Search
  • Follow NativePlanet
Share
ಮುಖಪುಟ » ಸ್ಥಳಗಳು» ಲಾತೂರ್

ಲಾತೂರ್ : ಇತಿಹಾಸಕಾರರ ಸ್ವರ್ಗ

9

ಲಾತೂರ್ (Lathur) ನಗರವು ಯಾವುದಾದರೊಂದು ವಿಚಾರದ ಕುರಿತು ಅತೀ ಹೆಚ್ಚು ಪ್ರಕಾಶಿಸುತ್ತಿದೆ ಎಂದಾದರೆ, ನಿಜಕ್ಕೂ ಆ ವಿಚಾರವು, ಈ ಸ್ಥಳದ ದೀರ್ಘ ಪರಂಪರೆಯ ಕುರಿತು ಪ್ರವಾಸಿಗರಿಗೆ ಶಿಕ್ಷಣವನ್ನು ಒದಗಿಸಲು ಇಲ್ಲಿ ಸಮೃದ್ಧಿಯಾಗಿರುವ  ಸಾಮಗ್ರಿಯೇ ಆಗಿದೆ ಎಂದು ಹೇಳಬಹುದು.   ಮಹಾರಾಷ್ಟ್ರ ರಾಜ್ಯದ ಆಗ್ನೇಯ ಭಾಗದಲ್ಲಿರುವ ಲಾತೂರ್, ಮರಾಠವಾಡದ ಒಂದು ಪ್ರಾಂತವಾಗಿದ್ದು, ಇಲ್ಲಿ ಸರಿಸುಮಾರು 7 ನೆಯ ಶತಮಾನದಷ್ಟು ಹಳೆಯ ಕಾಲದ ಐತಿಹಾಸಿಕ ಸ್ಥಳಗಳು ಮತ್ತು ವಾಸ್ತುಶಿಲ್ಪಗಳಿದ್ದು, ಇವುಗಳನ್ನು ಇಂದಿಗೂ ಕೂಡ ಅಚ್ಚುಕಟ್ಟಾಗಿ ಸಂರಕ್ಷಿಸಿಡಲಾಗಿದೆ.   

ಏಳನೆಯ ಶತಮಾನದ ರಾಷ್ಟ್ರಕೂಟ ಅರಸರ ಆಳ್ವಿಕೆಯಿಂದ ಆರಂಭಿಸಿ ಇಸವಿ 1900 ರ ಪೂರ್ವ ಭಾಗದ, ಬ್ರಿಟಿಷ್ ಭಾರತದ ನಿಜಾಮನ ಆಳ್ವಿಕೆಯವರೆಗಿನ ಕಾಲಾವಧಿಯು ಲಾತೂರ್ ನಗರದ ಪಾಲಿಗೆ ಅತೀ ಚಟುವಟಿಕೆಯ ಕಾಲಘಟ್ಟವಾಗಿತ್ತು.  ಇದಕ್ಕೆ ಸಾಕ್ಷಿಯು ಈ ನಗರದಲ್ಲಿ ಮತ್ತು ಅದರ ಸುತ್ತಮುತ್ತಲೂ ಇರುವ ವಿವಿಧ ಪ್ರವಾಸೀ ಅಕರ್ಷಣೆಗಳೇ ಆಗಿವೆ.

ಲಾತೂರ್ ನ ವೈಶಿಷ್ಟ್ಯಗಳು

ಲಾತೂರ್ ನಗರವು ಸಂಪೂರ್ಣವಾಗಿ ಬಾಲಘಾಟ್ (Balaghat) ನ ಸಮತಟ್ಟಾದ ಭೂಮಿಯ ಮೇಲಿದ್ದು, ಇದು ಸಮುದ್ರ ಪಾತಳಿಯಿಂದ ಸರಿಸುಮಾರು 2000 ಅಡಿ ಎತ್ತರದಲ್ಲಿದೆ.  ಈ ಕಾರಣಕ್ಕಾಗಿ, ಈ ಪ್ರದೇಶವು ವರ್ಷದ ಚಳಿಗಾಲದ ಅವಧಿಯಲ್ಲಿ  ಅತ್ಯಂತ ಅಪ್ಯಾಯಮಾನವಾದ ಹವಾಮಾನವನ್ನು ಹೊಂದಿರುತ್ತದೆ.  ಮಂಜಾರ ನದಿಯು ಲಾತೂರ್ ಪಟ್ಟಣದ ಮೂಲಕವೇ ಹರಿದು, ತನ್ಮೂಲಕ ಈ ನದಿಯಗುಂಟ ಸಂಜೆಯ ನಡಿಗೆಯನ್ನು ಒಂದು ಸುಂದರ ಅನುಭವವನ್ನಾಗಿಸುತ್ತದೆ.

