Search
  • Follow NativePlanet
Share
ಮುಖಪುಟ » ಸ್ಥಳಗಳು» ಸರ್ದಾರ್ ಸರೋವರ್

ಸರ್ದಾರ್ ಸರೋವರ ಅಣೆಕಟ್ಟು : ನರ್ಮದಾ ನದಿಯ ಪಾಲಿನ ರತ್ನ

23

ನರ್ಮದಾ ನದಿಯ ಮೇಲೆ ಕಟ್ಟಲಾದ ಸರ್ದಾರ ಸರೋವರ ಅಣೆಕಟ್ಟು ನದಿಯ ಉಗಮಸ್ಥಾನದಿಂದ ಸುಮಾರು 1163 ಕಿ.ಮೀ ದೂರದಲ್ಲಿ ಕಟ್ಟಲಾದ ಸರೋವರವಾಗಿದೆ. ಇದಕ್ಕೆ ಜವಾಹರ ಲಾಲ್ ನೆಹರು 1961 ರಲ್ಲೇ ಶಂಕು ಸ್ಥಾಪನೆ ಮಾಡ್ದಿದ್ದರೂ ಇದರ ನಿರ್ಮಾಣ ಕಾರ್ಯ ಆರಂಭವಾಗಿದ್ದು 1979 ರಲ್ಲಿ. ಇಲ್ಲಿನ ಸ್ವಾಗತ ಕೊಠಡಿಯಲ್ಲಿ ಗೈಡ್ ಗಳು ಲಭ್ಯರಾಗಿದ್ದಾರೆ ಅಥವಾ ಇಲ್ಲಿ ಹೇಗೆ ಮುನ್ನಡೆಯಬೇಕು ಎಂಬ ಬಗ್ಗೆ ಸೂಚಿಸುವ ಒಂದು ನಕ್ಷೆ ಕೂಡ ಇದೆ.

ಇದು ನಿಮ್ಮ ಪ್ರವಾಸದಲ್ಲಿ ನೋಡಬೇಕಾದ ಎಲ್ಲಾ ಆರು ಸ್ಥಳಗಳ ಬಗ್ಗೆ ನಿಮಗೆ ವಿವರ ನೀಡುತ್ತದೆ. ಈ ಆರು ಸ್ಥಳಗಳೆಂದರೆ ಉದ್ಯಾನವನ, ಶಿಲಾ ಶಾಸನ ಮಾಡಿದ ಸ್ಥಳ, ಬೋಟಿಂಗ್ ಮಾಡಬಹುದಾದಂತಹ ಒಂದು ಸರೋವರ, ಫಸ್ಟ್ ಲಾಕ್ ಗೇಟ್ ಮತ್ತು ಚಾರಣ ವಿದ್ಯಾರ್ಥಿಗಳಿಗಾಗಿ ನಿರ್ಮಿಸಲಾದ ಚಾರಣ ಸ್ಥಳ. ನರ್ಮದಾ ನದಿಯ ನೀರನ್ನು ಜನರ ಮತ್ತು ಪರಿಸರದ ಅಭಿವೃದ್ಧಿಗಾಗಿ ಬಳಸಲು ನರ್ಮದಾ ನದಿಯ ಮೇಲೆ ಕಟ್ಟಿದ ಅತೀ ದೊಡ್ಡ ಸರೋವರ ಇದಾಗಿದೆ.

ಇದು ಇಡಿ ಗುಜರಾತಿಗೆ ಕುಡಿಯುವ ನೀರು, ಕೃಷಿ ನೀರು ಮತ್ತು ವಿದ್ಯುತ್ ಅನ್ನು ಪೂರೈಸಲು ಶಕ್ತವಾಗಿದೆ. ಈ ಅಣೆಕಟ್ಟಿನ ಸಮೀಪ ಕೆವಾಡಿಯಾ ಎಂಬ ನಗರವಿದೆ. ಮೊದಲು ಸಿಬ್ಬಂದಿಗಳ ವಾಸಕ್ಕಾಗಿ ಮನೆಗಳ ನಿರ್ಮಾಣವಾದ ಸ್ಥಳ ಇಂದು ಇಲ್ಲಿನ ಪರಿಸರ ಮತ್ತು ಪ್ರವಾಸಿಗಳಿಗೆ ಮಾಡಲಾಗಿರುವ ವ್ಯವಸ್ಥೆಗಳಿಂದಾಗಿ ಮುಖ್ಯ ಪ್ರವಾಸಿ ಆಕರ್ಷಣೆಯಾಗಿದೆ. ನರ್ಮದಾ ನದಿಗೆ ಹೊಂದಿಕೊಂಡು ಇರುವ ಪ್ರಮುಖ ಧಾರ್ಮಿಕ ಸ್ಥಳಗಳಾದ ಚಂದೋಡ್, ಕಬೀರ್ ವಾಡ್ ಮತ್ತು ಎರಡು ಶಿವ ದೇವಾಲಯಗಳನ್ನೂ ಇಲ್ಲಿ ಬಂದ ಪ್ರವಾಸಿಗಳು ಭೇಟಿ ಕೊಡುತ್ತಾರೆ.

ಇತಿಹಾಸ ಪ್ರಸಿದ್ಧ ನಗರಗಳಾದ ಭಾರುಚ್ ಮತ್ತು ರಾಜ್ ಪಿಪ್ಲಾ ಕೂಡ ಸರ್ದಾರ ಸರೋವರ ಅಣೆಕಟ್ಟಿಗೆ ಸಮೀಪದಲ್ಲೇ ಇವೆ. ರತನ್ ಮಹಲ್ ಕರಡಿ ಅಭಯಾರಣ್ಯ, ಶೂಲ್ಪನೇಶ್ವರ ವನ್ಯಜೀವಿ ಧಾಮವನ್ನೂ ಒಳಗೊಂಡ ದೇಡಿಯಾ ಪಾದ ಶ್ರೇಣಿಗಳು ವಿಶಾಲ್ ಖಾಡಿ ಪರಿಸರ ಶಿಬಿರ, ಸಮೋತ್ ಮಲ್ಸಮೋತ್ ಪರಿಸರ ಶಿಬಿರ, ಸಗಾಯಿ ಮಲಸ್ಮತ್ ಪರಿಸರ ಶಿಬಿರ, ಜ಼ವಾರಿ ಪರಿಸರ ಶಿಬಿರ ಮತ್ತು ಕಂಜೇತಾ ಪರಿಸರ ಶಿಬಿರಗಳು ನರ್ಮದಾ ನದಿಯ ಸುತ್ತ ಮುತ್ತ ಕಂಡುಬರುವ ಕೆಲವು ಪರಿಸರ ತಾಣಗಳಾಗಿವೆ.  

ಸರ್ದಾರ್ ಸರೋವರ ಅಣೆಕಟ್ಟು

ಕೆವಾಡಿಯಾ ವಸತಿ ಸಂಕೀರ್ಣ, ಸರ್ದಾರ ಸರೋವರ ಅಣೆಕಟ್ಟು: ಕೆವಾಡಿಯಾ ವಸತಿ ಸಂಕೀರ್ಣದಲ್ಲಿ ಸರ್ದಾರ್ ಸರೋವರ ಅಣೆಕಟ್ಟಿನ ಸಿಬ್ಬಂದಿಗಳು ವಾಸಿಸುತ್ತಾರೆ. ಇಲ್ಲಿ ಪ್ರವಾಸಿಗಳೂ ಉಳಿದುಕೊಳ್ಳಬಹುದಾದ ವ್ಯವಸ್ಥೆ ಇದೆ.

ಸರ್ದಾರ್ ಸರೋವರ್ ಪ್ರಸಿದ್ಧವಾಗಿದೆ

ತಲುಪುವ ಬಗೆ ಸರ್ದಾರ್ ಸರೋವರ್

  • ರಸ್ತೆಯ ಮೂಲಕ
    ಈ ಅಣೆಕಟ್ಟಿಗೆ ಕೆವಾಡಿಯಾ ನಗರದ ಮೂಲಕ ತಲುಪಬಹುದಾಗಿದೆ. ಇದು ಸರ್ದಾರ್ ಸರೋವರ ಅಣೆಕಟ್ಟಿನ ಆಕರ್ಷಣೆಯೂ ಆಗಿದೆ. ಕೆವಾಡಿಯಾ ವಸತಿ ಸಂಕೀರ್ಣಕ್ಕೆ ತಲುಪಲು ಗುಜರಾತ್ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ರಾಜ್ಯದ ವಿವಿಧ ಭಾಗಗಳಿಂದ ಬಸ್ಸುಗಳನ್ನು ಹೊಂದಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಇಲ್ಲಿನ ಸಮೀಪದ ರೈಲ್ವೆ ನಿಲ್ದಾಣವೆಂದರೆ ವಡೋದ್ರಾ. ಇದು ದೆಹಲಿ, ಅಹಮದಾಬಾದ್, ಮುಂಬಯಿ ಮತ್ತು ಗುಜರಾತ್ ಹಾಗೂ ದೇಶದ ವಿವಿಧ ಭಾಗಗಳನ್ನು ಸಂಪರ್ಕಿಸುತ್ತದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ವಡೋದ್ರಾ ವಿಮಾನ ನಿಲ್ದಾಣವೇ ಅತ್ಯಂತ ಸಮೀಪದ ವಿಮಾನ ನಿಲ್ದಾನವಾಗಿದೆ. ಇದು ಸುಮಾರು 91 ಕಿ.ಮೀ ದೂರದಲ್ಲಿದೆ. ಈ ದೇಶೀಯ ವಿಮಾನ ನಿಲ್ದಾಣ ಮುಂಬಯಿ, ಬೆಂಗಳೂರು, ಕೋಲ್ಕತ್ತಾ, ದೆಹಲಿ, ಹೈದರಾಬಾದ್ ಗಳಂತಹ ಪ್ರಮುಖ ನಗರಗಳಿಗೆ ವಿಮಾನ ಸಂಪರ್ಕವನ್ನು ಹೊಂದಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat