ಎಲ್ಲೋರಾ ಮುನ್ನೋಟ - ಪಾರಂಪರಿಕ ತಾಣಗಳ ಜಗತ್ತು

ಔರಂಗಾಬಾದ್‌ನಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಪ್ರಖ್ಯಾತ ಪುರಾತನ ತಾಣವಾದ ಎಲ್ಲೋರಾ ಗುಹೆಗಳನ್ನು ಒಂದು ಜಾಗತಿಕ ಪಾರಂಪರಿಕ ತಾಣ ಎಂದು ಗುರುತಿಸಲಾಗಿದೆ. ಇದು ಮಹಾರಾಷ್ಟ್ರ ರಾಜ್ಯದಲ್ಲಿದೆ. ಇದನ್ನು ರಾಷ್ಟ್ರಕೂಟರ ಕಾಲದಲ್ಲಿ ಕೆತ್ತಲಾಗಿತ್ತು ಮತ್ತು ಕಟ್ಟಲ್ಪಟ್ಟಿತ್ತು.

ಇಲ್ಲಿರುವ ಒಟ್ಟು 34 ರಚನೆಗಳು ಸಾಮಾನ್ಯವಾಗಿ ಮೂರು ಗುಂಪುಗಳಲ್ಲಿರುತ್ತದೆ. ಬುದ್ಧ ಗುಂಪು, ಹಿಂದೂ ಗುಂಪು ಮತ್ತು ಜೈನ ಗುಂಪು. ಬುದ್ಧ ಗುಂಪು ಮೊದಲ ಹನ್ನೆರಡು ಗುಹೆಗಳನ್ನು ಹೊಂದಿರುತ್ತದೆ. ಹಿಂದೂ ಗುಂಪು ನಂತರದ ಹದಿನೇಳು ಗುಹೆಗಳನ್ನು ಹೊಂದಿದೆ. ಹಾಗೇ ಜೈನ ಗುಂಪು ಕೇವಲ ಐದು ಗುಹೆಗಳನ್ನು ಹೊಂದಿದೆ. ಎಲ್ಲಾ ಗುಹೆಗಳೂ ಕೂಡಾ ಸಮೀಪದಲ್ಲೇ ಇವೆ. ಆ ಎಲ್ಲಾ ಗುಹೆಗಳೂ ಕೂಡಾ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿವೆ.

ಎಲ್ಲೋರಾ - ಗುಹೆಗಳ ಜಗತ್ತು

ಮೊದಲ ಗುಹೆಗಳ ಗುಂಪು ಬುದ್ಧ ತತ್ವದ್ದು. ಬುದ್ಧರು ಮೊದಲು ಇಲ್ಲಿ ಗುಹೆಗಳನ್ನು ನಿರ್ಮಿಸಲು ಆರಂಭಿಸಿದ್ದು ಸುಮಾರು 450 ರಿಂದ 700 ಎಡಿ ಯಲ್ಲಿ. ಅವರು ಒಟ್ಟು 12 ಗುಹೆಗಳನ್ನು ಕೊರೆದರು ಎನ್ನಲಾಗಿದೆ. ಇವುಗಳನ್ನು ನಂತರದಲ್ಲಿ ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು 1-5 ಗುಹೆಗಳು ಮತ್ತು 6-12 ಗುಹೆಗಳೆಂದು ಇವನ್ನು ವರ್ಗೀಕರಿಸಲಾಗಿದೆ.

ಬ್ರಾಹ್ಮನಿಕಲ್‌ ಗುಹೆಗಳನ್ನು ಹಿಂದು ಗುಹೆಗಳು ಎಂದೂ ಕರೆಯಲಾಗುತ್ತದೆ. ಅವುಗಳ ಜೋಡಿಯು 13 ರಿಂದ 29ನೇ ಗುಹೆಗಳ ವರೆಗೆ ಇದೆ. ಎಲ್ಲವೂ ಸೇರಿ 17 ಗುಹೆಗಳಿವೆ ಹಾಗೂ ಇವೆಲ್ಲವೂ ಪಶ್ಚಿಮ ಪ್ರಾಂತ್ಯದೆಡೆಗೆ ಸಾಗುತ್ತದೆ. ಈ ಎಲ್ಲಾ ಗುಹೆಗಳನ್ನು ವಿವಿಧ ಕಾಲಾನುಗುಣದಲ್ಲಿ ನಿರ್ಮಿಸಲಾಗಿದೆ.

ಎಲ್ಲೋರಾದಲ್ಲಿ ಕಾಣಸಿಗುವ ಕೊನೆಯ ಗುಹೆಗಳ ಜೋಡಿಯು ಜೈನ ಮತಕ್ಕೆ ಸಂಬಂಧಿಸಿದ್ದಾಗಿದೆ. ಜೈನರ ಪ್ರತಿನಿಧಿಯಾಗಿ ಇವು ಕೊನೆಯ ಪಳೆಯುಳಿಕೆಗಳು. ಇಲ್ಲಿ ಕಾಣುವ ಬಹುತೇಕ ಗುಹೆಗಳು ಸಂಪೂರ್ಣವಾಗಿಲ್ಲ. ಆದರೆ ಬುದ್ಧ ಮತ್ತು ಹಿಂದೂ ಗುಹೆಗಳ ನಿರ್ಮಾಣ ಕಾರ್ಯದಲ್ಲಿ ನಿಪುಣ ತಂತ್ರಜ್ಞರನ್ನು ಬಳಸಿಕೊಳ್ಳಲಾಗಿತ್ತು.

ಈ ಗುಂಪಿನಲ್ಲಿ ಒಟ್ಟು ಐದು ಗುಹೆಗಳಿವೆ - ಗುಹೆ ಸಂಖ್ಯೆ 30 ರಿಂದ ಗುಹೆ ಸಂ. 34.

ಈ ಗುಹೆಗಳಲ್ಲಿನ ಇನ್ನೊಂದು ಪ್ರಮುಖ ಅಂಶವೆಂದರೆ ನೀರನ್ನು ಹಿಡಿದಿಟ್ಟುಕೊಳ್ಳುವ ವ್ಯವಸ್ಥೆ. ಆ ಕಾಲದ ಸಂತರು ಮತ್ತು ಭಕ್ತರು ಇಲ್ಲಿಗೆ ಭೇಟಿ ನೀಡಿದಾಗ ನೀರಿನ ವ್ಯವಸ್ಥೆಯು ತುಂಬಾ ಸುಲಭ ಲಭ್ಯವಾಗಿತ್ತು. ಅವರು ಮಳೆನೀರು ಸಂಗ್ರಹದಲ್ಲಿ ತುಂಬಾ ಜಾಣ್ಮೆಯನ್ನು ಹೊಂದಿದ್ದರು. ಗುಹೆಯಲ್ಲಿರುವ ದೊಡ್ಡ ದೊಡ್ಡ ಬಂಡೆಗಳ ಸಹಾಯದಿಂದ ಅವರು ನೀರನ್ನು ಸಂಗ್ರಹ ಮಾಡುತ್ತಿದ್ದರು.

ಯಾವಾಗ ಮತ್ತು ಹೇಗೆ ಪ್ರಯಾಣ ಮಾಡುವುದು

ವರ್ಷದಲ್ಲಿ ಯಾವಾಗ ಬೇಕಾದರೂ ಈ ಗುಹೆಗಳನ್ನು ನೋಡಬಹುದು. ವಾತಾವರಣವು ಸಾಮಾನ್ಯವಾಗಿ ತಂಪು ಮತ್ತು ಶಾಂತವಾಗಿರುತ್ತದೆ. ಆದಾಗ್ಯೂ, ಬೇಸಿಗೆಗಾಲದಲ್ಲಿ ಸ್ವಲ್ಪ ಹೆಚ್ಚು ಉಷ್ಣಾಂಶವಿರುತ್ತದೆ ಮತ್ತು ಇದರಿಂದಾಗಿ ಗುಹೆಗಳನ್ನು ಸರಿಯಾಗಿ ನೋಡಲು ಸಾಧ್ಯವಾಗದೇ ಹೋಗಬಹುದು. ಯಾಕೆಂದರೆ ಹೆಚ್ಚು ನಡೆಯುವ ಅಗತ್ಯ ಇಲ್ಲಿದೆ. ಮಳೆಗಾಲವು ಉತ್ತಮವಾದ ಕಾಲ. ಸುತ್ತಲಿನ ಪರಿಸರ ಸಂಪೂರ್ಣವಾಗಿ ಈ ಸಮಯದಲ್ಲಿ ತಂಪಾಗಿರುತ್ತದೆ.

ಪ್ರಯಾಣಕ್ಕೆ ಅನುಕೂಲವಾಗುವಂತೆ, ಔರಂಗಾಬಾದ್‌ ವಿಮಾನ, ರಸ್ತೆ ಮತ್ತು ರೈಲಿಗೆ ಸಮೀಪ. ಔರಂಗಾಬಾದ್‌ ವಿಮಾನ ನಿಲ್ದಾಣವು ಗುಹೆಗಳಿಗೆ ಸಮೀದಲ್ಲೇ ಇದ್ದು ಪ್ರಯಾಣ ಸುಲಭ ಸಾಧ್ಯ. ಔರಂಗಾಬಾದ್‌ನ ರೈಲ್ವೆ ಸ್ಟೇಷನ್‌ ಕೂಡಾ ಎಲ್ಲೋರಾಗೆ ಸಂಪರ್ಕವನ್ನು ಹೊಂದಿದ್ದು, ಇಲ್ಲಿಂದ ಕೇವಲ 45 ನಿಮಿಷದ ದೂರದಲ್ಲಿದೆ. ರಸ್ತೆಯ ಮೂಲಕವ ಹೋಗುವುದಾದರೆ ಕೂಡಾ, ಎಲ್ಲೋರಾ ಗುಹೆಗಳು ಅಹ್ಮದಾಬಾದ್‌ ಜಂಕ್ಷನ್‌ಗೆ ಸಂಪರ್ಕವನ್ನು ಹೊಂದಿದ್ದು, ಕೇವಲ 30 ಕಿ.ಮೀ ದೂರದಲ್ಲಿದೆ. ಇಲ್ಲಿಂದ ಆಟೋ ಮೂಲಕ ಎಲ್ಲೋರಾ ಗುಹೆಗಳನ್ನು ತಲುಪಬಹುದು.

ಭಾರತದ ಅತ್ಯುತ್ತಮ ಹತ್ತು ಪ್ರವಾಸಿ ತಾಣಗಳ ಪೈಕಿ ಎಲ್ಲೋರಾ ಗುಹೆಗಳು ಪ್ರಮುಖ ಸ್ಥಾನದಲ್ಲಿ ನಿಲ್ಲುತ್ತವೆ. ಸಾಂಸ್ಕೃತಿಕವಾಗಿ ಆಳವಾದ ಈ ಗುಹೆಗಳು ಭಾರತದ ಪ್ರಮುಖ ಮೂರು ಧರ್ಮಗಳ ಸಾರಾಂಶಗಳನ್ನು ಇಡೀ ಜಗತ್ತಿಗೆ ತೆರೆದಿಡುತ್ತವೆ.

Please Wait while comments are loading...