Search
 • Follow NativePlanet
Share
ಮುಖಪುಟ » ಸ್ಥಳಗಳು» ಅಂಬಿ ಕಣಿವೆ

ಅಂಬೆ ವ್ಯಾಲಿ - ಒಂದು ಅನನ್ಯ ನೋಟ

7

ವಾರಾಂತ್ಯ ಬಂತೆಂದರೆ ಎಲ್ಲರಿಗೂ ವಿಶ್ರಾಂತಿಯನ್ನು ಪಡೆಯುವ ಅಗತ್ಯವಿರುತ್ತದೆ. ವಾರವಿಡಿ ದುಡಿದು ದಣಿದವರಿಗೆ ಸ್ವಲ್ಪ ಮಟ್ಟಿಗೆ ಬದಲಾವಣೆಯೂ ಬೇಕಾಗುತ್ತದೆ. ಇದಕ್ಕಾಗಿ ಎಲ್ಲರೂ ವಾರಾಂತ್ಯಕ್ಕಾಗಿ ಉತ್ತಮ ಸ್ಥಳಗಳ ಅನ್ವೇಷಣೆಗಳಲ್ಲಿ ತೊಡಗಿರುತ್ತಾರೆ. ಅದರಲ್ಲೂ ಸ್ವಲ್ವ ಸ್ಥಿತಿವಂತರಾಗಿದ್ದರೆ ಪ್ರವಾಸಕ್ಕೂ ಮುಂದಾಗುತ್ತಾರೆ ಅಂತಹ ಸ್ಥಳಗಳು ಭಾರತದಲ್ಲಿ ಸಾಕಷ್ಟಿರುವುದರಿಂದ ನಮ್ಮ ನಮ್ಮ ವಾತಾವರಣದ ಆದ್ಯತೆಯ ಮೇರೆಗೆ ಉತ್ತಮ ಸ್ಥಳಗಳಿಗೆ ಭೇಟಿ ನೀಡಬಹುದು.

ಇಂತಹ ವಾರಾಂತ್ಯದ ನಿಮ್ಮ ಪ್ರಯಾಣವನ್ನು ಹಿತಕರ ಹಾಗೂ ಮೌಲ್ಯಯುತ ವನ್ನಾಗಿ ಮಾಡಬೇಕೆಂದರೆ ಅದಕ್ಕೆ ಅಂಬೆ ವ್ಯಾಲಿ ಅಥವಾ ಕಣಿವೆ ಪಟ್ಟಣವನ್ನು ಪ್ರವೇಶಿಸಬಹುದು. ಇಲ್ಲಿನ ನೈಸರ್ಗಿಕ ಹಾಗೂ ಮಾನವ ನಿರ್ಮಿತ ಪರಿಸರ ಹಾಗೂ ಭೂ ಸನ್ನಿವೇಶಗಳು ಪ್ರವಾಸಿಗರನ್ನು ಮೂಕ ವಿಸ್ಮಿತರನ್ನಾಗಿ ಮಾಡುವುದಷ್ಟೆ ಅಲ್ಲದೆ ನಿಮ್ಮ ಮನಸ್ಸನ್ನೂ ಮರೆ ಮಾಚಿಸುತ್ತವೆ!

