Search
  • Follow NativePlanet
Share
ಮುಖಪುಟ » ಸ್ಥಳಗಳು » ಎಲ್ಲೋರಾ » ಆಕರ್ಷಣೆಗಳು » ಬ್ರಾಹ್ಮನಿಕಲ್‌ ಗುಹೆಗಳ ಗುಂಪು

ಬ್ರಾಹ್ಮನಿಕಲ್‌ ಗುಹೆಗಳ ಗುಂಪು, ಎಲ್ಲೋರಾ

5

ಗುಹೆ 13

ಈ ಗುಹೆಯು ಯಾವುದೇ ಪ್ರಮುಖ ಅಂಶಗಳನ್ನು ಹೊಂದಿಲ್ಲ.

ಗುಹೆ 14

ಈ ಗುಹೆಯನ್ನು ರಾವಣ್‌ ಕಿ ಖಾಯಿ ಎಂದು ಕರೆಯಲಾಗುತ್ತದೆ. ಈ ಹೆಸರು ಹೇಗೆ ಬಂತು ಎನ್ನುವುದು ಈವರೆಗೆ ತಿಳಿದಿಲ್ಲ. ಮಂದಿರದ ಹೊರತಾಗಿ ಈ ಗುಹೆಯಲ್ಲಿ ವಿಶಾಲವಾದ ಪ್ರದೇಶವಿದೆ. ಮಂದಿರದ ಸುತ್ತಲೂ ಪ್ರದಕ್ಷಿಣಾ ಪಥವಿದೆ. ಮಂದಿರದ ಗೋಡೆಯ ಮೇಲೆ ವೈಷ್ಣವ ಪಂಥದ ಚಿತ್ರಗಳನ್ನು ಕೆತ್ತಲಾಗಿದೆ. ಇತರ ಗೋಡೆಗಳ ಮೇಲೆ ದುರ್ಗಾದೇವಿ ಮತ್ತು ಗಜಲಕ್ಷ್ಮಿಯ ಚಿತ್ರಗಳನ್ನು ಕೆತ್ತಲಾಗಿದೆ. ಹಾಲ್‌ನಲ್ಲಿ ವಿವರಸಿಲಾಗದ ಕೆಲವು ಚಿತ್ರಗಳಿವೆ. ಈ ಗುಹೆಯಿಂದ ಇತರ ಹಿಂದು ಗುಹೆಗಳಿಗೆ ದಾರಿಯನ್ನು ನಿರ್ಮಿಸಲಾಗಿದೆ. ಈ ಗುಹೆಯ ಮಧ್ಯದಲ್ಲಿ ಶಿವಲಿಂಗವಿದೆ.

ಗುಹೆ 15

ಏಕಶಿಲೆಯಿಂದ ಕೆತ್ತಲಾದ ಒಂದೇ ಒಂದು ಗುಹೆಯಿದು. ಈ ಗುಹೆಯು ದಶಾವತಾರ ಅಥವಾ ವಿಷ್ಣುವಿನ ಹತ್ತು ಅವತಾರಗಳನ್ನು ವಿವರಿಸುತ್ತದೆ. ಇಲ್ಲಿ ಎರಡು ಮಹಡಿಯ ಮಂಟಪವಿದ್ದು, ವಂಶವಾಹಿಯ ಆಧಾರದಲ್ಲಿ ಆಳಿದ ಎಲ್ಲಾ ರಾಜರುಗಳ ವಿವರಣೆ ಇಲ್ಲಿದೆ. ಇಲ್ಲಿನ ವಿವರಣೆಗಳು ಆಶ್ಚರ್ಯಕರವಾಗಿ ಭಾಗಶಃ ಬೌದ್ಧ ಮತ್ತು ಭಾಗಶಃ ಹಿಂದೂ ರೀತಿಯಲ್ಲಿವೆ.

