Search
 • Follow NativePlanet
Share
ಮುಖಪುಟ » ಸ್ಥಳಗಳು» ಪರ್ಭಾನಿ

ಪರ್ಭಾನಿ - ದೇವಾಲಯಗಳ ಪಟ್ಟಣ

10

ಮೊದಲಿಗೆ ಪರ್ಭಾವತಿ ನಗರ ಎಂದು ಕರೆಯಿಸಿಕೊಳ್ಳುತ್ತಿದ್ದ ಪರ್ಭಾನಿಯು ಮಹಾರಷ್ಟ್ರ ರಾಜ್ಯದ ಒಂದು ಜಿಲ್ಲಾಕೇಂದ್ರವಾಗಿದೆ. ಇದು ಮರಾಠವಾಡ ಪ್ರಾಂತ್ಯದ ಎಂಟು ಜಿಲ್ಲೆಗಳಲ್ಲಿ ಒಂದಾಗಿದೆ. ಈ ಊರು ಸಮುದ್ರಮಟ್ಟದಿಂದ 357 ಅಡಿ ಎತ್ತರದಲ್ಲಿ ನೆಲೆಸಿದ್ದು, ಬಲಘಟ್ ಬೆಟ್ಟಗಳು ಮತ್ತು ಅಜಂತಾ ಬೆಟ್ಟಗಳಿಂದ ಸುತ್ತವರೆದಿದೆ.

ಪರ್ಭಾನಿಯು ಹಿಂದು ಪುರಾಣಗಳಲ್ಲಿ ಪ್ರಮುಖವಾಗಿ ಉಲ್ಲೇಖಗೊಂಡಿದೆ. ಅಲ್ಲದೆ ಇದು ಹಲವು ಸಂತರ ಜನ್ಮ ಸ್ಥಳವಾಗಿದೆ. ಸಾಯಿಬಾಬ ಇಲ್ಲಿ ಅತಿ ಹೆಚ್ಚು ಆರಾಧಿಸಲ್ಪಡುವ ದೈವಪುರುಷ. ಇಲ್ಲಿಗೆ ಸಮೀಪದಲ್ಲಿ ಹಲವು ದೇವಾಲಯಗಳು ನೆಲೆಸಿವೆ.

ದೇಗುಲಗಳ ನೆಲೆಬೀಡು

ಪರ್ಭಾನಿಯು ಆದಿ ಶಕ್ತಿ ಪಾರ್ವತಿ ದೇವಿಯಿಂದ ಈ ಹೆಸರು ಪಡೆದಿದೆ. ಈ ಪ್ರದೇಶವು ಸುಲ್ತಾನರ, ಮುಘಲರ ಮತ್ತು ಮುಸಲ್ಮಾನ ನಿಜಾಮರ ಕಾಲದಲ್ಲಿ ಅಷ್ಟಾಗಿ ಅಭಿವೃದ್ಧಿ ಹೊಂದಲಿಲ್ಲ. ಆದರೆ 1960 ರಲ್ಲಿ ಯಾವಾಗ ಈ ಪ್ರದೇಶ ಮಹಾರಷ್ಟ್ರದಲ್ಲಿ ಲೀನವಾಯಿತೊ ಅಂದಿನಿಂದ ಈ ಊರು ಶ್ರೀಮಂತಿಕೆಯನ್ನು ಪಡೆಯಿತು.

ಪರ್ಭಾನಿಯು ದತ್ತಾತ್ರೇಯರ ಪುನರಾವತಾರವೆಂದು ನಂಬಲಾದ ಸಾಯಿಬಾಬರ ಪವಿತ್ರ ಜನ್ಮಸ್ಥಳವನ್ನು ಹೊಂದಿದೆ. ಅದು ಇಲ್ಲಿಂದ 45 ಕಿ.ಮೀ ದೂರದಲ್ಲಿದೆ. ಜಬರೇಶ್ವರ್ ಬಲೇಶ್ವರ್ ಮಹಾದೇವ್, ಮೋಟ ಮಾರುತಿ ಮತ್ತು ಪರ್ದೇಶ್ವರ ಎಂಬ ಕೆಲವು ದೇವಾಲಯಗಳನ್ನು ನಾವು ಇಲ್ಲಿ ಕಾಣಬಹುದು.

ಇಲ್ಲಿಂದ 40 ಕಿ.ಮೀ ದೂರದಲ್ಲಿರುವ ಜಿಂತುರ್ ನ ಜೈನದೇವಾಲಯವು ನೋಡಲು ಅತ್ಯಂತ ಸುಂದರವಾಗಿದೆ. ಇಲ್ಲಿಗೆ ಸಮೀಪದಲ್ಲಿ ಮುದ್ಗಲ್ ಎಂಬ ಹಳ್ಳಿಯಿದೆ. ನಂಬಿಕೆಗಳ ಪ್ರಕಾರ ಇಲ್ಲಿ ವಿಷ್ಣು ಮತ್ತು ಮಹೇಶ್ವರರು ಇಬ್ಬರು ಕೂಡಿ ಇಲ್ಲಿ ಪೂಜಾ ವಿಧಿಗಳನ್ನು ನಿರ್ವಹಿಸಿದ ಏಕೈಕ ಸ್ಥಳವೆಂದು ಭಾವಿಸಲಾಗಿದೆ. ಇಲ್ಲಿನ ನರಸಿಂಹ ದೇವಾಲಯವು ಮತ್ತೊಂದು ಪ್ರಸಿದ್ಧ ದೇವಾಲಯವಾಗಿದೆ.

