Search
 • Follow NativePlanet
Share
ಮುಖಪುಟ » ಸ್ಥಳಗಳು» ಸಪುತಾರಾ

ಸಪುತಾರಾ : ಕಣ್ಣರಳಿಸುವ ದೃಶ್ಯಾವಳಿಗಳ ತಾಣ

60

ಸಪುತರಾ, ಗುಜರಾತಿನ ಶುಷ್ಕ ಪ್ರಕೃತಿ ನಡುವೆ ಸ್ಥಿತವಾಗಿರುವ ವಿಭಿನ್ನವಾದ ಸ್ಥಳವಾಗಿದೆ.  ಇದು ಗುಜರಾತ್ ಈಶಾನ್ಯ ಗಡಿನಾಡಿನ ಮತ್ತು ಪಶ್ಚಿಮ ಘಟ್ಟ ಸಹ್ಯಾದ್ರಿಯ ಎರಡನೇ ಅತಿ ಎತ್ತರದ ಪ್ರಸ್ಥಭೂಮಿಯ ಮೇಲೆ ನೆಲೆಸಿದೆ.  ಸಪುತರಾ, ಸಹ್ಯಾದ್ರಿ ಪರ್ವತ ಶ್ರೇಣಿಯ  ಬೃಹತ್ ಅರಣ್ಯ ಪ್ರದೇಶದಲ್ಲಿ ನೆಲೆಸಿದೆ , ಸಪುತರಾ ಸೊಂಪಾದ ಹಸಿರಿನ ಜೊತೆ ಒಂದು  ವೈವಿಧ್ಯತೆಯನ್ನು ಹೊಂದಿರುವ ಆಕರ್ಷಕ ಗಿರಿಧಾಮವಾಗಿದ್ದು, ಪ್ರವಾಸಿಗರನ್ನು ಸ್ವಾಗತಿಸುತ್ತದೆ.

ಪೌರಾಣಿಕ ಸಂಪರ್ಕ

ದಂತಕಥೆಗಳ ಪ್ರಕಾರ,  ಭಗವಾನ್ ರಾಮನು ಆತನ ಅಜ್ಞಾತವಾಸದ ಸಂದರ್ಭದಲ್ಲಿ ದೀರ್ಘ ಕಾಲ ಇಲ್ಲಿ ಬಂದು ನೆಲೆಸಿದ್ದನು ಎಂದು ಹೇಳಲಾಗುತ್ತದೆ.  ಸಪುತರಾ,  ಎಂದರೆ, ' ಸರ್ಪಗಳ ನೆಲೆ ' ಎಂದರ್ಥ.  ಸಪುತರಾದ ದಟ್ಟ ಅರಣ್ಯದಲ್ಲಿ 90 % ಆದಿವಾಸಿ ಜನಗಳಿದ್ದು,  ಈ ಬುಡಕಟ್ಟಿನವರು ನಾಗಪಂಚಮಿ ಅಥವಾ ಹೋಳಿ ಹಬ್ಬದ ಸಂದರ್ಭಗಳಲ್ಲಿ ಸರ್ಪಗಂಗಾ ನದಿಯ ದಡದಲ್ಲಿ ಒಂದು ಹಾವಿನ ವಿಗ್ರಹವನ್ನಿಟ್ಟು ಪೂಜಿಸುತ್ತಾರೆ .

ಹವಾಮಾನ

ಸಪುತರಾ,  ವರ್ಷದ ಎಲ್ಲಾ ಸಮಯದಲ್ಲಿಯೂ ಏಕರೂಪ ಹವಾಮಾನ  ಅನುಭವಿಸುತ್ತದೆ.  ತಂಪಾದ ಹವಾಮಾನ, ಗುಜರಾತಿನ ಸೂರ್ಯನ ಸುಟ್ಟ ಬಯಲಿನಿಂದ ಪರಿಹಾರ ಒದಗಿಸುತ್ತದೆ . ಸಮುದ್ರ ಮಟ್ಟದಿಂದ 873  ಮೀ ಎತ್ತರದಲ್ಲಿ ಸ್ಥಿತವಾಗಿದೆ. ಬೇಸಿಗೆಯಲ್ಲಿ ತಾಪಮಾನವು 28 ಡಿ. ಸೆ ಮೀರಿ ಹೋಗುವದಿಲ್ಲ. ಮಳೆಗಾಲದಲ್ಲಿ , ಅರಣ್ಯ ಸಾಕಷ್ಟು ಮಳೆಯನ್ನು ಪಡೆಯುತ್ತದೆ ಮತ್ತು ಹೆಚ್ಚು ಹಸಿರಿನಿಂದ ಕೂಡಿರುತ್ತದೆ. ಮಾರ್ಚ್ ಮಧ್ಯಭಾಗದಿಂದ ನವೆಂಬರ್ ಮಧ್ಯ ಭಾಗದವರೆಗೆ ಸಪುತರಾ ಭೇಟಿಗೆ ಆದರ್ಶ ಸಮಯ .

ಸಂಪರ್ಕ

ಸಪುತರಾ, ಸೂರತ್ ನಿಂದ 172 ಕಿ.ಮೀ ಮತ್ತು ಮಹಾರಾಷ್ಟ್ರ ರಾಜ್ಯದ ಗಡಿಯಿಂದ 4 ಕಿ.ಮೀ ದೂರದಲ್ಲಿದೆ. ಬಿಲ್ಲಿಮೊರಾ ಅತ್ಯಂತ ಅನುಕೂಲಕರ ರೈಲ್ವೆ ಸಂಪರ್ಕ ವ್ಯವಸ್ಥೆ ಮತ್ತು ಹತ್ತಿರದ ವಿಮಾನ ಸೂರತ್ ವಿಮಾನ ನಿಲ್ದಾಣವಾಗಿದೆ.

ಪ್ರವಾಸಿ ಆಕರ್ಷಣೆಗಳು

ಸಪುತರಾ ಪ್ರದೇಶದಲ್ಲಿ  ಅನೇಕ  ಕಾಲುವೆಗಳು, ಹಳ್ಳಗಳು, ಸರೋವರ ಜಲಾಶಯಗಳು ಸಾಕಷ್ಟಿವೆ.  ಸಪುತರಾ , ಹೋಟೆಲುಗಳು , ಉದ್ಯಾನವನಗಳು , ಈಜುಕೊಳಗಳು , ಬೋಟ್ ಕ್ಲಬ್ , ಚಿತ್ರಮಂದಿರಗಳು , ಹಗ್ಗದ  ಮಾರ್ಗ ಮತ್ತು ಒಂದು ವಸ್ತು ಸಂಗ್ರಹಾಲಯದಂತಹ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಹೊಂದಿದ್ದು ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿ ಕಂಡಿದೆ ಆದರೂ ಇನ್ನೂ ಇದು ಪ್ರಕೃತಿಯ ಸೌಂದರ್ಯವನ್ನು ಹಾಳಾಗದಂತೆ ಕಾಪಾಡಿಕೊಂಡಿದೆ .

ಇದು ಸಪುತರಾ ಸರೋವರ , ಸೂರ್ಯಮುಳುಗುವ ಸ್ಥಳ (ಪಾಯಿಂಟ್ ), ಸೂರ್ಯೋದಯದ ಸ್ಥಳ (ಪಾಯಿಂಟ್) , ಎಕೋ ಪಾಯಿಂಟ್ , ನಗರ - ವೀಕ್ಷಣೆಯ ಪಾಯಿಂಟ್ , ಮತ್ತು ಗಾಂಧಿ ಶಿಖರ ಅನೇಕ  ಸ್ಥಳಗಳನ್ನು ಹೊಂದಿದೆ . ಗಂಧರ್ವಪುರ ಕಲಾವಿದ ಗ್ರಾಮ, ವನ್ಸದಾ ರಾಷ್ಟ್ರೀಯ ಉದ್ಯಾನ, ಪೂರ್ಣಾ ಅಭಯಾರಣ್ಯ , ರೋಸ್/ಗುಲಾಬಿ ಹೂವು ಉದ್ಯಾನ , ಹಗ್ಗದ ಮಾರ್ಗ ಮೊದಲಾದವು  ಸಪುತರಾದ ಕೆಲವು ಇತರ ಪ್ರವಾಸಿ ಆಕರ್ಷಣೆಗಳು. 

