Search
 • Follow NativePlanet
Share
ಮುಖಪುಟ » ಸ್ಥಳಗಳು» ಚಿಕಲ್ದಾರಾ

ಚಿಕಲ್ದಾರಾ – ಒಂದು ಪೌರಾಣಿಕ ಕಥೆ

14

ಇಂದು ಹಲವಾರು ಪ್ರಾಣಿ ಪಕ್ಷಿಗಳು ಅಳಿವಿನ ಅಂಚಿನಲ್ಲಿವೆ. ಅವುಗಳು ಎಲ್ಲಿಯೂ ನೋಡಲು ಸಿಗುತ್ತಿಲ್ಲ. ಆದ್ದರಿಂದಲೇ ಎಲ್ಲಾ ರಾಜ್ಯ ಸರ್ಕಾರಗಳು ಅಂತಹ ಜೀವಿಗಳನ್ನು ಉಳಿಸುವತ್ತ ಯೋಜನೆಗಳನ್ನು ರೂಪಿಸಿವೆ. ಇಂಥ ಕೆಲವು ಸಂರಕ್ಷಿತ ಅರಣ್ಯಗಳನ್ನು ಮಹಾರಾಷ್ಟ್ರ ರಾಜ್ಯದಲ್ಲಿಯೂ ಕಾಣಬಹುದಾಗಿದೆ. ವನ್ಯಮೃಗ ರಕ್ಷಣೆಯಲ್ಲಿ ಇಲ್ಲಿನ ರಾಜ್ಯ ಸರ್ಕಾರದ ಕೊಡುಗೆ ಅನನ್ಯ.

ಚಿಕಲ್ದಾರಾ ಪ್ರದೇಶವು ಇಂತಹ ಒಂದು ಮೀಸಲು ಅರಣ್ಯಕ್ಕೆ ಉದಾಹರಣೆ. ಇಲ್ಲಿನ ಹುಲಿ ಮೀಸಲು ಅರಣ್ಯ ವಿಸ್ತಾರವಾದ ವ್ಯಾಪ್ತಿಯನ್ನು ಹೊಂದಿದೆ. ವನ್ಯಜೀವಿಗಳ ಅಭಯಾರಣ್ಯ ಪ್ರಕೃತಿ ಪ್ರೀಯರ ಮನ ಸೂರೆಗೊಳ್ಳುವುದರಲ್ಲಿ ಸಂಶಯವಿಲ್ಲ. ಆದ್ದರಿಂದಲೆ, ಇಲ್ಲಿಗೆ ಪ್ರತಿವರ್ಷ ಹಲವಾರು ಪ್ರವಾಸಿಗರು ಆಗಮಿಸುತ್ತಾರೆ. ಜೊತೆಗೆ ಚಿಕಲ್ದಾರಾ ಪ್ರದೇಶವು ಧಾರ್ಮಿಕ ನಂಬುಗೆಗಳಿಗೂ ಹೆಸರುವಾಸಿಯಾದ್ದರಿಂದ ಇಲ್ಲಿಗೆ ಬರುವ ಭಕ್ತಾದಿಗಳ ಸಂಖ್ಯೆಯೂ ಅಪಾರ. ಇಂತಹ ಸುಂದರವಾದ ಪುಟ್ಟ ಪಟ್ಟಣದ ಕುರಿತು ಒಂದಿಷ್ಟು ಮಾಹಿತಿಗಳು ನಿಮಗಾಗಿ. ಅಮರಾವತಿ ಜಿಲ್ಲೆಯಲ್ಲಿರುವ ಚಿಕಲ್ದಾರಾ ಪಟ್ಟಣ ಅದರ ವನ್ಯಜೀವಿ ಅಭಯಾರಣ್ಯಕ್ಕೆ ಹೆಸರುವಾಸಿಯಾಗಿದೆ. ಈ ಪ್ರದೇಶವು ಸಮುದ್ರ ಮಟ್ಟಕ್ಕಿಂತ 1120 ಮೀ. ಎತ್ತರದಲ್ಲಿದ್ದು ಮಹಾರಾಷ್ಟದ ಏಕೈಕ ಕಾಫಿ ನಡುತೋಪು ಹೊಂದಿರುವ ಸ್ಥಳವಾಗಿದೆ.

ಚಿಕಲ್ದಾರಾ ಬಗ್ಗೆ ಇರುವ ಹೇಳಿಕೆಯೆಂದರೆ ಇದು ಹೈದ್ರಾಬಾದ್ ನಲ್ಲಿದ್ದ ಸೇನಾಪಡೆಯ ನಾಯಕ ರಾಬಿನ್ ಸನ್ ನಿಂದ 1823 ರಲ್ಲಿ ಪತ್ತೆಯಾಯಿತು. ಈ ಪ್ರದೇಶದಲ್ಲಿನ ಹಸಿರು, ಮಿ. ರಾಬಿನ್ ಸನ್ ಗೆ ಇಂಗ್ಲೆಂಡನ್ನು ನೆನಪಿಸುತ್ತಾದ್ದರಿಂದ ಆತ ಹೆಚ್ಚು ಆಕರ್ಷಿತನಾಗಿದ್ದನು. ಒಂದು ಸಣ್ಣ ತಿಳಿದಿರುವ ವಾಸ್ತವದ  ಪ್ರಕಾರ, ಚಿಕಲ್ದಾರಾವನ್ನು ಭಾರತ ಸರ್ಕಾರದ ಆಡಳಿತ ಸ್ಥಾನವನ್ನಾಗಿ ಮಾಡಲು ಪ್ರಸ್ತಾಪ ಮಾಡಲಾಗಿತ್ತು. ಆದಾಗ್ಯೂ ಈ ಪ್ರಸ್ತಾವನೆಯು ಎಲ್ಲರ ಗಮನ ಸೆಳೆಯುವಲ್ಲಿ ವಿಫಲವಾಯಿತು.

ಉನ್ನತ ಪ್ರಸ್ಥಭೂಮಿಯಲ್ಲಿರುವ ಚಿಕಲ್ದಾರಾ ಒಂದು ಕುತೂಹಲಕಾರಿ ಕಥೆಯನ್ನು ಹೊಂದಿದೆ. ಹಿಂದೂ ಪುರಾಣದ ಪ್ರಕಾರ ಚಿಕಲ್ದಾರಾ ಪ್ರದೇಶವು ರಾಜ ಕೀಚಕನಿಂದ ಆಳಲ್ಪಟ್ಟಿತ್ತು. ನಂತರ, ಪಾಂಡವರಲ್ಲಿ ಪ್ರಬಲನಾದ ಬಲ ಭೀಮನು ಕೀಚಕನನ್ನು ವಧೆಗೈದು ಆಳವಾದ ಕಣಿವೆಗೆ ಎಸೆದನು ಎಂದು ಹೇಳಲಾಗುತ್ತದೆ. ಹೀಗೆ ಈ ಪ್ರದೇಶಕ್ಕೆ ಚಿಕಲ್ದಾರಾ ಎಂಬ ಹೆಸರು ಬಂದಿದ್ದು, ’ಚಿಕ್ಕಲ್’ ಎಂದರೆ ಕೀಚಕ ಎಂಬ ಹೆಸರನ್ನು ಪ್ರತಿಫಲಿಸುವಂತದ್ಧು ಹಾಗೂ ’ದಾರ’ ಎಂದರೆ ಆಳವಾದ ಕಣಿವೆ ಅಥವಾ ಕೊಲ್ಲಿ ಎಂದರ್ಥ. ಶ್ರೀ ಕೃಷ್ಣನು ರುಕ್ಮಿಣಿಯನ್ನು ಕರೆದುತಂದ ಸ್ಥಳವೂ ಇದಾಗಿದೆ.

ಚಿಕಲ್ದಾರಾ – ವನ್ಯಜೀವಿಗಳ ಧಾಮ

ಚಿಕಲ್ದಾರಾ ಪ್ರದೇಶವು ವನ್ಯಜೀವಿ ಸ್ವರ್ಗಕ್ಕೆನೂ ಕಮ್ಮಿಯಿಲ್ಲ. ಈ ಸ್ಥಳವು ಅತೀಥೇಯ ಪಕ್ಷಿಗಳು ಹಾಗೂ ಪ್ರಾಣಿಗಳಿಂದ ತುಂಬಿದೆ ಮತ್ತು ಇಲ್ಲಿನ ಸಸ್ಯ ರಾಶಿ ಯಾವುದೇ ನೈಸರ್ಗಿಕ ಪ್ರೇಮಿಗಳನ್ನು ಆಕರ್ಷಿಸುವಂತದ್ದು ಎಂದರೆ ಅಚ್ಚರಿಯೆನಿಲ್ಲ. ಚಿಕಲ್ದಾರಾ ಅಭಯಾರಣ್ಯ ಹಾರುವ ಅಳಿಲು, ಮೌಸ್ ಜಿಂಕೆ, ಮುಳ್ಳುಹಂದಿ, ಬುಕ್ಕ, ನೀಲಿ ಬುಲ್, ಭಾರತೀಯ ಕಾಡೆಮ್ಮೆ, ಕಾಡು ನಾಯಿ, ಚಿರತೆ, ಇರುವೆ ಭಕ್ಷಕ ಪ್ರಾಣಿ, ಚಿಕ್ಕಬಾಲದ ಕೋತಿ, ಕಾಡು ಹಂದಿ, ಜೇನುತುಪ್ಪ ತಿನ್ನುವ ಜೀವಿ, ಚುಕ್ಕೆ ಜಿಂಕೆ, ಬಾರ್ಕಿಂಗ್ ಜಿಂಕೆ, ಸಾಂಬಾರ್, ಕರಡಿ ಮತ್ತು ಹುಲಿ ಕೆಲವು ಹೆಸರಿಸಬಹುದಾದ ಪ್ರಾಣಿಗಳನ್ನು ಹೊಂದಿದ್ದು,  ಸಸ್ಯರಾಶಿಗಳಾದ ಸಾಗವಾನಿ ಮತ್ತು ಬಿದಿರು, ಐನ್, ಕುಸುಮ್ ಮೊದಲಾದ ಮರಗಳನ್ನು ಹೊಂದಿದೆ. ಮೇಲ್ ಘಾಟ್ ಟೈಗರ್ ಪ್ರಾಜೆಕ್ಟ್ ಭಾರತದಲ್ಲಿ  ಉಳಿದಿರುವ ಹುಲಿಗಳ ಪೈಕಿ 82 ಹುಲಿಗಳ ನೆಲೆಯಾಗಿದೆ.

ಮನಮೋಹಕ ದೃಶ್ಯವನ್ನು ಹೊಂದಿರುವ ಚಿಕಲ್ದಾರಾ ಪ್ರದೇಶವು ತನ್ನ ಸುತ್ತಲೂ ಇರುವ ದೇವಿ ಪಾಯಿಂಟ್ (ಎತ್ತರದ ಬಿಂದು /ಪಾಯಿಂಟ್), ಪ್ರೋಸ್ಪೆಕ್ಟ್ ಪಾಯಿಂಟ್ ಹಾಗೂ ಹರಿಕೇನ್ ಪಾಯಿಂಟ್ ಗಳ ಅದ್ಭುತ ನೋಟಗಳಿಗೆ ಸಾಕ್ಷಿಯಾಗಿದೆ.

ನೀವೇನಾದರೂ ಕಲೆ ಹಾಗೂ ಇತಿಹಾಸವನ್ನು ಇಷ್ಟಪಡುವವರಾಗಿದ್ದರೆ, ಇಲ್ಲಿನ ನರ್ನಲಾ ಕೋಟೆ ಹಾಗೂ ಗವಿಲ್ ಘರ್ ಕೋಟೆಯನ್ನು ನೋಡಲೇ ಬೇಕು. ಈ ಎರಡು ಕೋಟೆಗಳು ಕೇವಲ ಪುರಾತನ ಕಾಲದ ಮತ್ತು ದಶಕಗಳ ಹಿಂದೆ ಕಟ್ಟಿದ್ದು ಮಾತ್ರವಲ್ಲದೆ ಭಾರತದ ಶ್ರೀಮಂತ ಸಂಸ್ಕೃತಿಗೆ ಹಿಡಿದ ಕೈಗನ್ನಡಿಯಾಗಿದೆ. ಇನ್ನುಳಿದ ಕೆಲವು ಸತ್ಯಗಳು/ವಿಷಯಗಳು

