Search
 • Follow NativePlanet
Share
ಮುಖಪುಟ » ಸ್ಥಳಗಳು» ವಿಜಯದುರ್ಗ

ವಿಜಯದುರ್ಗ - ಮೋಹಗೊಳಿಸುವ ಪುಟ್ಟ ಪಟ್ಟಣ

10

ಮಹಾರಾಷ್ಟ್ರ ರಾಜ್ಯದಲ್ಲಿರುವ ಸಣ್ಣ ಪಟ್ಟಣ ವಿಜಯದುರ್ಗವು ಭಾರತದ ಕರಾವಳಿಯಲ್ಲಿದೆ. ಇದು ಮುಂಬೈನಿಂದ ಸುಮಾರು 485 ಕಿ.ಮೀ ದೂರದಲ್ಲಿದ್ದು, ಸಿಂಧುದುರ್ಗ ಜಿಲ್ಲೆಯ ವ್ಯಾಪ್ತಿಯಲ್ಲಿದೆ. ಇದನ್ನು ಹಿಂದೆ ಜೆರಿಯಾ ಎಂದು ಕರೆಯಲಾಗುತ್ತಿತ್ತು. ಅರೇಬಿಯನ್‌ ಸಮುದ್ರ ಒಂದು ಕಡೆ ಸಹ್ಯಾದ್ರಿ ಪರ್ವತ ಶ್ರೇಣಿ ಇನ್ನೊಂದು ಕಡೆ...ಇಂಥ ಸುಂದರ ಪರಿಸರದಿಂದಾಗಿ ಈ ಪ್ರದೇಶ ಪ್ರವಾಸಿಗರಿಗೆ ಇಷ್ಟವಾಗುತ್ತದೆ.

ವಿಜಯದುರ್ಗ ಪಟ್ಟಣ ಮತ್ತು ಸಿಂಧುದುರ್ಗ ಜಿಲ್ಲೆಯು, ಮರಾಠಾ ಆಡಳಿತದಲ್ಲಿ ನೌಕಾ ನೆಲೆಯಾಗಿ ಕಾರ್ಯನಿರ್ವಹಿಸಿತ್ತು. ಇಂದಿಗೂ ಕೂಡಾ ಇದು ಬಂದರು ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

ವಾರವಿಡೀ ಕೆಲಸ ಮಾಡಿದ ಮನಸಿಗೆ ಒಂದಷ್ಟು ಮುದ ಕೊಡುವ ತಾಣ ವಿಜಯದುರ್ಗ. ವರ್ಜಿನ್‌, ಮುಟ್ಟಲಾಗದ ಬೀಚ್‌ಗಳು, ಐತಿಹಾಸಿಕ ಕೋಟೆಗಳು – ಹೀಗೆ ವಿಜಯದುರ್ಗವು ಪ್ರವಾಸಿಗರಿಗೆ ಹಲವು ತಾಣಗಳನ್ನು ಹೊಂದಿದೆ. ಬೀಚ್‌ಗಳು ತೆಂಗಿನ ಮರಗಳ ದಟ್ಟ ಹಸಿರಿನಿಂದ ಆವರಿಸಿದೆ. ಮಾವು ಪ್ಲಾಂಟೇಷನ್‌ಗಳಿದ್ದು, ಬೇಸಿಗೆಯಲ್ಲಿ ಇಡೀ ಸಮುದ್ರ ತೀರವನ್ನು ಮಾವಿನ ಹಣ್ಣಿನ ಸುವಾಸನೆಯು ಹೊಂದಿರುತ್ತದೆ. ಕೆಂಪು ಮರಗಳಿಂದ ಮಾಡಿದ ಮನೆಗಳು ಮತ್ತು ತಾರಸಿಗಳು ಸಮುದ್ರ ತೀರದ ಸೌಂದರ್ಯವನ್ನು ವೃದ್ಧಿಸುತ್ತವೆ.

ವಿಜಯದುರ್ಗ ಕೋಟೆ – ವಾಸ್ತುಶಿಲ್ಪದ ಕೌತುಕ

ವಿಜಯದುರ್ಗವು ಕೋಟೆಯಿಂದಾಗಿಯೇ ತುಂಬಾ ಜನಪ್ರಿಯ. ಇದನ್ನು ವಿಜಯದ ಕೋಟೆ ಎಂದೂ ಕೂಡಾ ಕರೆಯಲಾಗುತ್ತದೆ. ಮರಾಠಾ ಆಡಳಿತದ ಅವಧಿಯಲ್ಲಿ ಶಿವಾಜಿ ಮಹಾರಾಜನಿಂದ ಇದನ್ನು ಕಟ್ಟಲ್ಪಟ್ಟಿತು. ಸುಮಾರು 300 ವರ್ಷಗಳಿಗಿಂತಲೂ ಹಿಂದೆ, 17ನೇ ಶತಮಾನದಲ್ಲಿ ಇದನ್ನು ನಿರ್ಮಿಸಲಾಗಿದೆ. ಈ ಕೋಟೆಯನ್ನು ಗೆರಿಯಾ ಎಂದೂ ಕೂಡಾ ಕರೆಯಲಾಗುತ್ತದೆ. ಇದು ನಾಲ್ಕರಲ್ಲಿ ಮೂರು ಭಾಗಗಳಿಂದ ಸಮುದ್ರವೇ ಸುತ್ತುವರಿದಿರುವ ಪ್ರದೇಶವಾಗಿದೆ.

ಪೇಶ್ವೆ ಮತ್ತು ಮರಾಠಾ ಆಡಳಿತದಲ್ಲಿ ಈ ಕೋಟೆಯನ್ನು ಪರಿಗಣಿಸಬಹುದಾಗಿದ್ದು, ವಿದೇಶಿ ಶಕ್ತಿಗಳಿಂದ ಸುರಕ್ಷಿತವಾಗಿರುವುವದಕ್ಕೆ ಎಂತಲೇ ನಿರ್ಮಿಸಿಕೊಂಡ ತಾಣವಾಗಿದೆ ಎಂದು ಹೇಳಬಹುದಾಗಿದೆ. ಕೋಟೆಗೆ ಮೂರು ಸುತ್ತಿನ ಗೋಡೆಗಳಿದ್ದು, ಹಲವು ಟವರ್ ಗಳು ಮತ್ತು ಕಟ್ಟಡಗಳು ಇವೆ. ಇದರಿಂದಾಗಿ ಕೋಟೆಯು ದುರ್ಗಮ ಎನ್ನಿಸಿದೆ. ಸುಮಾರು 17 ಎಕರೆಯಷ್ಟು ವಿಶಾಲವಾಗಿದೆ ಈ ಕೋಟೆ.

ಬೃಹತ್ತಾದ ಈ ಕೋಟೆಯನ್ನು ನಂತರ ಬ್ರಿಟಿಷರಿಂದ ಆಕ್ರಮಿಸಿಕೊಳ್ಳಲ್ಪಟ್ಟು, ಅಗಸ್ಟಸ್ ಕೋಟೆ ಮತ್ತು ಓಶಿಯನ್‌ ಕೋಟೆ ಎಂದು ನಾಮಾಂಕಿತವಾಗಿತ್ತು. ಶತಮಾನಗಳಷ್ಟು ಹಿಂದಿನ ಈ ಕೋಟೆಯ ವಾಸ್ತುಶಿಲ್ಪ ಕುತೂಹಲಗಳನ್ನು ಕಣ್ತುಂಬಿಕೊಳ್ಳಬಹುದು.

ಈ ಕೋಟೆಯು ವಾಸ್ತುಶಿಲ್ಪಶಾಸ್ತ್ರದಲ್ಲೇ ಅತ್ಯಮೋಘವಾಗಿದೆ. ಯಾಕೆಂದರೆ ಇದರ ನಿರ್ಮಾಣದಲ್ಲಿ ಶಿವಾಜಿಯೇ ಹೆಚ್ಚಿನ ಮುತುವರ್ಜಿ ವಹಿಸಿದ್ದ. ಖಾರ್ಪೇತನ್‌ ಬಂದರು ಇದಕ್ಕೆ ಹೊಂದಿಕೊಂಡಂತಿದ್ದು, ದೊಡ್ಡ ದೊಡ್ಡ ಹಡಗುಗಳು ಇದರ ಒಳಗೆ ಬಂದರೆ ಹೊರ ಜಗತ್ತಿಗೆ ಕಾಣಿಸದಂತಿದೆ. ಮರಾಠಾ ರಾಜರಿಂದ ಈ ಬಂದರನ್ನು ಯುದ್ಧ ಹಡಗುಗಳ ನಿರ್ವಹಣೆಗೆ ಬಳಸಲ್ಪಡುತ್ತಿತ್ತು. ಈ ಕೋಟೆಯು ನಂತರದಲ್ಲಿ ಈಸ್ಟರ್ನ್‌ ಗಿಬ್ರಾಲ್ಟರ್ ಎಂದು ಹೆಸರು ಪಡೆದಿತ್ತು. ಅರೇಬಿಯನ್‌ ಸಮುದ್ರದಲ್ಲಿ ನಿರ್ಮಾಣಗೊಂಡ ಈ ಕೋಟೆಯ ಉದ್ದೇಶ ರಕ್ಷಣೆಯದ್ದಾಗಿತ್ತು.

ನಾವಲ್‌ ಡಾಕ್‌ನಲ್ಲಿ ಮರಾಠಾ ಯುದ್ಧ ಹಡಗುಗಳನ್ನು ರಿಪೇರಿ ಮಾಡಲಾಗುತ್ತಿತ್ತು. ಇದನ್ನು ವಾಗ್ಜೋತನ್‌ ಬಂದರು ಎಂದು ಕರೆಯಲಾಗುತ್ತಿತ್ತು. ಕೋಟೆಯಿಂದ ಸುಮಾರು ಒಂದೂವರೆ ಕಿಲೋಮೀಟರು ದೂರದಲ್ಲಿದೆ.

ಶಿವಾಜಿಯ ಕೇಸರಿ ಬಾವುಟ ಹಾರಿದ ಕೋಟೆಗಳಲ್ಲಿ ಇವೆರಡೇ ಆಗಿದೆ. ಇನ್ನೊಂದು ಎಂದರೆ ತೋರಣ ಕೋಟೆ. ಸುತ್ತಲಿನ ಪ್ರದೇಶದಲ್ಲಿ ಹಲವು ದೇಗುಲಗಳು ಕಾಣಸಿಗುತ್ತವೆ. ಮಾರುತಿಯಿಂದ ಮಹಾಪುರುಷ ಮತ್ತು ಮಹಾದೇವರ ದೇವಸ್ಥಾನಗಳನ್ನು ನಿರ್ಮಿಸಲಾಗಿದೆ. ಇಲ್ಲಿ ತುಂಬಾ ಹಳೆಯದಾದ ರಾಮೇಶ್ವರ ದೇವಸ್ಥಾನವನ್ನು ನೀವು ವೀಕ್ಷಿಸಬಹುದು. ಹಿಂದು ಭಕ್ತರಿಗೆ ಇದೊಂದು ತುಂಬಾ ಜನಪ್ರಿಯವಾದ ದೇವಸ್ಥಾನವಾಗಿದೆ.

ನಿಮ್ಮ ಪ್ರವಾಸದಲ್ಲಿ ಕಳೆದುಕೊಳ್ಳಬಾರದ್ದು..!

ವಿಜಯದುರ್ಗಕ್ಕೆ ಬಂದು ನೀವು ಇಲ್ಲಿನ ಸ್ಥಳೀಯ ರುಚಿಯನ್ನು ಸವಿಯದೇ ಹೋಗುವ ಹಾಗಿಲ್ಲ. ಮಾಲ್ವಾನಿ ಕರಿಯನ್ನು ನೀವು ಸವಿಯಲೇಬೇಕು. ಸೋಲ್‌ ಕಡಿಯನ್ನೂ ಕೂಡಾ ನೀವು ಮಿಸ್‌ ಮಾಡಿಕೊಳ್ಳಬಾರದು. ಮೀನು ಇಷ್ಟಪಡುವವರಾದರೆ, ವಿವಿಧ ರೀತಿಯ ಮೀನುಗಳು ಇಲ್ಲಿ ನಿಮಗೆ ಸಿಗುತ್ತವೆ.