ಅಲ್ಲದೇ ಇಲ್ಲಿಂದ  60 ಕಿ.ಮೀ ದೂರದಲ್ಲಿರುವ ಮಹಲ್ ಬರ್ದಿಪರಾ ವನ್ಯಜೀವಿಗಳ ಅಭಯಾರಣ್ಯ ಹಾಗೂ  52ಕಿ.ಮೀ ದೂರದಲ್ಲಿರುವ ಗಿರಾ ಜಲಪಾತವನ್ನೂ ಕೂಡ ಭೇಟಿ ಮಾಡಬಹುದು.  ಮಹಲ್ ಬರ್ದಿಪುರಾ ಅನೇಕ ನದಿಗಳು ಮತ್ತು ಬಿದಿರಿನ ಪ್ರದೇಶಗಳನ್ನು ಹೊಂದಿದ್ದು, ಪ್ರವಾಸಿಗರಿಗೆ ವಾಕಿಂಗ್ ಮತ್ತು ಚಾರಣ/ ಟ್ರೆಕಿಂಗ್ ಮಾಡುವ ಅವಕಾಶವನ್ನು ಒದಗಿಸುತ್ತದೆ.

ಶುಷ್ಕ ಗುಜರಾತ್ ನಡುವೆ  ಸಪುತರಾದ ಸೊಂಪಾದ ಹಸಿರನ್ನು ನೋಡುವ ಆಹ್ಲಾದಕರ ಅನಿರೀಕ್ಷಿತ ಸಮಯವನ್ನು ಖಂಡಿತ ಕಳೆದುಕೊಳ್ಳಬೇಡಿ! ಈ ಸ್ಥಳವನ್ನು ನಿಮ್ಮ ಪ್ರಯಾಣದ ಸಾಲಿಗೆ ಇಂದೇ ಸೇರಿಸಿಕೊಳ್ಳಿ!

ಸಪುತಾರಾ ಪ್ರಸಿದ್ಧವಾಗಿದೆ

ಸಪುತಾರಾ ಹವಾಮಾನ

ಉತ್ತಮ ಸಮಯ ಸಪುತಾರಾ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಸಪುತಾರಾ

 • ರಸ್ತೆಯ ಮೂಲಕ
  ಸೂರತ್ , ಚಿಕ್ಲಿಯಲ್ಲಿ ನಾಸಿಕ್ ಮತ್ತು ಬಿಲ್ಲಿಮೊರಾ ದಿಂದ ಸಪುತರಾಗೆ ಬಸ್ಸುಗಳ ಸೌಲಭ್ಯವಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಸಪುತರಾದ ಹತ್ತಿರದ ರೈಲ್ವೇ ನಿಲ್ದಾಣವು ಬಿಲ್ಲಿಮೊರಾ - ವ್ಹಾಘಾಯಿ ನ್ಯಾರೋ ಗೇಜ್ ವಿಭಾಗದಲ್ಲಿನ ವ್ಹಾಘಾಯಿ ನಿಲ್ದಾಣವಾಗಿದೆ. ಬಿಲ್ಲಿಮೊರಾ ನಿಲ್ದಾಣದಿಂದ ಸಪುತರಾ ಕೆಲವು ಬಸ್ಸುಗಳ ಸೌಲಭ್ಯವಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಸೂರತ್ ವಿಮಾನ ನಿಲ್ದಾಣ, ಸುಪುತರಾದಿಂದ 172 ಕಿ.ಮೀ ದೂರದಲ್ಲಿದ್ದು ಹತ್ತಿರದ ವಿಮಾನ ನಿಲ್ದಾಣವಾಗಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
27 Jan,Thu
Return On
28 Jan,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
27 Jan,Thu
Check Out
28 Jan,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
27 Jan,Thu
Return On
28 Jan,Fri