Search
 • Follow NativePlanet
Share
ಮುಖಪುಟ » ಸ್ಥಳಗಳು» ನಾಗ್ಪುರ್

ನಾಗ್ಪುರ - ಕಿತ್ತಳೆ ಹಣ್ಣಿನ ನಗರ

18

ಕಿತ್ತಳೆ ಹಣ್ಣಿನ ನಗರ ಎಂದು ಕರೆಯಲ್ಪಡುವ ನಾಗ್ಪುರ ಮಹಾರಾಷ್ಟ್ರದ ಪ್ರಮುಖ ನಗರ. ಮುಂಬೈ ಮತ್ತು ಪುಣೆಯ ನಂತರ ಇದು ರಾಜ್ಯದ ಮೂರನೇ ಅತಿ ದೊಡ್ಡ ನಗರ. ಇದನ್ನು ಭಾರತದ ಹುಲಿಯ ರಾಜಧಾನಿ ಎಂದು ಕೂಡಾ ಕರೆಯಲಾಗುತ್ತದೆ. ಗೊಂಡರ ಆಡಳಿತದಲ್ಲಿ ಈ ನಗರವು ಮೊದಲು ಕಂಡುಹಿಡಿಯಲ್ಪಟ್ಟಿದ್ದು, ನಂತರದಲ್ಲಿ ಮರಾಠಾ ರಾಜರಾದ ಭೋಂಸ್ಲೆಗಳಿಂದ ಇದು ಆಕ್ರಮಿಸಿಕೊಳ್ಳಲ್ಪಟ್ಟಿತು. ನಾಗ್ಪುರವನ್ನು ಕೇಂದ್ರವನ್ನಾಗಿಸಿದ್ದ ಪರಂಪರೆಯನ್ನು ಬ್ರಿಟಿಷರು ಕೂಡಾ ಮುಂದುವರಿಸಿದರು.

ನಾಗ್ಪುರವು ತನ್ನ ಹೆಸರನ್ನು ಪಡೆದುಕೊಂಡಿದ್ದು, ನಾಗ ಕೆರೆಯಿಂದ ಹಾಗೂ ಪುರ ಎಂಬ ಶಬ್ದವು ಹಿಂದಿ ಮತ್ತು ಸಂಸ್ಕೃತದಲ್ಲಿ ಸಾಮಾನ್ಯವಾಗಿ ಪಟ್ಟಣದ ನಾಮಾಂಕಿತ. ನಗರದ ಅಂಚೆ ಚೀಟಿಯ ಮೇಲೆ ಇಂದಿಗೂ ಹಾವಿನ ಚಿತ್ರವಿದೆ. ಈ ಪ್ರದೇಶವು ಎತ್ತರವಾದ ಪ್ರದೇಶದಲ್ಲಿದ್ದು, 310 ಮೀಟರುಗಳಷ್ಟು ಮೇಲಿದೆ. ಮತ್ತು ಸುಮಾರು 10,000 ಚದರ ಕಿಲೋಮೀಟರುಗಳಷ್ಟು ವಿಸ್ತಾರವನ್ನು ಹೊಂದಿದೆ. ನಾಗ್ಪುರವು ತನ್ನ ಹಸಿರು ಪರಿಸರದಲ್ಲೇ ಚಂಡಿಗಢದ ನಂತರ ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರಕ್ಕೆ ಮುಂಬೈನ ನಂತರ ಇದು ಎರಡನೇ ರಾಜಧಾನಿ.

ನಾಗ್ಪುರ – ಇತಿಹಾಸ, ನಿಸರ್ಗ ಮತ್ತು ಸೌಂದರ್ಯದ ಸಮ್ಮಿಳನ

ನಾವೆಗಾಂವ್‌ ಬಾಂದ್‌, ಸೀತಾಬುಲ್ಡಿ ಕೋಟೆ ಮತ್ತು ಪೆಂಚ್‌ ರಾಷ್ಟ್ರೀಯ ಪಾರ್ಕ್‌ಗಳು ಇಲ್ಲಿನ ಪ್ರಮುಖ ಆಕರ್ಷಣೆಯ ತಾಣಗಳು. ದೀಕ್ಷಾ ಭೂಮಿಯು ಸಾವಿರಾರು ದಲಿತರು ಡಾ.ಬಿ.ಆರ್.ಅಂಬೇಡ್ಕರರನ್ನು ಹಿಂಬಾಲಿಸಿ ಬೌದ್ಧಮತಕ್ಕೆ ಮತಾಂತರವಾದ ಸ್ಥಳ. ನಾಗ್ಪುರದ ರಾಷ್ಟ್ರೀಯ ಕೇಂದ್ರವು ಜಿರೋ ಮೈಲಿನದ್ದಾಗಿದೆ, ಈ ಕಲ್ಲಿನ ಕಂಬವು ಎಲ್ಲಾ ಪ್ರಮುಖ ನಗರಗಳಿಗಿರುವ ದೂರವನ್ನು ವಿವರಿಸುತ್ತದೆ. ಇದನ್ನು ಬ್ರಿಟಿಷರ ಆಡಳಿತದಲ್ಲಿ ನಿರ್ಮಿಸಲಾಗಿದೆ. ನಾಗ್ಪುರದಲ್ಲಿ ಮಾನವ ನಿರ್ಮಿತ ಮತ್ತು ನೈಸರ್ಗಿಕ ಕೆರೆಗಳಿಂದ ತುಂಬಿದೆ. ಇದನ್ನು ಪ್ರವಾಸಿಗರು ನೋಡಲೇಬೇಕು. ಅಂಬಾಜರಿ ಕೆರೆಯು ಮಕ್ಕಳಿಗೆ ಮತ್ತು ಕುಟುಂಬದವರಿಗೆ ಖುಷಿಪಡುವುದಕ್ಕೆ, ಸುಂದರವಾದ ಸಮಯವನ್ನು ಕಳೆಯುವುದಕ್ಕೆ ಸೂಕ್ತ ತಾಣ.

ಬಾಲಾಜಿ ಮಂದಿರವು ಸೆಮಿನರಿ ಬೆಟ್ಟದಲ್ಲಿ ನಿರ್ಮಿತವಾದ ಅತಿ ದೊಡ್ಡ ದೇವಸ್ಥಾನವಾಗಿದೆ. ಸಣ್ಣ ಕಲ್ಲುಬಂಡೆಯು ಇಲ್ಲಿಂದ ಇಡೀ ನಗರವನ್ನು ನೋಡುವುದಕ್ಕೆ ಸಹಾಯ ಮಾಡುತ್ತದೆ. ಚಾರಣಿಗರು ಈ ಪ್ರದೇಶವನ್ನು ಇಷ್ಟಪಡುತ್ತಾರೆ. ಗುಡ್ಡದ ಮೇಲೆ ಚಾರಣ ಮಾಡುವುದು ಒಂದು ಚಾಲೆಂಜ್‌ ಆಗಿರುತ್ತದೆ. ಶ್ರೀ ಪೋದ್ದಾರೇಶ್ವರ ದೇವಸ್ಥಾನ ಮತ್ತು ಶ್ರೀ ವೆಂಕಟೇಶ ದೇವಸ್ಥಾನವನ್ನು ನೀವು ಈ ಬೆಟ್ಟಕ್ಕೆ ಭೇಟಿ ಕೊಟ್ಟಾಗ ನೋಡಲೇಬೇಕಾದ ದೇವಸ್ಥಾನಗಳು. ಡ್ರಾಗನ್‌ ಪ್ಲೇಸ್‌ ದೇವಸ್ಥಾನವು ಬುದ್ಧನಿಗೆ ಅರ್ಪಿತವಾದ ಇನ್ನೊಂದು ವಿಹಾರ.

ಮಹಾರಾಜ ಬಾಗ್‌ ಸುಂದರವಾದ ಗಾರ್ಡನ್‌ ಆಗಿದೆ ಹಾಗೂ ಇಲ್ಲಿ ಪ್ರಾಣಿ ಸಂಗ್ರಹಾಲಯವೂ ಕೂಡಾ ಇದೆ. ಇದನ್ನು ಭೋಂಸ್ಲೆ ಆಡಳಿತದ ಅವಧಿಯಲ್ಲಿ ನಿರ್ಮಾಣಮಾಡಲಾಯಿತು. ಇನ್ನೊಂದೆಡೆ ಸೀತಾಬುಲ್ಡಿ ಕೋಟೆಯು, ಇಂಗ್ಲಿಷ್ ಮತ್ತು ಮರಾಠರ ನಡುವೆ ನಡೆದ ಯುದ್ಧದಲ್ಲಿ ವೀರಮರಣವನ್ನಪ್ಪಿದ ಯೋಧರಿಗೆ ನಿರ್ಮಿಸಲಾದ ಕೋಟೆಯಾಗಿದೆ. ಇದೇವೇಳೆ, ಸುಮಾರು ೩೦೦ ವರ್ಷಗಳಷ್ಟು ಹಿಂದಿನ ಗವಿಲ್ಗಡ ಕೋಟೆಯು ಕೂಡಾ ಅತ್ಯಂತ ಆಕರ್ಷಕವಾಗಿದೆ.

ನಾಗ್ಪುರವು ನವರಾತ್ರಿ, ದಸರಾ, ಗಣೇಶ ಪೂಜೆ, ದುರ್ಗಾ ಪೂಜೆ, ಮೊಹರಂ ಮತ್ತು ಇನ್ನಿತರ ಹಬ್ಬಗಳಂದು ಕೋಟ್ಯಾಂತರ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಎಲ್ಲಾ ಹಬ್ಬಗಳು ತುಂಬಾ ಸಂಭ್ರಮದಿಂದ ಆಚರಿಸಲ್ಪಡುತ್ತದೆ.

ಕೆಲವೇ ಕೆಲವು  ನೋಡಲೇ ಬೇಕಾದ ಪ್ರದೇಶಗಳು

ನಾಗ್ಪುರಕ್ಕೆ ಬಂದ ಪ್ರವಾಸಿಗರು ನಗರದಲ್ಲಿ ಕಿತ್ತಳೆಯನ್ನು  ನೋಡದೇ ಹಿಂತಿರುಗುವುದು ಸಾಧ್ಯವಿಲ್ಲ. ಇಲ್ಲಿ ಕಲಾಕೃತಿಗಳನ್ನ, ನೆನಪಿನ ಕಾಣಿಕೆಗಳನ್ನು ಮನೆಗೆ ತೆಗೆದುಕೊಂಡು ಹೋಗಬಲ್ಲಂಥ ಸಾಮಗ್ರಿಯನ್ನು ಖರೀದಿ ಮಾಡುವ ಕೆಲವು ಜಾಗಗಳಿವೆ. ನಾಗ್ಪುರದಲ್ಲಿನಿ ವರ್ಹದಿ ಕಸಿನ್‌ಗೆ ಭೇಟಿ ಕೊಡಿ. ವಿದೇಶಿಗಳಿಗೆ  ಇಲ್ಲಿನ ಆಹಾರ ಸ್ವಲ್ಪ ಹೆಚ್ಚು ಖಾರವಿರಬಹುದು ಆದರೆ ರುಚಿಯಾಗಿರುತ್ತದೆ.

ಡೆಕ್ಕನ್ ಪ್ಲೆಟ್ಯು ಪ್ರದೇಶವಾಗಿರುವುದರಿಂದ ಇಲ್ಲಿ ನೀರಿನ ಕೊರತೆ ಕಾಣಿಸುತ್ತದೆ. ಇದರಿಂದಾಗಿ ಈ  ಪ್ರದೇಶವು ಅತಿಯಾದ ಉಷ್ಣ ಮತ್ತು ಅತಿಯಾದ ಚಳಿಯನ್ನು ಅನುಭವಿಸುತ್ತದೆ. ಬೇಸಿಗೆಕಾಲದಲ್ಲಿನ ಬೇಸಿಗೆಯು ಅತಿಯಾದ ಉಷ್ಣಾಂಶದಿಂದ ಕೂಡಿರುತ್ತದೆ. ಸುಮಾರು 50°C ರಷ್ಟು ಉಷ್ಣಾಂಶವಿರುತ್ತದೆ, ಇದೇವೇಳೆ ಚಳಿಗಾಲವು ಹೆಚ್ಚು ತಂಪಾಗಿರುತ್ತದೆ ಮತ್ತು ತಾಳಿಕೊಳ್ಳಬಲ್ಲಂಥದ್ದಾಗಿರುತ್ತದೆ. ಮಳೆಗಾಲವು ಪ್ರವಾಸಿಗರು ಭೇಟಿ ನೀಡಲು ಸೂಕ್ತ ಕಾಲವಲ್ಲ, ಹಾಗೇ ಚಳಿಗಾಲವು ಪ್ರವಾಸಿಗರಿಗೆ ಉತ್ತಮವಾದ ಕಾಲವಾಗಿದೆ.

ನಾಗ್ಪುರದ ಪ್ರಮುಖ ಕೇಂದ್ರಗಳು

ಭಾರತದ ಎಲ್ಲಾ ನಗರಗಳಿಗೂ ಸಮಾನ ದೂರವಿದ್ದು ನಾಗ್ಪುರವು ಕೇಂದ್ರಸ್ಥಾನವಾಗಿದೆ. ವಿಮಾನ ದಾರಿ, ರೈಲು ಮತ್ತು ರಸ್ತೆಯ ಮೂಲಕ ನಾಗ್ಪುರವು ಎಲ್ಲಾ ನಗರಗಳಿಂದಲೂ ಸೂಕ್ತ ಸಂಪರ್ಕವನ್ನು ಹೊಂದಿದೆ. ವಿಮಾನ ಮೂಲಕ ಪ್ರಯಾಣಿಸುತ್ತಿರಾದರೆ, ನಾಗ್ಪುರದ ಸೋನೆಗಾಂವ್ ವಿಮಾನ ನಿಲ್ದಾಣಕ್ಕೆ ಹಲವು ವಿಮಾನಗಳು ಸಂಪರ್ಕವನ್ನು ಹೊಂದಿದೆ. ನಾಗ್ಪುರ ರೈಲ್ವೇ ಸ್ಟೇಷನ್ ಭಾರತದ ಎಲ್ಲಾ ಪ್ರಮುಖ ರೈಲ್ವೇ ಜಂಕ್ಷನ್‌ಗಳಿಗೆ ಪ್ರಮುಖವಾದ ಸ್ಟೇಷನ್‌ ಆಗಿದೆ. ಇದೇ ವೇಳೆ ರೈಲಿನ ಮೂಲಕ ನೀವು ಪ್ರಯಾಣವನ್ನು ಆಯ್ಕೆ ಮಾಡಿಕೊಳ್ಳುತ್ತೀರಾದರೆ ಅದು ಉತ್ತಮ ಆಯ್ಕೆ. ರಸ್ತೆಯ ಮೂಲಕವಾದರೆ ಎರಡು ರಾಷ್ಟ್ರೀಯ ಹೆದ್ದಾರಿಗಳಿಗೆ ನಾಗ್ಪುರವು ಕೇಂದ್ರವಾಗಿದೆ. ಇದರಿಂದಾಗಿ ರಾಜ್ಯ ಸಾರಿಗೆ ಮತ್ತು ಖಾಸಗಿ ಸಾರಿಗೆ ಬಸ್‌ಗಳಿಗೆ ಯಾವ ಕೊರತೆಯೂ ಆಗುವುದಿಲ್ಲ.

ಭಾರತದ ಪ್ರಮುಖ ಉದ್ದಿಮೆಯ ಕೇಂದ್ರವಾಗಿರುವ ನಾಗ್ಪುರವು, ಪ್ರವಾಸೋದ್ಯಮದಿಂದ ಸಾಕಷ್ಟು ಅದಾಯವನ್ನು ಗಳಿಸುತ್ತಿದೆ. ಸಂಸ್ಕೃತಿ, ಇತಿಹಾಸ, ಸಂಪ್ರದಾಯ, ಆಧ್ಯಾತ್ಮಿಕತೆ ಮತ್ತು ನಿಸರ್ಗಗಳ ಸಮ್ಮಿಳನವಾಗಿದ್ದು, ನಗರದ ಆಳಕ್ಕೆ ಇದು ಇಳಿದಿದೆ. ನಮ್ಮ ದೇಶದ ಇತಿಹಾಸವನ್ನು ಇದು ತೆರೆದಿಡುತ್ತದೆ ಹಾಗೂ ನೀವು ಈ ನಗರದಲ್ಲಿ ಒಂದು ಸುತ್ತು ಹಾಕಿದಾಗ ಈ ಇಡೀ ಇತಿಹಾಸದ ಅನುಭವವಾಗುತ್ತದೆ.

ನಾಗ್ಪುರ್ ಪ್ರಸಿದ್ಧವಾಗಿದೆ

ನಾಗ್ಪುರ್ ಹವಾಮಾನ

ಉತ್ತಮ ಸಮಯ ನಾಗ್ಪುರ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ನಾಗ್ಪುರ್

 • ರಸ್ತೆಯ ಮೂಲಕ
  ರಾಜ್ಯ ಮತ್ತು ಖಾಸಗಿ ಸಾರಿಗೆಯ ಬಸ್‌ಗಳು ಮಹಾರಾಷ್ಟ್ರದ ಹಲವು ನಗರಗಳಿಂದ ನಾಗ್ಪುರಕ್ಕೆ ಸಂಚರಿಸುತ್ತವೆ. ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಿಗೆ ನಾಗ್ಪುರವು ಪ್ರಮುಖ ಕೇಂದ್ರವಾಗಿದೆ. ಕನ್ಯಾಕುಮಾರಿ-ವಾರಣಾಸಿ (ಎನ್‌ಎಚ್‌-7) ಮತ್ತು ಹಾಜಿರಾ-ಕೋಲ್ಕತ್ತಾ (ಎನ್‌ಎಚ್‌-6) ಹೆದ್ದಾರಿಗಳು ಇಲ್ಲಿ ಒಂದಾಗುತ್ತವೆ. ಪ್ರವಾಸಿ ಬಸ್‌ಗಳ ಶುಲ್ಕ ಸುಮಾರು ತಲಾ 1500 ರೂಪಾಯಿ ಆಗಲಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ನಾಗ್ಪುರ ರೈಲ್ವೇ ಸ್ಟೇಷನ್‌ ಪ್ರಮುಖ ರೈಲ್ವೆ ಸ್ಟೇಷನ್‌ ಆಗಿದೆ. ಭಾರತದ ಹಲವು ಪ್ರಮುಖ ನಗರಗಳಿಗೆ ಸೂಪರ್ ಫಾಸ್ಟ್ ಮೇಲ್ ಮತ್ತು ಪ್ಯಾಸೆಂಜರ್ ರೈಲುಗಳಿಂದ ಈ ಸ್ಟೇಷನ್‌ಗೆ ಸಂಪರ್ಕವನ್ನು ಕಲ್ಪಿಸಲಾಗಿದೆ. ಈಶಾನ್ಯ ಮತ್ತು ಕೇಂದ್ರ ರೈಲ್ವೇಗೆ ಇದು ಪ್ರಮುಖ ಸ್ಟೇಷನ್‌ ಆಗಿದೆ. ನಾಗ್ಪುರಕ್ಕೆ ಸುಮಾರು 160 ರೈಲುಗಳು ಸಂಪರ್ಕವನ್ನು ಕಲ್ಪಿಸುತ್ತವೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ನಾಗ್ಪುರದಲ್ಲಿನ ಪ್ರಮುಖ ವಿಮಾನ ನಿಲ್ದಾಣ ಸೋನೆಗಾಂವ್ ವಿಮಾನ ನಿಲ್ದಾಣ. ಇದು ಸುಮಾರು ನಗರದಿಂದ 6 ಕಿ.ಮೀ ದೂರದಲ್ಲಿದೆ. ಪ್ರತಿದಿನ ರಾಷ್ಟ್ರೀಯ ವಿಮಾನಗಳು ಮುಂಬೈ, ಕೋಲ್ಕತ್ತಾ, ಪುಣೆ ಮತ್ತು ದೆಹಲಿಯಂಥ ಪ್ರಮುಖ ನಗರಗಳಿಂದ ನಾಗ್ಪುರಕ್ಕೆ ಸಂಪರ್ಕವನ್ನು ಕಲ್ಪಿಸುತ್ತದೆ. ಸಮೀಪದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೆಂದರೆ ಮುಂಬೈ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
15 Jun,Tue
Return On
16 Jun,Wed
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
15 Jun,Tue
Check Out
16 Jun,Wed
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
15 Jun,Tue
Return On
16 Jun,Wed

Near by City