Search
  • Follow NativePlanet
Share
ಮುಖಪುಟ » ಸ್ಥಳಗಳು » ರೇಡಿ » ಹವಾಮಾನ

ರೇಡಿ ಹವಾಮಾನ

ವರ್ಷವಿಡಿ ರೇಡಿಯಲ್ಲಿ ಸಾಮಾನ್ಯವಾಗಿ ತಂಗಾಳಿಯುಕ್ತ ಶೆಕೆಯ ವಾತಾವರಣವಿರುತ್ತದೆ. ಪ್ರವಾಸಿಗರು ಚಳಿಗಾಲದಲ್ಲಿ ಇಲ್ಲಿಗೆ ಭೇಟಿ ನೀಡಿದರೆ ಸುತ್ತಲಿನ ಎಲ್ಲಾ ತಾಣಗಳಿಗೂ ಹೋಗಿ ಪ್ರವಾಸವನ್ನೂ ಎಂಜಾಯ್ ಮಾಡಬಹುದು.

ಬೇಸಿಗೆಗಾಲ

ಮಾರ್ಚ್ ನಿಂದ ಹಿಡಿದು ಮೇ ತಿಂಗಳವರೆಗೂ ಇಲ್ಲಿ ಬೇಸಿಗೆ ಇರುತ್ತದೆ. ಈ ಸಮಯದಲ್ಲಿ ತಾಪಮಾನ ಕನಿಷ್ಠಿ 32 ಡಿಗ್ರಿಯಿಂದ 38 ಡಿಗ್ರಿ ಸೆಲ್ಶಿಯಸ್ ಇರುತ್ತದೆ. ಇಡಿ ವರ್ಷದಲ್ಲಿ ಮೇ ತಿಂಗಳಲ್ಲಿ ಅತ್ಯಂತ ಹೆಚ್ಚು ಬಿಸಿಲು ಇರುತ್ತದೆ.

ಮಳೆಗಾಲ

ವರ್ಷದಲ್ಲಿ ಜೂನ್ ನಿಂದ ಸೆಪ್ಟೆಂಬರ್ ತಿಂಗಳವರೆಗೆ ರೇಡಿಯಲ್ಲಿ ಭಾರೀ ಮಳೆ ಬೀಳುತ್ತದೆ. ಸದಾ ದಟ್ಟವಾಗಿ ಮೊಡ ಕವಿದು ಮಳೆಯಾಗುತ್ತಿರುತ್ತದೆ. ಪ್ರವಾಸಿಗರು ಈ ತಿಂಗಳುಗಳಲ್ಲಿ ಭೇಟಿ ನೀಡದೆ ಇರುವುದು ಉತ್ತಮ. ಮಳೆಯ ನಂತರದ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುವುದು ಸೂಕ್ತವಾದ ಕಾಲವಾಗಿದೆ.

ಚಳಿಗಾಲ

ಡಿಸೆಂಬರ್ ತಿಂಗಳಲ್ಲಿ ಚಳಿಗಾಲ ಆರಂಭವಾಗುತ್ತದೆ, ರೇಡಿಯಲ್ಲಿ ಚಳಿ ಅಷ್ಟಾಗಿ ಇರುವುದಿಲ್ಲವಾದ್ದರಿಂದ ತಾಪಮಾನ ಹಿತವಾಗಿರುತ್ತದೆ. ಟೆಂಪರೇಚರ್ ಕನಿಷ್ಠ 12 ರಿಂದ ಗರಿಷ್ಠ 33 ಡಿಗ್ರಿ ಸೆಲ್ಶಿಯಸ್ ವರೆಗೆ ಇರುತ್ತದೆ. ಚಳಿಯು ಫೆಬ್ರುವರಿ ತಿಂಗಳು ಕಳೆಯುತ್ತಿದ್ದಂತೆ ಸಂಪೂರ್ಣ ಕಡಿಮೆಯಾಗುತ್ತದೆ. ಈ ಸಮಯದಲ್ಲಿ ಪ್ರವಾಸಕ್ಕೆ ಇಲ್ಲಿಗೆ ಬರಬಹುದು.