Search
 • Follow NativePlanet
Share
ಮುಖಪುಟ » ಸ್ಥಳಗಳು» ಲೋಣಾವಲಾ

ಲೋಣಾವಲ - ಮುಂಬೈಗೆ ಅತಿ ಹತ್ತಿರದಲ್ಲಿರುವ ವಿಕೆಂಡ್ ಸ್ಪಾಟ್

30

ಜನಸಂದಣಿಯ ಶಹರ ಮುಂಬೈ ಪ್ರವೇಶಕ್ಕೊಂದು ಸುಂದರ ಪ್ರವೇಶದ್ವಾರವಿದು. ಮಹಾರಾಷ್ಟ್ರದಲ್ಲಿರುವ ಲೋಣಾವಲ ಬೆಟ್ಟಗುಡ್ಡಗಳ ಜನಪ್ರಿಯ ಪಟ್ಟಣ. ಸಮುದ್ರಮಟ್ಟದಿಂದ ಸುಮಾರು 625 ಮೀ ಎತ್ತರದಲ್ಲಿದೆ. ಲೋಣಾವಲದ ಸಮೀಪದಿಂದಲೇ ಸಹ್ಯಾದ್ರಿ ಪರ್ವತವೆಂಬ ಕಡಿದಾದ ಭಯಂಕರ ಪರ್ವತಶ್ರೇಣಿಯ ಆರಂಭ. ಇಲ್ಲಿಂದ ಕೇವಲ 38 ಕಿ.ಮೀ ದೂರದಲ್ಲಿದೆ ಈ ಸಹ್ಯಾದ್ರಿ ಪರ್ವತಶ್ರೇಣಿ. ಲೋಣಾವಲವು ಪುಣೆಯಿಂದ ಸುಮಾರು 64 ಕಿ.ಮೀ ದೂರದಲ್ಲಿದೆ ಮತ್ತು ಮುಂಬೈನಿಂದ 97 ಕಿ.ಮೀ ದೂರದಲ್ಲಿದೆ.

ಲೋಣಾವಲದ ಇತಿಹಾಸ

ಲೋಣಾವಲ ಎಂಬ ಹೆಸರು ಬಂದಿದ್ದು ಲೋಣಾವಲಿ ಎಂಬ ಸಂಸ್ಕೃತ ಶಬ್ದದಿಂದ. ಲೋಣಾವಲಿ ಎಂದರೆ ಗುಹೆಗಳು ಎಂದರ್ಥ. ಇದನ್ನು ಇನ್ನೂ ಸಂಕ್ಷೀಪ್ತವಾಗಿ ಲೇಣ್ ಮತ್ತು ಅವಳಿ ಎಂದು ವಿಂಗಡಿಸಬಹುದು. ಲೇಣ್ ಅಂದರೆ ಕಲ್ಲಿನಿಂದ ಕೊರೆದು ಮಾಡಿದ ಸುಂದರ ಪ್ರಶಾಂತ ಸ್ಥಳ ಎಂದಾಗುತ್ತದೆ. ಹಾಗೇ ಆವಳಿ ಎಂದರೆ ಸರಣಿ ಎಂಬ ಅರ್ಥವಿದೆ. ಹಿಂದಿನ ಕಾಲದಲ್ಲಿ ಲೋಣಾವಲವನ್ನು ಯಾದವ ರಾಜರು ಆಳುತ್ತಿದ್ದರು. ನಂತರ ಮುಘಲರು ಈ ಪ್ರದೇಶವನ್ನು ತಮ್ಮ ವಶಕ್ಕೆ ಪಡೆದರು. ಬಾಂಬೆಯ ಗವರ್ನರ್ ಆಗಿದ್ದ ಸರ್ ಎಲ್ಫಿನ್‌ಸ್ಟೋನ್‌ 1871ರಲ್ಲಿ ಲೋಣಾವಲವನ್ನು ಕಂಡುಹಿಡಿದರು. ದಟ್ಟವಾದ ಅರಣ್ಯ ಮತ್ತು ಇಲ್ಲಿನ ಪರಿಸರ ವೈಶಿಷ್ಟ್ಯದಿಂದಾಗಿ ಕೇಲವೇ ಕೆಲವು ಜನರ ವಶದಲ್ಲಿದೆ ಎಂಬುದನ್ನು ಅವರು ಮನಗಂಡರು.

