Search
  • Follow NativePlanet
Share
ಮುಖಪುಟ » ಸ್ಥಳಗಳು» ತುಳಜಾಪುರ್

ತುಳಜಾಪುರ- ತುಳಜಾ ಭವಾನಿಯ ದಿವ್ಯ ಸನ್ನಿಧಿಯಲ್ಲಿ

12

ತುಳಜಾಪುರ ಎಂಬುದು ಸಹ್ಯಾದ್ರಿ ಶ್ರೇಣಿಗಳಲ್ಲಿರುವ  ಯಮುನಾಚಲ್ ಬೆಟ್ಟಗಳಲ್ಲಿ ನೆಲೆಗೊಂಡಿರುವ ಅತ್ಯಂತ ಪ್ರಶಾಂತವಾದ ನಗರವಾಗಿದೆ. ಇದು ಮಹಾರಾಷ್ಟ್ರದ ಉಸ್ಮಾನಬಾದ್ ಜಿಲ್ಲೆಯಲ್ಲಿದ್ದು, ಸಮುದ್ರ ಮಟ್ಟದಿಂದ 650 ಅಡಿಯಷ್ಟು ಎತ್ತರದಲ್ಲಿ ನೆಲೆಗೊಂಡಿದೆ. ಇದು ಸೋಲಾಪುರ್ ಔರಂಗಬಾದ್ ಹೆದ್ದಾರಿಯ ನಡುವೆ ಕಾಣ ಸಿಗುತ್ತದೆ.

ತುಳಜಾಪುರವನ್ನು ಮೊದಲಿಗೆ ಚಿಂಚುಪುರ್ ಎಂದು ಕರೆಯುತ್ತಿದ್ದರು. ಈ ಊರು ಹುಣಸೆ ಮರಗಳ ನೆಲೆಬೀಡಾಗಿತ್ತು. ಈ ಪ್ರಾಂತ್ಯದ ಇತಿಹಾಸವು ಸುಮಾರು 12ನೇ ಶತಮಾನದಷ್ಟು ಹಿಂದಕ್ಕೆ ಕರೆದೊಯ್ಯುತ್ತದೆ.

ಒಂದು ಪವಿತ್ರ ಯಾತ್ರಾ ಸ್ಥಳ

ತುಳಜಾಪುರವು ಒಂದು ಅದ್ಭುತವಾದ ಯಾತ್ರಾ ಸ್ಥಳವಾಗಿದ್ದು, ಪ್ರತಿವರ್ಷವು ಹಿಂದಿಗಿಂತ ಹೆಚ್ಚಾಗಿ ಭಕ್ತ ಜನರ ಆಕರ್ಷಣೆಯನ್ನು ಗಳಿಸಿ ಯಾತ್ರಾರ್ಥಿಗಳಿಂದ ತುಂಬಿ ತುಳುಕುತ್ತಿರುತ್ತದೆ. ತುಳಜಾಪುರದ ತುಳಜಾ ಭವಾನಿ ದೇವಾಲಯವು ಅತ್ಯಂತ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಈ ದೇವಿಯ ದರ್ಶನ ಪಡೆಯಲು ಆಗಮಿಸುವ ಭಕ್ತರಿಂದಾಗಿಯೆ ತುಳಜಾಪುರವು ಯಾತ್ರಾರ್ಥಿಗಳಿಂದ ತುಂಬಿ ತುಳುಕುವುದು.

ಇಲ್ಲಿ ತುಳಜಾ ಭವಾನಿ ದೇವಿಯ ದೇವಾಲಯವನ್ನು ಸ್ಥಾಪಿಸಿದ ತರುವಾಯ ಈ ಊರು ತನ್ನ ಹಳೆಯ ಹೆಸರಾದ ಚಿಂಚುಪುರ್ ಎಂಬುದನ್ನು ಕಳೆದುಕೊಂಡು ತುಳಜಾಪುರ್ ಎಂಬ ಹೊಸ ಹೆಸರನ್ನು ಪಡೆಯಿತು.

ತುಳಜಾಪುರದಲ್ಲಿ ಏನೇನು ನೋಡಬಹುದು

ಇಲ್ಲಿನ ತುಳಜಾ ಭವಾನಿ ದೇವಾಲಯವು ಭಾರತದ 51 ಪವಿತ್ರ ಶಕ್ತಿ ಪೀಠಗಳಲ್ಲಿ ಒಂದು ಎಂದು ಪ್ರಾಮುಖ್ಯತೆಯನ್ನು ಗಳಿಸಿದೆ. ವಿಷ್ಣುವಿನ ಪರಮ ಭಕ್ತನಾದ ಸಂತ ಗರೀಬ್ ನ ಮಠವು ಇಲ್ಲಿನ ಮತ್ತೊಂದು ಆಕರ್ಷಣೆಯಾಗಿದೆ. ಈಗ ಈ ಮಠವು ಅನೇಕ ಧ್ಯಾನ ಮತ್ತು ಯೋಗ ಕುರಿತಾದ ಸೌಲಭ್ಯಗಳನ್ನು ಒದಗಿಸುತ್ತಿದೆ. ಸಂತ ಭಾರತಿ ಬುವಾ ಮಠವು ಇಲ್ಲಿನ ಮತ್ತೊಂದು ನೋಡಬೇಕಾದ ಸ್ಥಳವಾಗಿದೆ.

ತುಳಜಾಪುರದ ಹೊರಭಾಗದಲ್ಲಿ ಧಕ್ತೆ ತುಳಜಾಪುರ್ ಎಂಬ ಉಪನಗರವು ಇದೆ. ಇದರರ್ಥ ’ಯೌವನದ’ ತುಳಜಾಪುರ್ ಎಂದು ಹೇಳಬಹುದು. ಇಲ್ಲಿ ಅದೇ ತುಳಜಾ ಭವಾನಿ ದೇವಿಯ ಸಣ್ಣ ಗಾತ್ರದ ಮೂರ್ತಿಯನ್ನು ಕಾಣಬಹುದು. ನಂಬಿಕೆಗಳ ಪ್ರಕಾರ ಮುಖ್ಯದೇವಾಲಯಕ್ಕೆ ಭೇಟಿ ಕೊಡುವವರು ಮೊದಲು ಇಲ್ಲಿಗೆ ಭೇಟಿಕೊಡುವುದು ಕಡ್ಡಾಯ. ಕುತೂಹಲದ ವಿಚಾರವೇನೆಂದರೆ ಇಲ್ಲಿ ದೊರೆತ ಮೂರ್ತಿಯನ್ನು ಮೊದಲು ಕಂಡುಹಿಡಿದವನು ಒಬ್ಬ ಮುಸಲ್ಮಾನ.

ಒಂದು ಬಂಡೆಯನ್ನು ಕೊರೆದು ನಿರ್ಮಿಸಿರುವ ಘಟ ಶಾಲ ದೇವಾಲಯವು  ರಾಮನಿಗಾಗಿ ನಿರ್ಮಿಸಲ್ಪಟ್ಟಿದ್ದು, ತನ್ನ ವಿಶೇಷವಾದ ಅನುಪಮ ಶೈಲಿಯಿಂದ ಆಕರ್ಷಿಸುತ್ತದೆ.

ಕಲ್ಲೋಳ ತೀರ್ಥ,ವಿಷ್ಣು ತೀರ್ಥ, ಗೋಮುಖ ತೀರ್ಥ ಮತ್ತು ಪಾಪನಾಶಿ ತೀರ್ಥಗಳೆಂಬ ಕಲ್ಯಾಣಿಗಳು ಇಲ್ಲಿ ಕಾಣಸಿಗುತ್ತವೆ. ಈ ಕಲ್ಯಾಣಿಗಳಲ್ಲಿ ಮಿಂದರೆ ಭಕ್ತಾಧಿಗಳು ತಮ್ಮ ಸಕಲ ಪಾಪ ಕರ್ಮಗಳಿಂದ ಮುಕ್ತಿ ಹೊಂದುವರೆಂದು ನಂಬಲಾಗಿದೆ. ಅಸಂಖ್ಯಾತ ಯಾತ್ರಾರ್ಥಿಗಳು ಈ ತೀರ್ಥಗಳಲ್ಲಿ ಮಿಂದು ತಮ್ಮ ತಮ್ಮ ಸಂಕಷ್ಟ ಮತ್ತು ಶಾಪಗಳಿಂದ ಮುಕ್ತಿ ಪಡೆಯಲು ಹಾತೊರೆಯುವುದನ್ನು ನಾವು ಇಲ್ಲಿ ಕಾಣಬಹುದು.

ಚಿಂತಾಮಣಿ ಎಂಬುದು ಇಲ್ಲಿ ನಿರ್ಮಿಸಲಾಗಿರುವ ಅತ್ಯಂತ ಸುಂದರವಾದ ಪವಿತ್ರ ಸ್ಥಳವಾಗಿದೆ. ಇದು ವೃತ್ತಾಕಾರದಲ್ಲಿ ನಿರ್ಮಾಣವಾಗಿದ್ದು, ತನ್ನ ಅಂಗಳದಲ್ಲಿ ಮಾತಂಗಿ, ನರಸಿಂಹ, ಖಂಡೋಬ ಮತ್ತು ಯಾಮೈ ದೇವಿಯರ ಗುಡಿಗಳನ್ನು ಹೊಂದಿದೆ.

ಅಕ್ಕಲ್ಕೋಟ್ ಮತ್ತು ಪಂಢಾರ್ ಪುರ್ ತುಳಜಾಪುರದಲ್ಲಿ ಇರುವ ನೋಡಲೆ ಬೇಕಾಗಿರುವ ಇನ್ನಿತರ ಎರಡು ಯಾತ್ರಾಸ್ಥಳಗಳಾಗಿವೆ.

 ಯಾವಾಗ ಹೋಗಬೇಕು ಮತ್ತು ಹೇಗೆ ಹೋಗಬೇಕು

ತುಳಜಾಪುರವು ವರ್ಷದ ಬಹುಭಾಗ ಅತ್ಯಂತ ಹಿತವಾದ ಹವಾಮಾನದಿಂದ ಕೂಡಿರುತ್ತದೆ. ಬೇಸಿಗೆಯು ಈ ತೀರ್ಥಸ್ಥಳಕ್ಕೆ ಭೇಟಿಕೊಡಲು ಉತ್ತಮವಾದ ಸಮಯವಲ್ಲ. ಈ ಸಮಯದಲ್ಲಿ ವಾತಾವರಣವು ಅಸಹನೀಯವಾದ ಬಿಸಿಲು ಮತ್ತು ಅತಿಯಾದ ಉಷ್ಣಾಂಶದಿಂದ ಕೂಡಿರುತ್ತದೆ.ಆಗ ಇಲ್ಲಿನ ಬಿಸಿಲು ಪ್ರವಾಸಕ್ಕೆ ಬಂದವರಿಗೆ ಕನಿಷ್ಠವಾಗಿ ಹೊರಗೆ ತಲೆ ಹಾಕಲೂ ಸಹ ಬಿಡುವುದಿಲ್ಲ. ಹಾಗಾಗಿ ಈ ಸಮಯದಲ್ಲಿ ಇಲ್ಲಿಗೆ ಭೇಟಿಕೊಡುವ ನಿರ್ಧಾರ ಕೈ ಬಿಡುವುದು ಉತ್ತಮ. ಮಳೆಗಾಲವು ಇಲ್ಲಿ ಅತ್ಯಂತ ಹಿತವಾದ ಕಾಲವಾಗಿದೆ. ತುಳಜಾಪುರದಲ್ಲಿ ತಕ್ಕ ಮಟ್ಟಿಗೆ ಉತ್ತಮ ಮಳೆಯನ್ನು ನಾವು ಕಾಣಬಹುದು. ಇವೆಲ್ಲವು ಇಲ್ಲಿನ ಪ್ರಾಂತ್ಯವನ್ನು ಸುಂದರವನ್ನಾಗಿ ಮತ್ತು ಪ್ರಶಾಂತವನ್ನಾಗಿ ಮಾಡುತ್ತವೆ. ಈ ಕಾಲದಲ್ಲಿ ಇಲ್ಲಿಗೆ ಭೇಟಿಕೊಡುವುದು ಮಳೆಗಾಲದ ಪ್ರಿಯರಿಗೆ ಒಂದು ವರ ಎಂದು ಭಾವಿಸಬಹುದು. ಹಾಗೆಯೆ ಮಳೆಯೆಂದರೆ ಆಗದವರು ಈ ಕಾಲದಲ್ಲಿ ಇಲ್ಲಿಂದ ದೂರವಿರುವುದು ಒಳ್ಳೆಯದು. ಚಳಿಗಾಲವು ತುಳಜಾಪುರಕ್ಕೆ ತೆರಳಿ ಅಲ್ಲಿನ ದೈವಗಳಿಗೆ ಸೇವೆ ಮತ್ತು ಹರಕೆ ಸಲ್ಲಿಸಲು ಹಾಗು, ಇಲ್ಲಿ ಸುತ್ತಾಡುತ್ತ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಲು ಅತ್ಯಂತ ಸೂಕ್ತಸಮಯವಾಗಿದೆ.

ನವರಾತ್ರಿ, ಗುಡಿಪಡ್ವ ಮತ್ತು ಮಕರ ಸಂಕ್ರಾಂತಿ ಹಬ್ಬಗಳು ಇಲ್ಲಿಗೆ ಭೇಟಿಕೊಡಲು ಹಾಗು ಸ್ಥಳೀಯ ಆಚರಣೆಗಳಲ್ಲಿ ಪಾಲ್ಗೊಳ್ಳಲು ಅತ್ಯಂತ ಸೂಕ್ತ ಸಮಯವಾಗಿದೆ.

 

ಧಾರ್ಮಿಕ ಕೇಂದ್ರವಾದ ತುಳಜಾಪುರಕ್ಕೆ ರಸ್ತೆ, ರೈಲು ಮತ್ತು ವಿಮಾನಯಾನದ ಮೂಲಕ ಆರಾಮವಾಗಿ ತಲುಪಬಹುದು. ಪುಣೆ ವಿಮಾನ ನಿಲ್ದಾಣ ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವಾಗಿದೆ. ಈ ವಿಮಾನ ನಿಲ್ದಾಣದಿಂದ ನೀವು ಟ್ಯಾಕ್ಸಿ ಅಥವಾ ಕ್ಯಾಬ್ ಗಳಲ್ಲಿ ತುಳಜಾಪುರಕ್ಕೆ ತಲುಪಬಹುದು. ತುಳಜಾಪುರಕ್ಕೆ ರೈಲಿನಲ್ಲಿ ಇಲ್ಲಿಗೆ ಸಮೀಪದ ಸೋಲಾಪುರ ರೈಲು ನಿಲ್ದಾಣದಿಂದ  ತಲುಪಬಹುದು. ಈ ನಿಲ್ದಾಣ ಕೆಲವೆ ಕಿ.ಮೀ ಗಳಷ್ಟು ದೂರದಲ್ಲಿದೆ. ನೀವು ರಸ್ತೆ ಮಾರ್ಗವಾಗಿ ಇಲ್ಲಿಗೆ ತಲುಪ ಬೇಕೆಂದಾದಲ್ಲಿ ಹಲವು ರಾಜ್ಯ ಮತ್ತು ಖಾಸಗಿ ಬಸ್ಸುಗಳು ನಿಮಗೆ ಸುಖಕರವಾದ ಮತ್ತು ಮಿತವ್ಯಯಕರವಾದ ಪ್ರಯಾಣ ಸೌಕರ್ಯವನ್ನು ಒದಗಿಸುತ್ತದೆ.

ಒಂದು ಪುಟ್ಟ ಪಟ್ಟಣವಾದ ತುಳಜಾಪುರವು ತನ್ನಲ್ಲಿರುವ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ತುಳಜಾ ಭವಾನಿ ದೇವಾಲಯದಿಂದಾಗಿ ಇಡೀ ವಿಶ್ವದ ಗಮನವನ್ನು ಸೆಳೆದಿದೆ. ತುಳಜಾಪುರವು ಪ್ರತಿಯೊಬ್ಬ ಆಸ್ತಿಕನು ಭೇಟಿ ಕೊಡಬೇಕಾದ ಊರಾಗಿದೆ. ಹಾಗಾದರೆ ಇನ್ನೇಕೆ ತಡ ನಿಮ್ಮ ಪ್ರವಾಸಕ್ಕೆ ಸಿದ್ಧರಾಗಿ ಈ ಪವಿತ್ರ ಯಾತ್ರಾಸ್ಥಳಕ್ಕೆ ಭೇಟಿ ಕೊಡಿ ಹಾಗು ಇಲ್ಲಿರುವ ಧನಾತ್ಮಕ ಶಕ್ತಿ ನಿಮ್ಮಲ್ಲಿನ ಧರ್ಮ ಶ್ರದ್ಧೆಯನ್ನು ಇಮ್ಮಡಿಗೊಳಿಸುವಂತಾಗಲಿ. ಹೀಗಾಗಿ  ನಿಮ್ಮ ಪ್ರವಾಸವು ಕೇವಲ ಸ್ಮರಣೀಯವಾಗುವುದಷ್ಟೆ ಅಲ್ಲ, ನಿಮ್ಮಲ್ಲಿರುವ ಅಲೌಕಿಕ ಶಕ್ತಿಯ ಅಸ್ತಿತ್ವದ ಕುರಿತಾದ ನಂಬಿಕೆ ಮತ್ತಷ್ಟು ದೃಢವಾಗುತ್ತದೆ.

ತುಳಜಾಪುರ್ ಪ್ರಸಿದ್ಧವಾಗಿದೆ

ತುಳಜಾಪುರ್ ಹವಾಮಾನ

ಉತ್ತಮ ಸಮಯ ತುಳಜಾಪುರ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ತುಳಜಾಪುರ್

  • ರಸ್ತೆಯ ಮೂಲಕ
    ಹಲವಾರು ರಾಜ್ಯ ಸಾರಿಗೆ ಮತ್ತು ಖಾಸಗಿ ಸಾರಿಗೆ ಬಸ್ಸುಗಳು ತುಳಜಾಪುರ ಮತ್ತು ಇತರ ನಗರಗಳ ನಡುವೆ ಓಡಾಡುತ್ತಿರುತ್ತವೆ. ಪುಣೆ ಇಲ್ಲಿಂದ 300 ಕಿ.ಮೀ ದೂರದಲ್ಲಿದ್ದರೆ, ಮುಂಬೈ ಇಲ್ಲಿಂದ 350 ಕಿ.ಮೀ ದೂರದಲ್ಲಿದೆ. ನಾಗ್ಪುರ್ ಮತ್ತು ಸೋಲಾಪುರಗಳು ಕ್ರಮವಾಗಿ 560 ಮತ್ತು 45 ಕಿ.ಮೀ ನಷ್ಟು ದೂರದಲ್ಲಿದೆ. ತುಳಜಾ ಭವಾನಿಯ ಆಶೀರ್ವಾದ ಪಡೆಯುವ ಸಲುವಾಗಿ ಆಗಮಿಸುವ ಯಾತ್ರಾರ್ಥಿಗಳಿಗೆ ವಿಶೇಷವಾದ ವ್ಯವಸ್ಥೆಗಳು ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಸೋಲಾಪುರ ರೈಲು ನಿಲ್ದಾಣವು ತುಳಜಾಪುರಕ್ಕೆ ಸಮೀಪದ ರೈಲು ನಿಲ್ದಾಣವಾಗಿದೆ. ಇದು ದಕ್ಷಿಣ – ಮಧ್ಯ ರೈಲು ಮಾರ್ಗದಲ್ಲಿ ಬರುತ್ತದೆ. ಈ ನಿಲ್ದಾಣವು ಮಹಾರಾಷ್ಟ್ರದ ಒಳಗಿನ ಮತ್ತು ಹೊರಗಿನ ನಗರಗಳೊಂದಿಗೆ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ. ಸೋಲಾಪುರ ರೈಲು ನಿಲ್ದಾಣವು ತುಳಜಾಪುರದಿಂದ 45 ಕಿ.ಮೀ ದೂರದಲ್ಲಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಪುಣೆಯ ಲೋಹೆಗಾಂವ್ ವಿಮಾನ ನಿಲ್ದಾಣವು ತುಳಜಾಪುರಕ್ಕೆ ಅತ್ಯಂತ ಸಮೀಪದ ದೇಶಿಯ ವಿಮಾನ ನಿಲ್ದಾಣವಾಗಿದೆ. ಅದು ಇಲ್ಲಿಂದ 300 ಕಿ,ಮೀ ನಷ್ಟು ದೂರದಲ್ಲಿದೆ. ಇಲ್ಲಿಂದ ನೀವು ತುಳಜಾಪುರಕ್ಕೆ ತಲುಪಲು ಸುಮಾರು 2000 ರೂಪಾಯಿಗಳ ವೆಚ್ಚಕ್ಕೆ ಬಾಡಿಗೆ ವಾಹನಗಳನ್ನು ತೆಗೆದುಕೊೞಬೇಕಾಗುತ್ತದೆ. ಮುಂಬೈನ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣವು ಇಲ್ಲಿಗೆ ಸಮೀಪದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಇದು ಭಾರತದ ಒಳಗಿನ ಮತ್ತು ಹೊರಗಿನ ನಗರಗಳೊಂದಿಗೆ ಉತ್ತಮ ವಿಮಾನ ಯಾನ ಸಂಪರ್ಕವನ್ನು ಹೊಂದಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri

Near by City