Search
 • Follow NativePlanet
Share
ಮುಖಪುಟ » ಸ್ಥಳಗಳು» ಲೋನಾರ್

ಲೋನಾರ್ - ಜಗತ್ತಿನ ಮೂರನೇ ಅತಿದೊಡ್ಡ ಗುಂಡಿ

10

ಇದು ಮಹಾರಾಷ್ಟ್ರ ರಾಜ್ಯದ ವಿಧರ್ಭ ಪ್ರಾಂತ್ಯದ ಬುಲ್ದಾನಾ ಜಿಲ್ಲೆಯ ಒಂದು ಪುಟ್ಟ ನಗರ. ಈ ಪುಟ್ಟ ಪಟ್ಟಣ ಮುಂಬೈನಿಂದ 550 ಕಿಲೋ ಮೀಟರ್ ದೂರದಲ್ಲಿದೆ ಮತ್ತು ಔರಂಗಾಬಾದ್ ನಗರದಿಂದ 160 ಕಿಲೋ ಮೀಟರ್ ಅಂತರದಲ್ಲಿದೆ. ಲೋನಾರ್ ನಗರ ಸರಿಸುಮಾರು 1850 ಅಡಿ ಎಲಿವೇಶನ್ (ಸಮುದ್ರ ಮಟ್ಟದಿಂದ ಎತ್ತರ) ಹೊಂದಿದೆ.

ಲೋನಾರ್ ಪ್ರಸಿದ್ದವಾಗಿರುವುದು ಇಲ್ಲಿನ ಭೂಮಿಯಲ್ಲಿರುವ ಅತಿದೊಡ್ಡ ದೈತ್ಯಗಾತ್ರದ ಗುಂಡಿಯಿಂದಾಗಿ. ಈ ದೈತ್ಯಗುಂಡಿ ನಿರ್ಮಾಣವಾಗಿರುವುದು ಪ್ಲಿಸ್ಟೋಸೀನ್ ಯುಗಾರಂಭದ ಸಮಯದಲ್ಲಿ ಉಲ್ಕೆಯೊಂದು ಭೂಮಿಗೆ ಅಪ್ಪಳಿಸಿದ ಪರಿಣಾಮದಿಂದಾಗಿ. ಲೋನಾರ್ ಅನ್ನು ಈ ಉಲ್ಕೆಯು ಅಪ್ಪಳಿಸಿದ್ದು ವಾಸ್ತವಕ್ಕೂ ನಿಲುಕದಷ್ಟು ವರ್ಷಗಳ ಹಿಂದೆ ಅಂದರೆ ಸುಮಾರು 52,000 ವರ್ಷಗಳ ಹಿಂದೆ.

ಶತಮಾನಗಳು ಮಿಲೇನಿಯಂ ವರ್ಷಗಳ ಕಳೆದುಹೋದ ಮೇಲೆ ದೈತ್ಯಗುಂಡಿ ಸರೋವರವಾಗಿ ಪರಿವರ್ತನೆಗೊಂಡಿದೆ ಮತ್ತು ಇದು ಸದ್ಯ ಲೋನಾರ್ ಸರೋವರ ಅಂತಲೇ ಪ್ರಸಿದ್ದವಾಗಿದೆ. ಈ ಸರೋವರದ ವ್ಯಾಸ ಸುಮಾರು 4000 ಅಡಿಗಳಷ್ಟಿದ್ದು ಇದರ ಆಳ ಸುಮಾರು 450 ಅಡಿ.

ದೈತ್ಯಗುಂಡಿಯನ್ನು ಮೊದಲು ಕಂಡುಹುಡುಕಿದ್ದು ಬ್ರಿಟಿಷ್ ಅಧಿಕಾರಿ ಜೆ.ಈ. ಅಲೆಕ್ಸಾಂಡರ್. ಪವಿತ್ರ ಗ್ರಂಥಗಳಾದ ಪದ್ಮ ಪುರಾಣ, ಸ್ಕಂದ ಪುರಾಣ ಮತ್ತು ಐನಾ-ಇ-ಅಕ್ಬರಿಯಲ್ಲಿಯೂ ಇದರ ಉಲ್ಲೇಖವಿದೆ.

ಸರೋವರದ ಪಕ್ಕದಲ್ಲಿಯೆ ಪುರಾತನವಾದ ದೈತ್ಯ ಸುದಾನ್ ನ ದೇವಸ್ಥಾನವಿದ್ದು ದೇಶದ ಉದ್ದಗಲದಿಂದ ಯಾತ್ರಾರ್ಥಿಗಳನ್ನು ಆಕರ್ಷಿಸುತ್ತದೆ ಮತ್ತು ಭೇಟಿ ಮಾಡಿದ್ದಕ್ಕೂ ಸಾರ್ಥಕವೆನಿಸುತ್ತದೆ.

ಲೋನಾರ್ ಅನ್ನು ಏಕೆ ಭೇಟಿ ಮಾಡಬೇಕು?

ಲೋನಾರ್ ನಲ್ಲಿ ಸೃಷ್ಟಿಯಾಗಿರೊ ದೈತ್ಯಗುಂಡಿ ಒಂದು ವೈಜ್ನಾನಿಕ ಕೌತುಕ. ಇದನ್ನು ನಂಬುವುದಕ್ಕೋಸ್ಕರ ಇಲ್ಲಿಗೆ ಭೇಟಿ ನೀಡಿ ಇದನ್ನು ನೋಡಲೇಬೇಕು. ಈ ದೈತ್ಯಗುಂಡಿ ನಿಮ್ಮನ್ನು ಸುಮಾರು 60,000 ವರ್ಷಗಳಷ್ಟು ಹಿಂದಕ್ಕೆ ಕರೆದೊಯ್ಯುತ್ತದೆ. ನಮ್ಮ ಭೂತಕಾಲದ ಸಣ್ಣ ಕಿಟಕಿಯೊಳಗೊಂದು ಇಣುಕು ನೋಟ ಬೀರಲು ಇಲ್ಲಿಗೆ ಭೇಟಿ ನೀಡಬೇಕು ಮತ್ತು ಅಧ್ಭುತವಾದ ಮಾಯಾಜಾಲವೆನಿಸುವ ಪ್ರಪಂಚಚವೊಂದರ ಭಾಗ ನಾವೂ ಕೂಡ, ಎಂಬುದನ್ನು ಅರಿಯುವುದಕ್ಕೋಸ್ಕರ ಇಲ್ಲಿಗೆ ಭೇಟಿ ನೀಡಬೇಕು.

ಲೋನಾರ್ ಪ್ರಸಿದ್ಧವಾಗಿದೆ

ಲೋನಾರ್ ಹವಾಮಾನ

ಲೋನಾರ್
33oC / 91oF
 • Sunny
 • Wind: NNW 22 km/h

ಉತ್ತಮ ಸಮಯ ಲೋನಾರ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಲೋನಾರ್

 • ರಸ್ತೆಯ ಮೂಲಕ
  ರಸ್ತೆಯ ಮೂಲಕ ಪ್ರಯಾಣಿಸುವುದಾದರೆ ಔರಂಗಬಾದ್ ಮತ್ತು ಲೋನಾರ್ ನ ಅಂತರ ಸುಮಾರು 145 ಕಿಲೋ ಮೀಟರ್. ಮುಂಬೈ , ಪುಣಾ ಮತ್ತು ಉಳಿದ ನಗರಗಳಿಂದ ಔರಂಗಾಬಾದ್ ಅನ್ನು ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳ ಮೂಲಕ ತಲುಪಬಹುದು. ಅಲ್ಲಿಂದ ಸ್ಥಳೀಯ ಬಸ್ ಸೌಕರ್ಯಗಳ ಮೂಲಕ ಲೋನಾರ್ ತಲುಪಬಹುದು. ಪೂರ್ತಿ ಪ್ರಯಾಣ ಸುಮಾರು ಐದು ಗಂಟೆಯದ್ದಾಗಿದ್ದು ಬಸ್ ದರ ಸುಮಾರು 200 ರಿಂದ 300 ರೂಪಾಯಿ ಮಾತ್ರ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಲೋನಾರ್ ಗೆ ಹತ್ತಿರದಲ್ಲಿರುವುದು ಜಲ್ನಾ ರೈಲ್ವೆ ನಿಲ್ದಾಣ ಸುಮಾರು 90 ಕಿಲೋ ಮೀಟರ್ ದೂರದಲ್ಲಿದೆ. ಔರಂಗಾಬಾದ್ ರೈಲಿನ ಮೂಲಕ ತಲುಪಬಹುದಾದ ಪ್ರಮುಖ ನಗರ. ಮುಂಬೈ, ಪುಣಾ, ನಾಸಿಕ್ ಮತ್ತು ಮಧುರೈಗಳಿಗೆ ಇಲ್ಲಿಂದ ನಿರಂತರ ರೈಲು ಸಂಚಾರವಿದೆ. ಸಾಧಾರಣವಾಗಿ ರೈಲು ಟಿಕೇಟ್ ದರ 200 ರಿಂದ 400 ರೂಪಾಯಿ ಮಾತ್ರವಾಗಿರುತ್ತದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಔರಂಗಬಾದ್ ಡೊಮೆಸ್ಟಿಕ್ ವಿಮಾನ ನಿಲ್ದಾಣ ಲೋನಾರ್ ನಿಂದ ಸುಮಾರು 120 ಕಿಲೋ ಮೀಟರ್ ದೂರದಲ್ಲಿದ್ದು ಹತ್ತಿರದ ವಿಮಾನ ನಿಲ್ದಾಣವಾಗಿದೆ. ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲೋನಾರ್ ಗೆ ಹತ್ತಿರದಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಈ ಎರಡೂ ವಿಮಾನ ನಿಲ್ದಾಣಗಳು ಮಹಾರಾಷ್ಟ್ರದ ಎಲ್ಲ ಪ್ರಮುಖ ನಗರಗಳಿಗೂ ಸಂಪರ್ಕ ಕಲ್ಪಿಸುತ್ತದೆ. ಪ್ರತಿದಿನ ನಿರಂತರ ವಿಮಾನ ಸಂಚಾರ ಇಲ್ಲಿವೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
16 Jun,Sun
Return On
17 Jun,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
16 Jun,Sun
Check Out
17 Jun,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
16 Jun,Sun
Return On
17 Jun,Mon
 • Today
  Lonar
  33 OC
  91 OF
  UV Index: 9
  Sunny
 • Tomorrow
  Lonar
  32 OC
  89 OF
  UV Index: 9
  Partly cloudy
 • Day After
  Lonar
  31 OC
  88 OF
  UV Index: 9
  Partly cloudy