ಮಂಜಾರ ನದಿಯು ಮಾತ್ರವಲ್ಲದೇ ಲಾತೂರ್, ಟೆರ್ನ, ಮನ್ಯಾಡ್, ಲೆಂಡಿ ಮತ್ತು ಘರ್ನಿಗಳಂತಹ ಇತರ ಅನೇಕ ನದಿಗಳಿಗೂ ಪ್ರಸಿದ್ಧವಾಗಿದೆ.  ನೀವು ಮಳೆ ಪ್ರಿಯರಾಗಿದ್ದರೆ ಅಥವಾ ಛಾಯಚಿತ್ರಗಳ ಬಗ್ಗೆ ತೀವ್ರವಾದ ಆಸಕ್ತಿಯುಳ್ಳವರೆಂದಾದರೆ, ಲಾತೂರ್ ಗೆ ಭೇಟಿ ನೀಡಲು ಮಳೆಗಾಲವು ಉತ್ತಮ ಅವಧಿಯಾಗಿದೆ.  ಈ ಪ್ರದೇಶವು ಸಾಕಷ್ಟು ಮಳೆಯನ್ನು ಪಡೆಯುವಂಥದ್ದಾಗಿದ್ದು, ಈ ಅವಧಿಯಲ್ಲಿ ಇಲ್ಲಿನ ನದಿಗಳ ದೃಶ್ಯ ವೈಭವವು ನೋಡತಕ್ಕದ್ದೇ ಆಗಿದೆ.

ಲಾತೂರ್ ನ ವಾಣಿಜ್ಯ

ನಿಜಾಮನ ಆಳ್ವಿಕೆಯ ಕಾಲದಿಂದಲೂ ಕೂಡ ಲಾತೂರ್ ಪಟ್ಟಣವು ಮರಾಠಾವಾಡ ಪ್ರಾಂತದ ಒಂದು ವ್ಯವಸ್ಥಿತ, ಯೋಜಿತ ವ್ಯಾಪಾರೀ, ವಾಣಿಜ್ಯ ಕೇಂದ್ರವಾಗಿದೆ.  ಇಂದಿಗೂ ಕೂಡ ಲಾತೂರ್ ಪಾರಿವಾಳದ ಕಾಳುಗಳಂತಹ ಧಾನ್ಯಗಳಿಗೆ ಪ್ರಸಿದ್ಧವಾಗಿದೆ.  ಲಾತೂರ್ ನ, ದಾಪುಗಾಲಿಡುತ್ತಿರುವ ಕೃಷಿ ಪ್ರವಾಸೋದ್ಯಮದ ಕಲ್ಪನೆಯ ಕುರಿತು ಯಾರಾದರೂ ಆಸಕ್ತಿಯುಳ್ಳವರಾದರೆ, ಅಂಥವರಿಗಾಗಿ, ವಿಶೇಷವಾಗಿ ಇಲ್ಲಿನ ಕೃಷಿ ಚಟುವಟಿಕೆಗಳ ವ್ಯಾಪ್ತಿಯನ್ನು ಗಮನದಲ್ಲಿರಿಸಿಕೊಂಡು ಹೇಳುವುದಾದರೆ ನಿಜಕ್ಕೂ ಲಾತೂರ್ ಒಂದು ಸಾಹಸಮಯ ಸ್ಥಳವಾಗಬಲ್ಲದು.

ಇವೆಲ್ಲವನ್ನೂ ಹೇಳಿ ಮುಗಿಸಿದ ಬಳಿಕ, ಇನ್ನೊಂದು ಮುಖ್ಯ ವಿಚಾರವೆಂದರೆ, ಲಾತೂರ್ ಪಟ್ಟಣವು ನಾಂದೇಡ್  ಮತ್ತು ಪರ್ಭಾನಿಯಂತಹ ಕೆಲವು ಪ್ರಮುಖ ಪಟ್ಟಣಗಳೊಂದಿಗೆ ಗಡಿಯನ್ನು ಹಂಚಿಕೊಂಡಿದ್ದು, ಈ ಕಾರಣಕ್ಕಾಗಿ, ಈ ಸ್ಥಳವು, ಮಹಾರಾಷ್ಟ್ರದ ಒಳಭಾಗಗಳಿಗೆ ಒಂದು ಸಣ್ಣ ಪ್ರವಾಸ ಕೈಗೊಳ್ಳಲು ಹೇಳಿಮಾಡಿಸಿದಂತಿದೆ.

ಲಾತೂರ್ ಪ್ರಸಿದ್ಧವಾಗಿದೆ

ಲಾತೂರ್ ಹವಾಮಾನ

ಉತ್ತಮ ಸಮಯ ಲಾತೂರ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಲಾತೂರ್

  • ರಸ್ತೆಯ ಮೂಲಕ
    ಬೇರೆ ಬೇರೆ ನೆರೆಯ ಪಟ್ಟಣಗಳಿಂದ, ರಾಜ್ಯ ಹೆದ್ದಾರಿಗಳಾದ 60, 77, 160 ಮತ್ತು 144 ಗಳ ಮೂಲಕ ಲಾತೂರ್ ನತ್ತ ಸವಾರಿ ಬೆಳೆಸುವುದು ತೀರಾ ಸರಳವಾಗಿದೆ. ಇದಕ್ಕಿಂತಲೂ ಮಿಗಿಲಾಗಿ, ಮುಂಬೈ ಮಹಾನಗರಕ್ಕೆ ನೇರವಾಗಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 9 ಕ್ಕೆ ಲಾತೂರ್ ಅತೀ ಸಮೀಪದಲ್ಲಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಲಾತೂರ್ ರೈಲ್ವೆ ನಿಲ್ದಾಣವು ರಾಜ್ಯದ ಉತ್ತರ ಮತ್ತು ಪಶ್ಚಿಮ ಭಾಗದ ನಗರಗಳಾದ ಕೊಲ್ಹಾಪುರ, ಪುಣೆ, ಮುಂಬೈ, ಮತ್ತು ನಾಗ್ಪುರ್ ಗಳಿಗೆ ಸಂಪರ್ಕಿಸುತ್ತದೆ. ಮಾತ್ರವಲ್ಲದೇ, ಇದರ ಜೊತೆಗೆ ಲಾತೂರ್ ರೈಲ್ವೆ ನಿಲ್ದಾಣವು ಹೈದರಾಬಾದ್ ಮತ್ತು ಕರ್ನಾಟಕ ರಾಜ್ಯವನ್ನೂ ಸಹ ಸಂಪರ್ಕಿಸುತ್ತದೆ. ಈ ನಗರಗಳಿಂದ ದೇಶದ ಉತ್ತರ ಮತ್ತು ದಕ್ಷಿಣ ಭಾಗಗಳಿಗೆ ಪ್ರಯಾಣಿಸಲು ಅನುಕೂಲವಾದ ಸಂಪರ್ಕ, ಸಂವಹನ ಮಾರ್ಗಗಳನ್ನು ಉಪಯೋಗಿಸಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಲಾತೂರ್ ವಿಮಾನ ನಿಲ್ದಾಣವು 90 ರ ದಶಕದ ಪೂರ್ವಾರ್ಧದಲ್ಲಿ ಆರಂಭಗೊಂಡಿದ್ದು, ಅಂದಿನಿಂದ ಈ ನಿಲ್ದಾಣವು ಅನೇಕ ವಾಣಿಜ್ಯ ವ್ಯವಹಾರಸ್ಥರಿಗೆ ಸೇವೆಯನ್ನು ಒದಗಿಸುತ್ತಾ ಬಂದಿದೆ. ಇತ್ತೀಚೆಗೆ, ಒಂದು ಭಾರತೀಯ ಖಾಸಗೀ ವಿಮಾನಯಾನ ಸಂಸ್ಥೆಯು ನಾಂದೇಡ್ ನಿಂದ ಲಾತೂರ್ ನವರೆಗೆ ತನ್ನ ಸೇವೆಯನ್ನು ಆರಂಭಿಸಿದ್ದು, ಸದ್ಯಕ್ಕೆ ಇದು ನಿರ್ಧಿಷ್ಟವಾದ, ಸೀಮಿತ ಅವಧಿಗೆ (seasonal) ಮಾತ್ರವೇ ಸೇವೆ ಸಲ್ಲಿಸುತ್ತಿದೆ. ಲಾತೂರ್ ವಿಮಾನ ನಿಲ್ದಾಣವು ಇತ್ತೀಚೆಗಷ್ಟೇ ಪುನರ್ನಿರ್ಮಾಣಗೊಂಡಿದ್ದು, ಇದು ಪ್ರಯಾಣಿಕರ ಸೇವೆಯನ್ನು ಮತ್ತು ವಿಮಾನದ ಅವರೋಹಣದ ಪಶ್ಚಾತ್ ಸೇವೆಗಳನ್ನು (ground handling) ಪರಿಷ್ಕೃತ ರೀತಿಯಲ್ಲಿ ಒದಗಿಸುತ್ತದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat