Search
  • Follow NativePlanet
Share
ಮುಖಪುಟ » ಸ್ಥಳಗಳು » ಟೋಂಕ್ » ಹವಾಮಾನ

ಟೋಂಕ್ ಹವಾಮಾನ

ಚಳಿಗಾಲದ ಅವಧಿ ಅಂದರೆ ಅಕ್ಟೋಬರ್‌ನಿಂದ ಫೆಬ್ರವರಿ ನಡುವಿನ ಸಮಯ ಪ್ರವಾಸಕ್ಕೆ ಯೋಗ್ಯ ಕಾಲ. ಐತಿಹಾಸಿಕ ನಗರಿಯ ಸೌಂದರ್ಯ ಸವಿಯಲು ಇದು ಸುಸಂದರ್ಭ. ಇದಲ್ಲದೇ ಮಳೆಗಾಲದ ಅವಧಿಯಲ್ಲೂ ಬರಬಹುದು. ಬೇಸಿಗೆಯಲ್ಲಿ ಬರದಿದ್ದರೆ ಅನುಕೂಲ.

ಬೇಸಿಗೆಗಾಲ

(ಮಾರ್ಚ್-ಜೂನ್‌) ಟೋಂಕ್‌ನಲ್ಲಿ ಮಾರ್ಚ್ ನಿಂದ ಜೂನ್‌ ಅವಧಿಯಲ್ಲಿ ಬೇಸಿಗೆ ಕಾಲ ಇರುತ್ತದೆ. ಅತ್ಯಂತ ಒಣಹವೆ ಇದ್ದು, ಉಷ್ಣತೆ 26 ರಿಂದ 45 ಡಿಗ್ರಿ ಸೆಲ್ಶಿಯಸ್‌ವರೆಗೂ ವ್ಯತ್ಯಾಸವಾಗುತ್ತಿರುತ್ತದೆ. ಸರಾಸರಿ ಉಷ್ಣಾಂಶ ಪ್ರಮಾಣ 30 ಡಿಗ್ರಿ ಸೆಲ್ಶಿಯಸ್‌. ಈ ಸಮಯದಲ್ಲಿ ಟೋಂಕ್‌ಗೆ ಪ್ರವಾಸಿಗರು ಬರುವುದು ಕಡಿಮೆ. ಹೊಸದಾಗಿ ಬರುವವರು ಈ ಕಾಲವನ್ನು ಆಯ್ಕೆ ಮಾಡಿಕೊಳ್ಳುವುದು ಸರಿಯಲ್ಲ. ಅತಿಯಾದ ಉಷ್ಣತೆ ಇರುವ ಸಂದರ್ಭದಲ್ಲಿ ಇದರಿಂದ ದೂರ ಇರುವುದು ಉತ್ತಮ.

ಮಳೆಗಾಲ

(ಜುಲೈನಿಂದ ಸೆಪ್ಟೆಂಬರ್‌) ಮನ್ಸೂನ್‌ ಆರಂಭವಾಗುತ್ತಿದ್ದಂತೆ ಉಷ್ಣಾಂಶ ಹಂತ ಹಂತವಾಗಿ ಕಡಿಮೆ ಆಗುತ್ತಾ ಬರುತ್ತದೆ. ಜುಲೈ ಮಾನ್ಸೂನ್‌ ಆರಂಭವಾಗುವ ಕಾಲ. ಸೆಪ್ಟೆಂಬರ್‌ ಕೊನೆಯವರೆಗೂ ಇರುತ್ತದೆ. ಥಾರ್‌ ಮರಭೂಮಿ ಇದೇ ಪ್ರದೇಶದಲ್ಲಿ ಇರುವುದರಿಂದ ಈ ಭಾಗದಲ್ಲಿ ಮಳೆ ಪ್ರಮಾಣ ಕಡಿಮೆ. ಒಟ್ಟಾರೆ ವರ್ಷದಲ್ಲಿ ಈ ಕಾಲದಲ್ಲಿ ಕೊಂಚ ತಾಪಮಾನ ಕಡಿಮೆ ಇರುತ್ತದೆ.

ಚಳಿಗಾಲ

(ಅಕ್ಟೋಬರ್‌ನಿಂದ ಫೆಬ್ರವರಿ) ಅಕ್ಟೋಬರ್‌ ತಿಂಗಳಿಂದ ಇಲ್ಲಿ ಚಳಿಗಾಲ ಆರಂಭವಾಗುತ್ತದೆ. ಇದು ಫೆಬ್ರವರಿವರೆಗೂ ಮುಂದುವರಿಯುತ್ತದೆ. ಪ್ರವಾಸಿಗರಿಗೆ ಸಂದರ್ಶಿಸಲು ಇದು ಅತ್ಯಂತ ಪ್ರಶಸ್ತ ಕಾಲ. ಈ ಸಂದರ್ಭದಲ್ಲಿ ಉಷ್ಣಾಂಶವು 15 ರಿಂದ 22 ಡಿಗ್ರಿ ಸೆಲ್ಶಿಯಸ್‌ ನಡುವೆ ಇರುತ್ತದೆ.