ಇಲ್ಲಿನ ಜನ ಆತ್ಮೀಯರಾಗುತ್ತಾರೆ ಮತ್ತು ತುಂಬಾ ಮುತುವರ್ಜಿ ವಹಿಸುತ್ತಾರೆ. ವಸತಿಯು ಇಲ್ಲಿ ನಿಮಗೆ ಸಮಸ್ಯೆಯಾಗಲಾರದು. ಬೇಸಿಗೆಗಾಲದಲ್ಲಿ ನೀವು ವಿಜಯದುರ್ಗಕ್ಕೆ ಪ್ರವಾಸ ಕೈಗೊಳ್ಳುತ್ತೀರಾದರೆ, ಇಲ್ಲಿಯೇ ಬೆಳೆದ ರುಚಿಯಾದ ಮಾವಿನ ಹಣ್ಣನ್ನು ತಿನ್ನುವುದಕ್ಕೆ ಹಿಂಜರಿಯಬೇಡಿ. ಗೇರುಬೀಜ ಫ್ಯಾಕ್ಟರಿಗೆ ಒಮ್ಮೆ ಭೇಟಿಕೊಡಿ ಮತ್ತು ಅಲ್ಲಿ ಹೇಗೆ ಗೇರು ಬೀಜವು ಸಂಸ್ಕರಣಗೊಳ್ಳುತ್ತದೆ ಎಂಬುದನ್ನು ಕಣ್ಣಾರೆ ನೋಡಿ.

ಕೆಲವು ಹೆಚ್ಚಿನ ಸಂಗತಿಗಳು

ಅರೆ ಉಷ್ಣವಲಯ ವಾತಾವರಣವು ವಿಜಯದುರ್ಗವನ್ನು ಯಾವತ್ತೂ ಶಾಂತವಾಗೇ ಇಟ್ಟಿರುತ್ತದೆ. ಬೇಸಿಗೆ ಕಾಲದ ಪ್ರವಾಸವು ಅತಿಯಾದ ಉಷ್ಣವಾಗಿದ್ದು, ಹೆಚ್ಚಿನ ಬಿಸಿಲು ರಾಚುತ್ತಿರುತ್ತದೆ. ಮಾನ್ಸೂನ್‌ನಲ್ಲಿ ಸಮೃದ್ಧ ಮಳೆ ಬೀಳುತ್ತಿದ್ದು, ಈ ಪ್ರದೇಶಕ್ಕೆ ಉತ್ತಮವಾದ ನೋಟವನ್ನು ಒದಗಿಸುತ್ತದೆ. ಚಳಿಗಾಲವು ಈ ಪ್ರದೇಶವನ್ನು ಭೇಟಿ ಮಾಡಲು ಸೂಕ್ತ ಸಮಯ. ವಾತಾವರಣವು ತಂಪಾಗಿರುತ್ತದೆ. ಈ ಸಂದರ್ಭದಲ್ಲಿ ಸಣ್ಣ ಪಟ್ಟಣದ ಸೌಂದರ್ಯವನ್ನು ಸವಿಯಬಹುದು.

ವಿಜಯದುರ್ಗವು ಮಹಾರಾಷ್ಟ್ರದಿಂದ ಮತ್ತು ಇತರ ನಗರಗಳಿಂದ ಸುಲಭ ಸಾರಿಗೆ ಸೌಲಭ್ಯವನ್ನು ಹೊಂದಿದೆ. ವಿಮಾನದ ಮೂಲಕ ನೀವು ಪ್ರವಾಸ ಮಾಡುತ್ತೀರಾದರೆ, ಸಮೀಪದ ಗೋವಾದ ಪಣಜಿಯಲ್ಲಿ ವಿಮಾನ ನಿಲ್ದಾಣವಿದೆ. ಅಲ್ಲಿಂದ ನೀವು ಕ್ಯಾಬನ್ನು ಬಾಡಿಗೆ ಪಡೆದುಕೊಂಡು ಈ ಪ್ರದೇಶ ತಲುಪಬಹುದು. ರೈಲಿನ ಮೂಲಕ ಪ್ರವಾಸ ಮಾಡುತ್ತೀರಾದರೆ ಕುಡಾಲ್ ಅಥವಾ ರಾಜಪುದಲ್ಲಿನ ಯಾವುದಾದರೂ ನಿಲ್ದಾಣದಲ್ಲಿ ಇಳಿದುಕೊಳ್ಳಬಹುದು. ವಿಜಯದುರ್ಗವು ಪ್ರಮುಖ ನಗರಗಳಾದ ಪುಣೆ, ಮುಂಬೈ ಮತ್ತು ಇತರ ಹಲವು ನಗರಗಳಿಗೆ ನೇರ ಸಂಪರ್ಕವನ್ನು ಹೊಂದಿದೆ. ರಾಜ್ಯ ಸಾರಿಗೆ ಬಸ್‌ಗಳು ಮತ್ತು ಖಾಸಗಿ ಬಸ್‌ಗಳ ಸಂಪರ್ಕ ಕೂಡಾ ಇಲ್ಲಿಗೆ ಇದೆ.

ಮಹಾರಾಷ್ಟ್ರ ಸರ್ಕಾರವು ವಿಜಯದುರ್ಗವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವತ್ತ ಗಮನ ಹರಿಸಿದೆ. ಆದ್ದರಿಂದ ನೀವು ವಾಸ್ತುಶಿಲ್ಪ ಪ್ರೇಮಿಗಳಾದರೆ ಅಥವಾ ಪ್ರವಾಸವನ್ನು ಇಷ್ಟಪಡುವವರಾದರೆ, ಈ ಪ್ರದೇಶಕ್ಕೆ ನೀವು ಮುಕ್ತವಾಗಿ ಭೇಟಿ ನೀಡಬಹುದು. ನಿಮ್ಮ ಕಣ್ಮನ ಸಮೃದ್ಧಗೊಳಿಸುವ ಕೆಲಸವನ್ನು ವಿಜಯದುರ್ಗವು ನಿಶ್ಯಂಕೆಯಿಂದ ಮಾಡುತ್ತದೆ.

ವಿಜಯದುರ್ಗ ಪ್ರಸಿದ್ಧವಾಗಿದೆ

ವಿಜಯದುರ್ಗ ಹವಾಮಾನ

ಉತ್ತಮ ಸಮಯ ವಿಜಯದುರ್ಗ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ವಿಜಯದುರ್ಗ

 • ರಸ್ತೆಯ ಮೂಲಕ
  ಮುಂಬೈ, ರಾಜಪುರ ಇತ್ಯಾದಿ ಪ್ರಮುಖ ನಗರಗಳಿಂದ ವಿಜಯದುರ್ಗಕ್ಕೆ ಬಸ್‌ ಸೌಲಭ್ಯ ನಿರಂತರವಾಗಿದೆ. ನೀವು ಬಸ್‌ನ ವಿಧಗಳನ್ನು ಆಯ್ಕೆ ಮಾಡಿಕೊಳ್ಳುವ ಪ್ರಮಾಣದಲ್ಲಿ, (ಡಿಲಕ್ಸ್, ಲಕ್ಷುರಿ, ಹವಾನಿಯಂತ್ರಿತ, ಹವಾನಿಯಂತ್ರಿತವಲ್ಲದ್ದು) ಬೆಲೆಯಲ್ಲಿ ವ್ಯತ್ಯಾಸವಾಗುತ್ತದೆ. ಸರಾಸರಿಯಾಗಿ ಟಿಕೆಟ್ ದರವು ಮುಂಬೈನಿಂದ 400 ರೂ. ಮತ್ತು ಗೋವಾದಿಂದ 300 ರೂ ಆಗಲಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಸಮೀಪದ ರೈಲ್ವೇ ನಿಲ್ದಾಣವು ಕುಡಲ್ ಮತ್ತು ರಾಜಪುರವಾಗಿದೆ. ಸಾಮಾನ್ಯ ರೈಲುಗಳು ಪ್ರತಿದಿನವೂ ಬಹುತೇಕ ಎಲ್ಲಾ ನಗರಗಳಿಂದ, ಪಟ್ಟಣಗಳಿಂದ ಆಗಮಿಸುತ್ತವೆ. ಟಿಕೆಟ್‌ ದರವು ಸಾಮಾನ್ಯವಾಗಿ 350 ರೂ ಗೆ ಹತ್ತಿರದಲ್ಲಿರುತ್ತದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಗೋವಾದಲ್ಲಿನ ಪಣಜಿ ವಿಮಾನ ನಿಲ್ದಾಣವು ವಿಜಯದುರ್ಗಕ್ಕೆ ಸಮೀಪದ್ದು. ಮುಖ್ಯ ಪಟ್ಟಣದಿಂದ ಇಲ್ಲಿಗೆ ಸುಮಾರು 180 ಕಿ.ಮೀ ದೂರವಿದೆ. ವಿಮಾನ ನಿಲ್ದಾಣದಿಂದ ಮತ್ತು ಬಸ್‌ಗಳ ಮೂಲಕ ವಿಜಯದುರ್ಗಕ್ಕೆ ಆಗಮಿಸಬಹುದು.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
15 Jun,Tue
Return On
16 Jun,Wed
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
15 Jun,Tue
Check Out
16 Jun,Wed
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
15 Jun,Tue
Return On
16 Jun,Wed