Search
  • Follow NativePlanet
Share
ಮುಖಪುಟ » ಸ್ಥಳಗಳು » ಸೋಲಾಪುರ » ಆಕರ್ಷಣೆಗಳು » ನಲದುರ್ಗ

ನಲದುರ್ಗ, ಸೋಲಾಪುರ

1

ಸೋಲಾಪುರದಿಂದ 45 ಕಿ.ಮೀ. ದೂರದಲ್ಲಿದೆ ನಲದುರ್ಗ ಕೋಟೆ. ಇದೊಂದು ಐತಿಹಾಸಿಕ ತಾಣ. ಇದು ಮಹಾರಾಷ್ಟ್ರ ರಾಜ್ಯದ ಒಸ್ಮಾನಾಬಾದ್‌ ಜಿಲ್ಲೆಯ ವ್ಯಾಪ್ತಿಗೆ ಒಳಪಡುತ್ತದೆ. ಈ ಕೋಟೆ ಹಿಂದೆ ಯೆರಲ್‌ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಆ ಸಂದರ್ಭದಲ್ಲಿ ಇದು ಬಹುಮನಿ ಸುಲ್ತಾನರ ಹಿಡಿತದಲ್ಲಿತ್ತು. ನಂತರ ಮುಘಲರ ಆಳ್ವಿಕೆಗೆ ಒಳಪಟ್ಟಿತು.

ಈ ಕೋಟೆಯ ಭಾಗವು ಅತ್ಯಂತ ಜನಪ್ರಿಯವಾಗಿರುವುದಕ್ಕೆ ಇಲ್ಲಿನ ಜಲಪಾತ ಕಾರಣ. ಇದನ್ನು ನರ ಮುಡಿ ಎಂದು ಕರೆಯಲಾಗುತ್ತದೆ. ಇಲ್ಲಿ ನರ ಶಬ್ಧವು ಪುರುಷ ಅಂತಲೂ ಮುಡಿ ಶಬ್ಧವು ಸ್ತ್ರೀ ಅಂತಲೂ ಇಲ್ಲಿನ ಸ್ಥಳೀಯ ಭಾಷೆಯಲ್ಲಿ ಪರಿಗಣಿಸಲಾಗುತ್ತದೆ. ಈ ಜಲಪಾತದ ವಿಹಂಗಮ ನೋಟ ಸವಿಯಬೇಕೆಂದರೆ ಅದು ಮಳೆಗಾಲದಲ್ಲಿ ಸಾಧ್ಯ. ಅಲ್ಲದೆ ಮಳೆಗಾಲ ಮುಗಿದ ತಕ್ಷಣದಲ್ಲಿ ಬಂದರೂ ಅತ್ಯುತ್ತಮ ನೋಟ ಸವಿಯಬಹುದು. ಬೃಹತ್‌ ಬೆಟ್ಟ ಗುಡ್ಡಗಳ ನಡುವಿನಿಂದ ಹರಿದು ಬಂದು ಹಸಿರು ಪರಿಸರದಲ್ಲಿ ಪರ್ವತವನ್ನೇ ಸೀಳಿಕೊಂಡು ಧಾರೆಯಾಗಿ ನೆಲಕ್ಕುರುಳುವ ನೀರನ್ನು ನೋಡುವುದು ಮಹದಾನಂದ. ಈ ಕೋಟೆಯು ಕೂಡ ಒಂದು ಐತಿಹಾಸಿಕ ಪ್ರಸಿದ್ಧ ತಾಣ. ಇಂಡೊ-ಇಸ್ಲಾಮಿಕ್‌ ಶೈಲಿಯ ವಾಸ್ತುಶಿಲ್ಪದಲ್ಲಿ ಇದು ನಿರ್ಮಾಣಗೊಂಡಿದೆ. ಈ ವಾಸ್ತುಶಿಲ್ಪವು ಅತ್ಯಂತ ವಿಭಿನ್ನ ಹಾಗೂ ಅಪರೂಪದ್ದಾಗಿದ್ದು ಇದನ್ನು ವೀಕ್ಷಿಸಲೆಂದೆ ಹಲವರು ಬರುತ್ತಾರೆ. ಮಹಾರಾಷ್ಟ್ರದ ಅತ್ಯಂತ ಪ್ರಸಿದ್ಧ ತಾಣಗಳಲ್ಲಿ ಇದೂ ಒಂದೆನಿಸಿದೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed