Search
  • Follow NativePlanet
Share
ಮುಖಪುಟ » ಸ್ಥಳಗಳು » ಸರ್ದಾರ್ ಸರೋವರ್ » ಹವಾಮಾನ

ಸರ್ದಾರ್ ಸರೋವರ್ ಹವಾಮಾನ

ಬೇಸಿಗೆಗಾಲ

ಮಾರ್ಚ್ ನಿಂದ ಮೇ ತಿಂಗಳುಗಳು ಇಲ್ಲಿ ಬೇಸಿಗೆಯಾಗಿದ್ದು ಈ ಅವಧಿಯಲ್ಲಿ ಬಹಳ ಬಿಸಿ ವಾತಾವರಣ ಇರುತ್ತದೆ. ಇಲ್ಲಿನ ಸಾಮಾನ್ಯ ತಾಪಮಾನ 23 ರಿಂದ 44 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಈ ತಿಂಗಳುಗಳು ಇಲ್ಲಿನ ವಾತಾವರಣದ ದೃಷ್ಟಿಯಿಂದ ಅತ್ಯಂತ ಕಠಿಣ ಸಮಯಗಳಾಗಿವೆ.

ಮಳೆಗಾಲ

ಜೂನ್ ನಿಂದ ಸೆಪ್ಟೆಂಬರ್ ಇಲ್ಲಿ ಮಳೆಗಾಲದ ಅವಧಿಯಾಗಿದೆ ಹಾಗೂ ಈ ಅವಧಿಯಲ್ಲಿ ಇಲ್ಲಿ ಸಾಕಷ್ಟು ಮಳೆಯಾಗುತ್ತದೆ. ತಾಪಮಾನ ಬಹಳ ಕಡಿಮೆಯಾಗುತ್ತದೆ ಹಾಗೂ ಆಹ್ಲಾದಕರವಾದ ವಾತಾವರಣ ನಿರ್ಮಾಣವಾಗುತ್ತದೆ.

ಚಳಿಗಾಲ

ಇಲ್ಲಿನ ಭೇಟಿಗೆ ಇದು ಅತ್ಯಂತ ಉತ್ತಮವಾದ ಅವಧಿಯಾಗಿದೆ. ಅಕ್ಟೋಬರ್ ಹಾಗೂ ನವೆಂಬರ್ ಇಲ್ಲಿನ ಅತ್ಯಂತ ಉತ್ತಮವಾದ ಹವಾಮಾನವನ್ನು ಹೂಂದಿದೆ. ಚಳಿಗಾಲವು ಮುಂದುವರೆದು ಫೆಬ್ರವರಿಯ ತನಕ ಮುಂದುವರಿಯುತ್ತದೆ ಹಾಗೂ ತಾಪಮಾನ ಸಾಮಾನ್ಯವಾಗಿ 10 ರಿಂದ 36 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ.