ಬಾರಾಮತಿ- ಕೃಷಿ ಪ್ರವಾಸೋದ್ಯಮದ ಒಂದು ಅನುಭವ

ಭಾರತ ಕೃಷಿ ಪ್ರಧಾನ ದೇಶವಾಗಿದ್ದು ಇದು ಭಾರತೀಯರು ಮತ್ತು ಬೇರೆ ಬೇರೆ ಪ್ರವಾಸಿಗರ ಜ್ನಾನ ಮತ್ತು ಅನುಭವದ ಹಸಿವನ್ನು ಇಂಗಿಸುತ್ತದೆ. ಇದೀಗ ಹೊಸದೊಂದು ಪ್ರವಾಸೋದ್ಯಮ ಚಟುವಟಿಕೆ ತಲೆ ಎತ್ತಿದೆ - ಅದೇ ಕೃಷಿ ಪ್ರವಾಸೋದ್ಯಮ. ಕೃಷಿ ಪ್ರವಾಸೋದ್ಯಮ ತೀರಾ ಭಿನ್ನವಾದದ್ದು. ಇದರಲ್ಲಿ ಕೃಷಿ ಭೂಮಿಯಲ್ಲಿ ಓಡಾಟ, ರೈತರೊಂದಿಗೆ ಮಾತುಕತೆ, ರೈತರ ಕಷ್ಟ ಸುಖಗಳನ್ನು ಅರಿತುಕೊಳ್ಳುವುದು, ರೈತರ ಆಹಾರ ಪದ್ದತಿಗಳನ್ನು ತಿಳಿಯುವುದು ಮತ್ತು ಅವುಗಳನ್ನು ತಯಾರಿಸಲು ಕಲಿತುಕೊಳ್ಳುವುದು....ಹೀಗೆ ರೈತರು ಮತ್ತು ಕೃಷಿಗೆ ಸಂಬಂಧಪಟ್ಟ ಎಲ್ಲ ಬಗೆಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದೇ ಕೃಷಿ ಪ್ರವಾಸೋದ್ಯಮ.

ಬಾರಾಮತಿ- ಮಹಾರಾಷ್ಟ್ರದಲ್ಲಿರುವ ಮಧ್ಯಮ ಗಾತ್ರದ ಪಟ್ಟಣವಾಗಿದ್ದು ತನ್ನ ಕೃಷಿ ಉದ್ಯಮದಿಂದಲೆ ಹೆಸರು ಪಡೆದುಕೊಂಡಿದ್ದು, ಕೃಷಿ ಪ್ರವಾಸೋದ್ಯಮದ ಮುಂಚೂಣಿಯಲ್ಲಿದೆ. ಪ್ರಸಿದ್ದ ನಗರ ಪುಣಾದಿಂದ 100 ಕಿಲೋ ಮೀಟರ್ ದೂರದಲ್ಲಿರುವ ಬಾರಾಮತಿಯನ್ನು, ರಸ್ತೆ, ರೈಲು ಮತ್ತು ವಾಯುಯಾನದ ಮೂಲಕ ಸುಲಭವಾಗಿ ತಲುಪಬಹುದಾಗಿದೆ.

ಬಾರಾಮತಿ ಹತ್ತಾರು ಸೌಕರ್ಯಗಳನ್ನು ಹೊಂದಿದ್ದು, ಇಲ್ಲಿ ರುಚಿಕರವಾದ ಪಕ್ಕಾ ಮಹಾರಾಷ್ಟ್ರದ ಸಾಂಪ್ರದಾಯಿಕ ತಿಂಡಿ ತೀರ್ಥಗಳು ಸಿಗುತ್ತವೆ. ನೀವೋಂದಿಷ್ಟು ಸಾಹಸ ಪ್ರಿಯರಾದರೆ, ಗುಂಪು ಕಟ್ಟಿಕೊಂಡು ಕೃಷಿ ಕ್ಷೇತ್ರಕ್ಕೆ ಹೋಗಿ ಅಲ್ಲಿಯೇ ಗ್ರಾಮೀಣ ಸೊಗಡಿನ ಆಹಾರಗಳ ರುಚಿಯನ್ನು ಕೂಡ ನೋಡಬಹುದು. ಅಚ್ಚರಿಯ ವಿಷಯವೆಂದರೆ ಇದು ತೀರಾ ಸರಳ, ಸುಲಭ ಮತ್ತು ಕಡಿಮೆ ಖರ್ಚಿನ ಅನುಭವ. ಇಂಥ ಜೀವಮಾನದ ಅನುಭವಕ್ಕೆ ಬಹಳಷ್ಟು ರೈತರು ಕೇವಲ ನೂರಾರು ರೂಪಾಯಿಯಲ್ಲಿಯೇ ತೃಪ್ತಿ ಕಾಣುತ್ತಾರೆ. ಬಾರಾಮತಿ ಕಬ್ಬು ಬೆಳೆಗೂ ಪ್ರಸಿದ್ದವಾಗಿದ್ದು ಕೃಷಿ ಭೂಮಿಗೆ ಪ್ರವಾಸ ಹೊರಡುವುದು ಇಲ್ಲಿ ಅತ್ಯಗತ್ಯ.

ಬಾರಾಮತಿಯಲ್ಲಿ ವಾಸ್ತವ್ಯ ಹೂಡಲು ಸೂಕ್ತವಾದ ಎರಡು ಹೊಟೇಲುಗಳೆಂದರೆ- ಒಂದು ತಾಜ್- ಸ್ವಲ್ಪ ಮಟ್ಟಿಗೆ ದುಬಾರಿಯೆನಿಸಬಹುದು. ಇನ್ನೊಂದು ಅಮರದೀಪ್- ಆಧುನಿಕ ಸೌಲಭ್ಯಗಳನ್ನು ಹೊಂದಿದ್ದು ಅವುಗಳಿಗೆ ತಕ್ಕ ಬೆಲೆಯಿದೆ.

ಶಾಪಿಂಗ್ ಮಾಡಲು ಇಚ್ಚಿಸುವವರಿಗೆ ಬಾರಾಮತಿಯಲ್ಲಿ ಹತ್ತಾರು ಅವಕಾಶಗಳಿವೆ. ತುಂಬಾ ಕಡಿಮೆ ಹಣಕ್ಕೆ ಅತ್ಯುತ್ತಮ ಗುಣಮಟ್ಟದ ವಸ್ತುಗಳನ್ನು ಮಾರಾಟ ಮಾಡುವ ಗಾರ್ಮೆಂಟ್ ಅಂಗಡಿಗಳು ಇಲ್ಲಿವೆ. ಪಕ್ಕಾ ಸಾಂಪ್ರದಾಯಿಕ ಮಹಾರಾಷ್ಟ್ರ ಸೀರೆ ನಿಮಗಿಲ್ಲಿ ದೊರೆಯುತ್ತದೆ. ಪ್ರವಾಸಿಗರ ಪಾಲಿಗೆ ಇದು  ಪ್ರಸಿದ್ದ ಸೀರೆ. ಜೊತೆಗೆ, ಇಲ್ಲಿರುವ ಹಲವಾರು ಹೊಟೇಲುಗಳು ನೋಡುವುದಕ್ಕೆ ಬಹಳ ಸರಳವೆನಿಸದರೂ ಇಲ್ಲಿ ದೊರೆಯುವ ತಿಂಡಿಗಳು ಮಾತ್ರ ಬಾಯಲ್ಲಿ ನೀರೂರಿಸುವಂತಿರುತ್ತವೆ.

ಆಕಾಶಕ್ಕೇ ಏಣಿ...

ಬಾರಾಮತಿ ಭಿನ್ನವಾದ ಅಪರೂಪದ ಚಟುವಟಿಕೆಗಳ ತಾಣವೂ ಹೌದು. ಹಾರಾಟದ ಉತ್ಸಾಹವುಳ್ಳವರು ಬಾರಾಮತಿ ಏರ್ ಪೋರ್ಟ್ ನಲ್ಲಿ ಗಂಭೀರವಲ್ಲದ ಹವ್ಯಾಸಿ ಹಾರಾಟ ಪಾಠಗಳ ಒಂದು ಕೈ ನೋಡಬಹುದು.  ಹೀಗಾಗಿ ಹಾರಾಟದ ಮೂಲಕ ಆಕಾಶಕ್ಕೆ ಮೆಟ್ಟಿಲು ಹಾಕುವುದಕ್ಕೆ ಮತ್ತು ಎತ್ತಿನಗಾಡಿಯ ಓಟಕ್ಕೆ ಮನಸೋತು ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿನ ಅನುಭವಗಳ ಬುತ್ತಿ ಕಟ್ಟಿಕೊಳ್ಳುವುದಕ್ಕೆ 2-3 ದಿನಗಳು ಸಾಕು.

Please Wait while comments are loading...