Search
  • Follow NativePlanet
Share

ಸೂರತ್ : ವೈಭವಯುತ ನಗರ

45

ಗುಜರಾತಿನ ನೈಋತ್ಯ ಭಾಗದಲ್ಲಿರುವ ಸೂರತ್ ಇಂದು ಕೈಮಗ್ಗ ಮತ್ತು ವಜ್ರಗಳಿಗಾಗಿ ಪ್ರಸಿದ್ಧವಾಗಿದೆ. ಇದರ ಹೊರತಾಗಿ ಈ ನಗರವು ವೈಭವಯುತವಾದ ಐತಿಹಾಸಿಕ ನಗರವಾಗಿ ಕೂಡ ಪ್ರಾಮುಖ್ಯತೆಯನ್ನು ಪಡೆದಿದೆ.

ವೈಭವಯುತ ಇತಿಹಾಸ

ಕ್ರಿಶ 990ರಲ್ಲಿ ಸೂರತ್ನ ಹೆಸರು ಸೂರ್ಯಪುರ ಎಂದರೆ ಸೂರ್ಯನ ನಗರ ಎಂದಿತ್ತು. ಆಮೇಲೆ 12ನೆ ಶತಮಾನದಲ್ಲಿ ಪಾರ್ಸಿಗಳು ಇಲ್ಲಿ ನೆಲೆನಿಂತರು. ತದನಂತರ ಸೂರತ್ ಕುತ್ಬುದಿನ್ ಐಬಕ್ ಆಕ್ರಮಿಸಿಕೊಳ್ಳುವವರೆಗೂ ಪಶ್ಚಿಮ ಚಾಲುಕ್ಯರ ಸಾಮ್ರಾಜ್ಯದ ಅಧೀನದಲ್ಲಿತ್ತು. 1514ರಲ್ಲಿ ಗುಜರಾತಿನ ಸುಲ್ತಾನನ ಆಳ್ವಿಕೆಯಲ್ಲಿ ಬಹುಮುಖ್ಯ ಮಂತ್ರಿ ಹುದ್ದೆಯಲ್ಲಿದ್ದ ಬ್ರಾಹ್ಮಣನಾದ ಗೋಪಿ ಎಂಬಾತ ವ್ಯಾಪಾರಿಗಳನ್ನು ಸೂರತ್ನಲ್ಲಿ ನೆಲೆಗೊಳ್ಳುವಂತೆ ಮನವೊಲಿಸಿದ ಪರಿಣಾಮವಾಗಿ ಇದು ಮುಖ್ಯ ವ್ಯಾಪಾರಿ ಕೇಂದ್ರವಾಗಿ ಅಭಿವೃದ್ಧಿಗೊಂಡಿತು.

ಈ ನಗರವನ್ನು ಸಂರಕ್ಷಿಸುವ ಸಲುವಾಗಿ ಸುಲ್ತಾನನು ಒಂದು ಗೋಡೆಯನ್ನು ಕಟ್ಟಿಸಿದ ಇದರ ಕುರುಹುಗಳನ್ನು ಇಂದು ಕೂಡ ಕಾಣಬಹುದಾಗಿದೆ. ಮೊಗಲ ದೊರೆಗಳಾದ ಅಕ್ಬರ್, ಜಹಂಗೀರ್ ಮತ್ತು ಷಹಜಹಾನನ ಕಾಲದಲ್ಲಿ ಈ ನಗರವು ಮೊಗಲರ ವ್ಯಾಪಾರದ ಪ್ರಮುಖ ಬಂದರಾಗಿ ಬೆಳೆಯಿತು. ಭಾರತದ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಈ ನಗರವು ಬೆಳೆಯಿತು. ಸೂರತ್ ಬಂದರಿನಿಂದ ಮುಸ್ಲಿಂ ಯಾತ್ರಿಕರು ಹಜ್ ಯಾತ್ರೆಗೆ ಹೊರಡುತ್ತಾರೆ.

ಬ್ರಿಟೀಷರು ಈಸ್ಟ ಇಂಡಿಯಾ ಕಂಪನಿಯ ಹಡುಗಗಳಿಗಾಗಿ ಇಲ್ಲಿ ಬಂದರನ್ನು ನಿರ್ಮಿಸಿದರು. ಈ ರೀತಿ ಸೂರತ್ ಮುಖ್ಯ ವ್ಯಾಪಾರಿ ಕೇಂದ್ರವಾಯಿತು ಮತ್ತು ಭಾರತದ ಒಳಗೆ ಬರುವ ಮತ್ತು ಹೊರಹೋಗುವ ಪ್ರಯಾಣಿಕರಿಗೆ ಮುಖ್ಯ ಬಂದರಾಯಿತು.  ಬ್ರಿಟೀಷರು ತಮ್ಮ ವ್ಯಾಪಾರ ಕೇಂದ್ರವನ್ನು ಬಾಂಬೆಗೆ ವರ್ಗಾಯಿಸುವವರೆಗೂ ಸೂರತ್ ಭಾರತದ ಅತ್ಯಂತ ಸಂಪದ್ಭರಿತ ನಗರಗಳಲ್ಲೊಂದಾಗಿತ್ತು. ನಂತರ ಸೂರತ್ನ ವೈಭವ ಕ್ರಮೇಣ ಕುಂದಿತು.

ಸೂರತ್ ನಗರ

ಪ್ರಪಂಚದಾದ್ಯಂತ ಸೂರತ್ ನಗರವು ವಜ್ರ ಮತ್ತು ಬಟ್ಟೆ ವ್ಯಾಪಾರಕ್ಕಾಗಿ ಹೆಸರುವಾಸಿಯಾಗಿದೆ. ಪ್ರಪಂಚದ ಮಾರುಕಟ್ಟೆಯಲ್ಲಿನ 92% ವಜ್ರವನ್ನು ಸೂರತ್ನಲ್ಲಿಯೇ ಕತ್ತರಿಸಿ ಪಾಲಿಷ್ ಮಾಡಲಾಗುವುದು. ಇದನ್ನು “ಭಾರತದ ಕಸೂತಿಯ ರಾಜಧಾನಿ” ಎಂದು ಕರೆಯಲಾಗುತ್ತದೆ. ಏಕೆಂದರೆ ಇಲ್ಲಿಯೇ ಅತ್ಯಂತ ಹೆಚ್ಚು ಕಸೂತಿಯ ಮಷೀನ್ಗಳಿರುವುದು. ಇದು ಪ್ರಪಂಚದ ಅತಿವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಈ ವ್ಯಾಪಾರಿ ಕಾರಣಗಳಿಂದಾಗಿಯೇ ಇದನ್ನು ಗುಜರಾತಿನ ವಾಣಿಜ್ಯ ರಾಜಧಾನಿ ಎಂದು ಗುರುತಿಸಲಾಗುತ್ತದೆ.

ಸೂರತ್ನ ವಜ್ರಗಳು

1901ರಲ್ಲಿ ಗುಜರಾತಿ ವಜ್ರವನ್ನು ಕತ್ತರಿಸುವ ವ್ಯಾಪಾರಿಗಳು ಪೂರ್ವ ಆಫ್ರಿಕಾದಿಂದ ಇಲ್ಲಿಗೆ ತಮ್ಮ ಕೈಗಾರಿಕೆಯನ್ನು ಸ್ಥಳಾಂತರಿಸಿದರು. ಇಲ್ಲಿ ನೆಲೆನಿಂತ ಬಳಿಕ ಸೂರತ್ 1970ರಿಂದ ಅಮೆರಿಕಾಕ್ಕೆ ವಜ್ರಗಳನ್ನು ರಫ್ತು ಮಾಡಲಾರಂಭಿಸಿತು. ಸೂರತ್ ಇಂದು ವಿಶ್ವದ ವಜ್ರದ ಮಾರುಕಟ್ಟೆಯಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿದೆ ಮತ್ತು ಭವಿಷ್ಯದಲ್ಲಿ ಅದು ಇನ್ನೂ ಹೆಚ್ಚು ಸುಭದ್ರವಾಗಿ ನೆಲೆಯೂರಲಿದೆ.

