Search
 • Follow NativePlanet
Share
ಮುಖಪುಟ » ಸ್ಥಳಗಳು» ಕಮ್‍ಶೆಟ್

ಕಮ್‍ಶೆಟ್ - ಸಿನಿಮೀಯ ರೀತಿಯ ಸಾಹಸಿ ತಾಣ

8

ಕಮ್‍ಶೆಟ್ ಎಂಬುದು ಮಹಾರಾಷ್ಟ್ರದ ಲೋನಾವಲಾ ಮತ್ತು ಪುಣೆ ನಡುವೆ ಇರುವ ಒಂದು ಸಣ್ಣ ಪಟ್ಟಣವಾಗಿದೆ. ತನ್ನಲ್ಲಿರುವ ಪ್ಯಾರಾಗ್ಲೈಡಿಂಗ್ ಕ್ಲಬ್‍ಗಳಿಗೆ ಮತ್ತು ಪ್ರಾಕೃತಿಕ ವೈಭವಕ್ಕೆ ಈ ಊರು ಹೆಸರುವಾಸಿಯಾಗಿದೆ. ಕಮ್‍ಶೆಟ್‍ಗೆ ಇತ್ತೀಚಿನ ದಿನಗಳಲ್ಲಿ ಮುಂಬಯಿ ಮತ್ತು ಪುಣೆಯ ನಿವಾಸಿಗಳು ತಮ್ಮ ವಾರಾಂತ್ಯವನ್ನು ಕಳೆಯಲು ಇಲ್ಲಿಗೆ ಆಗಮಿಸುತ್ತಿರುತ್ತಾರೆ, ಹಾಗಾಗಿ ಇತ್ತೀಚೆಗೆ ಇದು ಒಂದು ಪ್ರವಾಸಿ ತಾಣವಾಗಿ ರೂಪುಗೊಂಡಿದೆ. ಕಮ್‍ಶೆಟ್ ಖಂಡಾಲಾ ಮತ್ತು ಲೋನಾವಲಾದಿಂದ ಸುಮಾರು 15 ಕಿ.ಮೀ ದೂರದಲ್ಲಿದೆ. ಅಲ್ಲದೆ ಮುಂಬಯಿಯಿಂದ 115 ಕಿ.ಮೀ ಮತ್ತು ಪುಣೆಯಿಂದ 60 ಕಿ.ಮೀ ದೂರದಲ್ಲಿದೆ.

ಅಂಬರಕ್ಕೆ ಹಾರಿ...

ಹೊರಾಂಗಣ ಚಟುವಟಿಕೆಗಳಲ್ಲಿ ಪಾಲ್ಗೋಳ್ಳುವ ಸಾಹಸಿ ಮನೋಭಾವದ ಉತ್ಸಾಹಿಗಳಿಗೆ ಆಕಾಶದಲ್ಲಿ ಹಾರಾಡುವುದು ಹೆಬ್ಬಯಕೆಯಾಗಿರುತ್ತದೆ. ಕಮ್‍ಶೆಟ್‍ನಲ್ಲಿ ಅತ್ಯುತ್ತಮವಾದ ಪ್ಯಾರಾಗ್ಲೈಡಿಂಗ್ ಶಾಲೆಗಳಿದ್ದು, ಅವು ಪ್ರವಾಸಿಗರಿಗು ಸಹ ಪ್ಯಾರಾಗ್ಲೈಡಿಂಗ್ ಮಾಡುವ ಅವಕಾಶವನ್ನು ಒದಗಿಸುತ್ತವೆ. ಇಲ್ಲಿ ವೃತ್ತಿಪರ ಮತ್ತು ಹವ್ಯಾಸಿ ಪ್ಯಾರಾಗ್ಲೈಡಿಂಗ್‍ಗೆ ಅವಕಾಶಗಳು ಹೇರಳವಾಗಿ ದೊರೆಯುತ್ತವೆ. ಪ್ಯಾರಾಗ್ಲೈಡಿಂಗ್‍ಗೆ ಅವಕಾಶಗಳು ಕಾಕತಾಳೀಯವಾಗಿ ಗಾಳಿಪಟ ಹಾರಲು ಪ್ರಶಸ್ತವಾಗಿರುವ ಮಳೆಗಾಲದ ನಂತರದ ದಿನಗಳಲ್ಲಿ ಪ್ರಾರಂಭವಾಗುತ್ತದೆ.

ಗೋಪುರ ಬೆಟ್ಟ ಅಥವಾ ಟವರ್ ಹಿಲ್ ಎಂಬುದು 2500 ಅಡಿ ಎತ್ತರದಲ್ಲಿ ನೆಲೆಗೊಂಡಿದ್ದು, ಪ್ಯಾರ ಗ್ಲೈಡರ್ ಗಳು ಜಿಗಿಯುವ ಅತ್ಯುನ್ನತ ಸ್ಥಳವನ್ನು ಒಳಗೊಂಡಿದೆ. ಕಮ್‍ಶೆಟ್‍ನ ಹವಾಮಾನವು ಹಾರಾಡುತ್ತ ಮೋಜು ಮಾಡಲು ಅತ್ಯಂತ ಪ್ರಶಸ್ತವಾಗಿರುತ್ತದೆ.

