ಭಾರತ ಸರ್ಕಾರವು, ಕಲೆ ಮತ್ತು ಕಲಾವಿದರಿಗಾಗಿ ಅನೇಕ ಕಾರ್ಯಕ್ರಮವನ್ನು ಇಲ್ಲಿಯ ಶಿಲ್ಪ ಗ್ರಾಮದಲ್ಲಿ ಹಮ್ಮಿಕೊಂಡಿದ್ದು ಇಲ್ಲಿ ಹೆಚ್ಚಾಗಿ ಕರಕುಶಲ ಕಲೆಯ ಉತ್ಪಾದನೆ ಮಾಡಲಾಗುತ್ತಿದ್ದು ಈ ಪ್ರದೇಶ ಶಿಲ್ಪ ಗ್ರಾಮವೆಂದೆ ಖ್ಯಾತಿ ಪಡೆದು ಹೆಮ್ಮೆಯ ಗ್ರಾಮ ಎನಿಸಿದೆ. ಈ ಪುಟ್ಟ ಗ್ರಾಮಸ್ಥರು ಕರಕುಶಲ ಕಲೆ ಹಾಗೂ ವ್ಯಾಪಾರದಲ್ಲಿ ಸದಾ ಕ್ರಿಯಾಶೀಲರಾಗಿರುತ್ತಾರೆ. ಕಣ್ಣೇದುರೆ ಇಂತಹ ಅದ್ಭುತ ಕಲಾಕೃತಿಗಳನ್ನು ರಚಿಸುತ್ತಿರುವ ನೋಡುವ ಅವಕಾಶವನ್ನು ಒದಗಿಸುವ ಈ ಗ್ರಾಮದ ಭೇಟಿಯು ಖಂಡಿತವಾಗಿಯು ಪ್ರವಾಸಿಗರಿಗೆ ಒಂದು ವಿಶೇಷ ಅನುಭವವಾಗಿರುತ್ತದೆ. ಪ್ರವಾಸಿಗರು ಇಲ್ಲಿ ಕಲಾ ರಚನೆಯನ್ನು ನೋಡುವುದು ಮಾತ್ರವಲ್ಲದೆ ಗಂಜೀಫಾ ಕಾರ್ಡ್ಸ್, ಬಳೆ-ಸರಗಳು, ಜ್ಯುಯಲರಿ ಬಾಕ್ಸ್, ಹ್ಯಾಂಡ್ ಬ್ಯಾಗುಗಳು, ಕಿಟ್ ಗಳು ಹಾಗೂ ಅನೇಕ ಕರಕುಶಲ ವಸ್ತುಗಳನ್ನು ಇಲ್ಲಿ ನೇರವಾಗಿ ಖರೀದಿಸಬಹುದಾಗಿದೆ.