ಸಮುದಾಯ ಕೇಂದ್ರದಲ್ಲಿ ಸ್ಥಳೀಯ ಜನರು ತಮ್ಮ ವಾರಾಂತ್ಯದಲ್ಲಿ ಒಂದೆಡೆ ಸೇರಿ ಒಬ್ಬರಿಗೊಬ್ಬರು ಸತ್ಕಾರ ಮಾಡಿಕೊಳ್ಳುತ್ತಾರೆ. ರುಚಿಕರವಾದ ತಿಂಡಿ ತೀರ್ಥಗಳ ಸಮಾರಾಧನೆಯೇ ನಡೆಯುತ್ತದೆ. ಇಲ್ಲಿ ಪಿಜ್ಜಾದಿಂದ ಹಿಡಿದು ಜ್ಯೂಸ್ ವರೆಗೆ ಮಹಾರಾಷ್ಟ್ರದ ಫಾಸ್ಟ್ ಫುಡ್ ಗಳೂ ಮಸಾಲಾ ಪಾವ್ ಮತ್ತು ಸಾಬುದಾನಾ ವಡಾವರೆಗೆ ಇರುತ್ತವೆ.
ಮಧ್ಯಾಹ್ನದ ಹೊತ್ತು ಫ್ಲೈಯಿಂಗ್ ಕ್ಲಬ್ ಅನ್ನೋದು ಬಾರಾಮತಿಯ ನಿಚ್ಚಳವಾದ ಆಕಾಶದಲ್ಲಿ ಹಾರಾಡುವುದಕ್ಕೆ ಬಳಸಿಕೊಳ್ಳಬಹುದಾದ ಸೂಕ್ತ ಸಮಯ. ಖಾಸಗಿ ಕಂಪನಿಗಳು ಇಲ್ಲಿ ಹವ್ಯಾಸಿ ಹಾರಾಟ ಪಾಠಗಳನ್ನು ಹೇಳಿಕೊಡುತ್ತವೆ. ಮೊದಲು ಬಂದವರಿಗೆ ಅವಕಾಶ ಎನ್ನುವ ರೀತಿಯಲ್ಲಿ ಜಾಯ್ ರೈಡಿಂಗ್ ನಡೆಸುತ್ತವೆ. ಭೂಮಿಯಿಂದ ಸುಮಾರು 3000 ಅಡಿ...