ಗುಹೆ 16

ಎಲ್ಲೋರಾದ ಎಲ್ಲಾ ಗುಹೆಗಳಲ್ಲಿಯೂ ಇದು ತುಂಬಾ ಪ್ರಮುಖವಾದದ್ದು. ವಿಶ್ವದಲ್ಲೇ ಅತಿ ದೊಡ್ಡದಾದ ಉತ್ಖನನ ಎಂದು ಕೂಡಾ ಇದನ್ನು ಗುರುತಿಸಲಾಗಿದೆ. ಇದನ್ನು ಕೈಲಾಸ ಎಂದು ಕರೆಯಲಾಗಿದ್ದು, ವಿಶಾಲವಾದ, ಅತಿ ದೊಡ್ಡ ದೇವಸ್ಥಾನವನ್ನಾಗಿಸಲಾಗಿದೆ. ಕೈಲಾಸದಲ್ಲಿ ವಾಸವಾಗಿರುವ ಶಿವನಿಗೆ ಇದನ್ನು ಅರ್ಪಿಸಲಾಗಿದೆ. ಈ ದೇವಸ್ಥಾನದ ನಿರ್ಮಾಣಕ್ಕೆ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾದ ವಿರೂಪಾಕ್ಷ ದೇಗುಲವನ್ನು ಮಾದರಿಯಾಗಿಸಿಕೊಳ್ಳಲಾಗಿದೆ.

ಈ ಗುಹೆಯನ್ನು ಈ ಮುಂದಿನಂತೆ ವಿಭಾಗಿಸಲಾಗಿದೆ - ಪ್ರವೇಶ, ದೇವಸ್ಥಾನ, ನಂದಿ ಗುಡಿ ಮತ್ತು ಇತರ ಮಂದಿರ. ವಾಸ್ತುಶಿಲ್ಪಶಾಸ್ತ್ರದಲ್ಲಿ ಆಸಕ್ತಿಯಿದ್ದವರಿಗೆ ಈ ಪ್ರದೇಶವು ತುಂಬಾ ಆಸಕ್ತಿಯುತ ಮತ್ತು ಹೆಚ್ಚು ಮಾಹಿತಿಯುಳ್ಳ ಪ್ರದೇಶವಾಗಿದೆ.

ಈ ಗುಹೆಯು ಮಂದಿರ, ಮಂಟಪ, ಮೂರ್ತಿಗಳು ಮತ್ತು ಇತರ ಅಲಂಕೃತ ಸ್ತಂಭಗಳನ್ನು ಹೊಂದಿದೆ. ಎಲ್ಲವನ್ನೂ ಮೂಲ ಏಕಶಿಲೆಯಿಂದ ನಿರ್ಮಿಸಲಾಗಿದೆ.

ಗುಹೆ 21

ಈ ಗುಹೆಯನ್ನು ರಾಮೇಶ್ವರ ಎಂದು ಹೆಸರಿಸಲಾಗಿದೆ. ಲಿಂಗ ಮತ್ತು ನಂದಿ ವಿಗ್ರಹವನ್ನು ಇಲ್ಲಿ ನಿರ್ಮಿಸಲಾಗಿದೆ. ಇತರ ಗುಹೆಗಳಲ್ಲಿ ಕಾಣುವಂತೆ ಇಲ್ಲೂ ಕೂಡಾ ಮಂಟಪವಿದೆ. ಇಲ್ಲಿ ಗೋಡೆಗಳ ಮೇಲೆ ಶಿವ-ಪಾರ್ವತಿಯರ ಮದುವೆ ಸನ್ನಿವೇಶದ ಜೊತೆಗೆ ಗಂಗಾ ಮತ್ತು ಯಮುನಾ ಕತೆಗಳನ್ನು ಚಿತ್ರಿಸಲಾಗಿದೆ.

ಪ್ರದಕ್ಷಿಣಾ ಪಥದಿಂದ ಭಕ್ತರು ಇಲ್ಲಿ ಪ್ರದಕ್ಷಿಣೆ ಹಾಕುವುದು ಸಾಧ್ಯ.

ಗುಹೆ 29

ಇದನ್ನು ಡುಮಾರ್ ಲೆನಾ ಎಂದು ಕರೆಯಲಾಗಿದೆ. 29ನೇ ಗುಹೆಯನ್ನು ಸೀತಾ ಕಿ ನಹಾನಿ ಎಂದು ಕೂಡಾ ಹೇಳಲಾಗುತ್ತದೆ. ಇದೊಂದು ಏಕಾಂತವಾದ ಗುಹೆಯಾಗಿದ್ದು ಇಲ್ಲಿ ದೊಡ್ಡದಾದ ಲಿಂಗವಿದೆ. ಹಾಲ್‌ನಲ್ಲಿ ನಾಲ್ಕು ದ್ವಾರಪಾಲಕರಿದ್ದಾರೆ. ಮುಂಬೈನಲ್ಲಿರುವ ಆನೆ ಗುಹೆಯ ರೀತಿಯಲ್ಲೇ ಇದನ್ನು ಕೂಡ ನಿರ್ಮಿಸಲಾಗಿದೆ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat