Search
  • Follow NativePlanet
Share
ಮುಖಪುಟ » ಸ್ಥಳಗಳು » ಕಮ್‍ಶೆಟ್ » ಹವಾಮಾನ

ಕಮ್‍ಶೆಟ್ ಹವಾಮಾನ

ಕಮ್‍ಶೆಟ್ ಎಂಬುದು ಪ್ಯಾರಾಗ್ಲೈಡಿಂಗ್‍ಗೆ ಹೇಳಿ ಮಾಡಿಸಿದ ತಾಣವಾಗಿರುವುದರಿಂದ ಚಳಿಗಾಲದಲ್ಲಿ ಇಲ್ಲಿಗೆ ಭೇಟಿಕೊಡುವುದು ಉತ್ತಮ. ಈ ಸಮಯದಲ್ಲಿ ಇಲ್ಲಿ ಚಳಿ ಅಧಿಕ ಪ್ರಮಾಣದಲ್ಲಿರುತ್ತದೆ. ಹಾಗಾಗಿ ಸೂಕ್ತ ಉಡುಪನ್ನು ಧರಿಸುವುದು ಅತ್ಯಾವಶ್ಯಕವಾಗಿರುತ್ತದೆ.

ಬೇಸಿಗೆಗಾಲ

ಕಮ್‍ಶೆಟ್‍ನಲ್ಲಿ ಬೇಸಿಗೆಯಲ್ಲಿ ಒಣ ಹವೆಯಿದ್ದು, ಬಿಸಿಲಿನಿಂದ ಕೂಡಿರುತ್ತದೆ. ಈ ಸಮಯದಲ್ಲಿ ಇಲ್ಲಿನ ಹಸಿರು ಸಹ ಕಡಿಮೆಯಾಗುತ್ತದೆ. ಇಲ್ಲಿನ ಹವಾಗುಣವು ಸಮಶೀತೋಷ್ಣವಲಯದ ಹವಾಗುಣವನ್ನು ಪ್ರತಿನಿಧಿಸುತ್ತದೆ. ಈ ಸಮಯದಲ್ಲಿ ಉಷ್ಣಾಂಶವು 24 ಡಿಗ್ರಿಯಿಂದ 35 ಡಿಗ್ರಿ ಸೆಲ್ಶಿಯಸ್‍ವರೆಗೆ ಇರುತ್ತದೆ. ಈ ಸಮಯದಲ್ಲಿ ಗಾಳಿಯ ರಭಸತೆಯು ಅಧಿಕವಾಗಿರುತ್ತದೆ.

ಮಳೆಗಾಲ

ಮಳೆಗಾಲವು ಕಮ್‍ಶೆಟ್‍ನ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಆದಾಗಿಯು ಮಳೆಗಾಲದ ತಿಂಗಳುಗಳಲ್ಲಿ ಪ್ಯಾರಾಗ್ಲೈಡಿಂಗ್ ಚಟುವಟಿಕೆಗಳು ಸ್ತಬ್ಧವಾಗಿರುತ್ತವೆ. ಆದರೆ ಇಲ್ಲಿನ ಕೆರೆಗಳು ಮತ್ತು ಇನ್ನಿತರ ಪ್ರಾಕೃತಿಕ ಆಕರ್ಷಣೆಗಳು ತನ್ನ ಸೌಂದರ್ಯದ ತುತ್ತತುದಿಗೆ ತಲುಪಿ ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತವೆ. ಮಳೆಗಾಲದಲ್ಲಿ ಇಲ್ಲಿನ ಉಷ್ಣಾಂಶವು 18 ರಿಂದ 28 ಡಿಗ್ರಿ ಸೆಲ್ಶಿಯಸ್‍ವರೆಗೆ ಇರುತ್ತದೆ. ಅಲ್ಲದೆ ಗಾಳಿಯ ಆರ್ಭಟ ಈ ಸಮಯದಲ್ಲಿ ಅಧಿಕ ಪ್ರಮಾಣದಲ್ಲಿರುತ್ತದೆ.

ಚಳಿಗಾಲ

ಕಮ್‍ಶೆಟ್‍ನಲ್ಲಿ ಚಳಿಗಾಲವು ಪ್ಯಾರಾಗ್ಲೈಡಿಂಗ್‍ನಿಂದ ಹಿಡಿದು ಎಲ್ಲ ತರಹದ ಚಟುವಟಿಕೆ ಕೈಗೊಳ್ಳುವವರಿಗೆ ಹೇಳಿ ಮಾಡಿಸಿದ ಸಮಯವಾಗಿದೆ. ಇಲ್ಲಿನ ಪ್ರಾಕೃತಿಕ ಸಂಪತ್ತನ್ನು ಕಣ್ತುಂಬಿಕೊಳ್ಳಲು ಸಹ ಇದು ಅತ್ಯುತ್ತಮ ಕಾಲವಾಗಿದೆ. ಈ ಸಮಯದಲ್ಲಿ ಇಲ್ಲಿನ ಉಷ್ಣಾಂಶವು 14 ರಿಂದ 24 ಡಿಗ್ರಿ ಸೆಲ್ಶಿಯಸ್‍ನೊಳಗೆ ಇರುತ್ತದೆ.