Search
  • Follow NativePlanet
Share
ಮುಖಪುಟ » ಸ್ಥಳಗಳು» ಜುನ್ನಾರ್

ಜುನ್ನಾರ್ - ಧಾರ್ಮಿಕ, ಐತಿಹಾಸಿಕ ಹಾಗು ವಾಸ್ತುಶಿಲ್ಪದ ಕೇಂದ್ರ

15

ದೇಶೀಯ ಪ್ರವಾಸಿಗರ ಅತ್ಯಂತ ಜನಪ್ರಿಯ ತಾಣಗಳಲ್ಲಿ ಒಂದಾದ ಜುನ್ನಾರ್ ಮಹಾರಾಷ್ಟ್ರ ರಾಜ್ಯದ ಪುಣೆ ಜಿಲ್ಲೆಯಲ್ಲಿದೆ. ಜುನ್ನಾರ್ ನಗರವು ಪ್ರಾಚೀನ ದೇವಾಲಯಗಳಿಂದ ಹಿಡಿದು ವಾಸ್ತುಶಿಲ್ಪದ ಅದ್ಭುತ ಗುಹೆಗಳು ಮತ್ತು ಕೋಟೆಗಳ ವರೆಗಿನ ತನ್ನ ಧಾರ್ಮಿಕ, ಐತಿಹಾಸಿಕ ಮತ್ತು ಪೌರಾಣಿಕ ಆಕರ್ಷಣೆಗಳಿಂದ ಅತಿಥೇಯರಲ್ಲಿ ಹೆಸರುವಾಸಿಯಾಗಿದೆ.

ಸಹ್ಯಾದ್ರಿ ಪರ್ವತ ಶ್ರೇಣಿಗಳ ತಪ್ಪಲಿನಲ್ಲಿರುವ ಜುನ್ನಾರ್ ನಗರವು ಪುಣೆಯಿಂದ ಉತ್ತರಕ್ಕೆ 94 ಕಿಮೀ ದೂರದಲ್ಲಿ ಮತ್ತು ಮುಂಬೈ ಮಹಾನಗರದಿಂದ ಸುಮಾರು ನೂರು ಕಿಲೋಮೀಟರ್ ದೂರದಲ್ಲಿರುವ ಈ ನಗರವು ಸಮುದ್ರ ಮಟ್ಟದಿಂದ ಅತ್ಯಂತ ಎತ್ತರ ಅಂದರೆ  2260 ಅಡಿ ಎತ್ತರದಲ್ಲಿದೆ.

ಜುನ್ನಾರ್ - ಒಂದು ಐತಿಹಾಸಿಕ ನಗರ

ಜುನ್ನಾರ ನಗರವು ಒಂದು ಸಾವಿರ ವರ್ಷಗಳಷ್ಟು ಹಿಂದಿನ ಇತಿಹಾಸವನ್ನು ಹೊಂದಿದ್ದು, ಪ್ರಮುಖ ಐತಿಹಾಸಿಕ ಸ್ಥಳವಾದ ಮರಾಠರ ಮಹಾನ ರಾಜನಾದ ಛತ್ರಪತಿ ಶಿವಾಜಿ ರಾಜೇ ಭೋಂಸ್ಲೆಯ ಜನ್ಮಸ್ಥಳವೆಂಬ ಖ್ಯಾತಿ ಹೊಂದಿದ ಶಿವನೇರಿ ಕೋಟೆಯು ನಗರದ ಸನಿಹದಲ್ಲೇ ಇದೆ.

ಜುನ್ನಾರ ನಗರವು ಮೂಲತಃ ಜಿಮಾ ನಗರ ಎಂದು ಕರೆಯಲ್ಪಡುತ್ತಿದ್ದು ಶಾಖ ರಾಜವಂಶದ ರಾಜನಾದ ನಹಪಾನನ ಪೀಠ ಸ್ಥಾನವಾಗಿತ್ತು. ಆದರೆ  ನಂತರದ ಕಾಲದಲ್ಲಿ  ಈ ನಗರವು ಶಾತವಾಹನರ ರಾಜ ಶಾತಕರ್ಣಿಯ ಪಾಲಾಯಿತು. ಅವನ ಆಳ್ವಿಕೆಯಲ್ಲಿ, ಅಂದಿನ ವಾಣಿಜ್ಯ ಮಾರ್ಗವಾದ  ನಾನೆಘಾಟ್ ನ ಮೇಲೆ ಹದ್ದಿನ ಕಣ್ಣಿಡುವ ದೃಷ್ಟಿಯಿಂದ ಶಿವನೇರಿ ಕೋಟೆಯನ್ನು ನಿರ್ಮಿಸಲಾಯಿತು.

ವಾಸ್ತುಶಿಲ್ಪದ ಕೇಂದ್ರ

ವಾಸ್ತುಶಿಲ್ಪದ ಕೇಂದ್ರವಾಗಿರುವ ಜುನ್ನಾರ್ ನ ಗುಹೆಗಳು ಕೂಡ ನಗರಕ್ಕೆ ಜನಪ್ರಿಯತೆಯನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿವೆ. ಮನ್ಮೊದಿ ಬೆಟ್ಟಗಳ ಗುಂಪು, ಗಣೇಶ್ ಲೆನಾ ಗುಂಪು ಮತ್ತು ತುಲಿಜಾ ಲೆನಾ ಗುಂಪುಗಳೆಂಬ ಗುಹೆಗಳ ಮೂರು ಗುಂಪುಗಳು ಇಲ್ಲಿದ್ದು, ಎಲ್ಲಾ ಗುಹೆಗಳೂ ಕಲ್ಲಿನಲ್ಲಿ ಕೆತ್ತಲಾದ ಸುಂದರ ಶಿಲ್ಪಗಳನ್ನು ಹೊಂದಿವೆ.

ಜೊತೆಗೆ, ಬಂಡೆಯಲ್ಲಿ ಕಟ್ಟಿದ 30 ಗುಹೆಗಳ ಸಮೂಹವಾದ ಲೆನ್ಯಾದ್ರಿ ಗುಹೆಗಳು ಇಲ್ಲಿನ ಮತ್ತೊಂದು ಆಕರ್ಷಣೆಯಾಗಿವೆ.

ಜುನ್ನಾರ್ ಬಗ್ಗೆ ಇರುವ ಒಂದು ಕುತೂಹಲಕಾರಿ ಸಂಗತಿಯೆಂದರೆ, ಇದು 500 ಚದರ ಕಿಮೀ ವಿಸ್ತೀರ್ಣವಿರುವ ಬೃಹತ ಪ್ರದೇಶದಲ್ಲಿ ಚಿರತೆಗಳ ಆವಾಸ ಸ್ಥಾನವನ್ನು ಹೊಂದಿದೆ. ವಾಯುಯಾನ, ರೈಲು ಮತ್ತು ರಸ್ತೆ ಮೂರೂ ರೀತಿಯ ಸಾರಿಗೆ ವಿಧಾನಗಳಿಂದ ಜುನ್ನಾರ್ ಗೆ ತಲುಪಬಹುದಾಗಿದ್ದು, ವರ್ಷ ಪೂರ್ತಿ ತಂಪಾದ, ಆಹ್ಲಾದಕರವಾದ ಹವಾಮಾನವನ್ನು ಹೊಂದಿರುತ್ತದೆ. ರಜಾಕಾಲದ ವಿಹಾರಕ್ಕಾಗಿ ಇದು ಅಮೋಘವಾದ ತಾಣವಾಗಿದೆ.

ಜುನ್ನಾರ್ ಪ್ರಸಿದ್ಧವಾಗಿದೆ

ಜುನ್ನಾರ್ ಹವಾಮಾನ

ಉತ್ತಮ ಸಮಯ ಜುನ್ನಾರ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಜುನ್ನಾರ್

  • ರಸ್ತೆಯ ಮೂಲಕ
    ರಸ್ತೆ ಪ್ರಯಾಣದಲ್ಲಿ ಸರ್ಕಾರಿ ಸಾರಿಗೆ ಬಸ್ ಗಳು ಮತ್ತು ಖಾಸಗಿ ಪ್ರವಾಸದ ಬಸ್ ಗಳು ಲಭ್ಯವಿದ್ದು , ಕಡಿಮೆ ವೆಚ್ಚದ ಪ್ರಯಾಣವನ್ನೊದಗಿಸುತ್ತವೆ. ಪುಣೆಯಿಂದ ಪ್ರತಿ ಗಂಟೆಗೊಂದರಂತೆ ಜುನ್ನಾರ್ ಗೆ ಸಾಮಾನ್ಯ ಬಸ್ಸುಗಳಿವೆ. ಬಸ್ ಪ್ರಯಾಣವು ಸುಖಕರ ಪ್ರಯಾಣ ಮಾತ್ರವಲ್ಲದೇ ಕೈಗೆಟುಕುವ ದರದಲ್ಲಿರುತ್ತದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಪುಣೆಯ ರೈಲ್ವೆ ನಿಲ್ದಾಣವು ಜುನ್ನಾರ್ ನಗರದ ಹತ್ತಿರದ ರೈಲು ತುದಿಯಾಗಿದೆ. ಈ ನಿಲ್ದಾಣವು ನಿಯಮಿತ ದೂರಪ್ರಯಾಣದ ರೈಲುಗಳ ಮೂಲಕ ಮುಂಬೈ ಮತ್ತು ನಾಗ್ಪುರದಂತಹ ಇತರ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ನಿಲ್ದಾಣದ ಬಳಿ ಲಭ್ಯವಿರುವ ಟ್ಯಾಕ್ಸಿಗಳು ಮತ್ತು ಬಸ್ಸುಗಳ ಸಹಾಯದಿಂದ ಜುನ್ನಾರನ್ನು ತಲುಪಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಜುನ್ನಾರ್ ಗೆ 177 ಕಿಮೀ ದೂರವಿರುವ ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು, ಹತ್ತಿರದ ಪ್ರಮುಖ ವಿಮಾನ ನಿಲ್ದಾಣವಾಗಿದೆ. ಈ ವಿಮಾನ ನಿಲ್ದಾಣವು ಮಹಾರಾಷ್ಟ್ರ ರಾಜ್ಯದ ಒಳಗೆ ಹಾಗೂ ಹೊರಗೆ ಎಲ್ಲಾ ಪ್ರಮುಖ ನಗರಗಳೊಂದಿಗೆ ಸಂಪರ್ಕ ಹೊಂದಿದೆ. ಇಲ್ಲಿಂದ ಹಲವಾರು ಟ್ಯಾಕ್ಸಿಗಳು ಮತ್ತು ಕ್ಯಾಬ್ಗಳು ಕಿ.ಮಿ. ಗೆ 7 ರೂಪಾಯಿ ದರದಲ್ಲಿ ನಿಮ್ಮನ್ನು ಜುನ್ನಾರಿಗೆ ತಲುಪಿಸುತ್ತವೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri