ನರ್ಮದಾ ನದಿಯ ಮಧ್ಯಭಾಗದಲ್ಲಿ ಇರುವ ದ್ವೀಪ ಕಬೀರ್ ವಾಡ್ ಆಗಿದೆ. ಇಲ್ಲಿನ ಪ್ರದೇಶದಲ್ಲಿ ಸಂತ ಕಬೀರ ಹಲವು ವರ್ಷಗಳ ಕಾಲ ವಾಸವಾಗಿದ್ದ ಕಾರಣದಿಂದ ಇದಕ್ಕೆ ಈ ಹೆಸರು ಬಂದಿದೆ. ಇದು ಕೇವಲ ಐತಿಹಾಸಿಕವಾಗಿ ಮಹತ್ವ ಪಡೆದುದಲ್ಲ. ಇಲ್ಲಿ ಒಂದು ದೊಡ್ಡ ಆಲದ ಮರವೂ ಇದ್ದು ಇದು ಸುಮಾರು 3 ಕಿ.ಮೀ ಗಳಷ್ಟು ವ್ಯಾಪಿಸಿದೆ. ಇದೂ ಕೂಡ ಇಲ್ಲಿಗೆ ಪ್ರವಾಸಿಗಳು ಭೇಟಿ ನೀಡಲು ಇರುವ ಪ್ರಮುಖ ಕಾರಣವಾಗಿದೆ.