Search
 • Follow NativePlanet
Share
ಮುಖಪುಟ » ಸ್ಥಳಗಳು» ಝಾಲಾವರ್

ಝಾಲಾವರ್ - ಐತಿಹಾಸಿಕ ಸ್ವರ್ಗ

19

ಝಾಲಾವರ್ ಇರುವುದು ರಾಜಸ್ತಾನದ ಹದೋತಿ ಪ್ರದೇಶದ ದಕ್ಷಿಣ ಭಾಗದಲ್ಲಿ. ಇದನ್ನು ಹದಾಸ್‌ ಪ್ರದೇಶ ಎಂದೂ ಕರೆಯಲಾಗುತ್ತದೆ. ಈ ಜಿಲ್ಲೆಯು ಸುಮಾರು 6928 ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ. ಇದು ಕೋಟಾ ಪ್ರಾಂತ್ಯದ ಭಾಗವಾಗಿದೆ. ಝಾಲಾವರ್ ನ್ನು ಬ್ರಿಜ್‌ನಗರ ಎಂದೂ ಕರೆಯಲಾಗುತ್ತದೆ. ಇದು ಜಿಲ್ಲೆಯ ಆಡಳಿತ ಕೇಂದ್ರವೂ ಹೌದು. ಉತ್ತರದ ಭಾಗವು ಬರಾನ್ ಜಿಲ್ಲೆಗೆ ಹೊಂದಿಕೊಂಡಿದ್ದು ದಕ್ಷಿಣ ಭಾಗವು ಕೋಟಾ ಜಿಲ್ಲೆಗೆ ಹೊಂದಿಕೊಂಡಿದೆ.

ಇತಿಹಾಸದ ಕಡೆಗೊಂದು ನೋಟ!

ಐತಿಹಾಸಿಕವಾಗಿ ಝಾಲಾವರ್ ನಗರ ಶೋಧಗೊಂಡಿದ್ದು 1791ರಲ್ಲಿ. ಕೋಟಾ ಜಿಲ್ಲೆಯ ದಿವಾನರಾಗಿದ್ದ ಝಾಲಾ ಜಾಲಿಮ್‌ ಸಿಂಗ್‌ ಇದನ್ನು ಕಂಡುಹಿಡಿದರು. ಈ ಪ್ರದೇಶವನ್ನು ಮಿಲಿಟರಿ ಕಂಟೋನ್ಮೆಂಟ್‌ ಆಗಿ ಅಭಿವೃದ್ಧಿಪಡಿಸುವ ಉದ್ದೇಶವನ್ನು ಇವರು ಹೊಂದಿದ್ದರು. ಇದರಿಂದಾಗಿ ಮರಾಠಾ ದಾಳಿಕೋರರಿಂದ ರಕ್ಷಿಸುವುದು ಇವರ ಉದ್ದೇಶವಾಗಿತ್ತು. ನಂತರದಲ್ಲಿ ಬ್ರಿಟಿಷರು ಝಾಲಾ ಝಾಲಿಮ್‌ ಸಿಂಗ್‌ರ ಮೊಮ್ಮಗನಾದ ಝಾಲಾ ಮದನ್‌ ಸಿಂಗ್‌ಗೆ ಈ ಪ್ರದೇಶವನ್ನು ಹಸ್ತಾಂತರಿಸಿದರು. ಈತನೇ ಝಾಲಾವರ್ ನ ಮೊದಲ ಆಡಳಿತಗಾರನಾದ. ಇವನು 1838ರಿಂದ 1845ರ ತನಕ ಈ ಪ್ರದೇಶವನ್ನು ಆಳಿದ.

ಝಾಲಾವರ್ ನಲ್ಲಿ ನೋಡಬಹುದಾದ ಸ್ಥಳಗಳು

ಪ್ರವಾಸಿಗರು ಝಾಲಾವರ್ ಗೆ ಹೋಗಲು ಇಚ್ಛಿಸಿದರೆ ಮೊದಲು ಝಾಲಾವರ್ ನ ಕೋಟೆಗೆ ಭೇಟಿ ನೀಡಲೇಬೇಕು. ಈ ಕೋಟೆಯನ್ನು ಗಾರ‍್ಹ್ ಅರಮನೆ ಎಂದೂ ಕರೆಯಲ್ಪಟ್ಟಿದೆ. ಝಾಲಾವರ್ ನಲ್ಲಿ 100 ಅಡಿ ಎತ್ತರದ ಸೂರ್ಯ ದೇವಸ್ಥಾನವಿದೆ. ದೇವಸ್ಥಾನದ ಒಳಗೆ ಸುಂದರವಾದ ಕೆತ್ತನೆಗಳನ್ನು ಕಾಣಬಹುದು. ಈ ನಗರವು ಚಂದ್ರಭಾಗ ನದಿಗೆ ಸಮೀಪದಲ್ಲಿದೆ ಮತ್ತು ಎಲ್ಲಾ ಭಾಗಗಳಿಂದಲೂ ಗೋಡೆಯಿಂದ ಸಂರಕ್ಷಿತವಾಗಿದೆ.

ಚಂದ್ರಭಾಗ ನದಿಯ ದಡದಲ್ಲಿ ಹಲವು ದೇವಸ್ಥಾನಗಳಿವೆ. ಇವುಗಳನ್ನು 6ರಿಂದ 14ನೇ ಶತಮಾನದ ಮಧ್ಯದಲ್ಲಿ ನಿರ್ಮಿಸಲಾಯಿತು. ಈ ದೇವಸ್ಥಾನಗಳು ಕಲಾತ್ಮಕವಾಗಿ ನಿರ್ಮಾಣಗೊಂಡಂತಹವು. ಇವುಗಳಲ್ಲಿ ಪದ್ಮನಾಥ ದೇವಸ್ಥಾನ, ಶ್ರೀ ದ್ವಾರಕೀಶ ದೇವಸ್ಥಾನ ಮತ್ತು ಶಾಂತಿನಾಥ ಜೈನ ದೇವಸ್ಥಾನಗಳು ಪ್ರಮುಖವಾದದ್ದು.

ಆಸಕ್ತಿಯಿರುವ ಪ್ರವಾಸಿಗರು ಬುದ್ಧ ಗುಹೆಗಳನ್ನು ಮತ್ತು ಸ್ತೂಪಗಳನ್ನೂ ನೋಡಬಹುದು. ಈ ಪ್ರದೇಶದ ವಾಸ್ತುಶಿಲ್ಪ ತಜ್ಞರ ಸೂಕ್ಷ್ಮ ಕೆಲಸಗಳು ಈ ಕಲಾಕೃತಿಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಇದರ ಜೊತೆಗೆ, ಪ್ರವಾಸಿಗರು ಭೀಮಸಾಗರ ಆಣೆಕಟ್ಟು, ಜೈನ ಶ್ವೇತಾಂಬರ ನಾಗೇಶ್ವರ ಪಾರ್ಶ್ವನಾಥ ದೇವಸ್ಥಾನ, ಅನ್‌ಹೆಲ್‌ ಮತ್ತು ಸರ್ಕಾರಿ ಮ್ಯೂಸಿಯಂನ್ನು ನೋಡಬಹುದು. ಅರ್ಧನಾರೀಶ್ವರ ನಟರಾಜನಂತಹ ಹಲವು ಹಿಂದೂ ಮೂರ್ತಿಗಳು ಇಲ್ಲಿವೆ. ಇದನ್ನು ಮಾಸ್ಕೋದ ’ಫೆಸ್ಟಿವಲ್‌ ಆಫ್‌ ಇಂಡಿಯಾ’ದ ಉತ್ಸವದಲ್ಲಿ ಪ್ರದರ್ಶನ ಮಾಡಲಾಗಿತ್ತು.

ಗಾಗ್ರನ್‌ ಕೋಟೆ, ಅತಿಶಯ ಜೈನ ದೇವಸ್ಥಾನ, ದಲ್ಹಾನಪುರ, ಮನೋಹರ ಥಾಣೆ ಕೋಟೆ ಮತ್ತು ಗಂಗಾಧರ ಕೋಟೆಯು ಝಾಲಾವರ್ ನ ಸುತ್ತಮುತ್ತಲಿರುವ ಆಸಕ್ತಿಕರ ಪ್ರದೇಶಗಳು.

ಸಂಪರ್ಕ

ಜಿಲ್ಲೆಗೆ ರೈಲು, ರಸ್ತೆ ಮತ್ತು ವಿಮಾನದ ಮೂಲಕ ಸುಲಭವಾಗಿ ಪ್ರಯಾಣಿಸಬಹುದು. ಕೋಟಾ ವಿಮಾನ ನಿಲ್ದಾಣವು ಝಾಲಾವರ್ ಗೆ ಸಮೀಪದ ವಿಮಾನ ನಿಲ್ದಾಣವಾಗಿದೆ. ಇದು ಸುಮಾರು 82 ಕಿ.ಮೀ ದೂರದಲ್ಲಿದೆ. ಈ ವಿಮಾನ ನಿಲ್ದಾಣವು ಭಾರತದ ಪ್ರಮುಖ ನಗರಗಳಿಂದ ವಿಮಾನ ಸಂಪರ್ಕವನ್ನು ಹೊಂದಿದೆ. ರಾಮಗಂಜ್‌ ಮಂಡಿ ರೈಲ್ವೆ ನಿಲ್ದಾಣವು ಝಾಲಾವರ್ ಗೆ ಸಮೀಪದ ರೈಲು ನಿಲ್ದಾಣ. ಪ್ರವಾಸಿಗರು ಇಲ್ಲಿಂದ ಟ್ಯಾಕ್ಸಿ ಮತ್ತು ಕ್ಯಾಬ್‌ಗಳನ್ನು ಬಾಡಿಗೆಗ ಪಡೆದು ಝಾಲಾವರ್ ನಗರವನ್ನು ತಲುಪಬಹುದು. ಸಮೀಪದ ನಗರಗಳಾದ ಜೈಪುರ, ಕೋಟಾ ಮತ್ತು ಬುಂದಿ ನಗರಗಳಿಂದ ರಾಜ್ಯ ಸಾರಿಗೆ ಮತ್ತು ಖಾಸಗಿ ಸಾರಿಗೆ ಬಸ್‌ಗಳು ಲಭ್ಯವಿದೆ.

ವಾತಾವರಣ

ಪ್ರವಾಸಿಗರು ಬೇಸಿಗೆ ಕಾಲದಲ್ಲಿ ಇಲ್ಲಿಗೆ ಪ್ರಯಾಣ ಮಾಡುವುದು ಸೂಕ್ತವಲ್ಲ. ಈ ಸಂದರ್ಭದಲ್ಲಿ ಇಲ್ಲಿನ ತಾಪಮಾನವು 27 ಡಿಗ್ರಿಯಿಂದ 42 ಡಿಗ್ರಿಯವರೆಗೆ ಇರುತ್ತದೆ. ಮಳೆಗಾಲದಲ್ಲಿ, ಈ ಪ್ರದೇಶದ ತಾಪಮಾನವು ಕೆಳಗಿಳಿಯುತ್ತದೆ ಮತ್ತು ಸರಾಸರಿ ತಾಪಮಾನವು ಸುಮಾರು 30 ಡಿಗ್ರಿ ಇರುತ್ತದೆ. ಚಳಿಗಾಲದ ಅವಧಿಯಲ್ಲಿ ಗರಿಷ್ಟ ಮತ್ತು ಕನಿಷ್ಟ ತಾಪಮಾನವು 25 ಡಿಗ್ರಿ ಮತ್ತು 10 ಡಿಗ್ರಿ ಇರುತ್ತದೆ.

ಝಾಲಾವರ್ ಪ್ರಸಿದ್ಧವಾಗಿದೆ

ಝಾಲಾವರ್ ಹವಾಮಾನ

ಝಾಲಾವರ್
34oC / 92oF
 • Sunny
 • Wind: W 25 km/h

ಉತ್ತಮ ಸಮಯ ಝಾಲಾವರ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಝಾಲಾವರ್

 • ರಸ್ತೆಯ ಮೂಲಕ
  ಸರ್ಕಾರಿ ಮತ್ತು ಖಾಸಗಿ ಬಸ್‌ಗಳು ಬುಂದಿ, ಕೋಟಾ ಮತ್ತು ಜೈಪುರದಂತಹ ನೆರೆ ನಗರಗಳಿಂದ ಇಲ್ಲಿಗೆ ಸಂಪರ್ಕವನ್ನು ಹೊಂದಿವೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ರಾಮಗಂಜ್ ಮಂಡಿ ರೈಲ್ವೇ ಸ್ಟೇಷನ್‌, ಝಾಲಾವರ್ ಗೆ ಸಮೀಪದ್ದು. ಇದು ಸುಮಾರು 25 ಕಿ.ಮೀ ದೂರದಲ್ಲಿದೆ. ಭಾರತದ ಎಲ್ಲಾ ಪ್ರಮುಖ ನಗರಗಳಿಗೂ ಈ ನಗರವು ಸಂಪರ್ಕವನ್ನು ಹೊಂದಿದೆ. ಕ್ಯಾಬ್‌ಗಳು ಮತ್ತು ಟ್ಯಾಕ್ಸಿಯನ್ನು ಬಾಡಿಗೆಗೆ ಪಡೆದು ರೈಲ್ವೆ ಸ್ಟೇಷನ್‌ನಿಂದ ಝಾಲಾವರ್ ಗೆ ಪ್ರಯಾಣ ಬೆಳೆಸಬಹುದು.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಝಾಲಾವರ್ ಗೆ ಸಮೀಪದ ವಿಮಾನ ನಿಲ್ದಾಣ ಕೋಟಾ ವಿಮಾನ ನಿಲ್ದಾಣ. ಇದು ಸುಮಾರು 82 ಕಿ.ಮೀ ದೂರದಲ್ಲಿದೆ. ಭಾರತದ ಎಲ್ಲಾ ನಗರಗಳಿಂದಲೂ ಇಲ್ಲಿಗೆ ಸಂಪರ್ಕವಿದೆ. ಟ್ಯಾಕ್ಸಿ ಮತ್ತು ಕ್ಯಾಬ್‌ಗಳ ಮೂಲಕ ಝಾಲಾವರ್ ನಗರಕ್ಕೆ ಇಲ್ಲಿಂದ ತಲುಪಬಹುದು.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Jun,Wed
Return On
20 Jun,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
19 Jun,Wed
Check Out
20 Jun,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
19 Jun,Wed
Return On
20 Jun,Thu
 • Today
  Jhalawar
  34 OC
  92 OF
  UV Index: 9
  Sunny
 • Tomorrow
  Jhalawar
  32 OC
  90 OF
  UV Index: 9
  Partly cloudy
 • Day After
  Jhalawar
  32 OC
  90 OF
  UV Index: 9
  Partly cloudy

Near by City