ಗಿಜುಗುಟ್ಟುವ ನಗರ ಪ್ರದೇಶದಿಂದ ಈ ತಾಣ ಬಹುದೂರದಲ್ಲಿದೆ. ಒಮ್ಮೆ ಇಲ್ಲಿಗೆ ಭೇಟಿ ನೀಡಿದರೆ ನೀವು ಸಂಪೂರ್ಣ ರಿಫ್ರೆಷ್ ಆಗಿ ಹೊರಬರುತ್ತೀರಿ. ಮಾಲಿನ್ಯವಾಗದ ಪರಿಸರ, ಪ್ರಶಾಂತ ವಾತಾವರಣ ಪ್ರವಾಸಿಗರ ಆರೋಗ್ಯಕ್ಕೆ ಹಿತ. ವರ್ಷಂಪ್ರತಿ ಇಲ್ಲಿನ ನಿಸರ್ಗ ಸೌಂದರ್ಯ ವಿದೇಶಿ ಪ್ರವಾಸಿಗರನ್ನೂ ಸೇರಿ ದೇಶೀಯ ಪ್ರವಾಸಿಗರನ್ನು ಆಕರ್ಷಿಸುತ್ತದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಸಹ್ಯಾದ್ರಿಯ ಮುಕುಟ

ಲೋಣಾವಲವನ್ನು ’ಸಹ್ಯಾದ್ರಿ ಪರ್ವತಗಳ ಮುಕುಟ’ ಎಂದೇ ಕರೆಯುತ್ತಾರೆ. ಚಾರಣ ಮತ್ತು ಪರ್ವತ ಏರುವಂತಹ ಸಾಹಸ ಪ್ರಿಯರಿಗೆ ಈ ಪ್ರದೇಶ ಹೆಚ್ಚು ಇಷ್ಟವಾಗುತ್ತದೆ. ಇದರ ಹೊರತಾಗಿ ಈ ತಾಣದಲ್ಲಿ ಅನೇಕ ಐತಿಹಾಸಿಕ ಕೋಟೆಗಳು, ಪುರಾತನ ಗುಹೆಗಳು ಮತ್ತು ಕೆರೆಗಳೂ ಕೂಡಾ ಇವೆ. ಇಲ್ಲಿನ ವಾತಾವರಣವಂತೂ ಪ್ರವಾಸಿಗರನ್ನು ಬರ ಸೆಳೆಯುತ್ತವೆ, ವರ್ಷಂಪ್ರತಿ ಅಷ್ಟು ಪ್ರಶಾಂತವಾಗಿರುತ್ತದೆ, ಲೋಣಾವಲಾದಲ್ಲಿ ದಖನ್‌ ಪ್ರಸ್ಥಭೂಮಿ ಇನ್ನೊಂದು ಕಡೆ ಕೊಂಕಣ ಭಾಗವನ್ನು ನೋಡಿ ಕಣ್ತುಂಬಿಕೊಳ್ಳಬಹುದು. ಮಳೆಗಾಲದಲ್ಲಂತೂ ಇಲ್ಲಿನ ವಾತಾವರಣ ಅತ್ಯದ್ಭುತ ನೋಟವನ್ನು ನೀಡುತ್ತದೆ. ಧುಮ್ಮಿಕ್ಕಿ ಹರಿಯುವ ಜಲಪಾತಗಳು ಮತ್ತು ಹಚ್ಚ ಹಸಿರಿನ ಪರಿಸರವು, ಪ್ರವಾಸಿಗರ ಮನಸೆಳೆಯುತ್ತದೆ.

ಸುಂದರವಾದ ಸಂಜೆಯೊಂದನ್ನು ಕಳೆಯಬೇಕು ಎಂಬ ಮನಸು ನಿಮಗಿದ್ದರೆ ಪ್ರಸಿದ್ಧವಾದ ಪಾವ್ನಾ ಕೆರೆ, ವಾಲವನ್‌ ಕೆರೆ, ತುಂಗರ್ಲಿ ಆಣೆಕಟ್ಟು ಮತ್ತು ತುಂಗರಲಿ ಕೆರೆ ಕೂಡಾ ಇಲ್ಲಿದೆ. ನಿಮಗೆ ಚಾರಣ ಮಾಡುವ ಮನಸಿದ್ದರೆ, ನಮ್ಮ ಪುರಾತನ ಸಂಪತ್ತನ್ನು ನೋಡುವ ಹಂಬಲವಿದ್ದರೆ ಅದಕ್ಕೂ ಒಂದು ತಾಣವಿದೆ. ತುಂಗಾ, ತಿಲೋನಾ ಮತ್ತು ಲೋಹಗಡ್ ಕೋಟೆಯನ್ನು ನೋಡಬಹುದು. ತುಂಗ ಕೋಟೆಯನ್ನು ಮಾಲಿಕ್‌ ಅಹ್ಮದ್‌, ಕರ್ಜತ್‌ ಸಮೀಪದಲ್ಲಿ ಕಟ್ಟಿಸಿದ. ನಂತರ ಇದನ್ನು ಮರುನಿರ್ಮಾಣ ಮಾಡಲಾಗಿದೆ.

ಲೋಣಾವಲದಲ್ಲಿರುವ ಒಂದು ಸುಂದರ ಪಾರ್ಕ್‌ ರೇಯ್‌ವುಡ್‌ ಪಾರ್ಕ್‌. ಎತ್ತರೆತ್ತರ ಬೆಳೆದಿರುವ ದಟ್ಟ ಮರಗಳನ್ನು ನೋಡಿ ಖುಷಿಗೊಳ್ಳಬಹುದು. ಇಲ್ಲೊಂದು ದೊಡ್ಡದಾದ ಕ್ರೀಡಾಂಗಣವಿದೆ. ಇಲ್ಲಿ ಮಕ್ಕಳು ಆಟ ಆಡುವುದಕ್ಕೆ ತುಂಬಾ ಇಷ್ಟಪಡುತ್ತಾರೆ. ಇಲ್ಲಿನ ಇನ್ನೊಂದು ಪಾರ್ಕ್‌ ಶಿವಾಜಿ ಉದ್ಯಾನ. ಇಲ್ಲಿ ಬೇಕಾದಷ್ಟು ಆಟೋಟಗಳ ಖುಷಿ ಅನುಭವಿಸಬಹುದು.

ಸುಮ್ಮನೆ ಕಾಡಿನಲ್ಲಿ ಅಲೆದಾಡುವುದರಲ್ಲಿ ನಿಮಗೆ ಖುಷಿ ಇದ್ದರೆ ರಾಜಮಾಚಿ ವನ್ಯಧಾಮ ಅದಕ್ಕೊಂದು ಸೂಕ್ತ ಅವಕಾಶ. ರಾಜಮಾಚಿ ಪಾಯಿಂಟ್‌ನಲ್ಲಿ ನಿಂತು ನೋಡಿದರೆ ನಿಮಗೆ ಶಿವಾಜಿಯ ಅತ್ಯಂತ ಇಷ್ಟದ ಕೋಟೆಯೊಂದನ್ನು ನೋಡಬಹುದು. ಇಲ್ಲಿನ ಕೋಟೆಯನ್ನೂ ಕೂಡ ರಾಜಮಾಚಿ ಕೋಟೆ ಎಂದೇ ಹೇಳಲಾಗಿದೆ. ಹಾಗೆ ಇಲ್ಲಿ ಬಂದಾಗ ನೀವು ವಾಘಜೈ ದರಿಯನ್ನೂ ನೋಡೋದಕ್ಕೆ ಮರೆಯಬೇಡಿ. ಇವುಗಳ ಜೊತೆಗೆ ಇಲ್ಲಿ ಸಿಗುವ ವಿಶಿಷ್ಟ ಚಿಕ್ಕಿಯನ್ನು ತಿನ್ನದೇ ಬರಬೇಡಿ. ಲೋಣಾವಲದಲ್ಲೇ ಅತ್ಯಂತ ಜನಪ್ರಿಯ ಸಿಹಿತಿನಿಸು ಈ ಚಿಕ್ಕಿ.

ಲೋಣಾವಲಕ್ಕೆ ಹೋಗುವುದಕ್ಕೆ ಅಕ್ಟೋಬರಿನಿಂದ ಮೇ ತನಕ ಸೂಕ್ತ ಕಾಲ. ತಂಪಾದ ವಾತಾವರಣ ಮನಸಿಗೆ ಮುದ ನೀಡುತ್ತದೆ. ಆದರೂ ಬಹುತೇಕ ಜನ ಲೋಣಾವಲಕ್ಕೆ ಮಳೆಗಾಲದಲ್ಲೇ ಭೇಟಿ ನೀಡಲು ಇಷ್ಟಪಡುತ್ತಾರೆ. ಯಾಕೆಂದರೆ ಇಲ್ಲಿ ಯಾವತ್ತೂ ಪ್ರಶಾಂತವಾದ ವಾತಾವರಣವೇ ಇರುತ್ತದೆ. ಹೀಗಾಗಿ ಪ್ರವಾಸಿಗರು ತಮ್ಮ ಬ್ಯಾಗಿನಲ್ಲಿ ಉತ್ಸಾಹವನ್ನು ತುಂಬಿಕೊಂಡು ಬಂದರೆ ಸಾಕು.

ನಗರದ ಗಜಿಬಿಜಿಯಿಂದ ದೂರ ದೂರ...

ಮುಂಬೈ ಮತ್ತು ಪುಣೆಯಿಂದ ಸುಮಾರು ನೂರಾರು ಕಿ.ಮೀಗಳ ದೂರದಲ್ಲಿರುವ ಈ ಪ್ರದೇಶಕ್ಕೆ ಪ್ರವಾಸಿಗರು ವಿಮಾನ, ರಸ್ತೆ ಮತ್ತು ರೈಲಿನ ಮೂಲಕ ಸುಲಭವಾಗಿ ತಲುಪಬಹುದು. ಮುಂಬೈ ಮತ್ತು ಪುಣೆಗೆ ಸಂಪರ್ಕ ಕಲ್ಪಿಸುವ ರೈಲುಗಳಿಗೆ ಲೋಣಾವಲ ಪ್ರಮುಖ ನಿಲ್ದಾಣ. ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಜೊತೆಗೆ ಮುಂಬೈ-ಪುಣೆ ಹೈವೇಗೂ ಕೂಡಾ ಇಲ್ಲಿಂದ ಸುಲಭ ಸಂಪರ್ಕವಿದೆ. ನೀವೇನಾದರೂ ವಿಮಾನದ ಮೂಲಕ ಪ್ರವಾಸ ಮಾಡುತ್ತಿದ್ದರೆ, ಪುಣೆ ವಿಮಾನ ನಿಲ್ದಾಣದಲ್ಲಿ ನೀವು ಇಳಿದುಕೊಳ್ಳಬಹುದು. ಅಲ್ಲಿಂದ ಲೋಣಾವಲಕ್ಕೆ ಇನ್ನೊಂದು ಸಾರಿಗೆ ವಿಧಾನದ ಮೂಲಕ ಪ್ರಯಾಣಿಬೇಕಾಗುತ್ತದೆ.

ತಂಪಾದ ವಾತಾವರಣ, ಸುಂದರ ಪರಿಸರ ಮತ್ತು ಕಲುಷಿತವಾಗದ ಹವಾಮಾನದಿಂದಾಗಿ ಲೋಣಾವಲ, ರಜೆಯ ಸಮಯವನ್ನು ಕಳೆಯುವ ಇಷ್ಟದ ತಾಣವಾಗುತ್ತದೆ. ಪ್ರವಾಸಿಗರು ಜಲಪಾತಗಳಲ್ಲಿ ಮಿಂದು ದಣಿಯಬಹುದು. ಹುಲ್ಲಿನ ಹಾಸಿನ ಮೇಲೆ ಮಲಗಿ ಆಯಾಸವನ್ನು ಕಳೆಯಬಹುದು ಅಥವಾ ಲೋಣಾವಲದ ಸುತ್ತಮುತ್ತ ಚಾರಣ ಮಾಡಿ ಆಯಾಸವನ್ನೂ ಮಾಡಿಕೊಳ್ಳಬಹುದು. ದೊಡ್ಡ ದೊಡ್ಡ ನಗರಗಳ ಗಡಿಬಿಡಿಯಿಂದ ಹೊರತಾದ ಇನ್ನೊಂದು ಮನೆಯನ್ನೂ ಇಲ್ಲಿ ಬಹಳಷ್ಟು ಶ್ರೀಮಂತರು ಕಟ್ಟಿಕೊಂಡಿದ್ದಾರೆ. ಇಲ್ಲಿ ಬಂದು ಒಮ್ಮೆ ಇಲ್ಲಿನ ಪರಿಸರವನ್ನು ನೋಡಿದ ಮೇಲೆ ನೀವು ನಗರ ಜೀವನದಲ್ಲಿ ಏನನ್ನು ಕಳೆದೊಕೊಂಡಿದ್ದಿರಿ ಎನ್ನುವುದು ನಿಮಗೆ ಅರ್ಥವಾಗುತ್ತದೆ.

ಲೋಣಾವಲಾ ಪ್ರಸಿದ್ಧವಾಗಿದೆ

ಲೋಣಾವಲಾ ಹವಾಮಾನ

ಲೋಣಾವಲಾ
26oC / 79oF
 • Partly cloudy
 • Wind: NW 8 km/h

ಉತ್ತಮ ಸಮಯ ಲೋಣಾವಲಾ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಲೋಣಾವಲಾ

 • ರಸ್ತೆಯ ಮೂಲಕ
  ಲೋಣಾವಲಕ್ಕೆ ಹೋಗಲು ಸಾಕಷ್ಟು ರಾಜ್ಯ ಸಾರಿಗೆ ಬಸ್‌ಗಳು ಸಿಗುತ್ತವೆ. ಇನ್ನು ಇಲ್ಲಿಗೆ ಸಾಕಷ್ಟು ಪ್ಯಾಕೇಜ್‌ ಸೇವೆಗಳೂ ಲಭ್ಯವಿದೆ. ಎಸಿ ಡಿಲಕ್ಸ್‌ ಮತ್ತು ಎಸಿ ಲಕ್ಷುರಿ ಬಸ್‌ ಸೇವೆಗಳು ಈ ಪ್ಯಾಕೇಜ್‌ ಟೂರಿನಲ್ಲಿರುತ್ತವೆ. ಮುಂಬೈ, ಪುಣೆ ಹಾಗೂ ಇತರೆ ಅನೇಕ ನಗರಗಳಿಂದ ಈ ಪ್ಯಾಕೇಜ್‌ ಟೂರ್ ನಡೆಯುತ್ತದೆ. ಇನ್ನು ವೆಚ್ಚವೂ ಕೂಡಾ ಅತ್ಯಂತ ವಾಣಿಜ್ಯಿಕ. ಕಿ.ಮೀಗೆ ಸುಮಾರು 4 ರೂ ಇರುತ್ತದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಲೋಣಾವಲ ರೈಲ್ವೆ ನಿಲ್ದಾಣವು ಮುಂಬೈ ಮತ್ತು ಪುಣೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ನಿಲ್ದಾಣ. ಅವುಗಳಲ್ಲಿ ಕೆಲವು ಆಯ್ಕೆಗಳು ಹೀಗಿವೆ : ಬೆಂಗಳೂರಿನಿಂದ ಉದ್ಯಾನ್‌ ಎಕ್ಸ್‌ಪ್ರೆಸ್‌ ಮತ್ತು ಜೋಧ್‌ಪುರ ಎಕ್ಸ್‌ಪ್ರೆಸ್‌ (ಅವಧಿ ಸುಮಾರು 22 ಗಂಟೆಗಳು) ಚೆನ್ನೈನಿಂದ ಮುಂಬೈ ಮೇಲ್‌ ಮತ್ತು ಮುಂಬೈ ಎಕ್ಸ್‌ಪ್ರೆಸ್‌ (ಅವಧಿ ಸುಮಾರು 23.5 ಗಂಟೆಗಳು) ಹೈದರಾಬಾದ್‌ನಿಂದ ರಾಜ್‌ಕೋಟ್‌ ಎಕ್ಸ್‌ಪ್ರೆಸ್‌ (ಅವಧಿ ಸುಮಾರು 12.5 ಗಂಟೆಗಳು) ಮುಂಬೈನಿಂದ ಸಿದ್ದೇಶ್ವರ ಎಕ್ಸ್‌ಪ್ರೆಸ್‌ ಮತ್ತು ಶಿರಡಿ ಪಾಸ್‌ (ಅವಧಿ ಸುಮಾರು 2.5 ಗಂಟೆಗಳು) ಪುಣೆಯಿಂದ ಸಿನ್ಹಗಢ ಎಕ್ಸ್‌ಪ್ರೆಸ್‌ ಮತ್ತು ಡೆಕ್ಕನ್‌ ಕ್ವೀನ್‌ (ಅವಧಿ ಸುಮಾರು 1 ಗಂಟೆ)
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಲೋಣಾವಲಕ್ಕೆ ಸಮೀಪದ ವಿಮಾನ ನಿಲ್ದಾಣವೆಂದರೆ ಪುಣೆ ವಿಮಾನ ನಿಲ್ದಾಣ, ಇದು ಕೇವಲ 62 ಕಿ.ಮೀ ದೂರದಲ್ಲಿದೆ. ಪುಣೆಯ ವಿಮಾನ ನಿಲ್ದಾಣವು ಮುಂಬೈ, ಗೋವಾ ಮತ್ತು ಬೆಂಗಳೂರಿನಂತಹ ಪ್ರಮುಖ ನಗರಗಳಿಗೆ ಸಂಪರ್ಕ ಹೊಂದಿದೆ. ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲೋಣಾವಲದಿಂದ 100 ಕಿ.ಮೀ ದೂರದಲ್ಲಿದೆ. ನಾಸಿಕ್ ನ ಗಾಂಧಿನಗರ ವಿಮಾನ ನಿಲ್ದಾಣವು 140 ಕಿ.ಮೀ ದೂರದಲ್ಲಿದೆ ಮತ್ತು ಡಿಯು ವಿಮಾನ ನಿಲ್ದಾಣವು 200 ಕಿ.ಮೀ ದೂರದಲ್ಲಿದೆ. ಮುಂಬೈ ಮತ್ತು ಪುಣೆಯ ವಿಮಾನ ನಿಲ್ದಾಣದಿಂದ ಟ್ಯಾಕ್ಸಿ ಶುಲ್ಕವು ಸುಮಾರು 2000 ದಿಂದ 1500 ರೂಪಾಯಿಯವರೆಗೆ ಆಗಲಿದೆ.
  ಮಾರ್ಗಗಳ ಹುಡುಕಾಟ

ಲೋಣಾವಲಾ ಲೇಖನಗಳು

One Way
Return
From (Departure City)
To (Destination City)
Depart On
22 Oct,Tue
Return On
23 Oct,Wed
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
22 Oct,Tue
Check Out
23 Oct,Wed
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
22 Oct,Tue
Return On
23 Oct,Wed
 • Today
  Lonavala
  26 OC
  79 OF
  UV Index: 7
  Partly cloudy
 • Tomorrow
  Lonavala
  23 OC
  74 OF
  UV Index: 7
  Partly cloudy
 • Day After
  Lonavala
  19 OC
  67 OF
  UV Index: 7
  Partly cloudy