Search
 • Follow NativePlanet
Share
ಮುಖಪುಟ » ಸ್ಥಳಗಳು» ಸೋಲಾಪುರ

ಸೋಲಾಪುರ: ನದಿ ದಡದಲ್ಲಿರುವ ಐತಿಹಾಸಿಕ ತಾಣ

31

ಮಹಾರಾಷ್ಟ್ರ ರಾಜ್ಯದ ಪ್ರಮುಖ ನಗರಗಳಲ್ಲಿ ಸೋಲಾಪುರ ಕೂಡ ಒಂದು. ಇದು ಸೋಲಾಪುರ ಹೆಸರಿನ ಜಿಲ್ಲೆಯ ಕೇಂದ್ರವೂ ಆಗಿದ್ದು, ಒಟ್ಟು 14,850 ಚದರ್‌ ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಒಳಗೊಂಡಿದೆ. ಈ ಜಿಲ್ಲೆಯ ಅಕ್ಕಪಕ್ಕದಲ್ಲೆ ಸಾಕಷ್ಟು ಜನಪ್ರಿಯ ಜಿಲ್ಲೆಗಳಿವೆ. ಉತ್ತರದಲ್ಲಿ ಒಸ್ಮಾನಾಬಾದ್‌ ಹಾಗೂ ಅಹಮದ್‌ನಗರಗಳಿವೆ. ಪಶ್ಚಿಮದಲ್ಲಿ ಸತಾರಾ ಹಾಗೂ ಪುಣೆ ಇದೆ. ದಕ್ಷಿಣ ದಿಕ್ಕಿನಲ್ಲಿ ವಿಜಾಪುರ ಹಾಗೂ ಸಾಂಗ್ಲಿ ಇದ್ದರೆ ಪೂರ್ವದಲ್ಲಿ ಗುಲ್ಬರ್ಗಾ ಜಿಲ್ಲೆಯಿದೆ.

ಸೋಲಾಪುರದ ಒಂದು ನೋಟ

ಸೋಲಾಪುರದಲ್ಲಿ ಸಾಕಷ್ಟು ಜನಪ್ರಿಯ ಅರಸರು ಆಳಿದ್ದಾರೆ. ಇವರಲ್ಲಿ ಚಾಲುಕ್ಯರು, ಯಾದವರು, ಆಂಧ್ರದ ಭಾರತೀಯರು, ರಾಷ್ಟ್ರಕೂಟರು ಹಾಗೂ ಬಹುಮನಿ ಅರಸರು ಪ್ರಮುಖರಾಗಿದ್ದಾರೆ. ಸೋಲಾಪುರ ಜಿಲ್ಲೆಯನ್ನು ಬಹುಮನಿ ಅರಸರು ತಮ್ಮ ವಶಕ್ಕೆ ತೆಗೆದುಕೊಂಡನಂತರ ಅಲ್ಲಿ ರಾಜ್ಯಭಾರವನ್ನು ಬಿಜಾಪುರ ಅರಸರು ಮಾಡಿದರು. ಇದು ನಂತರದ ದಿನಗಳಲ್ಲಿ ಮರಾಠಾ ಅರಸರ ಆಳ್ವಿಕೆಗೆ ಹಸ್ತಾಂತರವಾಯಿತು. ಮುಂದೆ ಪೇಶ್ವೆಗಳ ಹಿಡಿತಕ್ಕೆ ಬಂದ ಈ ಪ್ರದೇಶವನ್ನು ಬ್ರಿಟೀಷರು 1818 ರಲ್ಲಿ ಆವರಿಸಿಕೊಂಡು ಪ್ರಭುತ್ವ ಸಾಧಿಸಿದರು. ಅಂದಿನ ಅಹಮದ್‌ನಗರ ಜಿಲ್ಲೆಯ ಉಪ ವಿಭಾಗವಾಗಿ ಕಾರ್ಯನಿರ್ವಹಿಸಿತ್ತು. ಇತ್ತೀಚಿನ ವರ್ಷದಲ್ಲಿ ಅಂದರೆ 1960 ರಲ್ಲಿ ಸೋಲಾಪುರವು ಮಹಾರಾಷ್ಟ್ರ ರಾಜ್ಯದ ಒಂದು ಪ್ರತ್ಯೇಕ ಜಿಲ್ಲೆಯಾಗಿ ಪ್ರತ್ಯೇಕ ಅಸ್ಥಿತ್ವ ಪಡೆದುಕೊಂಡಿತು. ಸಿನಾ ನದಿಯ ದಡದಲ್ಲಿ ವ್ಯಾಪಿಸಿಕೊಂಡಿರುವ ಸೋಲಾಪುರವು ಮಹಾರಾಷ್ಟ್ರದ ಜೈನ ಸಮೂದಾಯದವರ ಕೇಂದ್ರವಾಗಿ ಗುರುತಾಗಿದೆ. ಇತಿಹಾಸ ತಜ್ಞರ ಪ್ರಕಾರ ಈ ಜಿಲ್ಲೆಗೆ ಈ ಹೆಸರು 'ಸೋಲಾ' ಹಾಗೂ 'ಪುರ' ಎಂಬ ಎರಡು ಶಬ್ಧಗಳಿಂದ ಬಂದಿದೆ. ಇದರ ಹಿಂದಿ ಅರ್ಥ '16 ಹಳ್ಳಿಗಳು' ಎಂದಾಗುತ್ತದೆ. ಇತರೆ ಮೂಲಗಳ ಪ್ರಕಾರ ಸೋಲಾಪುರವನ್ನು ಮೂಲತಃ 'ಸಂದಲಪುರ' ಎಂದು ಕರೆಯಲಾಗುತ್ತಿತ್ತಂತೆ. ಅದೂ ಮುಸ್ಲಿಂರ ಆಳ್ವಿಕೆ ಇಲ್ಲಿದ್ದ ಸಂದರ್ಭದಲ್ಲಿ. ಅದೆ ಪರಿವರ್ತನೆಗೊಂಡು ಸೋಲಾಪುರ ಆಗಿದೆ ಎನ್ನಲಾಗುತ್ತದೆ. ಅದೇನೆ ಇರಲಿ ಈ ಪ್ರದೇಶವನ್ನು ಬ್ರಿಟೀಷರು ತಮ್ಮ ವಶಕ್ಕೆ ತೆಗೆದುಕೊಂಡ ನಂತರ ಈ ಶಬ್ಧದಲ್ಲಿನ 'ನ' ಕಾರವನ್ನು ತೆಗೆದು 'ಸೋಲಾಪುರ' ಎಂದು ಕರೆಯಲಾರಂಭಿಸಿದರು. ಮಹಾರಾಷ್ಟ್ರದ ಎರಡು ಪ್ರಮುಖ ನಗರಿಗೆ ಇದು ಅತ್ಯಂತ ಸಮೀಪದಲ್ಲಿದೆ. ರಾಜ್ಯದ ರಾಜಧಾನಿ ಮುಂಬಯಿಗೆ 400 ಕಿ.ಮೀ. ಹಾಗೂ ಪುಣೆಗೆ 245 ಕಿ.ಮೀ. ದೂರದಲ್ಲಿದೆ.

ಸೋಲಾಪುರ - ಆಕರ್ಷಣೆಯ ಕೇಂದ್ರ

ದೇಶದ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಪಂಢರಾಪುರ ಇಲ್ಲಿನ ಪ್ರಮುಖ ಆಕರ್ಷಣೆ. ದೇಶದಲ್ಲೆ ಅತ್ಯಂತ ಜನಪ್ರಿಯ ಧಾರ್ಮಿಕ ಕೇಂದ್ರಗಳಲ್ಲೊಂದಾಗಿರುವ ಈ ತಾಣವು ದೇವ ವಿಠೋಬ ಸ್ವಾಮಿಯ ಆಲಯವಾಗಿದೆ. ಇಲ್ಲಿನ ಪ್ರಮುಖ ಆಚರಣೆಗಳು ಕಾರ್ತೀಕಿ ಹಾಗೂ ಆಷಾಢಿ ಏಕಾದಶಿ. ಈ ಸಮಯದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಇಲ್ಲಿ ಸೇರುತ್ತಾರೆ. ಒಂದು ಅಂದಾಜಿನ ಪ್ರಕಾರ, ಈ ಸಮಯದಲ್ಲಿ ಇಲ್ಲಿ ಐದು ಲಕ್ಷ ಭಕ್ತರು ಆಗಮಿಸುತ್ತಾರೆ ಎನ್ನಲಾಗಿದೆ.

ಅಕ್ಕಲಕೋಟೆ ಇಲ್ಲಿನ ಇನ್ನೊಂದು ಪ್ರಮುಖ ಧಾರ್ಮಿಕ ಕೇಂದ್ರ. ಇದು ಸೋಲಾಪುರಕ್ಕೆ ಅತ್ಯಂತ ಸಮೀಪದಲ್ಲಿದೆ. ಈ ಕೇಂದ್ರವು ಶ್ರೀ ದತ್ತಾತ್ರೇಯ ಸ್ವಾಮಿಯ ಅವತಾರವಾದ ಶ್ರೀ ಸ್ವಾಮಿ ಸಮರ್ಥ ಮಹಾರಾಜರಿಗೆ ಮೀಸಲಿರುವ ಶ್ರೀಕ್ಷೇತ್ರವಾಗಿದೆ. ಇಲ್ಲಿಯೆ ವಠವೃಕ್ಷ ದೇವಾಲಯ ಕೂಡ ಇದ್ದು ನೋಡಲೇಬೇಕಾದ ಸ್ಥಳವಾಗಿದೆ. ಇದು ಸ್ವಾಮಿ ಮಠದ ಒಂದು ಭಾಗವೇ ಆಗಿದೆ. ತುಳಜಾ ಭವಾನಿ ದೇವಿಯ ದೇವಾಲಯ ಇಲ್ಲಿನ ತುಳಜಾಪುರದಲ್ಲಿದೆ. ಇದಕ್ಕೆ ಇಲ್ಲಿ ಇನ್ನೂ ಸಾಕಷ್ಟು ದೇವಾಲಯಗಳು ಸೇರ್ಪಡೆ ಆಗುತ್ತವೆ. ಸಾಕಷ್ಟು ಧಾರ್ಮಿಕ ಕೇಂದ್ರಗಳನ್ನು ಹೊಂದಿರುವ ಸೋಲಾಪುರ ಪ್ರಸಿದ್ಧಿ ಪಡೆದಿದೆ.

ಸಿದ್ದೇಶ್ವರ ದೇವಾಲಯ ಇನ್ನೊಂದು ಆಕರ್ಷಣೆ. ಕೆರೆಯ ಮಧ್ಯದಲ್ಲಿರುವ ಈ ದೇವಾಲಯ ನೋಡಲು ಆಕರ್ಷಕವಾಗಿದೆ. ಬುಯ್‌ಕೋಟ್‌ ಕೋಟೆ ಮತ್ತೊಂದು ಆಕರ್ಷಣೀಯ ತಾಣ. ಇತಿಹಾಸ ಪ್ರೇಮಿಗಳಿಗೆ ಇದು ಅತ್ಯಂತ ಮುದನೀಡುವ ಮಾಹಿತಿಯೋಗ್ಯ ತಾಣ.

ಮೋಟಿಬಾಗ್‌ ಟ್ಯಾಂಕ್‌ ಪ್ರಸಿದ್ಧ ತಾಣವಾಗಿದ್ದು, ಪಕ್ಷಿ ವೀಕ್ಷಣೆಗೆ ಪ್ರಶಸ್ತವಾಗಿದೆ. ಚಳಿಗಾಲದ ಸಂದರ್ಭದಲ್ಲಿ ಸಾವಿರಾರು ವಲಸೆ ಹಕ್ಕಿಗಳು ಇಲ್ಲಿ ಬಂದು ಜಮಾಯಿಸಿರುತ್ತವೆ. ಈ ಟ್ಯಾಂಕ್‌ ಸಮೀಪವೇ ರೇವಣಸಿದ್ದೇಶ್ವರ ದೇವಾಲಯ ಕೂಡ ಇದೆ. ದೇಶದ ಇನ್ನೊಂದು ಪ್ರಸಿದ್ಧ ಹಾಗೂ ಜನಪ್ರಿಯ ತಾಣ ನಾನಾಜ್‌ ಆಗಿದೆ. ಗ್ರೇಟ್‌ ಇಂಡಿಯನ್‌ ಬಸ್ಟರ್ಡ್ ಪಕ್ಷಿಧಾಮದ ಜತೆ ಅನೇಕ ವಿಧದ ವನ್ಯಜೀವಿ ವೀಕ್ಷಣೆಗೆ ಹೇಳಿ ಮಾಡಿಸಿದ ತಾಣ ಇದಾಗಿದೆ.

ಗ್ರೌಂಡ್‌ ಕೋಟೆ, ಮಲ್ಲಿಕಾರ್ಜುನ ದೇವಾಲಯ, ಆದಿನಾಥ ದೇಗುಲ, ಸಾಕಷ್ಟು ಮಸೀದಿ ಹಾಗೂ ಚರ್ಚ್ ಗಳು ಇಲ್ಲಿವೆ. ಈ ಸ್ಥಳಗಳಿಗೆ ಭೇಟಿ ನೀಡಿದಾಗ ಇಲ್ಲಿನ ಇನ್ನಷ್ಟು ವಾಸ್ತುಶಿಲ್ಪ ಪ್ರೌಢಿಮೆಯ ಪರಿಚಯ ಆಗುವುದರಲ್ಲಿ ಸಂಶಯವಿಲ್ಲ.

ಸೋಲಾಪುರ - ಸಂಸ್ಕೃತಿ ಹಾಗೂ ನಾಗರಿಕರು

ಭೇಟಿ ನೀಡಲು ಅತ್ಯುತ್ತಮ ತಾಣವಾಗಿ ಮಾತ್ರ ಸೋಲಾಪುರ ಜನಪ್ರಿಯವಾಗಿಲ್ಲ. ಇದು ಅತ್ಯುತ್ತಮ ವಾಸ ಹಾಗೂ ಕಾರ್ಯನಿರ್ವಹಿಸಲು ಅಗತ್ಯ ಸೌಲಭ್ಯ ಹೊಂದಿದ ಪ್ರದೇಶವೂ ಆಗಿದೆ. ಮರಾಠಿ, ಕನ್ನಡ ಹಾಗೂ ತೆಲುಗು ಇಲ್ಲಿನ ವ್ಯಾವಹಾರಿಕ ಭಾಷೆಗಳಾಗಿದ್ದು ವಿವಿಧ ಸಂಸ್ಕೃತಿಯ ನಾಗರಿಕರು ವಾಸವಾಗಿದ್ದಾರೆ. ಬಹು ಸಂಸ್ಕೃತಿ ಹಾಗೂ ಭಾಷೆಯ ಮಿಲನ ಇಲ್ಲಾಗಿದೆ. ಸೋಲಾಪುರವು ಶಿವಯೋಗಿ ವಲಯವಾಗಿಯೂ ಗುರುತಿಸಿಕೊಂಡಿದೆ. ವರ್ಷದ ಎಲ್ಲಾ ದಿನವೂ ಇಲ್ಲಿಗೆ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿ ತೆರಳುತ್ತಾರೆ. ವರ್ಷದ ಎಲ್ಲಾ ದಿನವೂ ಇದು ಜನರಿಂದ ತುಂಬಿರುವ ಜಿಲ್ಲೆಯಾಗಿದೆ. ಶಾಂತ ಸ್ವಭಾವದ ಇಲ್ಲಿನ ನಿವಾಸಿಗಳು ಸಹನಾಶೀಲರಾಗಿದ್ದು, ಸಹಕಾರ ಮನೋಭಾವ ಉಳ್ಳವರಾಗಿದ್ದಾರೆ. ಜಿಲ್ಲೆಯು ಚಿಕ್ಕ ಹಾಗೂ ಅತ್ಯಂತ ವಿಶಾಲವಲ್ಲದ ಸುಸಜ್ಜಿತ ಪಟ್ಟಣಗಳ ಸಮೂಹವನ್ನು ಒಳಗೊಂಡಿದೆ. ವಾಣಿಜ್ಯ ಹಾಗೂ ಪ್ರವಾಸಿ ಹಬ್‌ ಆಗಿ ಇವು ಪರಿವರ್ತನೆಗೊಂಡಿವೆ. ನಗರವು ದೇಶದ ಮೊದಲ ನಗರಸಭೆಯಾಗಿದ್ದು, ಬಹು ಕೈಗಾರಿಕೆ ಹಾಗೂ ಬಹು ಸೌಲಭ್ಯ ಒಳಗೊಂಡ ತಾಣಗಳಾಗಿವೆ.

ದೇವಾಲಯಗಳ ತವರಾಗಿರುವ ಸೋಲಾಪುರದಲ್ಲಿ ವರ್ಷದ ಎಲ್ಲಾ ಸಮಯದಲ್ಲೂ ಉತ್ಸವಗಳು, ಹಬ್ಬಗಳು ನಡೆಯುತ್ತಲೆ ಇರುತ್ತವೆ. ಇಲ್ಲಿನ ನಿವಾಸಿಗಳು ಒಂದಲ್ಲಾ ಒಂದು ಕಾರ್ಯ ಆಯೋಜಿಸುತ್ತಲೆ ಇರುತ್ತಾರೆ. ದೇವಾಲಯಗಳ ಆಗರವಾಗಿರುವ ಸೋಲಾಪುರ ನಾನಾ ಧರ್ಮೀಯರ ಸಮ್ಮಿಲನದಿಂದ ಕಳೆಗಟ್ಟುತ್ತದೆ. ಒಂದೊಂದು ಉತ್ಸವವೂ ಇಲ್ಲಿ ಕೆಲ ದಿನಗಳಕಾಲ ನಡೆಯುತ್ತವೆ. ಹಾಗೂ ಇವುಗಳನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.ಇಲ್ಲಿ ಸಾಕಷ್ಟು ವೇದಿಕೆ ಹಾಗೂ ರಂಗಮಂದಿರಗಳಿವೆ. ಇವು ಜನರ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವ ಕಾರ್ಯವನ್ನು ಯಶಸ್ವಿಯಾಗಿ ಮಾಡಿಕೊಂಡು ಬಂದಿವೆ. ಜಾನಪದ ಕಲೆಯನ್ನು ಉಳಿಸುವ ಕಾರ್ಯವನ್ನು ಇಲ್ಲಿನ ವೇದಿಕೆ ಹಾಗೂ ರಂಗಮಂದಿರಗಳು ಮಾಡಿಕೊಂಡು ಬಂದಿವೆ. ಇಲ್ಲಿಗೆ ಪ್ರವಾಸಿಗರಾಗಿ ಆಗಮಿಸಿದವರು ಕೂಡ ಈ ಆಚರಣೆ, ಉತ್ಸವಗಳಲ್ಲಿ ಒಂದಾಗಿ ಪಾಲ್ಗೊಳ್ಳುತ್ತಾರೆ. ಬಂದವರಿಗೆ ಈ ಆಚರಣೆಗಳು ಇನ್ನಷ್ಟು ಮುದ ನೀಡುತ್ತವೆ.

ಇನ್ನಷ್ಟು ಸತ್ಯಗಳು

ಸೋಲಾಪುರದಲ್ಲಿ ಉತ್ತಮ ಹಾಗೂ ಪರಿವರ್ತನೆಗೊಳ್ಳುವ ಹವಾಮಾನ ಸ್ಥಿತಿ ಇದೆ. ಬೇಸಿಗೆ ಕಾಲದಲ್ಲಿ ಇಲ್ಲಿ ಅತಿ ಹೆಚ್ಚು ಉಷ್ಣಾಂಶ ಇರುತ್ತದೆ. ಅಂದರೆ ಈ ಪ್ರಮಾಣ 40 ರಿಂದ 42 ಡಿಗ್ರಿ ಸೆಲ್ಶಿಯಸ್‌ವರೆಗೂ ಆಗುತ್ತದೆ. ಮೇ ತಿಂಗಳು ಇಲ್ಲಿನ ಅತ್ಯಂತ ಉಷ್ಣತೆಯಿಂದ ಕೂಡಿದ ಮಾಸವಾಗಿದೆ. ಈ ಸಮಯದಲ್ಲಿ ಪ್ರವಾಸಿಗರಿಗೆ ಇತ್ತ ಬರುವುದು ಉಚಿತವಲ್ಲ ಎಂದು ತಿಳಿಸಲಾಗುತ್ತದೆ. ಏಕೆಂದರೆ ಇಲ್ಲಿ ಬಂದವರಿಗೆ ಇಲ್ಲಿನ ಸೆಖೆ ಬೇಸರ ಮೂಡಿಸುತ್ತದೆ. ಇಲ್ಲಿನ ಬಹುತೇಕ ಭಾಗದಲ್ಲಿ ಉರಿವ ಸೂರ್ಯ ಗೋಳು ಹೊಯ್ದುಕೊಳ್ಳುತ್ತಾನೆ. ಮಳೆಗಾಲ ಇಲ್ಲಿಗೆ ಬರಲು ಅತ್ಯಂತ ಪ್ರಶಸ್ತ ಸಮಯ. ಮಳೆ ಬಿದ್ದು ಬೇಸಿಗೆ ತೊಳೆದುಹೋಗಿರುತ್ತದೆ. ತಾಜಾತನದ ಆಹ್ಲಾದವನ್ನು ಈ ಸಮಯವು ಜನರಿಗೆ ನೀಡುತ್ತದೆ. ಇನ್ನು ಇಲ್ಲಿನ ತಾಪಮಾನದಲ್ಲಿ ಗರಿಷ್ಠ ಇಳಿಕೆ ಕಾಣಿಸುವುದು ಚಳಿಗಾಲದಲ್ಲಿ. ಸುಮಾರು ಜನವರಿ ತಿಂಗಳ ಹೊತ್ತಿಗೆ ಇಲ್ಲಿನ ತಾಪಮಾನ 9 ಡಿಗ್ರಿ ಸೆಲ್ಶಿಯಸ್‌ ಆಸುಪಾಸು ಇರುತ್ತದೆ. ಸ್ಥಳ ವೀಕ್ಷಣೆ ಹಾಗೂ ಇತರೆ ಚಟುವಟಿಕೆಗೆ ಇದು ಸೂಕ್ತ ಸಮಯ. ಸುತ್ತಾಡಲು, ಅತ್ಯಾಕರ್ಷಕ ತಾಣಗಳಿಗೆ ಭೇಟಿ ನೀಡಿ ಬರಲು ಇದು ಸಕಾಲ.

ರಸ್ತೆ ಹಾಗೂ ರೈಲು ಮಾರ್ಗದ ಮೂಲಕ ಇಲ್ಲಿಗೆ ಆರಾಮವಾಗಿ ತಲುಪಬಹುದು. ಮುಂಬಯಿ - ಹೈದ್ರಾಬಾದ್ ಮಾರ್ಗವಾಗಿ ಈ ಎರಡೂ ಮಾರ್ಗದಲ್ಲೂ ಸಾಕಷ್ಟು ಸಂಪರ್ಕ ಸೇತುವೆ ಉತ್ತಮವಾಗಿದೆ. ಸೋಲಾಪುರ ರೈಲು ನಿಲ್ದಾಣಕ್ಕೆ ಸಾಕಷ್ಟು ಕಡೆಗಳಿಂದ ಉತ್ತಮ ಸಂಪರ್ಕವಿದೆ. ರಾಜ್ಯದ ಹಾಗೂ ದೇಶದ ನಾನಾ ಕಡೆಗಳಿಂದ ಇಲ್ಲಿಗೆ ರೈಲುಗಳು ಬರುತ್ತವೆ. ಸೋಲಾಪುರಕ್ಕೆ ಆಗಮಿಸುವವರಿಗೆ ಸೋಲಾಪುರ ರೈಲು ಮಾರ್ಗ ಪ್ರಶಸ್ತವಾಗಿದೆ. ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಷಟಲ್‌ ಬಸ್‌ ಸೇವೆ ಈ ಭಾಗಕ್ಕೆ ಉತ್ತಮವಾಗಿದೆ. ಖಾಸಗಿ ಟೂರಿಸ್ಟ್‌ ಸಂಸ್ಥೆಯ ವಾಹನಗಳೂ ಇಲ್ಲಿ ಲಭ್ಯವಿರುತ್ತವೆ. ಇವುಗಳಲ್ಲಿ ಸಾಗುವುದು ಸುಗಮ ಮಾತ್ರವಲ್ಲ, ಆರ್ಥಿಕವಾಗಿಯೂ ಅನುಕೂಲಕರವಾಗಿರುತ್ತದೆ.

ಸೋಲಾಪುರ ಜಿಲ್ಲೆಯು ಮ್ಯಾಟ್ರೆಸ್‌, ವಿದ್ಯುತ್‌ ಮಗ್ಗ, ಕೈಮಗ್ಗ ಹಾಗೂ ಬೀಡಿ ಕೈಗಾರಿಕೆಗೆ ಅತ್ಯಂತ ಪ್ರಸಿದ್ಧವಾಗಿದೆ. ವರ್ಷದಿಂದ ವರ್ಷಕ್ಕೆ ಈ ಧಾರ್ಮಿಕ ನಗರಿಯು ಬೆಳೆಯುತ್ತಲೆ ಸಾಗಿದೆ. ಇಲ್ಲಿನ ಸ್ಥಳಗಳು ಸೃಜನಾತ್ಮಕವಾಗಿ, ಧಾರ್ಮಿಕವಾಗಿ, ಐತಿಹಾಸಿಕವಾಗಿ, ನೈಸರ್ಗಿಕವಾಗಿ, ವಾಣಿಜ್ಯ ದೃಷ್ಟಿಯಿಂದ ಹಾಗೂ ಮನರಂಜನೆ ದೃಷ್ಟಿಯಿಂದ ಅತ್ಯಂತ ಸಮೃದ್ಧವಾಗಿವೆ. ಇಲ್ಲಿಗೆ ಭೇಟಿ ನೀಡಿದಾಗ ಇದು ಎಲ್ಲರಿಗೂ ಅರಿವಾಗುತ್ತದೆ. ಒಮ್ಮೆ ಇಲ್ಲಿಗೆ ಭೇಟಿ ನೀಡಿದವರಿಗೆ ಇಲ್ಲಿನ ವೈಶಿಷ್ಟ್ಯ ಅರಿವಾಗುತ್ತದೆ. ಇಲ್ಲಿರುವಷ್ಟೂ ಹೊತ್ತು ನಿಮ್ಮನ್ನೇ ನೀವು ಮರೆಯುತ್ತೀರಿ.

ಸೋಲಾಪುರ ಪ್ರಸಿದ್ಧವಾಗಿದೆ

ಸೋಲಾಪುರ ಹವಾಮಾನ

ಸೋಲಾಪುರ
33oC / 92oF
 • Partly cloudy
 • Wind: NNW 24 km/h

ಉತ್ತಮ ಸಮಯ ಸೋಲಾಪುರ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಸೋಲಾಪುರ

 • ರಸ್ತೆಯ ಮೂಲಕ
  ರಸ್ತೆ ಸಂಪರ್ಕ ಸೋಲಾಪುರಕ್ಕೆ ಅತ್ಯಂತ ಸುಗಮವಾಗಿದೆ. ಮಹಾರಾಷ್ಟ್ರ ರಾಜ್ಯದ ಎಲ್ಲೆಡೆಯಿಂದ ಇಲ್ಲಿಗೆ ಸಂಪರ್ಕವಿದೆ. ಮುಂಬೈನಿಂದ 450 ಕಿ.ಮೀ. ದೂರದಲ್ಲಿರುವ ಸೋಲಾಪುರಿಗೆ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಖಾಸಗಿ ಬಸ್‌ ಸೌಲಭ್ಯ ಅತ್ಯುತ್ತಮವಾಗಿದೆ. ಶಟಲ್‌ ಸೇವೆಯೂ ಸೋಲಾಪುರಕ್ಕೆ ಉತ್ತಮವಾಗಿದೆ. ಪುಣೆ, ಅಹ್ಮದಾಬಾದ್‌, ನಾಗಪುರ ಮತ್ತಿತರ ನಗರದಿಂದಲೂ ಬಸ್‌ಗಳಿವೆ. ಪುಣೆ ಕೂಡ ಸೋಲಾಪುರದಿಂದ 250 ಕಿ.ಮೀ. ದೂರದಲ್ಲಿದೆ. ರಸ್ತೆ ಸಂಪರ್ಕ ಎಲ್ಲಾ ಕಡೆಗಳಿಂದಲೂ ಉತ್ತಮವಾಗಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ರೈಲು ಸಂಪರ್ಕ ಸೋಲಾಪುರಕ್ಕೆ ಅತ್ಯುತ್ತಮವಾಗಿದೆ. ಎಲ್ಲಾ ನಗರ, ಪಟ್ಟಣ ಹಾಗೂ ರಾಜ್ಯದಿಂದ ಇಲ್ಲಿಗೆ ಉತ್ತಮ ಸಂಪರ್ಕವಿದೆ. ಸ್ಥಳೀಯ ಹಾಗೂ ಹೊರ ರಾಜ್ಯದ ರೈಲುಗಳು ನಿರಂತರವಾಗಿ ಆಗಮಿಸುತ್ತವೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಸೋಲಾಪುರ ವಿಮಾನ ನಿಲ್ದಾಣವು ಪ್ರವಾಸಿಗರಿಗೆ ಆಗಮಿಸಲು ಅತ್ಯಂತ ಉತ್ತಮ ನಿಲ್ದಾಣವಾಗಿ ಲಭಿಸಿದೆ. ನಗರದ ದಕ್ಷಿಣ ಭಾಗದಲ್ಲಿರುವ ಈ ನಿಲ್ದಾಣ ದೇಶೀಯ ಮಟ್ಟದ ಸಂಪರ್ಕವನ್ನು ಹೊಂದಿದೆ. ಅನ್ಯ ರಾಷ್ಟ್ರದವರು ಆಗಮಿಸಲು ಮುಂಬಯಿಯ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೂಕ್ತ ತಾಣ. ಸೋಲಾಪುರಕ್ಕೆ ಅಂತಾರಾಷ್ಟ್ರೀಯ ಸಂಪರ್ಕವನ್ನು ಇದು ಕಲ್ಪಿಸುತ್ತದೆ. ಈ ಮೂಲಕ ಎಲ್ಲಾ ನಗರ, ಪಟ್ಟಣ ಹಾಗೂ ರಾಜ್ಯದಿಂದ ಆಗಮಿಸುವವರಿಗೆ ಈ ನಿಲ್ದಾಣ ಉತ್ತಮ ಸಂಪರ್ಕ ಸೇತುವಾಗಿದೆ.
  ಮಾರ್ಗಗಳ ಹುಡುಕಾಟ

ಸೋಲಾಪುರ ಲೇಖನಗಳು

One Way
Return
From (Departure City)
To (Destination City)
Depart On
18 Jun,Tue
Return On
19 Jun,Wed
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
18 Jun,Tue
Check Out
19 Jun,Wed
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
18 Jun,Tue
Return On
19 Jun,Wed
 • Today
  Solapur
  33 OC
  92 OF
  UV Index: 9
  Partly cloudy
 • Tomorrow
  Solapur
  32 OC
  90 OF
  UV Index: 9
  Sunny
 • Day After
  Solapur
  32 OC
  89 OF
  UV Index: 9
  Partly cloudy

Near by City