Search
  • Follow NativePlanet
Share
ಮುಖಪುಟ » ಸ್ಥಳಗಳು» ವಲ್ಸಾದ್

ವಲ್ಸಾದ್ : ಕಡಲತೀರಗಳ, ಕೋಟೆಗಳ, ಮಂದಿರಗಳ ನಾಡು

10

ವಲ್ಸಾದ್, ಒಂದು ಕರಾವಳಿ ಪ್ರದೇಶ. ಇದರ ಹೆಸರು, "ವಡ್-ಸಾಲ್" ಎಂಬ ಶಬ್ದದಿಂದ ಹುಟ್ಟುಕೊಂಡಿದೆ. ಅಂದರೆ ಈ ಪ್ರದೇಶವನ್ನು, ಸಂಪೂರ್ಣವಾಗಿ ಆಲದ ಮರಗಳು ಆವರಿಸಿತ್ತು ಎಂದರ್ಥ. ಇದು ಸಂಜನ್ ಬಂದರು ಕಂಡುಕೊಳ್ಳುವ ಮೊದಲು, ಪಾರ್ಸಿಗಳು ಪ್ರವೇಶ ಮಾಡಿದ ಮೊದಲ ಪ್ರದೇಶ.

ವಲ್ಸಾದ್ ಅನ್ನು, ಅರೇಬಿಯನ್ ಸಮುದ್ರ, ನವಸರಿ ಮತ್ತು ದಾಂಗ್ ಜಿಲ್ಲೆಗಳು ಮತ್ತು ಮಹಾರಾಷ್ಟ ರಾಜ್ಯ ಆವರಿಸಿದೆ. ಇಲ್ಲಿರುವ ಪ್ರಮುಖ ಪ್ರವಾಸಿ ತಾಣಗಳೆಂದರೆ, ತೀಥಲ್ ಬೀಚ್, ಸ್ವಾಮಿ ನಾರಾಯಣ ಮಂದಿರ, ಸಾಯಿ ಬಾಬಾ ಮಂದಿರ, ಶಾಂತಿಧಾಮ ಮಂದಿರ, ತಡಕೇಶ್ವರ ಮಹಾದೇವ ಮಂದಿರ ಮತ್ತು ಪರ್ನೇರ ಕೋಟೆ. ತಡಕೇಶ್ವರ ಮಹಾದೇವ ಮಂದಿರಕ್ಕೆ ಈ ಹೆಸರು ಬರಲು ಕಾರಣವೇನೆಂದರೆ, ಈ ಮಂದಿರಕ್ಕೆ ಮೇಲ್ಛಾವಣಿ ಅಥವಾ ಸೂರು ಇಲ್ಲ. ಸತತವಾಗಿ ಸೂರ್ಯನ ಕಿರಣಗಳು ಶಿವಲಿಂಗದ ಮೇಲೆ ಬೀಳುತ್ತಿರುತ್ತವೆ. ಇಲ್ಲಿರುವ ವಿವಿಧ ಬಗೆಯ ಶಿವಲಿಂಗಗಳಿಗೆ ಈ ಮಂದಿರ ಪ್ರಸಿದ್ಧಿ ಪಡೆದಿದೆ.

ಪರ್ನೇರ ಕೋಟೆಯನ್ನು ಛತ್ರಪತಿ ಶಿವಾಜಿ ನಿರ್ಮಿಸಿದ. ಪರ್ನೇರ ಬೆಟ್ಟವು ಪ್ರತಿ ವರ್ಷ ಅಕ್ಟೋಬರ್ ನಲ್ಲಿ ಬೆಟ್ಟದ ವೇಲೆ ನಡೆಯುವ ಜಾತ್ರೆಗೆ ಪ್ರಸಿದ್ಢಿ ಪಡೆದಿದೆ. ತೀಥಲ್ ಬೀಚ್, ಇಲ್ಲಿರುವ ಕಪ್ಪು ಮರಳಿಗೆ ಪ್ರಸಿದ್ಧವಾಗಿದೆ. ವಲ್ಸಾದ್ ನ ಪೊಲೀಸ್ ಕೇಂದ್ರ ಕಛೇರಿಯಲ್ಲಿ ಐತಿಹಾಸಿಕ ಕಾರಾಗೃಹವು ಇದೆ. ಇಲ್ಲಿ ದೊರೆಯುವ ಆಲ್ಫೊನ್ಸೋ ಮಾವಿನ ಹಣ್ಣು, ಅಂದರೆ ಆಫೂಸ್ ಮಾವಿನ ಹಣ್ಣು ಬಹಳ ಜನಪ್ರಿಯವಾಗಿದೆ. ವಲ್ಸಾದ್ ಮುಖ್ಯ ನಗರಗಳಾದ ಮುಂಬಯಿ, ಅಹಮದಾಬಾದ್, ಕಾನಪುರಕ್ಕೆ ರೈಲು ಮೂಲಕ ಉತ್ತಮ ಸಂಪರ್ಕ ಹೊಂದಿದೆ. ವಲ್ಸಾದ್ ನಲ್ಲಿರುವ ಎಲ್ಲಾ ಪ್ರವಾಸಿ ತಾಣಗಳನ್ನು ತಲುಪಲು ಬಸ್ ಹಾಗು ಆಟೋರಿಕ್ಷಾಗಳ ಸೇವೆ ಲಭ್ಯವಿದೆ.

ಹವಾಮಾನ:

ವರ್ಷದುದ್ದಕ್ಕೂ ವಲ್ಸಾದ್ ನಲ್ಲಿ ಹವಾಮಾನ ಹಿತಕರವಾಗಿರುತ್ತದೆ. ಬೇಸಿಗೆಯ ಹವಾಮಾನದಲ್ಲಿ ತೇವಾಂಶದ ಪ್ರಮಾಣ ಹೆಚ್ಚಾಗಿರುತ್ತದೆ. ಚಳಿಗಾಲದಲ್ಲಿ ಹಿತಕರವಾದ ವಾತಾವರಣವಿರುತ್ತದೆ. ಮುಂಗಾರಿನಲ್ಲಿ ಹಚ್ಚಿನ ಮಳೆಯಾಗದೇ ಇರುವುದರಿಂದ ಮಳಿಗಾಲದಲ್ಲೂ ಹಿತಕರವಾದ ವಾತಾವರಣವಿರುತ್ತದೆ.

ವಲ್ಸಾದ್ ಪ್ರಸಿದ್ಧವಾಗಿದೆ

ವಲ್ಸಾದ್ ಹವಾಮಾನ

ಉತ್ತಮ ಸಮಯ ವಲ್ಸಾದ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ವಲ್ಸಾದ್

  • ರಸ್ತೆಯ ಮೂಲಕ
    ಗುಜರಾತಿನ ಮಹಾನಗರಗಳಿಂದ ರಾಜ್ಯ ರಸ್ತೆ ಸಾರಿಗೆ ಬಸ್ ಗಳು ಸೇವೆಯಲ್ಲಿರುತ್ತದೆ. ಮುಂಬಯಿ, ಪುಣೆ, ಹೈದರಾಬಾದ್, ನಾಶಿ, ಬರೋಡ ಮತ್ತು ಶಿರಡಿಯಿಂದ ವಲ್ಸಾದ್ ಗೆ ಬಸ್ ಸಂಚಾರದ ವ್ಯವಸ್ಥೆ ಇದೆ. ಇತರ ನಗರಗಳಿಂದಲೂ ವಲ್ಸಾದ್ ಗೆ ಹಲವು ಖಾಸಗಿ ವಿಲಾಸಿ ವಾಹನಗಳು ಸಂಚರಿಸುತ್ತವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ವಲ್ಸಾದ್, ಗುಜರಾತ್ ನ ಇತರ ಪ್ರಮುಖ ನಗರಗಳಿಗೆ ಉತ್ತಮ ರೇಲ್ವೆ ಸಂಪರ್ಕವನ್ನು ಹೊಂದಿದೆ. ಇದು ಮುಂಬಯಿ-ದಿಲ್ಲಿ ಮಾರ್ಗ ಹಾಗು ಮುಂಬಯಿ-ಅಹಮಹಾಬಾದ್ ಮಾರ್ಗವಾಗಿ ಪಾಶ್ಚಾತ್ಯ ರೈಲು ಸಂಚಾರದ ವ್ಯವಸ್ಥೆ ಇದೆ. ವಲ್ಸಾದ್ ರೇಲ್ವೆ ನಿಲ್ದಾಣ ಮುಂಬಯಿ-ವಡೋದರದ ಮುಖ್ಯ ಮಾರ್ಗದಲ್ಲಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ವಲ್ಸಾದ್ ಗೆ ಅತ್ಯಂತ ಸಮೀಪದ ವಿಮಾನ ನಿಲ್ದಾಣವೆಂದರೆ ಬರೋಡ ವಿಮಾನ ನಿಲ್ದಾಣ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri