Search
  • Follow NativePlanet
Share
ಮುಖಪುಟ » ಸ್ಥಳಗಳು » ನಾಗ್ಪುರ್ » ಹವಾಮಾನ

ನಾಗ್ಪುರ್ ಹವಾಮಾನ

ನಾಗ್ಪುರದಲ್ಲಿ ಉಷ್ಣಾಂಶ ವಾತಾವರಣ ಮತ್ತು ಒಣ ವಾತಾವರಣವನ್ನು ಹೊಂದಿರುತ್ತದೆ. ಬಂಗಾಳ ಕೊಲ್ಲಿ  ಮತ್ತು ಅರೇಬಿಯನ್‌ ಸಮುದ್ರ ವಾತಾವರಣವನ್ನು ಇದು ಹೋಲುತ್ತದೆ. ಮಹಾರಾಷ್ಟ್ರದ ಒಳಭಾಗದಲ್ಲಿರುವ ಈ ನಾಗ್ಪುರವು ವರ್ಷದ ಬಹುತೇಕ ದಿನಗಳಲ್ಲಿ ಒಣ ವಾತಾವರಣ ಇರುತ್ತದೆ. ಈ ನಗರವನ್ನು ಪ್ರವಾಸ ಮಾಡುವುದಕ್ಕೆ ಚಳಿಗಾಲ ಉತ್ತಮವಾದ ವಾತಾವರಣ.

ಬೇಸಿಗೆಗಾಲ

ನಾಗ್ಪುರದ ವಾತಾವರಣವು ಅತಿಯಾದ ಉಷ್ಣತೆಯಿಂದ ಕೂಡಿದೆ. ಮಾರ್ಚ್‌ನಿಂದ ಜೂನ್‌ ತನಕ  ವಾತಾವರಣವು ಸುಮಾರು 49°C ಇರುತ್ತದೆ. ಮೇ ತಿಂಗಳು ಅತಿಯಾದ ಉಷ್ಣತೆಯಿರುತ್ತದೆ ಮತ್ತು ಈ ತಿಂಗಳಲ್ಲಿ ಪ್ರವಾಸ ಕೈಗೊಳ್ಳುವುದನ್ನು ಸಲಹೆ ಮಾಡಲಾಗುವುದಿಲ್ಲ.

ಮಳೆಗಾಲ

ಮಾನ್ಸೂನ್‌ಗೆ ಅನುಗುಣವಾಗಿ ಜುಲೈ ನಿಂದ ಸಪ್ಟೆಂಬರ್ ತನಕ ಮಳೆಗಾಲವು ಇರುತ್ತದೆ. ಪ್ರತಿ ವರ್ಷ ಸುಮಾರು ಮಧ್ಯಮದಿಂದ ಗರಿಷ್ಟ ಮಳೆಯ ತನಕ ಇಲ್ಲಿ ಮಳೆಗಾಲವನ್ನು ಕಾಣಬಹುದು.

ಚಳಿಗಾಲ

ನವೆಂಬರಿನಿಂದ ಜನವರಿಯ ತನಕ ಚಳಿಗಾಲವಿರುತ್ತದೆ. ಕನಿಷ್ಟ 10 °C ಉಷ್ಣಾಂಶದಿಂದ ಆರಂಭವಾಗುವ ಈ ಪ್ರದೇಶ ಶಾಂತವಾಗಿರುತ್ತದೆ ಮತ್ತು ಇಲ್ಲಿಗೆ ಭೇಟಿ ನೀಡುವವರಿಗೆ ಸೂಕ್ತವಾದ ಕಾಲ.