Search
 • Follow NativePlanet
Share
ಮುಖಪುಟ » ಸ್ಥಳಗಳು» ಔಂಧ ನಾಗನಾಥ್

ಔಂಧ ನಾಗನಾಥ್   -  ಅಪೂರ್ವ ಜ್ಯೋತಿರ್ಲಿಂಗ ಉಳ್ಳ ಸುಂದರ ಪಟ್ಟಣ

7

ಔಂಧ ನಾಗನಾಥ್ ಇದು ಮಹಾರಾಷ್ಟ್ರ ರಾಜ್ಯದ ಮರಾಠವಾಡ ಪ್ರದೇಶದ ಅಡಿಯಲ್ಲಿ ಬರುವ ಹಿಂಗೋಲಿ ಜಿಲ್ಲೆಯಲ್ಲಿ ಇರುವ ಒಂದು ಸುಂದರ ಪುಟ್ಟ ಪಟ್ಟಣ.  

ಮೊದಲನೇ ಜ್ಯೋತಿರ್ಲಿಂಗ

ಔಂಧ ನಾಗನಾಥದಲ್ಲಿರುವ ಲಿಂಗವು, ಭಾರತದಲ್ಲಿರುವ ಹನ್ನೆರಡು ಪವಿತ್ರ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವುದಲ್ಲದೆ ಪ್ರಪ್ರಥಮವಾಗಿ ಸ್ಥಾಪಿಸಲ್ಪಟ್ಟ ಜ್ಯೋತಿರ್ಲಿಂಗವೂ ಆಗಿದೆ. ಹಾಗೆಯೆ ಇದು ಮಹಾರಾಷ್ಟ್ರದಲ್ಲಿರುವ ಐದು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ.

ಪುರಾಣಗಳ ಪ್ರಕಾರ, ಪಾಂಡವರನ್ನು ಹದಿನಾಲ್ಕು ವರ್ಷ ವನವಾಸಕ್ಕೆ ಅಟ್ಟಿದಾಗ ಅವರಲ್ಲಿ ಹಿರಿಯವನಾದ ಯುದಿಷ್ಟರ ಇದನ್ನು ಸ್ಥಾಪಿಸಿ ಶಿವನಿಗೆ ಅರ್ಪಿಸಿದ. ಔಂಧ ನಾಗನಾಥ್ ದೇವಾಲಯವನ್ನು ಶಿವನ ಆರಾಧನೆಗಾಗಿ ಹೇಮದ್ಪಂಥಿ ವಾಸ್ತು ಶೈಲಿಯಲ್ಲಿ ನಿರ್ಮಿಸಲಾಗಿದೆ. ದೇವಾಲಯವು ಸುಮಾರು 60000 ಅಡಿಗಳಷ್ಟು ವಿಸ್ತಾರವಾಗಿದೆ. ಇಲ್ಲಿ ಗಮನಿಸಬೇಕಾದ ವೈಶಿಷ್ಠ್ಯವೆಂದರೆ ನಂದಿಯನ್ನು ದೇವಾಲಯದ ಮುಂಭಾಗದಲ್ಲಿ ಸ್ಥಾಪಿಸದೆ ಹಿಂಭಾಗದಲ್ಲಿ ಸ್ಥಾಪಿಸಿರುವುದು. ದೇವಾಲಯದ ಸುತ್ತಮುತ್ತ ಉಳಿದ ಜ್ಯೋತಿರ್ಲಿಂಗಗಳನ್ನು ಚಿತ್ರಿಸಿರುವ ಬಹಳಷ್ಟು ಸಣ್ಣ ದೇವಾಲಯಗಳಿವೆ. ದತ್ತಾತ್ರೇಯ, ನೀಲಕಂಠೇಶ್ವರ, ದಶಾವತಾರ, ವೇದವ್ಯಾಸಲಿಂಗ ಮತ್ತು ಗಣಪತಿ ಮುಂತಾದ ದೇವತೆಗಳ ವಿಗ್ರಹಗಳನ್ನೂ ಇಲ್ಲಿ ಕಾಣಬಹುದು.

ಧಾರ್ಮಿಕ ತಾಣ

ಔಂಧವನ್ನು ವರ್ಷದ ಯಾವುದೆ ಸಮಯದಲ್ಲಾದರೂ ಸಂದರ್ಶಿಸಬಹುದು. ಆದರೆ ಇಲ್ಲಿನ ಬೇಸಿಗೆ ಮಾತ್ರ ಕೊಂಚ ಅಸಹನೀಯ. ಇದು ಹಿಂಗೋಲಿಗೆ ಹತ್ತಿರವಿರುವುದರಿಂದ ಇದು ಎಲ್ಲ ಸುತ್ತಮುತ್ತಲಿನ ಪಟ್ಟಣಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದೆ ಹಾಗು ಇಲ್ಲಿಗೆ ಸುಲಭವಾಗಿ ತಲುಪಬಹುದು. ನೀವು  ಹಿಂಗೋಲಿಗೆ ಭೇಟಿ ಕೊಡುತ್ತಿರುವ ಪ್ರವಾಸಿಗರಾದರೆ, ನೀವು ಭೇಟಿ ಕೊಡಬೇಕಾದ ಸ್ಥಳಗಳ ಪಟ್ಟಿಯಲ್ಲಿ ಔಂಧ ನಾಗನಾಥ್ ಗೆ ಪ್ರಥಮ ಸ್ಥಾನವಿರಲಿ.

ಈ ಪುಣ್ಯಕ್ಷೇತ್ರ ನಿಮ್ಮಲ್ಲಿ ನಂಬಿಕೆ ಹಾಗು ಆಧ್ಯಾತ್ಮಿಕತೆಯನ್ನು ಮತ್ತಷ್ಟು ಆಳವಾಗಿ ಬೇರೂರುವಂತೆ ಮಾಡಿ ನಿಮ್ಮನ್ನು ಯುಗಗಳಷ್ಟು ಹಿಂದಕ್ಕೆ ಕರೆದೊಯ್ಯುತ್ತದೆ.

ಔಂಧ ನಾಗನಾಥ್ ಪ್ರಸಿದ್ಧವಾಗಿದೆ

ಔಂಧ ನಾಗನಾಥ್ ಹವಾಮಾನ

ಔಂಧ ನಾಗನಾಥ್
26oC / 78oF
 • Partly cloudy
 • Wind: WNW 11 km/h

ಉತ್ತಮ ಸಮಯ ಔಂಧ ನಾಗನಾಥ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಔಂಧ ನಾಗನಾಥ್

 • ರಸ್ತೆಯ ಮೂಲಕ
  ಔಂಧ ಮತ್ತು ಮುಂಬೈ ನಡುವಿನ ದೂರ ಸುಮಾರು 580 ಕಿಲೋಮೀಟರುಗಳು ಹಾಗು ಔರಂಗಾಬಾದ್ ನಿಂದ ಸುಮಾರು 200 ಕಿಲೋಮೀಟರುಗಳು ಹಾಗು ನಾಗಪುರದಿಂದ 360 ಕಿಲೋಮೀಟರುಗಳಾಗುತ್ತದೆ. ಇಲ್ಲಿ ಬಹಳಷ್ಟು ಸರಕಾರಿ ಹಾಗು ಖಾಸಗಿ ಬಸ್ಸುಗಳಿದ್ದು ಅವು ಔಂಧ ಸೇರಿದಂತೆ ಎಲ್ಲಾ ಪ್ರಮುಖ ನಗರಗಳ ನಡುವೆ ಸಂಚರಿಸುತ್ತವೆ. ಇದಲ್ಲದೆ ಚೊಂಡಿ, ಪರ್ಭಾನಿ ಹಾಗು ನಾಂದೇಡ್ ನಿಂದಲೂ ಇಲ್ಲಿಗೆ ಬಸ್ಸುಗಳು ಹೊರಡುತ್ತವೆ. ಹಾಗೆಯೆ ಭಾರತದ ಎಲ್ಲಾ ಪ್ರಮುಖ ನಗರದಿಂದಲೂ ಇಲ್ಲಿನ ಮುಖ್ಯ ಜಂಕ್ಷನ್ ಆದ ಹಿಂಗೋಲಿಗೆ ಸುಲಭವಾಗಿ ಬಂದು ತಲುಪಬಹುದು ಮತ್ತು ಇಲ್ಲಿಂದ ಔಂಧ ಕೇವಲ ಅರ್ಧ ತಾಸಿನ ಹಾದಿ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಇಲ್ಲಿಗೆ ಸಮೀಪದ ರೈಲು ನಿಲ್ದಾಣವೆಂದರೆ ಚೊಂಡಿ ರೈಲು ನಿಲ್ದಾಣ. ಇದು ಇಲ್ಲಿಂದ 21 ಕಿಲೋಮೀಟರು ದೂರದಲ್ಲಿದೆ. ಹಾಗೆಯೆ ಚೊಂಡಿ ನಿಲ್ದಾಣ ಮಹಾರಾಷ್ಟ್ರದ ಒಳಗೆ ಹಾಗು ಹೊರಗಿನ ಎಲ್ಲಾ ನಗರ ಪಟ್ಟಣಗಳೊಂದಿಗೆ ನೇರವಾಗಿ ಅಥವಾ ಸಂಪರ್ಕ ಹೊಂದುವ ರೈಲುಗಳೊಂದಿಗೆ ಲಿಂಕ್ ಹೊಂದಿದೆ. ನೀವು ಔಂಧದಿಂದ ಕೇವಲ 25 ಕಿಲೋಮೀಟರು ದೂರದಲ್ಲಿರುವ ಹಿಂಗೋಲಿ ನಿಲ್ದಾಣ ದಿಂದಲೂ ಟ್ಯಾಕ್ಸಿ ಅಥವಾ ಬಸ್ ಮೂಲಕ ಇಲ್ಲಿಗೆ ಬಂದು ತಲುಪಬಹುದು.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಇಲ್ಲಿಗೆ ಹತ್ತಿರದ ದೇಶೀಯ ವಿಮಾನ ನಿಲ್ದಾಣವೆಂದರೆ ಸುಮಾರು 210 ಕಿಲೋಮೀಟರು ದೂರವಿರುವ ಔರಂಗಾಬಾದ್ ವಿಮಾನ ನಿಲ್ದಾಣ. ಹಾಗು ಸನಿಹದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೆಂದರೆ ಸುಮಾರು 580 ಕಿಲೋಮೀಟರು ದೂರದದ ಮುಂಬೈ ನಲ್ಲಿರುವ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣ. ಆದ್ದರಿಂದ ಔಂಧ ನಾಗನಾಥ್ ಅನ್ನು ವಾಯುಮಾರ್ಗದಲ್ಲಿ ಸುಲಭವಾಗಿ ತಲುಪಬಹುದಾಗಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
27 May,Mon
Return On
28 May,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
27 May,Mon
Check Out
28 May,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
27 May,Mon
Return On
28 May,Tue
 • Today
  Aundha Nagnath
  26 OC
  78 OF
  UV Index: 8
  Partly cloudy
 • Tomorrow
  Aundha Nagnath
  23 OC
  74 OF
  UV Index: 8
  Partly cloudy
 • Day After
  Aundha Nagnath
  23 OC
  73 OF
  UV Index: 7
  Partly cloudy