ಚಿಪ್ಲುನ್ - ಸುಂದರ ಕರಾವಳಿ ತೀರ

ರತ್ನಾಗಿರಿ ಜಿಲ್ಲೆಯು ಐತಿಹಾಸಿಕ ಕೋಟೆಗಳನ್ನು ಹೊಂದಿರುವ ಸ್ಥಳ. ಆ ಕಾಲವನ್ನು ಹೇಳುವಂತಹ ಹಲವಾರು ಪುರಾವೆಗಳು ಇಲ್ಲಿವೆ. ಇಲ್ಲಿನ ಪ್ರತಿಯೊಂದು ನಗರಗಳು ತನ್ನದೆ ಆದ ವೈಶಿಷ್ಟ್ಯತೆಗಳನ್ನು ಹೊಂದಿವೆ. ಅವುಗಳಲ್ಲಿ ಚಿಪ್ಲುನ್ ಎಂಬ ಪುಟ್ಟ ನಗರವೂ ಒಂದು. ಮುಂಬೈ- ಗೋವಾಕ್ಕೆ ಹೋಗುವ ಹಲವಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿಯೆ ಮುಂದೆ ಸಾಗುತ್ತಾರೆ !

ಚಪ್ಲುನ್ ಒಂದು  ಸುಂದರವಾದ ನಗರ. ಈ ನಗರವು ರತ್ನಾಗಿರಿ ಜಿಲ್ಲೆಯಲ್ಲಿದೆ. ಹಾಗೂ ಮುಂಬೈ – ಗೋವಾ ಹೆದ್ದಾರಿಯ ನಡುವಿನಲ್ಲಿದೆ. ಹಲವಾರು ವರ್ಷಗಳಿಂದ ಮುಂಬೈನಿಂದ ಗೋವಾಕ್ಕೆ ಹೋಗುವ ಪ್ರಯಾಣಿಕರೆಲ್ಲರೂ ಇಲ್ಲಿಗೆ ಬರುತ್ತಿದ್ದರಿಂದ ಇದೊಂದು ಚಿಕ್ಕದಾದ ಪ್ರವಾಸೋದ್ಯಮ ತಾಣವೆನಿಸಿದೆ. ಚಿಪ್ಲುನ್ ಪಟ್ಟಣವು ಪುಣೆ ಮತ್ತು ಕೊಲ್ಹಾಪುರ ನಗರಗಳಿಗೂ ಹತ್ತಿರದಲ್ಲಿದೆ.

ಉತ್ತರದಿಂದ ದಕ್ಷಿಣಕ್ಕೆ ಹೋಗುವ ಒಂದು ಹೆದ್ದಾರಿ ಮೇಲೆ ನಿಂತಿರುವ ಚಿಪ್ಲುನ್ ಪೂರ್ವಕ್ಕೆ ಪಶ್ಚಿಮ ಘಟ್ಟಗಳ ಮತ್ತು ಪಶ್ಚಿಮಕ್ಕೆ ಅರಬ್ಬೀ ಸಮುದ್ರವನ್ನು ಹೊಂದಿದೆ. ಚಿಪ್ಲುನ್ ನಗರವು ತೀರದಿಂದ ಹತ್ತಿರದಲ್ಲಿರುವುದರಿಂದ ಹವಾಮಾನವು ವರ್ಷಪೂರ್ತಿ ಆರಾಮವಾಗಿ ಬೆಚ್ಚಗಿನ ಮತ್ತು ತಂಪಾಗಿರುತ್ತದೆ. ವಶಿಷ್ಠಿ ನದಿಯ ತಟದಲ್ಲಿರುವ ಚಿಪ್ಲುನ್ ನಗರವು ಪ್ರವಾಸಿಗರಿಗೆ ಇಷ್ಟವಾಗುವಂತಹ ಸ್ಥಳವಾಗಿದ್ದು ಇಲ್ಲಿ ದೋಣಿ ವಿಹಾರ ಹಾಗೂ ಚಾರಣಕ್ಕೆ ಸುತ್ತಲಿನ ಬೆಟ್ಟಗಳು ಹಾಗೂ ಶ್ರೇಣಿಗಳು ಉತ್ತಮ ಪರಿಸರ ಕಲ್ಪಿಸಿಕೊಡುತ್ತವೆ.

ವೇಗ ಹಾಗೂ ಕಡಲ ಬೀಚ್ ಗಳು

ನೆರೆಯ ಮಹಾನಗರದ ಹೆಚ್ಚಿನ ಪ್ರವಾಸಿಗರು ಹೆಚ್ಚು ನಿಧಾನವಲ್ಲದ ಚಿಪ್ಲುನ್ ನಗರದ ವೇಗವನ್ನು ಇಷ್ಟಪಡುತ್ತಾರೆ. ಆದರೆ ಲೌಕಿಕ ನಗರದ ಜೀವನದ ಒಂದು ಆಪ್ಯಾಯಮಾನವಾದ/ ಹಿತಕರವಾದ ವಿಕೆಂಡ್ ಗೆಟ್ ಅವೇ ಯನ್ನು ಚಿಪ್ಲುನ್ ನಗರ ಒದಗಿಸುತ್ತದೆ. ಇಲ್ಲಿನ ಸ್ಥಳೀಯ ಆಹಾರ ಹಾಗೂ ಆಕರ್ಷಣೆಗಳಾದ ಗಣಪತಿ ಪುಲೆ, ಕರ್ನೆಶ್ವರ ದೇವಾಲಯ ಹಾಗೂ ಗುಹಾಘರ್/ಡ್ ಬೀಚ್ ಇವು ಈ ಸಣ್ಣ ನಗರದ ಭೇಟಿಯ ಅನುಭವಕ್ಕೆ ಮತ್ತಷ್ಟು ಮೆರಗನ್ನು ನೀಡುತ್ತದೆ.

ಚಿಪ್ಲುನ್ ಪಟ್ಟಣವು ಶೇಕಡಾ 80 ರಷ್ಟು ಸಾಕ್ಷರತಾ ಪ್ರಮಾಣವನ್ನು ಹೊಂದಿದ್ದು, ಇಲ್ಲಿನ ಜನರು ಅತ್ಯಂತ ಸ್ನೇಹಿ ಹಾಗೂ ವಿಶಾಲ ಮನೋಭಾವವುಳ್ಳವರಾಗಿದ್ದಾರೆ. ಆದ್ದರಿಂದ ನೀವು ಇಲ್ಲಿಗೆ ಹೊಸಬರಾಗಿದ್ದರೆ ಇಲ್ಲಿನ ಜನರೊಂದಿಗೆ ಸುಲಭವಾಗಿ ಸಂವಹನ ಮಾಡಬಹುದಾಗಿದೆ. ಅಲ್ಲದೆ ಇಲ್ಲಿನ ಸ್ಥಳೀಯರು ಪ್ರವಾಸಿಗರ ಬಗ್ಗೆ ಚೆನ್ನಾಗಿ ತಿಳಿದಿರುವುದರಿಂದ ಪ್ರವಾಸಿಗರಿಗೆ ಮನೆಯ ವಾತಾವರಣವನ್ನು ಕಲ್ಪಿಸಿಕೊಡುತ್ತಾರೆ!

ಚಿಪ್ಲುನ್ ನಲ್ಲಿರವ ಕೋಟೆಗಳು

ಪರಶುರಾಮನ ನೆಲೆಯಾಗಿದ್ದರಿಂದ ಈ ಪಟ್ಟಣವು ಚಿಪ್ಲುನ್ ಎಂಬ ಹೆಸರನ್ನು ಪಡೆದಿದೆ ಮತ್ತು ಈ ಸ್ಥಳವು ಹಲವಾರು ಸಾಂಪ್ರದಾಯಿಕ ದೇವಸ್ಥಾನಗಳನ್ನು ಹೊಂದಿದೆ. ಛಾಯಾಗ್ರಾಹಕರು ಇಲ್ಲಿ ಮಹಾರಾಷ್ಟ್ರದ ಯೋಧ ಶಿವಾಜಿ, 1670 ರಲ್ಲಿ ಕಟ್ಟಿಸಿದ ಗೌಲಕೋಟ್ ಕೋಟೆಯನ್ನು ನೋಡಬಹುದು. ಚಿಪ್ಲುನ್ ಒಂದು ಗುರುತಿಸುವಂತಹ ಸ್ಥಳವಾಗಿದ್ದು ನೆರೆಯ ನಗರಗಳಿಗೆ ಹತ್ತಿರದಲ್ಲಿರುವುದರಿಂದ ವಾರಾಂತ್ಯದ ರಜೆಯನ್ನು ಕಳೆಯಲು ಜನರು ಭೇಟಿ ನೀಡಲು ಉತ್ತಮ ಸೌಲಭ್ಯವನ್ನು ಕಲ್ಪಿಸಿಕೊಡುತ್ತದೆ.

Please Wait while comments are loading...