Search
 • Follow NativePlanet
Share
ಮುಖಪುಟ » ಸ್ಥಳಗಳು» ಯವತ್ಮಾಳ

ಯವತ್ಮಾಳ - ವಿರಮಿಸಲೊಂದು ಪುಟ್ಟ ಪಟ್ಟಣ

9

ಮಹಾರಾಷ್ಟ್ರ ರಾಜ್ಯದ ಯವತ್ಮಾಳ ಜಿಲ್ಲೆಯ ಉತ್ತರ ಭಾಗದಲ್ಲಿರುವ ಪುಟ್ಟ ನಗರ ಯವತ್ಮಾಳ. ಸಮುದ್ರ ಮಟ್ಟಕ್ಕಿಂತಲೂ 1460 ಅಡಿ ಎತ್ತರದಲ್ಲಿರುವ ಈ ಪ್ರದೇಶವು ವಿದರ್ಭ ಶ್ರೇಣಿ ಹಾಗೂ ಚಂದ್ರಾಪುರ, ಪರ್ಭಾನಿ, ಅಕೋಲ ಮತ್ತು ಅಮರಾವತಿ ಜಿಲ್ಲೆಗಳಿಂದ ಸುತ್ತುವರೆದಿದೆ.

ಯವತ್ಮಾಳ ಎಂಬ ಪದವು 'ಯವತ್' ಎಂಬ ಪದದಿಂದ ಬಂದಿದ್ದು ಇದರ ಅರ್ಥ ಕನ್ನಡದಲ್ಲಿ ಬೆಟ್ಟ ವಾಗಿದ್ದು ಹಾಗೂ ಮರಾಠಿಯಲ್ಲಿ 'ಮಾಳ' ಎಂದರೆ ಸಾಲು ಎಂಬುದಾಗಿದೆ. ಅರ್ಥಾತ್ ಇದರ ಸಂಪೂರ್ಣ ಅರ್ಥ ಕನ್ನಡದಲ್ಲಿ 'ಬೆಟ್ಟಗಳ ಸಾಲು' ಎಂದಾಗುತ್ತದೆ.

ಐತಿಹಾಸಿಕ ಸಂಬಂಧ

ಇತಿಹಾಸದ ಪುಟಗಳನ್ನು ತೆರೆದು ನೋಡುವಾಗ ಅನೇಕ ರಾಜ ವಂಶಜರು ಈ ಪ್ರದೇಶವನ್ನು ಆಳಿದ್ದು ಇದರ ಅಭಿವೃದ್ಧಿಗಾಗಿ ಪ್ರತಿಯೊಬ್ಬರ ಕೊಡುಗೆ ಅಪಾರವಾದದ್ದು ಹಾಗೂ ಆಯಾ ರಾಜ ವಂಶಜರಿಂದ ಬಳುವಳಿಯಾಗಿ ಬಂದ ಸಂಸ್ಕೃತಿಯು ವಿಶೇಷವಾದದ್ದು ಎಂದು ತಿಳಿದುಬರುತ್ತದೆ.

ಯವತ್ಮಾಳ ಎಂಬ ಹೆಸರು ಬರುವುದಕ್ಕಿಂತ ಮುಂಚಿತವಾಗಿ ಈ ನಗರವನ್ನು ಯವಟೆಚಾ ಮಹಾಲ್ ಹಾಗೂ ಯಾಟ್-ಲೋಹಾರ್ ಎಂದೂ ಕರೆಯುತ್ತಿದ್ದರು. ಇತಿಹಾಸದ ದಿನಗಳನ್ನು ಗಮನಿಸುವಾಗ ಈ ಪಟ್ಟಣವು ಬಿರಾರಿನ ಡೆಕ್ಕನ್ ಸುಲ್ತಾನರ ಪ್ರಮುಖ ಸ್ಥಳವಾಗಿತ್ತು. ಅಹಮ್ಮದ್ ನಗರ ರಾಜರಿಂದ ಮುಘಲರು ಈ ಪಟ್ಟಣವನ್ನು ವಶಪಡಿಸಿಕೊಂಡರು ಹಾಗೂ ಮುಘಲರ ಕಡೆಯ ಅರಸನ ಮರಣದ ನಂತರ ಮರಾಠರು ಯವತ್ಮಾಳನ್ನು ವಶಪಡಿಸಿಕೊಂಡರು. ಕೊನೆಯದಾಗಿ ಬ್ರಿಟೀಷರು ಇಲ್ಲಿ ಆಡಳಿತ ನಡೆಸಿದ್ದರು. ಆರಂಭದಲ್ಲಿ ಇದನ್ನು ಭಾರತದ ಕೇಂದ್ರ ನಗರ ಎಂದು ಪರಿಗಣಿಸಿದ್ದರಾದರೂ ನಂತರದ ದಿನಗಳಲ್ಲಿ ಇದನ್ನು ಮಹರಾಷ್ಟ್ರ ರಾಜ್ಯದ ಒಂದು ಭಾಗವಾಗಿ ಗುರುತಿಸಲಾಯಿತು.

ಇಲ್ಲಿ ನೋಡುವಂಥಾದ್ದೇನಿದೆ

ಯವತ್ಮಾಳ ಪಟ್ಟಣದಲ್ಲಿರುವ ಪುರಾತನ ದೇವಸ್ಥಾನಗಳು ಹಾಗೂ ಸುಂದರವಾದ ಪಿಕ್ನಿಕ್ ಸ್ಥಳಗಳಿಗೆ ಹೆಸರು ವಾಸಿಯಾಗಿವೆ. ಇಲ್ಲಿರುವ ನರಸಿಂಹ ದೇವಸ್ಥಾನ, ದತ್ತ ಮಂದಿರ, ಕಲಂಬ ಮತ್ತು ಕಾಟೇಶ್ವರ್ ಮಹರಾಜ್ ದೇವಸ್ಥಾನ ಹೀಗೆ ಮುಂತಾದ ಹಲವು ದೇವಸ್ಥಾನಗಳಿಗೆ ದೇಶದ ಮೂಲೆ ಮೂಲೆಯಿಂದ ಭಕ್ತಾಧಿಗಳು ಬರುತ್ತಾರೆ. ಇಲ್ಲಿನ ಜಗತ್ ದೇವಸ್ಥಾನ ಹಾಗೂ ಖೋಜೋಚಿ ಮಸೀದಿ ಕೂಡ ಜನಪ್ರಿಯವಾದವುಗಳೆ.

ಯವತ್ಮಾಳ ಪಟ್ಟಣದ ಸಮೀಪದಲ್ಲೆ ಇರುವ ಕಲಾಂಬ್ ಗ್ರಾಮವು ಸುಂದರವಾದ ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ಪ್ರದೇಶವಾಗಿದ್ದು ಪುರಾತನ ಗುಹೆಯೊಂದರಲ್ಲಿರುವ ಚಿಂತಾಮಣಿ ಗಣೇಶ ದೇವಸ್ಥಾನವು ಎಲ್ಲರ ಗಮನ ಸೆಳೆಯುತ್ತದೆ. ಇದರ ಸಮೀಪದಲ್ಲೆ ಗಣೇಶ ಕುಂಡವಿದೆ - ಇಲ್ಲಿ ಪವಿತ್ರ ನೀರಿನ ಕೊಳವೊಂದಿರುವುದನ್ನು ಕಾಣಬಹುದಾಗಿದೆ.

ಯವತ್ಮಾಳನಲ್ಲಿರುವ ಪೈನ್ ಗಂಗಾ ವನ್ಯಜೀವಿ ಸಂರಕ್ಷಣಾ ಕೇಂದ್ರ ಹಾಗೂ ತಿಪ್ಪೇಶ್ವರ ವನ್ಯಜೀವಿ ಸಂರಕ್ಷಣಾ ಕೇಂದ್ರಗಳು ಪ್ರಕೃತಿ ಹಾಗೂ ವನ್ಯ ಜೀವಿ ಪ್ರೇಮಿಗಳಿಗೆ ಸೂಕ್ತ ಸ್ಥಳವಾಗಿದೆ.

ಚಳಿಗಾಲವು ಇಲ್ಲಿಗೆ ಭೇಟಿ ನೀಡಲು ಸೂಕ್ತ ಕಾಲವಾಗಿದ್ದು ಯವತ್ಮಾಳ ಪಟ್ಟಣವು ವಿಮಾನ, ರೈಲು ಹಾಗೂ ರಸ್ತೆ ಮಾರ್ಗಗಳ ಮೂಲಕ ಸಂಪರ್ಕ ಹೊಂದಿದೆ.

