ಸಾವಂತವಾಡಿ - ಮನಸನ್ನು ಸೂರೆಗೊಳ್ಳುವ ತಾಣ

ನಿತ್ಯ ಹರಿದ್ವರ್ಣ ಕಾಡುಗಳು, ಸುಂದರ ಸರೋವರಗಳು ಹಾಗೂ ಎತ್ತರದ ಬೆಟ್ಟಗಳ ಸಾಲುಗಳೂ, ಇವೆಲ್ಲವುಗಳೊಂದಿಗೆ ಬೆಸೆದುಕೊಂಡಂತಿರುವ ಕೊಂಕಣ ಪ್ರದೇಶದ ಪಾರಂಪರಿಕ ವಿಭಿನ್ನ ಸಂಸ್ಕೃತಿ ನೋಡಿದರೆ ಇದು ಪ್ರಕೃತಿಯ ಮಾತೆ ಆಶೀರ್ವದಿಸಿ ನೀಡಿದ ವರವೆಂದು ಭಾಸವಾಗುತ್ತದೆ ಸಾವಂತವಾಡಿ.

ಮಹರಾಷ್ಟ್ರದ ದಕ್ಷಿಣ-ಪೂರ್ವ ದಿಕ್ಕಿನೆಡೆಗೆ ಹಬ್ಬಿಕೊಂಡಿರುವ ಸಿಂಧೂದುರ್ಗ ಜಿಲ್ಲೆಯಲ್ಲಿ ಸಾವಂತವಾಡಿಯಿದೆ. ಕೀಮ್ - ಸಾವಂತರ ವಂಶಸ್ಥರು ಈ ಪ್ರದೇಶವನ್ನು ಆಳಿದ್ದರಿಂದ ಇದಕ್ಕೆ ಸಾವಂತವಾಡಿ ಎಂಬ ಹೆಸರು ಬಂದಿದೆ.

ಪೂರ್ವದಲ್ಲಿ ಸಹ್ಯಾದ್ರಿ ಅಥವಾ ಪಶ್ಚಿಮ ಘಟ್ಟಗಳ ಸಾಲು ಹಾಗೂ ಪಶ್ಚಿಮದಲ್ಲಿ ಅರಬ್ಬಿ ಸಮುದ್ರದವರೆಗೂ ಸಾವಂತವಾಡಿ ವಿಸ್ತಾರವಾಗಿ ಹರಡಿಕೊಂಡಿದೆ. ಇದೊಂದು ಪ್ರಶಾಂತವಾದ ಸ್ಥಳ. ಸಾಹಿತಿಗಳು, ಕವಿಗಳಿಗೆ ಉತ್ತಮ ಸ್ಪೂರ್ತಿದಾಯಕವಾದ ಪ್ರದೇಶವಾಗಿರುವುದಲ್ಲದೆ ಬದುಕಿನ ಜಂಜಾಟದಿಂದ ಸ್ವಲ್ಪ ಕಾಲ ದೂರವಿರಬೇಕೆಂದು ಬಯಸುವವರಿಗೆ ಸೂಕ್ತ ಪ್ರದೇಶ. ಕೊಂಕಣಿ ವಾತಾವರಣ ಹಾಗೂ ವಿಶ್ವ ವಿಖ್ಯಾತ ಗೋವಾ ಸಮುದ್ರ ತೀರಗಳು ಇಲ್ಲಿ ಪ್ರತಿಬಿಂಬಿಸುತ್ತದೆ.

ಜನರು

ಸಾವಂತವಾಡಿ ಅನೇಕ ವರ್ಷಗಳ ಕಾಲ ಮರಾಠರ ವಶದಲ್ಲಿದ್ದ ಪ್ರದೇಶವಾಗಿತ್ತು. ನಂತರ ಈ ಪ್ರದೇಶದಲ್ಲಿ ವಾಸಿಸುವ ಮಾಲ್ವಾನಿ ಜನರು ತಮ್ಮದೆ ಆದ ಸ್ವಂತ ಸಂಸ್ಕೃತಿಗಳನ್ನು ಬೆಳೆಸಿಕೊಂಡರಲ್ಲದೆ ವಿಭಿನ್ನವಾದ ಕಲೆ-ಸಂಸ್ಕೃತಿಯನ್ನು ಈಗಲೂ ಅಳವಡಿಸಿಕೊಂಡಿದ್ದು ತಮ್ಮದೆ ಆದ ಪ್ರತ್ಯೇಕ ಬದುಕನ್ನು ರೂಪಿಸಿಕೊಂಡಿದ್ದಾರೆ.

ಇಲ್ಲಿ ಹೆಚ್ಚಾಗಿ ಮರಾಠರು ವಾಸವಾಗಿದ್ದು ಅವರೊಂದಿಗೆ ಕೊಂಕಣಿ ಬ್ರಾಹ್ಮಣರು, ದಲಿತರು ಹಾಗೂ ಮಾಲ್ವಾನಿ ಮುಸಲ್ಮಾನರು ಈ ಪ್ರದೇಶದಲ್ಲಿ ವಾಸವಾಗಿದ್ದಾರೆ.

ಆಹಾರ

ಭಲೇರಾವ್ ಖಾನಾವಳಿ ಇಲ್ಲಿನ ಅತ್ಯಂತ ಹೆಸರು ವಾಸಿಯಾದ ಫುಡ್ ಜಾಯಿಂಟ್ ಆಗಿದ್ದು ಸಾವಂತವಾಡಿಗೆ ಭೇಟಿ ನೀಡಿದವರು ಯಾರೂ ಇಲ್ಲಿಗೆ ಬರದೆ ಹೋಗುವುದೆ ಇಲ್ಲ. ಇಲ್ಲಿ ಪಕ್ಕಾ ಕೊಂಕಣಿ ಮಾದರಿಯ ಊಟೋಪಚಾರ, ಎಲ್ಲಾ ಅಡಿಗೆಗೂ ರುಚಿಯಾದ ಮಸಾಲೆ ಜೊತೆಗೆ ಕೊಬ್ಬರಿ ಎಣ್ಣೆಯನ್ನೆ ಬಳಸಲಾಗುತ್ತದೆ.

ಸಂಸ್ಕೃತಿ

ಪ್ರವಾಸಿಗರು ಎಂಜಾಯ್ ಮಾಡುವುದಕ್ಕೆ ಇಲ್ಲಿ ಅನೇಕ ಸ್ಥಳಗಳಿದ್ದು ಉತ್ತಮ ಆರ್ಟ್ ಮತ್ತು ಕ್ರಾಫ್ಟ್ ಐಟಂಗಳನ್ನು ಖರೀದಿಸಬಹುದು. ಇವೆಲ್ಲ ನಮ್ಮ ಚನ್ನಪಟ್ಟಣದ ಗೊಂಬೆಗಳಂತೆ ಇದ್ದು ಸಣ್ಣ ಕೈಗಾರಿಕೆ, ಗುಡಿ ಕೈಗಾರಿಗಳಲ್ಲಿ ತಯಾಗುವ ಕಲಾಕೃತಿಗಳು, ಬೊಂಬುಗಳಿಂದ ಮಾಡದ ಐಟಂಗಳಾಗಿವೆ. ಸಾವಂತಾಡಿಯಲ್ಲಿ ಜನರು ಕೊಂಕಣಿ, ಮರಾಠಿ, ಉರ್ದು ಮತ್ತು ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾರೆ. ಇಲ್ಲಿನ ಕಾಡಿನಲ್ಲಿ ಒಂದು ಸುತ್ತು ಹೋಗಲು ಬಯಸುವವರಿಗೆ ಕಾಡೆಮ್ಮೆ, ಚಿರತೆ, ಕಾಡು ಹಂದಿ, ಕೆಲವೊಮ್ಮೆ ಹುಲಿ ಮುಂತಾದ ಪ್ರಾಣಿಗಳ ದರ್ಶನವಾಗಲೂಬಹುದು. ಪ್ರಕೃತಿ ಪ್ರೀಯರಿಗೆ ಸುಂದರವಾದ ತಾಣಗಳಲ್ಲಿ ಔಷಧಿಯುಕ್ತ ಸಸ್ಯಗಳು ಹಾಗೂ ಮರಗಳೂ ಕಾಣಸಿಗುತ್ತವೆ.

ಸಾವಂತವಾಡಿಯ ಕೆಲವು ಪ್ರದೇಶಗಳ ಪಕ್ಕ ಗ್ರಾಮಾಂತರ ಸೊಗಡನ್ನು ಹೊಂದಿರುವುದಲ್ಲದೆ ಸುಂದರವಾದ ಪ್ರಕೃತಿಯ ತಾಣವೂ ಇದೆ. ಪ್ರವಾಸಿಗರು ಇಲ್ಲಿನ ಹೆಸರಾಂತ ಮೋತಿ ತಾಲಾವ್(ಸರೋವರ) ಹಾಗೂ ಅರಮನೆ ನೋಡಲೆ ಬೇಕಾದ ಸ್ಥಳವಾಗಿದೆ. ಆತ್ಮೇಶ್ವರ ತಾಲಿ, ನರೇಂದ್ರ ಉದ್ಯಾನವನ, ಹನುಮಾನ್ ಮಂದಿರ, ಅಂಬೋಲಿ ಬೆಟ್ಟ ಪ್ರದೇಶ, ಕೊಲ್ಗೋನ್ ದರ್ವಾಜ, ವಿಠಲ ಮಂದಿರ ಮುಂತಾದ ಆಕರ್ಷಕ ಪ್ರದೇಶಗಳಿಗೆ ಭೇಟಿ ನೀಡಬಹುದಾಗಿದೆ.

Please Wait while comments are loading...