ಪರ್ಭಾನಿಯಿಂದ 45ಕಿ.ಮೀ ದೂರದಲ್ಲಿರುವ ಸೆಲು ಎಂಬಲ್ಲಿ ಶ್ರೀ ಕೇಶವರಾಜ್ ಬಾಬಾಸಾಹೇಬರ ದೇವಾಲಯವನ್ನು ನಿರ್ಮಿಸಲಾಗಿದೆ. ಇದು ಅತ್ಯಂತ ಜನಪ್ರಿಯ ದೇವಾಲಯವಾಗಿದ್ದು, ಸಾಯಿಬಾಬಾರ ಗುರುಗಳಾದ ಶ್ರೀ ಕೇಶವರಾಜ್ ಬಾಬಾಸಾಹೇಬರ ನೆನಪಿಗಾಗಿ ನಿರ್ಮಿಸಲಾಗಿದೆ.

ಪರ್ಭಾನಿ ಪ್ರಸಿದ್ಧವಾಗಿದೆ

ಪರ್ಭಾನಿ ಹವಾಮಾನ

ಉತ್ತಮ ಸಮಯ ಪರ್ಭಾನಿ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಪರ್ಭಾನಿ

 • ರಸ್ತೆಯ ಮೂಲಕ
  ಮಹಾರಾಷ್ಟ್ರದ ಮುಂಬೈ ಮತ್ತು ಪುಣೆಯಂತಹ ನಗರಗಳಿಂದ ಹಲವಾರು ಖಾಸಗಿ ಪ್ರವಾಸಿ ಬಸ್ಸುಗಳು ಮತ್ತು ರಾಜ್ಯ ಸರ್ಕಾರಿ ಬಸ್ಸುಗಳು ಪರ್ಭಾನಿಗೆ ಹೋಗಿ ಬರುತ್ತಿರುತ್ತವೆ. ಖಾಸಗಿ ಬಸ್ಸುಗಳು ಸರ್ಕಾರಿ ಬಸ್ಸುಗಳಿಗೆ ಪ್ರಮುಖ ಬದಲಿ ವ್ಯವಸ್ಥೆಯಾಗಿದೆ. ಪುಣೆಯಿಂದ ಪರ್ಭಾನಿಗೆ ಸಾಮಾನ್ಯವಾಗಿ 300 ರೂ ಮತ್ತು ಹವಾನಿಯಂತ್ರಿತ ಬಸ್ಸಿಗೆ 500 ರೂ ದರವಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಪರ್ಭಾನಿಗೆ ಮಹಾರಾಷ್ಟ್ರದ ಒಳಗಿನ ಮತ್ತು ಹೊರಗಿನ ನಗರಗಳಿಂದ ರೈಲಿನಲ್ಲಿ ಸುಲಭವಾಗಿ ತಲುಪಬಹುದು. ಮುಂಬೈ, ಪುಣೆ, ಹೈದರಾಬಾದ್, ದೆಹಲಿ ಮತ್ತು ನಾಸಿಕ್ ನಂತಹ ನಗರಗಳಿಂದ ದಿನನಿತ್ಯ ರೈಲುಗಳು ಆಗಮಿಸುತ್ತಿರುತ್ತವೆ. ಇವುಗಳಲ್ಲಿ ನೀವು ಹವಾನಿಯಂತ್ರಿತ ಅಥವಾ ಸಾಮಾನ್ಯ ಭೋಗಿಯಲ್ಲಿ ಪ್ರಯಾಣಿಸುವ ಅವಕಾಶವಿದೆ. ಟಿಕೆಟ್ ದರ ನೀವು ಆಯ್ಕೆ ಮಾಡಿಕೊಳ್ಳುವ ಭೋಗಿಯ ಮೇಲೆ ನಿರ್ಧಾರವಾಗುತ್ತದೆ. ರೈಲಿನಲ್ಲಿ ಪ್ರಯಾಣಿಸುವುದು ಸುಖಕರವಾದ ಆಯ್ಕೆಯಾಗಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ನಾಂದೇಡ್ ರಾಷ್ಟ್ರೀಯ ವಿಮಾನನಿಲ್ದಾಣವು ಪರ್ಭಾನಿಗೆ ಸಮೀಪದ ವಿಮಾನ ನಿಲ್ದಾಣವಾಗಿದ್ದು,ಇಲ್ಲಿಂದ 60 ಕಿ.ಮೀ ದೂರದಲ್ಲಿದೆ. ವಿಮಾನಗಳು ಇಲ್ಲಿಂದ ವಾರಕ್ಕೆ ನಾಲ್ಕು ದಿನಗಳ ಕಾಲ ನಿಯಮಿತವಾಗಿ ಹಾರಾಟ ನಡೆಸುತ್ತವೆ. ಈ ವಿಮಾನ ನಿಲ್ದಾಣದಿಂದ ಪರ್ಭಾನಿಗೆ ಟ್ಯಾಕ್ಸಿಗಳು ಲಭ್ಯವಿದೆ. ಮುಂಬೈನ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣವು ಇಲ್ಲಿಗೆ ಸಮೀಪದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು, ಇದು ಭಾರತದ ಒಳಗಿನ ಮತ್ತು ಹೊರಗಿನ ಹಲವು ನಗರಗಳೊಂದಿಗೆ ವಿಮಾನ ಸಂಪರ್ಕವನ್ನು ಹೊಂದಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
15 Jun,Tue
Return On
16 Jun,Wed
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
15 Jun,Tue
Check Out
16 Jun,Wed
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
15 Jun,Tue
Return On
16 Jun,Wed