ಭೂಗೋಳ

ಸೂರತ್ನ ಉತ್ತರಕ್ಕೆ ಕೊಸಂಬ ಮತ್ತು ದಕ್ಷಿಣಕ್ಕೆ ಬಿಲ್ಲಿಮೊರ ಇದೆ. ಪೂರ್ವಕ್ಕೆ ತಪ್ತಿ ನದಿ ಮತ್ತು ಪಶ್ಚಿಮಕ್ಕೆ ಗಲ್ಫ್ ಆಫ್ ಕಾಂಬೆಯಿದೆ. ಸೂರತ್ ಜಿಲ್ಲೆಯ ಉತ್ತರಕ್ಕೆ ಭರೂಚ್ ಮತ್ತು ನರ್ಮದಾ ಜಿಲ್ಲೆಗಳಿವೆ, ದಕ್ಷಿಣಕ್ಕೆ ನವಸಾರಿ ಮತ್ತು ದಂಗ್ ಜಿಲ್ಲೆಗಳಿವೆ. ಗಾಂಧಿನಗರ ಸೂರತ್ನಿಂದ ಉತ್ತರಕ್ಕೆ 306 ಕಿಮೀ ದೂರದಲ್ಲಿದೆ.

ಹವಾಮಾನ

ಸೂರತ್ನಲ್ಲಿ ಉಷ್ಣವಲಯದ ಹವಾಮಾನವಿರುತ್ತದೆ. ಇಲ್ಲಿನ ಹವಾಮಾನದ ಮೇಲೆ ಅರೇಬಿಯನ್ ಸಮುದ್ರವು ಪ್ರಭಾವ ಬೀರುತ್ತದೆ. ಜೂನ್- ಸೆಪ್ಟಂಬರ್ವರೆಗೆ ಹೆಚ್ಚು ಮಳೆಯಾಗುತ್ತದೆ. ಮಾರ್ಚ್ನಿಂದ ಜೂನ್ವರೆಗೆ ಬೇಸಿಗೆ ಕಾಲವಿದ್ದು ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಹೆಚ್ಚಿನ ಉಷ್ಣತೆಯಿರುತ್ತದೆ. ಡಿಸಂಬರ್-ಫೆಬ್ರವರಿ ಚಳಿಗಾಲವಿರುತ್ತದೆ.

ಸಂಪರ್ಕ

ನಗರವು SMSS ಬಸ್ ಸೇವೆಯನ್ನು ಹೊಂದಿದೆ. ಈ ಬಸ್ಗಳು CNG ಇಂಧನವನ್ನು ಬಳಸುತ್ತವೆ ಮತ್ತು ಬಸ್ಸಿನಲ್ಲಿ ಅಳವಡಿಸಿರುವ LCD ಪರದೆಯ ಮೇಲೆ ಪ್ರಯಾಣದ ಪ್ರತಿ ವಿವರವನ್ನು ಕಾಣಬಹುದಾಗಿದೆ.

ಬಳಕೆಯಲ್ಲಿರುವ ಭಾಷೆಗಳು

ಸೂರತ್ನಲ್ಲಿ ಗುಜರಾತಿ, ಸಿಂಧಿ, ಹಿಂದಿ, ಮಾರವಾಡಿ, ಮರಾಠಿ, ತೆಲುಗು ಮತ್ತು ಒರಿಯಾವನ್ನು ಹೆಚ್ಚಾಗಿ ಮಾತನಾಡುತ್ತಾರೆ. ಇಲ್ಲಿನ ಜನಸಂಖ್ಯೆಯಲ್ಲಿ ವಲಸೆ ಬಂದವರೆ ಶೇಕಡಾ 70ರಷ್ಟಿದ್ದಾರೆ. ಇದು ಇಂದಿಗೂ ಜೈನರು ಮತ್ತು ಪಾರಸಿಗಳಿಗೆ ಕೇಂದ್ರವಾಗಿದೆ. ಸೂರತ್ನ ಜನರನ್ನು ಸೂರ್ತಿಗಗಳು ಎಂದು ಕರೆಯುತ್ತಾರೆ. ವಿಭಿನ್ನ ಲಕ್ಷಣಗಳು ಮತ್ತು ಮಾತಿನ ಶೈಲಿಯಿಂದಾಗಿ ಇವರು ಭಿನ್ನರಾಗಿ ನಿಲ್ಲುತ್ತಾರೆ. ಸೂರ್ತಿ್ಗಳು ತಮಾಷೆ ಪ್ರಿಯರು ಮತ್ತು ತಿಂಡಿ ಪ್ರಿಯ ಜನರು.

ಸಂಸ್ಕೃತಿ ಮತ್ತು ಹಬ್ಬಗಳು

ಸೂರತ್ತಿನ ಮಸಾಲೆ ಭರಿತ ಆಹಾರವು ಗುಜರಾತಿನಲ್ಲೇ ಪ್ರಸಿದ್ಧ ಮತ್ತು ಇದರೊಂದಿಗೆ ಅವರು ರುಚಿಯಾದ ಸಿಹಿಮಾಂಸದಡುಗೆಗಳನ್ನು ಮಾಡುತ್ತಾರೆ. ಘರಿ ಎನ್ನುವುದು ಇಲ್ಲಿನ ವಿಶೇಷ ರೀತಿಯ ಸಿಹಿ, ಲೊಚೊ, ಉನ್ಧಿಯು, ರಸಾವಾಲ ಖಮಾನ್ ಮತ್ತು ಸೂರ್ತಿಶ ಚೈನೀಸ್ ಇಲ್ಲಿನ ಕೆಲವು ಪ್ರಸಿದ್ಧ ಸೂರ್ತಿು ತಿಂಡಿಗಳು. ಗುಜರಾತಿನಲ್ಲಿ ಸೂರತ್ನಲ್ಲಿ ಮಾತ್ರ ಮಾಂಸಾಹಾರವನ್ನು ಕಾಣಬಹುದಾಗಿದೆ.

ಸೂರತ್ನಲ್ಲಿ ಎಲ್ಲ ಹಬ್ಬಗಳನ್ನು ಉತ್ಸಾಹದಿಂದ ಆಚರಿಸಲಾಗುತ್ತದೆ. ನವರಾತ್ರಿ, ದೀಪಾವಳಿ, ಗಣೇಶ ಚತುರ್ಥಿ ಮತ್ತು ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಗಾಳಿಪಟ ಹಾರಿಸುವ ಹಬ್ಬ ಇವೆಲ್ಲವೂ ಸೂರತ್ನಲ್ಲಿ ಪ್ರಸಿದ್ಧ ಹಬ್ಬಗಳು. ಅಕ್ಟೋಬರ್ನಲ್ಲಿ ಬರುವ ‘ಶಾರದಾ ಪೌರ್ಣಿಮೆ’ಯ ಮಾರನೆಯ ದಿನ ಆಚರಿಸಲಾಗುವ ‘ಚಂಡಿ ಪಡವೊ’ ಇಲ್ಲಿನ ಮತ್ತೊಂದು ಪ್ರಸಿದ್ಧ ಹಬ್ಬ. ಈ ದಿನದಂದು ಸೂರ್ತಿಂಗಳು ಘರಿ ಮತ್ತಿತರ ಸಿಹಿತಿಂಡಿಗಳನ್ನು ಕೊಳ್ಳುತ್ತಾರೆ.

ಪ್ರೇಕ್ಷಣಿಯ ಸ್ಥಳಗಳು

ಪಾರ್ಸಿ ಅಗೈರಿ, ಮರ್ಜನ್ ಶಾಮಿ ರೊಜಾ, ಚಿಂತಾಮಣಿ ಜೈನ ಮಂದಿರ, ವೀರ ನರ್ಮದ ಸರಸ್ವತಿ ಮಂದಿರ, ಗೋಪಿ ತಾಲಾವ್, ನವ್ ಸೈದ್ ಮಸೀದಿ, ರಾದೆರ್ ಮತ್ತು ಜಮಾ ಮಸೀದಿ, ನವಸಾರಿ, ಬಿಲ್ಲಿಮೊರ, ಉದ್ವಾಡ, ಸೂರತ್ ಕೋಟೆ ಇವು ಸೂರತ್ನಲ್ಲಿ ಭೇಟಿ ನೀಡಬೇಕಾಗಿರುವ ಕೆಲವು ಮುಖ್ಯ ಸ್ಥಳಗಳು. ನರ್ಗೊಲ್, ದಂಡಿ, ದುಮಾಸ್, ಸುವಾಲಿ ಮತ್ತು ತೀಥಲ್ ಇಲ್ಲಿನ ಪ್ರಮುಖ ಸಮುದ್ರ ತೀರಗಳು.

ಸೂರತ್ ಪ್ರಸಿದ್ಧವಾಗಿದೆ

ಸೂರತ್ ಹವಾಮಾನ

ಉತ್ತಮ ಸಮಯ ಸೂರತ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಸೂರತ್

  • ರಸ್ತೆಯ ಮೂಲಕ
    ಸೂರತ್ ಭಾರತದಲ್ಲೇ ಅತಿ ಹೆಚ್ಚು ಫ್ಲೈಓವರ್ಗಳನ್ನು ಹೊಂದಿರುವ ನಗರ. ಈ ನಗರವು NH6, NH8, NH228, ಸೂರತ್ ಅಹಮದಬಾದ್ ಹೆದ್ದಾರಿ, ಉಧಾನ-ಮುಂಬೈ ಹೆದ್ದಾರಿಗಳೊಂದಿಗೆ ಸಂಪರ್ಕ ಹೊಂದಿದೆ. ಈ ನಗರವು ಆಧುನಿಕ ಮತ್ತು ಅನುಕೂಲಕರ CNG ಇಂಧನ ಬಳಸುವ SMSS ಸೌಲಭ್ಯ ಹೊಂದಿರುವ ಬಸ್ ಸೇವೆಯ ಸೌಲಭ್ಯ ಹೊಂದಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಸೂರತ್ ಉತ್ತರ ಭಾರತದ ಎಲ್ಲ ಭಾಗಗಳ ನಗರಗಳೊಂದಿಗೆ ಸೂರತ್ ರೈಲು ನಿಲ್ದಾಣದ ಮೂಲಕ ಸಂಪರ್ಕ ಹೊಂದಿದೆ. ಇದು ಭಾರತದ ಕೇಂದ್ರಭಾಗದಲ್ಲಿರುವ ನಾಗಪುರ ಮತ್ತು ಅಮರಾವತಿಗಳೊಂದಿಗೆ ಕೂಡ ಸಂಪರ್ಕ ಹೊಂದಿದೆ. ಇಲ್ಲಿ ಆಗಸ್ಟ್ ಕ್ರಾಂತಿ ರಾಜಧಾನಿ ಎಕ್ಸಪ್ರೆಸ್ ಮತ್ತು ಮುಂಬೈ ರಾಜಧಾನಿ ಎಕ್ಸ್ಪ್ರೆಸ್ ರೈಲುಗಳು ಲಭ್ಯವಿದ್ದು ಇದು ದೆಹಲಿ ಮತ್ತು ಮುಂಬೈಗಳೊಂದಿಗೆ ಸೂರತ್ ನಗರವನ್ನು ಬೆಸೆಯುತ್ತದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಸೂರತ್ನಲ್ಲಿ ಮಗ್ದಲದಲ್ಲಿ ವಿಮಾನನಿಲ್ದಾಣವಿದೆ. ಇದು ಸೂರತ್ನ ನೈರುತ್ಯ ಭಾಗದಿಂದ 11 ಕಿಮೀ ದೂರದಲ್ಲಿದೆ. ಏರ್ ಇಂಡಿಯಾ ಮತ್ತು ಸ್ಪೈಸ್ ಜೆಟ್ ವಿಮಾನಗಳು ಸೂರತ್ನಿಂದ ಭಾರತದ ಎಲ್ಲ ಭಾಗಗಳಿಗೆ ಹಾರಾಡುತ್ತವೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Mar,Tue
Return On
20 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Mar,Tue
Check Out
20 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Mar,Tue
Return On
20 Mar,Wed