ಚಿಕಲ್ದಾರಾದಲ್ಲಿನ ವಾಯುಗುಣ ಪ್ರಾಥಮಿಕವಾಗಿ ಕಡಲ ತೀರದ ವಾತಾವರಣವನ್ನು ಹೊಂದಿದೆ. ಇಲ್ಲಿನ ವಾಯುಗುಣದ ತಾಪಮಾನವು ಅತಿ ಹೆಚ್ಚಾಗುವುದೂ ಇಲ್ಲ ಅಥವಾ ಅಧಿಕ ಮಟ್ಟದಲ್ಲಿ ಕಡಿಮಯಾಗುವುದೂ ಇಲ್ಲ. ಬೇಸಿಗೆ ಕಾಲವು ಶಾಖವು ಮಧ್ಯಮ ಪ್ರಮಾಣದಲ್ಲಿರುತ್ತದೆ. ಚಿಕಲ್ದಾರಾ ಸ್ಥಳವು ಮಳೆಗಾಲದಲ್ಲಿ ಕಣ್ಣಿಗೆ ತಂಪನ್ನು ನೀಡುತ್ತವೆ. ಈ ಪ್ರದೇಶದ ಸುತ್ತಲಿನ ಪ್ರದೇಶದಲ್ಲಿನ ಮಳೆಗಾಲವು ಮಾಂತ್ರಿಕ ಶಕ್ತಿಯನ್ನು ಹೊಂದಿದೆ. ಅಲ್ಲದೆ ಚಳಿಗಾಲವು ಅತ್ಯಂತ ತಂಪಾಗಿದ್ದು ಸುತ್ತಲಿನ ದೃಶ್ಯಾವಳಿಗಳನ್ನು ವೀಕ್ಷಿಸಲು ಮನಮೋಹಕವಾಗಿರುತ್ತದೆ. ಚಳಿಗಾಲದ ನೈಸರ್ಗಿಕ ಸೌಂದರ್ಯವು ಅದ್ಭುತವಾಗಿರುತ್ತದೆ.

ಚಿಕ್ಕಲ್ದಾರಾ ಪ್ರದೇಶವು ವಿಮಾನ, ರೈಲ್ವೆ ಹಾಗೂ ರಸ್ತೆ ಮಾರ್ಗದ ಮೂಲಕ ಸುಲಭವಾಗಿ ತಲುಪಬಹುದಾಗಿದೆ. ನೀವು ವಿಮಾನ ಮಾರ್ಗದ ಮೂಲಕ ಹೋಗಲು ಬಯಸುವುದಾದರೆ ಅಕೋಲಾ ವಿಮಾನ ನಿಲ್ದಾಣವು ಅತ್ಯಂತ ಹತ್ತಿರದಲ್ಲಿರುವ ದೇಶೀಯ ವಿಮಾನ ನಿಲ್ದಾಣವಾಗಿದೆ. ರೈಲು ಮಾರ್ಗದ ಮೂಲಕ ಹೋಗುವುದಾದರೆ,  ಬಡ್ನೇರಾ/ಬದ್ ನೇರಾ ರೈಲ್ವೆ ನಿಲ್ದಾಣವು ಚಿಕಲ್ದಾರಾ ಪಟ್ಟಣಕ್ಕೆ ಅತ್ಯಂತ ಸಮೀಪದಲ್ಲಿದೆ. ಅಭಯಾರಣ್ಯಕ್ಕೆ ಕ್ಯಾಬ್ ಅಥವಾ ಬೇರೆ ವಾಹನದ ಮೂಲಕ ಹೋಗಬಹುದು. ರಸ್ತೆ ಮಾರ್ಗದ ಮೂಲಕವೂ ಹೋಗಬಹುದು. ರಾಜ್ಯದ ಸರ್ಕಾರಿ ಹಾಗೂ ಖಾಸಗಿ ಪ್ರವಾಸಿ ಬಸ್ಸುಗಳು ಪ್ರವಾಸಿಗರ ಪ್ರಯಾಣಕ್ಕೆ ಲಭ್ಯವಿದೆ. ಅಲ್ಲದೆ, ಈ ರಸ್ತೆ ಮಾರ್ಗವು ಉಳಿದ ಎಲ್ಲಾ ಸಾರಿಗೆ ಮಾರ್ಗಗಳಿಗಿಂತ ಪ್ರಯಾಣಕ್ಕೆ ಅತ್ಯುತ್ತಮವಾಗಿದೆ. ಚಿಕಲ್ದಾರಾ ವನ್ಯಜೀವಿ ಅಭಯಾರಣ್ಯವು ಅತ್ಯಂತ ಆಕರ್ಷಣಿಯ ಸ್ಥಳವಾಗಿದ್ದು ತಾಯಿ ಪ್ರಕೃತಿಯನ್ನು ಆರಾಧಿಸುವ, ಪ್ರೀತಿಸುವ ಎಲ್ಲರಿಗೂ ಇಷ್ಟವಾಗುವ ತಾಣ. ಇದು ಹಲವಾರು ಬೇರೆ ಬೇರೆ ಪ್ರಾಣಿ ಮತ್ತು ಪಕ್ಷಿಗಳ ನೆಲೆಯಾಗಿದೆ. ಎಲ್ಲಾ ಸಮಯದಲ್ಲಿಯೂ ಬೀಸುವ ತಣ್ಣನೇಯ ಗಾಳಿ, ಹತ್ತಿರದಲ್ಲಿಯೆ ಇರುವ ಮುಂಬೈ ಹಾಗೂ ಪುಣೆಯಂತಹ ಪ್ರಮುಖ ನಗರಗಳಿಂದಾಗಿ ಈ ಸ್ಥಳವು ಇನ್ನಷ್ಟು ಆಕರ್ಷಣೀಯ ತಾಣವೆನಿಸಿದೆ. ನೀವು ಪ್ರಕೃತಿಯ ಆರಾಧಕರಾಗಿದ್ದರೆ, ಪ್ರಾಣಿಗಳ ಮೇಲೆ ಪ್ರೀತಿಯುಳ್ಳವರಾಗಿದ್ದರೆ ಇದು ಪ್ರವಾಸಕ್ಕೆ ಸೂಕ್ತ ಸ್ಥಳ!

ಚಿಕಲ್ದಾರಾ ಪ್ರಸಿದ್ಧವಾಗಿದೆ

ಚಿಕಲ್ದಾರಾ ಹವಾಮಾನ

ಉತ್ತಮ ಸಮಯ ಚಿಕಲ್ದಾರಾ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಚಿಕಲ್ದಾರಾ

 • ರಸ್ತೆಯ ಮೂಲಕ
  ಚಿಕಲ್ದಾರಾ ವನ್ಯಜೀವಿ ಅಭಯಾರಣ್ಯವು ರಸ್ತೆ ಮಾರ್ಗದ ಮೂಲಕ ಉತ್ತಮವಾಗಿ ಸಂಪರ್ಕವನ್ನು ಹೊಂದಿದೆ. ಮಹಾರಾಷ್ಟ್ರದ ಹಲವಾರು ನಗರಗಳಿಂದ ಈ ಅಭಯಾರಣ್ಯಕ್ಕೆ ನಿಯಮಿತವಾಗಿ ಪ್ರತಿದಿನ ಹಲವಾರು ಬಸ್ ಗಳು ದೊರೆಯುತ್ತವೆ. ಈ ಬಸ್ಸುಗಳು ಸರ್ಕಾರಿ ಅಥವಾ ಖಾಸಗಿ ಪ್ರವಾಸಿ ಬಸ್ಸುಗಳು ಕೂಡಾ ಆಗಿರಬಹುದು. ಪ್ರವಾಸಿಗರು ತಮಗೆ ಅನುಕೂಲವಾದ ರೀತಿಯಲ್ಲಿ ಭರಿಸಬಹುದಾದ ವೆಚ್ಚದಲ್ಲಿ ಬಸ್ಸ್ ಗಳನ್ನು ಆಯ್ಕೆಮಾಡಿಕೊಳ್ಳಬಹುದು. ಆದರೆ ಇಂತಹ ಪ್ರಯಾಣವು ಅಷ್ಟು ಅನುಕೂಲಕರವಾಗಿರುವುದಿಲ್ಲ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಚಿಕಲ್ದಾರಾದಿಂದ 110 ಕೀ.ಮಿ ಅಂತರದಲ್ಲಿರುವ ಬದ್ನೆರಾ ರೈಲ್ವೆ ನಿಲ್ದಾಣವು ಅತ್ಯಂತ ಹತ್ತಿರದ ರೈಲ್ವೆ ನಿಲ್ದಾಣವಾಗಿದೆ. ಇದು ಕೇಂದ್ರ ರೈಲ್ವೆ ಸಾಲುಗಳಲ್ಲಿದೆ. ಹಲವಾರು ರಾಜ್ಯದ ಒಳಗಿನ ನಗರಗಳು ಹಾಗೂ ಹೊರಗಿನ ನಗರಗಳಿಂದ ರೈಲುಗಳು ಇಲ್ಲಿಗೆ ಪ್ರತಿದಿನವೂ ನಿಯಮಿತವಾಗಿ ಬರುತ್ತವೆ ಮತ್ತು ಇಲ್ಲಿಂದ ಮಹಾರಾಷ್ಟ್ರದ ಹೊರಗಿನ ನಗರಗಳಿಗೂ ಸುಲಭವಾಗಿ ತಲುಪಬಹುದಾಗಿದೆ. ಈ ರೈಲ್ವೆ ನಿಲ್ದಾಣದಿಂದ ಟ್ಯಾಕ್ಸಿಗಳು ಲಭ್ಯವಿದ್ದು ಇಲ್ಲಿಂದ ವನ್ಯಜೀವಿ ಅಭಯಾರಣ್ಯವನ್ನು ತಲುಪಲು ಪ್ರತಿ ಕೀ.ಮಿ ಗೆ 7 ರೂಪಾಯಿಗಳಂತೆ ವೆಚ್ಚವನ್ನು ಪ್ರವಾಸಿಗರು ಭರಿಸಬೇಕಾಗುತ್ತದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಚಿಕಲ್ದಾರಾಕ್ಕೆ ಸುಲಭವಾಗಿ ವಿಮಾನ ಮಾರ್ಗದ ಮೂಲಕ ಪ್ರವೇಶಿಸಬಹುದು. ಅಕೋಲಾ ವಿಮಾನ ನಿಲ್ದಾಣವು ಹತ್ತಿರದ ದೇಶೀಯ ವಿಮಾನ ನಿಲ್ದಾಣವಾಗಿದೆ. ಇದು ಚಿಕಲ್ದಾರಾ ದಿಂದ 150 ಕೀ.ಮಿ ದೂರದಲ್ಲಿದೆ. ಈ ವಿಮಾನ ನಿಲ್ದಾಣದಿಂದ ಚಿಕಲ್ದಾರಾವನ್ನು ತಲುಪಲು ಸಮಂಜಸವಾದ ಹಾಗೂ ಭರಿಸಬದಾದಂತಹ ವೆಚ್ಚದಲ್ಲಿ ಸಾಕಷ್ಟು ಟ್ಯಾಕ್ಸಿ ಮತ್ತಿತರ ವಾಹನಗಳು ದೊರೆಯುತ್ತವೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
24 Sep,Fri
Return On
25 Sep,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
24 Sep,Fri
Check Out
25 Sep,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
24 Sep,Fri
Return On
25 Sep,Sat