Search
  • Follow NativePlanet
Share
ಮುಖಪುಟ » ಸ್ಥಳಗಳು » ವಲ್ಸಾದ್ » ಹವಾಮಾನ

ವಲ್ಸಾದ್ ಹವಾಮಾನ

ವರ್ಷದುದ್ದಕ್ಕೂ ವಲ್ಸಾದ್ ನಲ್ಲಿ ಹವಾಮಾನ ಹಿತಕರವಾಗಿರುತ್ತದೆ. ಬೇಸಿಗೆಯ ಹವಾಮಾನದಲ್ಲಿ ತೇವಾಂಶದ ಪ್ರಮಾಣ ಹೆಚ್ಚಾಗಿರುತ್ತದೆ. ಚಳಿಗಾಲದಲ್ಲಿ ಹಿತಕರವಾದ ವಾತಾವರಣವಿರುತ್ತದೆ. ಮುಂಗಾರಿನಲ್ಲಿ ಹಚ್ಚಿನ ಮಳೆಯಾಗದೇ ಇರುವುದರಿಂದ ಮಳಿಗಾಲದಲ್ಲೂ ಹಿತಕರವಾದ ವಾತಾವರಣವಿರುತ್ತದೆ.

ಬೇಸಿಗೆಗಾಲ

ಬೇಸಿಗೆ ಕಾಲದ ಅವಧಿಯು ಮಾರ್ಚ್ ನಿಂದ ಮೇವರೆಗೆ ಇರುತ್ತದೆ. ಈ ತಿಂಗಳುಗಳಲ್ಲಿ ಉಷ್ಣಾಂಶವು ಗರಿಷ್ಟ 40 ಡಿಗ್ರಿ ಸೆಲ್ಶಿಯಸ್ ಹಾಗು ಕನಿಷ್ಟ 22 ಡಿಗ್ರಿ ಸೆಲ್ಶಿಯಸ್ ಇರುತ್ತದೆ.

ಮಳೆಗಾಲ

ವಲ್ಸಾದ್ ನಲ್ಲಿ ಜೂನ್ ನಿಂದ ಸೆಪ್ಟೆಂಬರ್ ವರೆಗೆ ಮುಂಗಾರು ಮುಂದುವರೆಯುತ್ತದೆ. ಇಲ್ಲಿ ಭಾರಿ ಮಳೆಯಾಗದೇ ಇರುವಿದರಿಂದ ಉಷ್ಣಾಂಶವು ಹಿತಕರವಾಗಿರುತ್ತದೆ.

ಚಳಿಗಾಲ

ಅಕ್ಟೋಬರ್ ನಿಂದ ಜನವರಿವರೆಗೆ ಚಳಿಗಾಲವು ಇರುತ್ತದೆ. ಹವಾಮಾನದಲ್ಲಿ ಉಷ್ಣಾಂಶವು 12 ಡಿಗ್ರಿ ಸೆಲ್ಶಿಯಸ್ ನಿಂದ 31 ಡಿಗ್ರಿ ಸೆಲ್ಶಿಯಸ್ ಏರಿಳಿತವನ್ನು ಕಾಣುವುದರಿಂದ ಹವಾಮಾನವು ಹಿತಕರವಾಗಿದ್ದು, ಈ ಪಟ್ಟಣಕ್ಕೆ ಭೇಟಿ ಕೊಡಲು ಇದೇ ಸೂಕ್ತ ಸಮಯ.