ಆಕಾಶದಲ್ಲಿ ಹಾರಾಡುತ್ತ ಪ್ರವಾಸಿಗರು ಈ ಪ್ರಾಂತ್ಯದಲ್ಲಿರುವ ಪ್ರಸಿದ್ಧ ಪವ್ನ ಕೆರೆ ಮತ್ತು ಇನ್ನಿತರ ದೇವಾಲಯಗಳ ಪಕ್ಷಿನೋಟವನ್ನು ಕಾಣಬಹುದು. ಕಮ್‍ಶೆಟ್‍ನ ಗ್ಲೈಡಿಂಗ್ ಕ್ಲಬ್‍ಗಳು ಸ್ಥಳೀಯ ಅತಿಥಿ ಗೃಹಗಳು ಮತ್ತು ಹೋಟೆಲ್‍ಗಳ ಸಹಯೋಗವನ್ನು ಹೊಂದಿವೆ. ಹಾಗಾಗಿ ವಿದ್ಯಾರ್ಥಿ ಪೈಲಟ್‍ಗಳಿಗೆ ಉಳಿದುಕೊಳ್ಳಲು ವಸತಿಯನ್ನು ಹುಡುಕಾಡುವ ಗೊಜಲನ್ನು ಇವು ತಪ್ಪಿಸುತ್ತವೆ.

ಕಮ್‍ಶೆಟ್‍ನಲ್ಲಿ ಪ್ಯಾರಾ ಗ್ಲೈಡಿಂಗ್‍ ಹೊರತುಪಡಿಸಿ ಪವ್ನ ಕೆರೆ, ಸಮುದ್ರ ಮಟ್ಟದಿಂದ 2200 ಅಡಿ ಎತ್ತರದಲ್ಲಿರುವ ವಿಡಾವಲಿ ಕೆರೆ, ಕೊಂಡೇಶ್ವರ್ ದೇವಾಲಯ ಮತ್ತು ಈ ಪ್ರಾಂತ್ಯದಲ್ಲಿರುವ ಪ್ರಾಕೃತಿಕ ಗುಹೆಗಳನ್ನು ಸಹ ನೋಡಬಹುದು.

ಕಮ್‍ಶೆಟ್ ಪ್ರಸಿದ್ಧವಾಗಿದೆ

ಕಮ್‍ಶೆಟ್ ಹವಾಮಾನ

ಉತ್ತಮ ಸಮಯ ಕಮ್‍ಶೆಟ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಕಮ್‍ಶೆಟ್

 • ರಸ್ತೆಯ ಮೂಲಕ
  ಕಮ್‍ಶೆಟ್ ಮುಂಬಯಿ-ಪುಣೆ ಹೆದ್ದಾರಿಯಿಂದ 8 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ವಾಹನ ಸವಾರರಿಗೆ ಇದು ಅತ್ಯಂತ ಸುಲಭದ ಹಾದಿಯಾಗಿದೆ. ರೈಲಿನಲ್ಲಿ ಪ್ರಯಾಣ ಮಾಡುವ ಪ್ರವಾಸಿಗರು ತಮ್ಮದೆ ಆದ ಸ್ವಂತ ಕಾರನ್ನು ಕಮ್‍ಶೆಟ್‍ನ ಸುತ್ತ - ಮುತ್ತ ಇಡುವುದು ಅತ್ಯಂತ ಸೂಕ್ತ. ಆದರು ಇಲ್ಲಿಗೆ ತಲುಪಲು ಬೃಹತ್ ಪ್ರಮಾಣದಲ್ಲಿ ರಿಕ್ಷಾಗಳು ಲಭ್ಯವಿದೆ. ಆದರು ಇವುಗಳ ಬಾಡಿಗೆಯನ್ನು ಒಬ್ಬರೆ ಭರಿಸುವುದು ಅಸಾಧ್ಯ. ಹಾಗಾಗಿ ಇತರ ಪ್ರಯಾಣಿಕರ ಜೊತೆಗೆ ಬಾಡಿಗೆಯನ್ನು ಹಂಚಿಕೊಂಡು ಇಲ್ಲಿಗೆ ತಲುಪಬಹುದು.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಕಮ್‍ಶೆಟ್ ರೈಲು ನಿಲ್ದಾಣವು ಪುಣೆ - ಲೋನಾವಲಾ ಮಾರ್ಗದಲ್ಲಿ ನೆಲೆಸಿದೆ. ಇದು ಲೋನಾವಲಾದಿಂದ 22 ನಿಮಿಷದ ಪ್ರಯಾಣದಷ್ಟು ದೂರದಲ್ಲಿ ನೆಲೆಗೊಂಡಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಕಮ್‍ಶೆಟ್‍ಗೆ ಪೂರ್ವಭಾಗದಲ್ಲಿ ಪುಣೆ ವಿಮಾನ ನಿಲ್ದಾಣವಿದೆ. ಪಶ್ಚಿಮದಲ್ಲಿ ಮುಂಬಯಿ ವಿಮಾನ ನಿಲ್ದಾಣವಿದ್ದು, ಇಲ್ಲಿಗೆ ಆಗಮಿಸುವವರಿಗೆ ವಿಮಾನ ಯಾನದ ಸೌಕರ್ಯವನ್ನು ಒದಗಿಸುತ್ತವೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
15 Jun,Tue
Return On
16 Jun,Wed
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
15 Jun,Tue
Check Out
16 Jun,Wed
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
15 Jun,Tue
Return On
16 Jun,Wed