Search
  • Follow NativePlanet
Share

ರೇಡಿ - ಸಮುದ್ರ ತೀರದ ವಿಶಿಷ್ಟ ಗ್ರಾಮ

3

ಮಹರಾಷ್ಟ್ರದ ಸಿಂಧೂದುರ್ಗ ಜಿಲ್ಲೆಗೆ ಸೇರಿದ ರೇಡಿ, ಸಮುದ್ರ ತೀರದಲ್ಲಿರುವ ಒಂದು ವಿಶಷ್ಠ ಗ್ರಾಮವಾಗಿದೆ. ಮೂಲತಃ ರೇಡಿಪಟ್ಟಣಂ ಎಂಬ ಹೆಸರಿನಿಂದ ಕರೆಯಲಾಗುತ್ತಿದ್ದ ಇದು, ಅರಬ್ಬೀ ಸಮುದ್ರ ತೀರದಲ್ಲಿ ಅನೇಕ ವರ್ಷಗಳಿಂದ ಹಾಸುಹೊಕ್ಕಾಗಿ ವಿರಮಿಸುತ್ತಿರುವ ಗ್ರಾಮ.  ರೇಡಿ ಗ್ರಾಮವು ತನ್ನ ಸುತ್ತಲಿನ ಹಸಿರಿನ ಜೊತೆಗೆ ಗೋಡಂಬಿ ಹಾಗೂ ತೆಂಗಿನ ಮರಗಳಿಂದಾಗಿ ಮೋಹಕವಾಗಿ ಕಂಗೊಳಿಸುತ್ತದೆ.

ಅನೇಕ ವರ್ಷಗಳ ಹಿಂದೆ ಈ ಗ್ರಾಮವು ವೆಂಗುವಾ ತಲ್ಕುವಾಗೆ ಸೇರಿತ್ತು. ಅಂದು ಇಲ್ಲಿನ ಸಮುದ್ರ ತೀರದಲ್ಲಿ ಬಂದರು ನಿರ್ಮಾಣ ಮಾಡಲಾಗಿತ್ತು. ರೇವು ಪಟ್ಟಣವಾಗಿದ್ದ ರೇಡಿ ತನ್ನ ಸಹಜ ಪ್ರಕೃತಿ ಸೌಂದರ್ಯ ಹಾಗು ಸ್ವಚ್ಛವಾಗಿರುವ ಕಡಲ ತೀರದಿಂದಾಗಿ ಪ್ರವಾಸಿಗರನ್ನು ಆಕರ್ಷಿಸಿದ್ದು ಇಲ್ಲಿನ ಯಶವಂತಗಡ್ ಕೋಟೆಯು ಒಂದು ಐತಿಹಾಸಿದಕ ಸ್ಮಾರಕವಾಗಿದೆ.

ಮಹರಾಷ್ಟದಿಂದ ರೇಡಿ 377 ಕಿ.ಮೀ.ದೂರದಲ್ಲಿದ್ದು ಇಲ್ಲಿಗೆ ಸುಲಭವಾಗಿ ತಲುಪಬಹುದಾಗಿದೆ.

ಪ್ರವಾಸಿಗರ ಪ್ರಮುಖ ಆಕರ್ಷಣೆಗಳು

ಸ್ವಯಂಭು ಶಿವ ದೇವಸ್ಥಾನ, ಗಣೇಶನ ದೇವಸ್ಥಾನ, ಮೌಲಿ ದೇವಸ್ಥಾನ, ರಾಮ್ ಪುರುಶ್ ದೇವಸ್ಥಾನ ಹಾಗೂ ದುರ್ಗಾ ದೇವಿಯನ್ನು ಆರಾಧಿಸುವ - ನವದುರ್ಗ ದೇವಸ್ಥಾನ ಹೀಗೆ ಇನ್ನೂ ಅನೇಕ ಧಾರ್ಮಿಕ ಸ್ಥಳಗಳು ಇಲ್ಲಿವೆ. ಯಶವಂತಗಡ್ ಕೋಟೆ, ಶಿರೋಡ, ಅರಾವಳಿ ಹಾಗೂ ತೆರಿಕೋಲ್ ಕೋಟೆ ಮುಂತಾದ ಕೆಲವು ಮುತ್ತಿನಂಹ ಐತಿಹಾಸಿಕ ತಾಣಗಳು ಇಲ್ಲಿವೆ.

ರೇಡಿ ನೈಸರ್ಗಿಕ ಸ್ವರ್ಗವೂ ಹೌದು. ರೇಡಿಯ ಸಮುದ್ರ ತೀರ ವಿಶಾಲ ಹಾಗೂ ಉದ್ದವಾಗಿದ್ದು ಇದಕ್ಕೆ ಸೇರಿದಂತೆ ಇರುವ ಗೇರು ಹಾಗೂ ತೆಂಗಿನ ಮರಗಳೂ, ಸುಮೀಪದ ಮಾವಿನ ತೋಪು ಪ್ರಾಕೃತಿಕ ಅಂದಕ್ಕೆ ಮತ್ತಷ್ಟು ಮೆರಗು ನೀಡಿದಂತಿದೆ.

ವರ್ಷವಿಡಿ ರೇಡಿಯ ತಾಪಮಾನ ಹಿತಕರವಾಗಿದ್ದು ಕಾಲಕಾಲಕ್ಕೆ ಎಲ್ಲವೂ ಹಿತಮಿತವಾಗಿರುತ್ತದೆ. ಆದರೂ ಸಮುದ್ರ ತೀರದಲ್ಲಿ ಸಾಮಾನ್ಯವಾಗಿ ಇರುವಂತಹ ಬೇಸಿಗೆಯ ಶೆಕೆಯ ನಡುವೆಯೂ ತಂಪಾದ ಗಾಳಿಯೂ ಬೀಸುವುದರಿಂದ ಹಿತವಾಗಿಯೆ ಇರುತ್ತದೆ. ವರ್ಷವಿಡಿ ಯಾವ ಕಾಲದಲ್ಲಿ ಬೇಕಾದರೂ ಇಲ್ಲಿಗೆ ಬರುವವರಿಗೆ ಹವಾಮಾನ ಒಗ್ಗಿಕೊಳ್ಳುತ್ತದೆ. ಯಾವುದಕ್ಕೂ, ಮಳೆಗಾಲದ ಮೊದಲು ಇಲ್ಲಿಗೆ ಭೇಟಿ ನೀಡುವುದು ಸೂಕ್ತ ಕಾಲವೆಂಬುದು ನಿಮ್ಮ ಗಮನದಲ್ಲಿರಲಿ.

ರೇಡಿಯಲ್ಲಿ ರೈಲು ಅಥವಾ ವಿಮಾನ ನಿಲ್ದಾಣಗಳಿಲ್ಲ. ಆದರೂ ಇಲ್ಲಿನ ಸುಂದರ ಪರಿಸರಕ್ಕೆ ಬರಲು ಪ್ರವಾಸಿಗರಿಗೆ ಯಾವುದೆ ತೊಂದರೆಯಾಗುವುದಿಲ್ಲ. ಗೋವಾದ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಸಾವಂತವಾಡಿ ರೈಲು ನಿಲ್ದಾಣದಿಂದ ಇಲ್ಲಿಗೆ ಪ್ರಯಾಣ ಮಾಡುವುದು ನಿಜಕ್ಕೂ ನೆನಪಿನಲ್ಲುಳಿಯುವ ಪ್ರಯಾಣವಾಗಿರುತ್ತದೆ. ರಸ್ತೆ ಮಾರ್ಗದ ಮೂಲಕ ಪ್ರಯಾಣ ಅನುಕೂಲಕರ ಮಾತ್ರವಲ್ಲ ಆರ್ಥಿಕವಾಗಿಯೂ ಸಹಾಯಕವಾಗಿದೆ.

ರೇಡಿ ಪ್ರಸಿದ್ಧವಾಗಿದೆ

ರೇಡಿ ಹವಾಮಾನ

ಉತ್ತಮ ಸಮಯ ರೇಡಿ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ರೇಡಿ

  • ರಸ್ತೆಯ ಮೂಲಕ
    ಮುಂಬೈಗಿಂತಲೂ ಗೋವಾದ ಪಣಜಿ ನಗರದ ಗಡಿಗೆ ಅಂಟಿಕೊಂಡಂತೆ ರೇಡಿ ಗ್ರಾಮವಿದೆ. ರೇಡಿಯಿಂದ ಮುಂಬೈ ಸುಮಾರು 500 ಕಿ.ಮೀ. ದೂರದಲ್ಲಿದ್ದು ಪಣಜಿ ಕೇಲವ 55 ಕಿ.ಮೀ.ಅಂತರದಲ್ಲಿದೆ. ಮಹರಾಷ್ಟ್ರ ಹಾಗೂ ಇತರ ಪ್ರಮುಖ ನಗರಗಳಿಂದ ರೇಡಿಗೆ ಅನೇಕ ರಾಜ್ಯ ರಸ್ತೆ ಸಾರಿಗೆ, ಖಾಸಗಿ ಹಾಗೂ ಟುರಿಸ್ಟ್ ಬಸ್ಸುಗಳು ಸಂಚರಿಸುತ್ತವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಸಾವಂತವಾಡಿ ರೈಲು ನಿಲ್ದಾಣ ರೇಡಿ ಗ್ರಾಮಕ್ಕೆ ಬಹಳ ಹತ್ತಿರದಲ್ಲಿದೆ. ರೈಲು ನಿಲ್ದಾಣಕ್ಕೆ ಸುಮಾರು 20 ಕಿ.ಮೀ.ಇರಬಹುದು. ಮಹರಾಷ್ಟ್ರ ರಾಜ್ಯ ಹಾಗೂ ದೇಶದ ಇತರ ಪ್ರಮುಖ ರೈಲು ನಿಲ್ದಾಣಗಳಿಗೆ ಸಾವಂತವಾಡಿಯಿಂದ ಅನೇಕ ರೈಲುಗಳು ಸಂಚರಿಸುತ್ತವೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ರೇಡಿ ಗ್ರಾಮಕ್ಕೆ, ಗೋವಾದ ಡಬ್ಲಿನ್ ಏರ್ ಪೋರ್ಟ್ ಹತ್ತಿರದ ನಿಲ್ದಾಣವಾಗಿದೆ. ಮುಂಬೈ ಹಾಗೂ ಬೆಂಗಳೂರು ಸೇರಿದಂತೆ ಅನೇಕ ಪ್ರಮುಖ ನಗರಗಳಿಗೆ ಈ ವಿಮಾನ ನಿಲ್ದಾಣ ಸಂಪರ್ಕ ಹೊಂದಿದೆ. ವಿಮಾನ ನಿಲ್ದಾಣದಿಂದ ರೇಡಿಗೆ ಟ್ಯಾಕ್ಸಿಗಳು ಸಿಗುತ್ತವೆ. ಪ್ರತಿ ಕಿ.ಮೀ.ಗೆ 7 ರೂ.ನಂತೆ ಟ್ಯಾಕ್ಸಿ ದರ ನಿಗದಿಯಾಗಿದೆ. ವಿದೇಶಿ ಪ್ರವಾಸಿಗರಿಗೆ ಮುಂಬೈನ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹತ್ತಿರವಾಗಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun