ಪಾವಗಡ ಒಂದು ಬೆಟ್ಟವಾಗಿದ್ದು ಛಾಂಪನೇರಗೆ ಹತ್ತಿರದಲ್ಲಿದೆ. ಇದು ಕೂಡ ಒಂದು ಬೆಟ್ಟವಾಗಿದ್ದು, ಇಲ್ಲಿ ಮಹಾಕಾಳಿ ದೇವಸ್ಥಾನವು ನೆಲೆಗೊಂಡಿದೆ. ಮಹಮೂದ ಬೇಗ್ದನು ಛಾಂಪನೇರನ್ನು ಆಕ್ರಮಿಸಿ ಅದನ್ನು ನಗರವಾಗಿ ಅಭಿವೃದ್ಧಿ ಪಡಿಸುವ ಮುಂಚೆ ದೇವಾಲಯವು ಆಸ್ತಿತ್ವದಲ್ಲಿತ್ತು ಮತ್ತು ಉತ್ತೇಜನವನ್ನು ಪಡೆದಿತ್ತು ಎಂದು ಹೇಳಲಾಗುತ್ತದೆ. ಈ ದೇವಾಲಯವನ್ನು ನೀವು ಈಗಲೂ ಸಹ ಕಾಣಬಹುದು. ಭಕ್ತರು ಈಗಲೂ ಸಹ ಅಪಾರ ಪ್ರಮಾಣದಲ್ಲಿ ಈ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ಆಶಿರ್ವಾದವನ್ನು ಪಡೆಯುತ್ತಾರೆ.
ಈ ದೇವಾಲಯವನ್ನು ಬೆಟ್ಟದಲ್ಲಿ ಕೆತ್ತಲಾದ ಕಲ್ಲು ಮಾರ್ಗದ ಮೂಲಕ ಇಲ್ಲವೇ ಹಗ್ಗವನ್ನು ಸೊಂಟಕ್ಕೆ ಕಟ್ಟು ಕೊಂಡು ಬೆಟ್ಟವನ್ನು ಏರುವ ಮೂಲಕ ತಲುಪಬಹುದು. ಈ ದೇವಾಸ್ಥನದ ಗರ್ಭ ಗೃಹದಲ್ಲಿ ಮಾ ಕಾಳಿಯ ಮೂರ್ತಿ ಇದ್ದು, ಕೇವಲ ಮುಖದ ಭಾಗ ಮಾತ್ರವು ಕೆಂಪು ಬಣ್ಣದಿಂದ ಕೂಡಿದೆ. ದೇಹದ ಇತರ ಭಾಗವು ಕೆಂಪು ಬಣ್ಣದಿಂದ ಕೂಡಿಲ್ಲ. ಈ ದೇವಾಲಯದಲ್ಲಿ ಬಹುಚಾರದ ಯಂತ್ರಗಳು ಮತ್ತು ಮತಗಳು ಈ ತರಹದ ಮುಂತಾದ ವಿಗ್ರಹಗಳನ್ನು ಕಾಣಬಹುದು.
ಇಲ್ಲಿ ದೇವಿ ದರ್ಶನಕ್ಕಾಗಿ ಧೀರ್ಘಾವಧಿಯ ಸಮಯ ಅವಕಾಶ ಇದ್ದು, ಇದರಿಂದ ಪ್ರವಾಸಿಗರಿಗೆ ಮತ್ತು ಭಕ್ತರಿಗೆ ತುಂಬಾ ಅನುಕೂಲವಾಗಿದೆ. ಪಾವಗಡದಲ್ಲಿ ಒಂದು ಕೋಟೆಯಿದ್ದು, ಇದು ಸೋಳಂಕಿ ರಜಪೂತರಿಂದ ನಿರ್ಮಾಣಗೊಂಡಿದೆ. ಈ ಕೋಟೆಯ ಗೋಡೆಗಳು ಈಗಲೂ ಸಹ ಬಲಿಷ್ಡವಾಗಿದ್ದು ನೋಡಲು ಸಿಗುತ್ತದೆ. ಈ ಕೋಟೆಯಲ್ಲಿಯೇ ಒಂದು ಹಿಂದು ದೇವಾಲಯವಿದ್ದು, ಇದನ್ನು ಕ್ರಿ.ಶ 10 ಮತ್ತು 11 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ.
ಇದನ್ನು ಪಾವಗಡದಲ್ಲಿರುವ ಅತಿ ಪ್ರಾಚೀನ ದೇವಾಲಯ ಎಂದು ಪರಿಗಣಿಸಲಾಗಿದೆ. ಈ ಕೋಟೆಯಲ್ಲಿ ಸುಮಾರು 13 ಮತ್ತು 15 ನೇ ಶತಮಾನದಲ್ಲಿ ನಾಗರ ಶೈಲಿಯಲ್ಲಿ ನಿರ್ಮಿಸಲಾದ ಕೆಲವು ಜೈನ ಮತ್ತು ಹಿಂದು ದೇವಾಲಯಗಳಿವೆ. ಇದನ್ನು ಸಹ ಪ್ರವಾಸಿಗರು ನೋಡಬಹುದಾಗಿದೆ.