ಯವತ್ಮಾಳ ಪ್ರಸಿದ್ಧವಾಗಿದೆ

ಯವತ್ಮಾಳ ಹವಾಮಾನ

ಯವತ್ಮಾಳ
37oC / 98oF
 • Partly cloudy
 • Wind: NW 25 km/h

ಉತ್ತಮ ಸಮಯ ಯವತ್ಮಾಳ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಯವತ್ಮಾಳ

 • ರಸ್ತೆಯ ಮೂಲಕ
  ರಸ್ತೆ ಮಾರ್ಗವಾಗಿ ಯವತ್ಮಾಳ ಪಟ್ಟಣವನ್ನು ಬಹಳ ಸುಲಭವಾಗಿ ತಲುಪಬಹುದು. ಹೈದರಾಬಾದ್ ಅಥವಾ ನಾಗಪುರದಿಂದ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಪ್ರಯಾಣ ಸುಗಮ. ಅಮರಾವತಿಯಿಂದ ಚಂದ್ರಾಪುರದ ವರೆಗೆ ರಾಜ್ಯ ಹೆದ್ದಾರಿಯೂ ಯವತ್ಮಾಳ ಮಾರ್ಗವಾಗಿಯೆ ಚಲಿಸುತ್ತದೆ. ರಾಜ್ಯ ರಸ್ತೆ ಸಂಚಾರ ಹಾಗೂ ಅನೇಕ ಖಾಸಗಿ ಬಸ್ ಹಾಗೂ ಇತರ ಪ್ರವಾಸಿ ಬಸ್ಸುಗಳು ಮಹಾರಾಷ್ಟ್ರದ ಪ್ರಮುಖ ನಗರಗಳಿಂದ ಯವತ್ಮಾಳ ಪಟ್ಟಣಕ್ಕೆ ಸಂಚರಿಸುತ್ತವೆ. ನೀವು ಯಾವ ಬಸ್ ಆಯ್ಕೆ ಮಾಡಿಕೊಳ್ಳುತ್ತೀರಿ ಅದಕ್ಕೆ ತಕ್ಕಂತಹ ದರ ನಿಗದಿ ಮಾಡಲಾಗಿರುತ್ತದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಯವತ್ಮಾಳ ರೈಲು ನಿಲ್ದಾಣವು ಮಹರಾಷ್ಟ್ರದ ಪ್ರಮುಖ ನಗರಗಳಾದ ಪುಣೆ, ಮುಂಬೈ, ನಾಗಪುರ ಹಾಗೂ ಅಹಮದಾಬಾದಿಗೆ ಸಂಪರ್ಕ ಹೊಂದಿದೆ. ರೈಲು ಪ್ರಯಾಣ ಸುಖಕರ ಮಾತ್ರವಲ್ಲ, ಅದು ಆರ್ಥಿಕವಾಗಿಯೂ ಲಾಭದಾಯಕವಾಗಿದೆ. ನಾಗಪುರದಿಂದ ಎರಡನೇ ದರ್ಜೆ ರೈಲು ಪ್ರಯಾಣಕ್ಕೆ 100 ರೂ.ಟಿಕೇಟ್ ದರವಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಸುಮಾರು 126 ಕಿ.ಮೀ. ದೂರದಲ್ಲಿರುವ ನಾಗಪುರಿನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯವತ್ಮಾಳ ನಗರಕ್ಕೆ ಹತ್ತಿರವಿರುವ ವಿಮಾನ ನಿಲ್ದಾಣವಾಗಿದೆ. ನಾಗಪುರ ವಿಮಾನ ನಿಲ್ದಾಣವು ದೇಶದ ಪ್ರಮುಖ ನಗರಗಳ ವಿಮಾನ ನಿಲ್ದಾಣಗಳಿಗೆ ಸಂಪರ್ಕ ಹೊಂದಿದೆ. ಏರ್ ಪೋರ್ಟ್ ನಿಂದ ಯವತ್ಮಾಳ ಪಟ್ಟಣಕ್ಕೆ ಬರಲು ಅನೇಕ ಕ್ಯಾಬ್ ಹಾಗೂ ಟ್ಯಾಕ್ಸಿಗಳು ಲಭ್ಯವಿದೆ. ವೆಚ್ಚ ಪ್ರತಿ ಕಿ.ಮೀ.ಗೆ 7 ರೂ. ಹೈದರಾಬಾದಿನ ರಾಜೀವಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಮತ್ತೊಂದು ಸಮೀಪದ ವಿಮಾನ ನಿಲ್ದಾಣವಾಗಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
23 May,Thu
Return On
24 May,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
23 May,Thu
Check Out
24 May,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
23 May,Thu
Return On
24 May,Fri
 • Today
  Yavatmal
  37 OC
  98 OF
  UV Index: 9
  Partly cloudy
 • Tomorrow
  Yavatmal
  34 OC
  94 OF
  UV Index: 9
  Sunny
 • Day After
  Yavatmal
  35 OC
  95 OF
  UV Index: 9
  Sunny