ಅಂಬೆ ವ್ಯಾಲಿ – ಒಂದು ಅನನ್ಯ ನೋಟ

ಅಂಬೆ ವ್ಯಾಲಿ ಮೂಲಭೂತವಾಗಿ 'ಸಹಾರಾ ಗ್ರುಪ್' ನ ಯೋಚನೆಯ ಫಲ. ಯಾವಾಗಿನಿಂದ ಈ ಕಲ್ಪನೆಯನ್ನು ಪ್ರಸ್ತಾಪಿಸಲಾಯಿತೋ ಅಂದಿನಿಂದ ಹಲವಾರು ಪ್ರಶ್ನೆಗಳು ಯೋಜನೆಯ ಸಾಧ್ಯಾಸಾಧ್ಯತೆಗಳ ಬಗ್ಗೆ ಎದ್ದಿದ್ದವು. ಅಂಬೆ ವ್ಯಾಲಿ, ಹೂಡಿಕೆಯಲ್ಲಿ ಎಷ್ಟೇ ಅಡಚಣೆಗಳನ್ನು ಎದುರಿಸಿದರೂ ವಾರಾಂತ್ಯದ ಪ್ರಮುಖ ಗೇಟ್ ಅವೆ ಆಗುವುದರಲ್ಲಿ ಸಂಪೂರ್ಣವಾಗಿ ಗೆಲುವು ಸಾಧಿಸಿದೆ! ಅಂಬೆ ವ್ಯಾಲಿ, 10,000 ಎಕರೆ ಪ್ರದೇಶದ ವ್ಯಾಪ್ತಿಯನ್ನು ಹೊಂದಿದ್ದು, ಹೊರಾಂಗಣ ಹಾಗೂ ಒಳಾಂಗಣಗಳ ಮೋಜಿನ ಚಟುವಟಿಕೆ / ಆಟಗಳ ಜೊತೆಗೆ ಐಷಾರಾಮಿ ವಸತಿ ಸೌಕರ್ಯಗಳನ್ನೊಳಗೊಂಡ ವಿಹಾರ ಧಾಮ (ರೆಸಾಲ್ಟ್) ವಾಗಿದೆ ! ಇದೊಂದು ಜನಪ್ರಿಯ ವಾರಾಂತ್ಯದ ಪ್ರವಾಸಿ ಸ್ಥಳವಾಗಿದ್ದು, ನೀವು ಸ್ವಲ್ಪ ಹಣವನ್ನು ವೆಚ್ಚ ಮಾಡಲು ತಯಾರಿದ್ದಲ್ಲಿ ಇಲ್ಲಿನ 30 ನಿಮಿಷದ ಲೊನಾವಲಾ ಡ್ರೈವ್ ನಿಮ್ಮ ಪ್ರವಾಸವನ್ನು ಪರಿಪೂರ್ಣಗೊಳಿಸುತ್ತದೆ ! ಅಂಬೆ ವ್ಯಾಲಿ,ಇಲ್ಲಿಗೆ ಬರುವ ಶ್ರೀಮಂತ ನಿವಾಸಿಗಳಿಗೆ ಅಂದರೆ ಹೆಚ್ಚು ಹಣವನ್ನು ಭರಿಸುವಂತವರಿಗೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಡುವುದರ ಜೊತೆಗೆ ವಿಮಾನದ ಮೂಲಕ ಅಂಬೆ ವ್ಯಾಲಿಗೆ ತಲುಪಬಹುದಾದ ಅವಕಾಶವನ್ನು ಮಾಡಿದೆ. ಇದಕ್ಕಾಗಿಯೇ 1.5 ಕೀ.ಮಿ ಉದ್ದದ ರನ್ ವೇ ಯನ್ನೂ ಒದಗಿಸಿಕೊಡುವ ಪ್ರಥಮ ಪ್ರವಾಸಿ ತಾಣ ಎನಿಸಿದೆ.

ವಯಸ್ಸು ನಗಣ್ಯ

ಕೆಲವು ವರ್ಷಗಳ ಹಿಂದೆ ಅಂಬೆ ವ್ಯಾಲಿ ಖಾಸಗಿ ವ್ಯವಹಾರಗಳಿಗೆ ಮಾತ್ರ ಮೀಸಲಾಗಿತ್ತು. ಆದರೆ ಇದೀಗ ಸಾಕಷ್ಟು ಬದಲಾವಣೆಗಳಾಗಿದ್ದು ಸಾರ್ವಜನಿಕರಿಗೆ ವ್ಯಾಲಿಯನ್ನು ಪ್ರವೇಶಿಸುವುದು ಅತ್ಯಂತ ಸುಲಭವಾಗಿದೆ. ಅಂಬೆ ವ್ಯಾಲಿ 7 ಸ್ಟಾರ್ ರೆಸ್ಟೋರೆಂಟ್ (ಉಪಹಾರ ಗೃಹ) ಅನ್ನು ಹೊಂದಿದೆ. ಅಲ್ಲದೆ ಇಲ್ಲಿರುವ18 ಗಾಲ್ಫ್ ಕೋರ್ಸ್ ಗಳು (ಗಾಲ್ಫ್ ಕ್ರೀಡಾಂಗಣ), ಮಕ್ಕಳ ವಿಭಾಗ, ಹಾಗೂ ವಾಟರ್ ಪಾರ್ಕ್ (ನೀರಿನ ಉದ್ಯಾನ) ಸೌಲಭ್ಯಗಳು ಎಲ್ಲಾ ವಯಸ್ಸಿನ ಜನರನ್ನು ಬೇರೆಯದೆ ಲೋಕಕ್ಕೆ ಕೊಂಡೊಯ್ಯುತ್ತವೆ. ಪಾರ್ಟಿ (ಸಂತೋಷ ಕೂಟ) ಗಳನ್ನು ಇಷ್ಟಪಡುವವರು, ಮುಂಬೈ ನಂತಹ ನಗರಗಳ ಪಾರ್ಟಿಗಳಿಂದ ಹೊರಬರಲು ಪ್ರಯತ್ನಿಸುತ್ತಿರುವವರಿಗೆ ಅಂಬೆ ವ್ಯಾಲಿ ನಗರದಲ್ಲಿನ ವಿಶಿಷ್ಟವಾದ ಟೈಟಾನಿಕ್ ವಿಷಯ ಪ್ರೇರಿತ ರಾತ್ರಿ ಕ್ಲಬ್ (ರಾತ್ರಿ ಮನೋರಂಜನೆ ಒದಗಿಸುವ ವಿಹಾರ ಧಾಮ) ಹಾಗೂ ನೃತ್ಯ ಕೂಟ ಹೊಸ ಅನುಭವವನ್ನು ನೀಡುತ್ತವೆ.

ಪ್ರಕೃತಿ ಇಲ್ಲಿ ಪರಿವರ್ತನೆಗೊಂಡಿದೆ/ ಪ್ರಕೃತಿಯ ಪರಿವರ್ತನೆ

ಅಂಬೆ ವ್ಯಾಲಿ ನಗರದಲ್ಲಿ ಪ್ರಕೃತಿ ಹಾಗೂ ಮಾನವ ಮಿಶ್ರಿತ ಮಿತಿಯಿಲ್ಲದ ಅಚ್ಚರಿಗಳನ್ನು ಕಾಣಬಹುದು! ಈ ನಗರವು ನೈಸರ್ಗಿಕ ಹಾಗೂ ಮಾನವ ನಿರ್ಮಿತ ಸುಂದರ ಭೂಪ್ರದೇಶಗಳನ್ನು ಹಾಗೂ ಸರೋವರಗಳನ್ನು ಹೊಂದಿದೆ. ಸಮುದ್ರ ಮಟ್ಟದಿಂದ 2300 ಅಡಿ ಎತ್ತರದಲ್ಲಿರುವ 25 ಕೀ. ಮಿ.ನಷ್ಟು ಉದ್ದದ ವಾಟರ್ ಫ್ರಂಟ್ (ಜಲದರ್ಶಿನಿ)ಯನ್ನು ಈ ನಗರದಲ್ಲಿ ಹೊರತು ಪಡಿಸಿ ಬೇರೆಲ್ಲಿ ತಾನೇ ಕಾಣಬಹುದು? ನೀರಿನ ಮುಂಭಾಗದ ಬೀಚ್ ನಲ್ಲಿ, ವಿಶೇಷವಾಗಿ ಬೇಸಿಗೆಯ ಮಧ್ಯಾಹ್ನದ ವೇಳೆ ಮಕ್ಕಳು ಮತ್ತು ವಯಸ್ಕರು ಸಮಯವನ್ನು ಕಳೆಯಲು ಇಷ್ಟ ಪಡುತ್ತಾರೆ. ಅಲೆಗಳ ಕೊಳ (wave pool) ಕೂಡಾ ಪ್ರವಾಸಿಗರನ್ನು ಸ್ವಾಗತಿಸುತ್ತವೆ. ಅಂಬೆ ವ್ಯಾಲಿ ನಗರ ವು ಅತ್ಯಂತ ದೊಡ್ಡದಿದ್ದು ಬಹುಶಃ ನೀವು ಮರಳಿ ನೀವುಳಿದುಕೊಂಡ ಜಾಗಕ್ಕೆ ಬರಲು ದಾರಿ ತಪ್ಪಬಹುದು! ಆದರೆ ಭಯಪಡುವ ಅಗತ್ಯವಿಲ್ಲ. ಇದಕ್ಕೆ ಸುಲಭವಾದ ವಿಧಾನ, ರಿಸೆಪ್ಶನ್ (ಸ್ವಾಗತಕಾರರು) ಗೆ ಕರೆ ಮಾಡಿದರೆ ಸಣ್ಣ ಗಾಲ್ಫ್ ಗಾಡಿಗಳು ಬಂದು ನಿಮ್ಮನ್ನು ಕರೆದೊಯ್ಯುತ್ತವೆ.

ವಿಶಿಷ್ಟ - ಅನನ್ಯ

ಇಲ್ಲಿ ವಾರಾಂತ್ಯದಲ್ಲಿ ಬರುವ ಹೂಡಿಕೆದಾರರ ಅನುಕೂಲಕ್ಕೆ ತಕ್ಕಂತೆ ಬೇರೆ ಬೇರೆ ವಸತಿ ಸೌಕರ್ಯಗಳನ್ನು ಮಾಡಿಕೊಡಲಾಗುವುದು. ಅಲ್ಲದೆ ಹೊರಾಂಗಣದಲ್ಲಿ ಡೇರೆ / ಟೆಂಟ್ ಗಳಲ್ಲಿಯೂ ಕೂಡಾ ವಸತಿ ವ್ಯವಸ್ಥೆಯಿದೆ. ಇಲ್ಲಿಯೂ ವಸತಿಯನ್ನು ಪಡೆಯಬಹುದು. ಇಲ್ಲಿ 24 ಗಂಟೆಯೂ ಪರಿಚಾರಕರು (ಅಟೆಂಡೆಂಟ್) ಪ್ರವಾಸಿಗರ ಸೇವೆಯಲ್ಲಿ ತೊಡಗಿರುತ್ತಾರೆ. ಪ್ರವಾಸಿಗರು ತಮ್ಮ ಹೊರಾಂಗಣ ಚಟುವಟಿಕೆಗಳನ್ನು ಆ ದಿನಕ್ಕೆ ಸೀಮಿತಗೊಳಿಸಿದ್ದರೆ ಅವರು ತಮಗೆ ಬೇಕಾದ ಕೊಠಡಿಗಳನ್ನು ಆಯ್ದುಕೊಳ್ಳುವುದಕ್ಕೆ ಅವಕಾಶವಿದೆ. ಉತ್ತಮ ಸೌಲಭ್ಯಗಳಿರುವ ಒಂದು ಕೋಣೆ ಅಥವಾ ಎರಡು ಮಲಗುವ ಕೋಣೆ (ಬೆಡ್ ರೂಮ್) ಯಿರುವ ಅಪಾರ್ಟಮೆಂಟ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಒಳಾಂಗಣ ಹಾಗೂ ವಸತಿಯ ಸುತ್ತಲಿನ ಸನ್ನಿವೇಶಗಳನ್ನು ನೈಸರ್ಗಿಕ ಹಾಗೂ ಮಾನವ ನಿರ್ಮಿತ ಸಾಮರಸ್ಯದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಾವಿನ್ಯವಾಗಿ ವಿನ್ಯಾಸಗೊಳಿಸಿ ನಿರ್ಮಿಸಲಾಗಿದೆ. ಇದರ ರಚನೆಕಾರರು ಎಲ್ಲಾ ಮಾರ್ಗಗಳಿಂದಲೂ ಯೋಚಿಸಿ ಒಂದು ಹೊಸ ಆಸಕ್ತಿದಾಯಕ ಯೋಜನೆಯೊಂದಿಗೆ ವಸತಿ ಗೃಹಗಳನ್ನು ನಿರ್ಮಿಸಿದ್ದಾರೆ. ಇದರ ನಿರ್ಮಾತೃಗಳು ಜೆನೆರಿಕ್ ಜಾಕೂಜಿ ಅಥವಾ ಸನ್ ಡೆಕ್ ನೊಂದಿಗೆ ತೆರೆದ ಸ್ನಾನಗೃಹದಂತಹ ಅವಕಾಶಗಳನ್ನೂ ಇಲ್ಲಿ ಒದಗಿಸಿದ್ದಾರೆ.

ಹೆಚ್ಚಿನ ಪ್ರವಾಸಿಗರು, ಸಮಯ, ಗುಣಮಟ್ಟ, ಸೇವೆ ಹಾಗೂ ಅಲಂಕಾರಗಳ ಬುದ್ಧಿವಂತಿಕೆಗಳಲ್ಲಿ ಅಂಬೆ ವ್ಯಾಲಿ ಮತ್ತು ಯುರೋಪಿಯನ್ ನಡುವಿನ ಸ್ವರಮೇಳದ ಸಾಮ್ಯತೆಯನ್ನು ವಿಸ್ಮಯರಾಗಿ ವೀಕ್ಷಿಸುತ್ತಾರೆ! ಇಲ್ಲಿನ ಕೆಲವು ಸ್ಥಳಗಳಲ್ಲಿರುವ ವಿಕ್ಟೋರಿಯನ್ ಶೈಲಿಯ ಬೀದಿ ದೀಪಗಳು ಸುಣುಪುಗಲ್ಲು ಕಾಲುದಾರಿಗಳು ಇವೆಲ್ಲವೂ ಉತ್ತಮವಾಗಿ ನಿರ್ವಹಿಸಲ್ಪಟ್ಟಿವೆ.

ಆಟೋಟಗಳಿಗೆ ಸಿದ್ಧರಾಗಿ

ಮರೆಯಬೇಕಾದ್ದನ್ನು ಮರೆಸುತ್ತದೆ ಮರೆಯಲಾಗದ ನೆನಪನ್ನು ನಿಮ್ಮ ಜೊತೆ ಕಳುಹಿಸುತ್ತದೆ. ಅಂಬೆ ವ್ಯಾಲಿ ನಗರವು ತನ್ನಲ್ಲಿರುವ ವಿಸ್ತ್ರತ ಕ್ರೀಡೆ ಹಾಗೂ ವಿವಿಧ ಆಟಗಳ ಆಯ್ಕೆಯಿಮ್ದ ನಿಮ್ಮ ದಿನವನ್ನು ಉತ್ತಮ ಗೊಳಿಸುತ್ತದೆ. ಅಂಬೆ ವ್ಯಾಲಿಯಲ್ಲಿ ಕುದುರೆ ಸವಾರಿ ವ್ಯವಸ್ಥೆ ಮಾಡಲಾಗಿದ್ದು ನಿಮ್ಮನ್ನು ಚಲಿತಗೊಳಿಸುತ್ತದೆ. ಇವು ಇಲ್ಲಿಗೆ ಮುಕ್ತಾಯಗೊಳ್ಳುವುದಿಲ್ಲ. ಇಲ್ಲಿನ ಪ್ರತಿಯೊಂದು ಚಟುವಟಿಕೆಗಳಿಗೂ ಪ್ರಾಯೋಗಿಕವಾಗಿ ಮಾರ್ಗದರ್ಶನ ಮಾಡುವುದು ಇಲ್ಲಿನ ಮತ್ತೊಂದು ವೈಶಿಷ್ಟ್ಯ. ಆದ್ದರಿಂದ ನೀವು ಇಂತಹ ಕ್ರೀಡೆಗಳಲ್ಲಿ ಮೊದಲ ಬಾರಿಗೆ ಪಾಲ್ಗೊಳ್ಳುತ್ತಿರುವವರೇ ಆಗಿರಲಿ ಅಥವಾ ಕ್ರೀಡೆಗಳಲ್ಲಿ ಪರಿಣಿತರೆ ಆಗಿರಲಿ ಇಲ್ಲಿ ನೀವು ಕ್ರಿಡೋತ್ಸವದ ಸಮಯವನ್ನು ಅನುಭವಿಸುತ್ತೀರಿ. ಇಲ್ಲಿನ ಪರಿಸರ 10,000 ಎಕರೆ ಪ್ರದೇಶದಲ್ಲಿ ನಿಮ್ಮನ್ನು ಬಂಧಿಸಿಡುತ್ತದೆ.

ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಅಂಬೆ ವ್ಯಾಲಿ ಒಂದು ಆಯಕಟ್ಟಿನಲ್ಲಿ ರಚಿತವಾಗಿದ್ದು, ಹಲವಾರು ಚಟುವಟಿಕೆ ಹಾಗೂ ಶಕ್ತಿ ತುಂಬಿದ ಗುಣಮಟ್ಟದ ಅನುಭವವನ್ನು ಕೊಡುತ್ತಿದ್ದು ಬೇರೆಲ್ಲಾ ಸಮಾನ ಮಾದರಿಯ ಪ್ರದೇಶಗಳಿಗೆ ವಿರುದ್ಧವಾದ ಹಾಗೂ ಉತ್ತಮ ಸನ್ನಿವೇಶಗಳನ್ನು, ಎಲ್ಲಾ ತರಹದ  ಕೊರತೆಗಳನ್ನೂ ನಿವಾರಿಸಿ ಪ್ರವಾಸಿಗರಿಗೆ ಒದಗಿಸುತ್ತದೆ. ಇಂತಹ ಮೇಲ್ವರ್ಗದ ಜನರಿಗೆ ಇರುವ ಸೌಲಭ್ಯಗಳ ಹೊರತಾಗಿ ಅಂಬೆ ವ್ಯಾಲಿ ಶುಲ್ಕ ವಿಧಿಸುವುದರಲ್ಲಿ ಮೇಲ್ ಮಧ್ಯಮ ವರ್ಗ ಹಾಗೂ ಕೆಳ ವರ್ಗದ ಜನರಿಗೂ ಅನುಕೂಲವಾಗುವಂತಹ ಕೆಲವು ವ್ಯಸಸ್ಥೆಯನ್ನೂ ಒದಗಿಸುತ್ತದೆ. ಇಲ್ಲಿನ ಗಮನಾರ್ಹ ಪ್ರವಾಸಿ ದಟ್ಟಣೆಯನ್ನು ನೋಡಿಯೆ ಇಲ್ಲಿನ ಯಶಸ್ಸು ಹಾಗೂ ಗುಣಮಟ್ಟವನ್ನು ಗುರುತಿಸಬಹುದು. ಅಂಬೆ ವ್ಯಾಲಿಯಲ್ಲಿ ಒಂದು ಮಗುವಿನ ಜೊತೆ ದಂಪತಿಯರು ದಿನಕ್ಕೆ15 ರಿಂದ 20 ಸಾವಿರ ಭಾರತೀಯ ಮೌಲ್ಯದ ಹಣವನ್ನು ವೆಚ್ಚ ಮಾಡಿ ಇಲ್ಲಿನ ಹೊಸ ಅನುಭವವನ್ನು ಪಡೆಯಬಹುದು. ಇದು ದುಬಾರಿ ಎಂತನಿಸಬಹುದಾದರೂ ಇಲ್ಲಿ ಸಿಗುವ ಅನುಭವದ ಮುಂದೆ ಕಡಿಮೆಯೆ.

ಅಂಬಿ ಕಣಿವೆ ಪ್ರಸಿದ್ಧವಾಗಿದೆ

ಅಂಬಿ ಕಣಿವೆ ಹವಾಮಾನ

ಅಂಬಿ ಕಣಿವೆ
12oC / 54oF
 • Partly cloudy
 • Wind: SE 9 km/h

ಉತ್ತಮ ಸಮಯ ಅಂಬಿ ಕಣಿವೆ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಅಂಬಿ ಕಣಿವೆ

 • ರಸ್ತೆಯ ಮೂಲಕ
  ಯಾವುದೆ ನೆರೆಹೊರೆಯ ಅಥವಾ ಮಹಾನಗರರಿಂದ ಅಂಬೆ ವ್ಯಾಲಿಗೆ ರಸ್ತೆ ಮಾರ್ಗದಲ್ಲಿ ಬರಬಹುದು. ವಿಶೇಷವಾಗಿ ಮುಂಬೈ ಮತ್ತು ಪುಣೆ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಲೊನಾವಲಾ ಮಾರ್ಗದ ಮೂಲಕ ಇಲ್ಲಿನ ಸುತ್ತಲಿನ ಅದ್ಭುತ ದೃಶ್ಯಗಳನ್ನು ವೀಕ್ಷಿಸುತ್ತ ಪ್ರಕೃತಿ ಸೌಂದರ್ಯವನ್ನು ಸವಿಯುತ್ತ ಮನಮೋಹರ ಅಂಬೆ ವ್ಯಾಲಿಯನ್ನು ತಲುಪಬಹುದು. ಅಂಬೆ ವ್ಯಾಲಿಯು ಲೊನಾವಲಾ ಪಟ್ಟಣದಿಂದ ಅಂಬೆ ವ್ಯಾಲಿಯು 30 ನಿಮಿಷ ಅವಧಿಯ ಪ್ರಯಾಣದಷ್ಟು ದೂರದಲ್ಲಿದೆ. ನಿಮ್ಮ ಸ್ವಂತ ಕಾರು ಮೊದಲಾದ ವಾಹನಗಳಲ್ಲಿ ಪ್ರಯಾಣ ಮಾಡುವುದು ಇನ್ನೂ ಉತ್ತಮ. ಅಂಬೆ ವ್ಯಾಲಿ ಪಟ್ಟಣದಲ್ಲಿ ತಿರುಗಾಡಲು ಬಾಡಿಗೆ ವಾಹನಗಳೂ ಕೂಡಾ ದೊರೆಯುತ್ತವೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಅಂಬೆ ವ್ಯಾಲಿಗೆ ಹತ್ತಿರದಲ್ಲಿ, ಮುಂಬೈ ಹಾಗೂ ಪುಣೆ ನಗರಗಳನ್ನು ಸಂಪರ್ಕಿಸುವ ಲೊನಾವಲಾ ರೈಲು ನಿಲ್ದಾಣವಿದೆ. ಇದಕ್ಕಿಂತ ಹೆಚ್ಚಾಗಿ ಪೂರ್ವ ಹಾಗೂ ದಕ್ಷಿಣ ಮಹಾರಾಷ್ಟ್ರದ ಕೆಲವು ನಗರಗಳನ್ನೂ ಸಂಪರ್ಕಿಸುತ್ತವೆ. ಉತ್ತರ ಭಾಗದಿಂದ ಬರುವ ಪ್ರವಾಸಿಗರಿಗೆ ಮುಂಬೈ ಹತ್ತಿರದ ಸ್ಥಳ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಮುಂಬೈ ಅಥವಾ ಪುಣೆ ಇದಕ್ಕೆ ಹತ್ತಿರದ ವಾಯು ನಿಲ್ದಾಣಗಳಾಗಿವೆ. ನೀವು ನಂಬುತ್ತೀರೂ ಇಲ್ಲವೋ, ಆದರೆ ನಿಮ್ಮಲ್ಲಿ ದಶಲಕ್ಷದಷ್ಟು ಹಣವಿದ್ದರೆ ವಿಮಾನವನ್ನು ಅಥವಾ ಹೆಲಿಕ್ಯಾಪ್ಟರ್ ಅನ್ನು ಬಾಡಿಗೆ ಪಡೆದು ಇಲ್ಲಿಗೆ ತರಬಹುದು. ಅಂಬೆ ವ್ಯಾಲಿಯು 1.5 ಕೀ. ಮಿ ಉದ್ದದ ವಿಮಾನ ರನ್ ವೆ ಯನ್ನು ಹೊಂದಿದ್ದು ಪರಿಪೂರ್ಣವಾದ ವ್ಯವಸ್ಥೆಯೊಂದಿಗೆ ಸುಮಾರು 737 ಪ್ರಯಾಣಿಕರು ಇಳಿಯುವ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
27 May,Mon
Return On
28 May,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
27 May,Mon
Check Out
28 May,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
27 May,Mon
Return On
28 May,Tue
 • Today
  Amby Valley
  12 OC
  54 OF
  UV Index: 4
  Partly cloudy
 • Tomorrow
  Amby Valley
  13 OC
  55 OF
  UV Index: 5
  Partly cloudy
 • Day After
  Amby Valley
  15 OC
  59 OF
  UV Index: 4
  Patchy rain possible