಗಳು ಅವರಿಗೆ ಖಜುರಾಹೊನ ನೆನಪಿಗೆ ತರಬಹುದು.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat