Search
  • Follow NativePlanet
Share
ಮುಖಪುಟ » ಸ್ಥಳಗಳು » ಸೋಲಾಪುರ » ಆಕರ್ಷಣೆಗಳು » ಗೋಲ್‌ ಗುಂಬಜ್

ಗೋಲ್‌ ಗುಂಬಜ್, ಸೋಲಾಪುರ

1

ಗೋಲ್‌ ಗುಂಬಜ್ (ಗುಮ್ಮಟ), ಸೋಲಾಪುರಕ್ಕೆ ಅತಿ ಸನೀಹದಲ್ಲಿರುವ ಕರ್ನಾಟಕದ ಬಿಜಾಪುರದ ಜಿಲ್ಲೆಯಲ್ಲಿ ಕಂಡುಬರುತ್ತದೆ. ಇದು ಸೋಲಾಪುರ ಪಟ್ಟಣದಿಂದ 100 ಕಿ.ಮೀ. ದೂರದಲ್ಲಿದೆ. ಭಾರತೀಯ ಸನಾತನ ಸಂಸ್ಕೃತಿಗೆ ಈ ಭಾಗದ ಕೊಡುಗೆ ಅಪಾರವಾಗಿದೆ. ಗೋಲ್‌ ಗುಂಬಜ್ ಎಂಬ ಶಬ್ಧ 'ರೋಸ್‌ ಡೋಮ್‌' ಎಂಬ ಭಾವಾನುವಾದದ ರೂಪವಾಗಿದ್ದು ಗುಲಾಬಿ ಹೂವು ಹಾಗು ಕಮಲದ ದಳಗಳಿಂದ ಪ್ರೇರಿತಗೊಂಡಿದೆ. ಏಕೆಂದರೆ ಇದರ ನಿರ್ಮಾಣವೂ ಅದೇ ರೀತಿಯಲ್ಲಿರುವುದರಿಂದ. ಡೂಮ್‌ ಸುತ್ತ ಗುಲಾಬಿ ಅಥವಾ ಕಮಲದ ಹೂವಿನ ದಳಗಳು ಮುತ್ತಿಕೊಂಡಂತೆ ನಿರ್ಮಿಸಲಾಗಿದೆ. ದೂರದಿಂದ ನೋಡಿದಾಗ ಇದೊಂದು ಹೂವಿನಂತೆಯೇ ಕಂಡು ಬರುತ್ತದೆ. ಇದು ಮೂಲತಃ ಬಿಜಾಪುರದ ಅರಸು ಮೊಹಮ್ಮದ್‌ ಆದಿಲ್‌ ಷಾ ನ ನೆನಪಿಗಾಗಿ ನಿರ್ಮಿಸಲಾಗಿರುವ ಭವ್ಯ ಸಮಾಧಿಯಾಗಿದೆ. 1656 ರಲ್ಲಿ ಇದನ್ನು ಆ ಕಾಲದ ಜನಪ್ರಿಯ ವಾಸ್ತುಶಿಲ್ಪಿ ಯಾಕುತ್‌ ಆಫ್‌ ದಾಬುಲ್‌ ನಿರ್ಮಿಸಿದ ಎಂದು ಹೇಳಲಾಗುತ್ತದೆ.

ಈ ನಿರ್ಮಾಣವು 18 ಸಾವಿರ ಚದರ್‌ ಅಡಿ ವಿಸ್ತಾರದ ಪ್ರದೇಶ ಆವರಿಸಿದೆ. ವಿಶ್ವದಲ್ಲೆ ಅತಿ ಹೆಚ್ಚು ಸ್ಥಳಾವಕಾಶ ಒಳಗೊಂಡ ಲಕ್ಸುರಿ ತಾಣ ಇದೆಂದು ಬಿಂಬಿತವಾಗಿದೆ. ಈ ಸ್ಮಾರಕದ ಒಳಗೆ ಒಂದು ವಿಸ್ತಾರವಾದ ಗ್ಯಾಲರಿ ಕೂಡ ಇದೆ. ಎಷ್ಟೊಂದು ಅತ್ಯಾಕರ್ಷಕವಾಗಿ ಇದನ್ನು ರಚಿಸಲಾಗಿದೆ ಎಂದರೆ ಎಷ್ಟೇ ಚಿಕ್ಕದಾಗಿ ದ್ವನಿ ಅಥವಾ ಸಪ್ಪಳ ಹೊರಡಿಸಿದರೂ ಅದು ಇನ್ನೊಂದು ಗೋಡೆಗೆ ಬಡಿದು ಪ್ರತಿಧ್ವನಿಸುತ್ತದೆ. ಈ ತರಹದ ಒಂದು ಆಕರ್ಷಕ ವಾಸ್ತುಶಿಲ್ಪ ಮಾದರಿಯನ್ನು ಹಾಗೂ ಪ್ರೌಢಿಮೆಯನ್ನು ಈ ಸ್ಮಾರಕ ಒದಗಿಸುತ್ತದೆ. ಈ ಕಾರಣದಿಂದಲೂ ಈ ತಾಣ ಜನಪ್ರಿಯವಾಗಿದೆ.ಡೋಮ್‌ನ ವಿನ್ಯಾಸ ಅತ್ಯಾಕರ್ಷಕವಾಗಿದ್ದು, ಒಳ ಹೋಗಿ ನೋಡುವಂತೆ ಮನಸ್ಸಿಗೆ ಪ್ರೇರೆಪಿಸುತ್ತದೆ. ಇದು 'ಸ್ಟ್ರಕ್ಚರಲ್‌ ಟ್ರಂಫ್‌ ಆಫ್‌ ಡೆಕ್ಕನ್‌ ಆರ್ಕಿಟೆಕ್ಚರ್‌' ಎಂಬ ಖ್ಯಾತಿಯನ್ನು ಪಡೆದಿದೆ.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon