Search
  • Follow NativePlanet
Share
ಮುಖಪುಟ » ಸ್ಥಳಗಳು » ರೇಡಿ » ಆಕರ್ಷಣೆಗಳು » ರೇಡಿ ಗಣಪತಿ

ರೇಡಿ ಗಣಪತಿ, ರೇಡಿ

1

ರೇಡಿ ಗ್ರಾಮ ಇಷ್ಟೊಂದು ಹೆಸರುವಾಸಿಯಾಗಲು ಇಲ್ಲಿರುವ ರೇಡಿ ಗಣಪತಿಯೇ ಪ್ರಮುಖ ಕಾರಣ. ಈ ಜನಪ್ರಿಯ ಗಣಪತಿಯ ಹಿಂದಿರುವ ಕಥೆ ಕೇವಲ ಆಶ್ಚರ್ಯಕರ ಮಾತ್ರವಲ್ಲ ದಿಗ್ಭ್ರಮೆ ಹುಟ್ಟಿಸುವಂತದ್ದಾಗಿದೆ.

ಇದು 1976 ರಲ್ಲಿ ನಡೆದ ಘಟನೆ, ಅದೇ ವರ್ಷ ಏಪ್ರಿಲ್ 18 ರಂದು ಸದಾನಂದ ನಾಗೇಶ್ ಕಂಬಲಿ ಎಂಬ ಒಬ್ಬ ಟ್ರಕ್ ಚಾಲಕ ತನ್ನ ಟ್ರಕ್ಕನ್ನು ರಾತ್ರಿ ರೇಡಿಯಲ್ಲಿ ನಿಲ್ಲಿಸಿ ಮಲಗಿದ್ದಾಗ ಆತನ ಕನಸಿನಲ್ಲಿ ಗಣೇಶ ಪ್ರತ್ಯಕ್ಷನಾಗಿ ಇದೇ ಸ್ಥಳದಲ್ಲಿ ಹಳ್ಳ ತೆಗೆದರೆ ತನ್ನನ್ನು ಕಾಣಬಹುದು ಎಂಬುದಾಗಿ ತಿಳಿಸದನಂತೆ. ಗಣೇಶನ ಭಕ್ತನಾಗಿದ್ದ ಸದಾನಂದ ಸ್ಥಳೀಯರಿಗೆ ವಿಷಯ ತಿಳಿಸಿ ಆ ಸಮುದ್ರ ತೀರದಲ್ಲಿ ಅಗೆದಾಗ ಅಲ್ಲಿ ಗಣೇಶನ ವಿಗ್ರಹ ಸಿಕ್ಕಿತು ಎಂದು ಹೇಳಲಾಗುತ್ತದೆ.

ಈ ವಿಗ್ರಹ ಬಗ್ಗೆ ಅಧ್ಯಯನ ಮಾಡಿದಾಗ ಇದು ಪಾಂಡವರ ಕಾಲದಲ್ಲಿ ಕೆತ್ತಿದ ವಿಗ್ರಹ ಎಂದು ತಿಳಿದು ಬಂತು. ನಂತರದ ಅನ್ವೇಷಣೆ ಮುಂದುವರೆದಾಗ ಗಣೇಶನ ವಾಹನವಾದ ಮೂಶಿಕನ ವಿಗ್ರಹವೂ ಅದರ ಸಮೀಪದಲ್ಲೆ ದೊರಕಿದೆ.

ಗಣೇಶನ ಈ ವಿಗ್ರಹವು 6 ಅಡಿ ಎತ್ತರ ಹಾಗೂ 4 ಅಡಿ ಅಗಲವಿದ್ದು ನೋಡಲು ಅನನ್ಯ ಭಕ್ತಿ ಮೂಡಿಸುವಂತಿದೆ. ದೇವಾಲಯದ ಸುತ್ತಲಿನ ಪ್ರದೇಶ ಸುಂದರವಾದ ನೈಸರ್ಗಿಕ ಸೌಂದರ್ಯವನ್ನು ಹೊಂದಿದ್ದು ಗಣೇಶ ಚತುರ್ಥಿ ಹಾಗೂ ಗಣೇಶ ಚೌತಿಯಂದು ಸಾವಿರಾರು ಭಕ್ತರು ಇಲ್ಲಿಗೆ ಬಂದು ಪೂಜಾವಿಧಿ ವಿಧಾನಗಳನ್ನು ನೆರವೇರಿಸುತ್ತಾರೆ.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri